ಧಾರ್ಮಿಕ ನಂಬಿಕೆಗಳ ಪ್ರಕಾರ, ಪಿತೃ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಬಂದು ಎಲ್ಲಾ ದುಃಖಗಳನ್ನು ನಿವಾರಣೆ ಮಾಡ್ತಾರೆ. ಆದರೆ ಈ ಸಮಯದಲ್ಲಿ ಅರಳಿ ಮರದ ಕೆಳಗೆ ದೀಪಗಳನ್ನು ಏಕೆ ಬೆಳಗಿಸಲಾಗುತ್ತದೆ ಎಂದು ಈ ಲೇಖನದಲ್ಲಿ ನೋಡೋಣ..
ಪಿತೃ ಪಕ್ಷವು ಸೆಪ್ಟೆಂಬರ್ 7 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದೆ. ಈ ಸಮಯದಲ್ಲಿ ಪೂರ್ವಜರ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನು ಮಾಡಲಾಗುತ್ತದೆ. ಪೂರ್ವಜರ ಹೆಸರಿನಲ್ಲಿ ಅರಳಿ ಮರದ ಕೆಳಗೆ ದೀಪ ಹಚ್ಚುವುದು ಸಹ ಈ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಪಿತೃ ಪಕ್ಷದಲ್ಲಿ (Pitru Paksha 2025) ಪೂರ್ವಜರು ಭೂಮಿಗೆ ಬಂದು ಎಲ್ಲಾ ದುಃಖಗಳನ್ನು ನಿವಾರಣೆ ಮಾಡ್ತಾರೆ. ಆದರೆ ಈ ಸಮಯದಲ್ಲಿ ಅರಳಿ ಮರದ ಕೆಳಗೆ ದೀಪಗಳನ್ನು ಏಕೆ ಬೆಳಗಿಸಲಾಗುತ್ತದೆ ಎಂದು ಈ ಲೇಖನದಲ್ಲಿ ನೋಡೋಣ..
26
ಅರಳಿ ಮರದ ಕೆಳಗೆ ದೀಪ ಹಚ್ಚುವುದರ ಮಹತ್ವ
ಹಿಂದೂ ಧರ್ಮದಲ್ಲಿ, ಅರಳಿ ಮರವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳಲ್ಲಿ, ಅರಳಿ ಮರವನ್ನು ವಿಷ್ಣುವಿನ ಒಂದು ರೂಪವೆಂದು ಹೇಳಲಾಗುತ್ತದೆ. ಈ ಮರದ ಮೂಲದಲ್ಲಿ ಬ್ರಹ್ಮ, ಕಾಂಡದಲ್ಲಿ ವಿಷ್ಣು ಮತ್ತು ಎಲೆಗಳಲ್ಲಿ ಶಿವ ವಾಸಿಸುತ್ತಾರೆ ಎಂದು ನಂಬಲಾಗಿದೆ. ಇದರ ಜೊತೆಗೆ ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರು ಅರಳಿ ಮರದ ಮೇಲೆ ವಾಸಿಸುತ್ತಾರೆ ಎಂದು ನಂಬಲಾಗಿದೆ.
36
ಪೂರ್ವಜರ ಆಶೀರ್ವಾದ
ಆದ್ದರಿಂದ ಈ ಸಮಯದಲ್ಲಿ ಅರಳಿ ಮರವನ್ನು ಪೂಜಿಸುವುದು ಮತ್ತು ಅದರ ಕೆಳಗೆ ದೀಪವನ್ನು ಬೆಳಗಿಸುವುದು ಬಹಳ ಮಹತ್ವದ್ದಾಗಿದೆ. ಹೀಗೆ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ.
ಅರಳಿ ಮರದ ಕೆಳಗೆ ದೀಪ ಹಚ್ಚುವುದರಿಂದ ಪೂರ್ವಜರು ಸಂತೋಷಪಡುತ್ತಾರೆ ಮತ್ತು ಮೋಕ್ಷ ಪಡೆಯುತ್ತಾರೆ ಎಂದು ನಂಬಲಾಗಿದೆ.
56
ಪಿತೃ ದೋಷದ ಪ್ರಭಾವವೂ ಕಡಿಮೆ
ಇದರೊಂದಿಗೆ, ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯದ ಆಶೀರ್ವಾದಗಳನ್ನು ಪಡೆಯುತ್ತಾರೆ. ಇದಲ್ಲದೆ, ಜಾತಕದಲ್ಲಿ ಪಿತೃ ದೋಷದ ಪ್ರಭಾವವೂ ಕಡಿಮೆಯಾಗುತ್ತದೆ.
66
ದೀಪ ಹಚ್ಚುವ ಸರಿಯಾದ ವಿಧಾನ
ಪಿತೃಪಕ್ಷದ ಸಮಯದಲ್ಲಿ ಪ್ರತಿದಿನ ಸಂಜೆ ಅರಳಿ ಮರದ ಕೆಳಗೆ ದೀಪ ಹಚ್ಚುವುದು ಶುಭ. ನೀವು ಸಾಸಿವೆ ಎಣ್ಣೆಯ ದೀಪ ಹಚ್ಚಬಹುದು. ದೀಪ ಹಚ್ಚುವಾಗ, ನಿಮ್ಮ ಪೂರ್ವಜರನ್ನು ಸ್ಮರಿಸಿ ಅವರ ಆಶೀರ್ವಾದಕ್ಕಾಗಿ ಪ್ರಾರ್ಥಿಸಿ, ನಿಮ್ಮ ತಪ್ಪುಗಳಿಗೆ ಕ್ಷಮೆಯಾಚಿಸಿ. ಇದರೊಂದಿಗೆ, ನಿಮ್ಮ ಪೂರ್ವಜರ ಹೆಸರಿನಲ್ಲಿ ಸ್ವಲ್ಪ ದಾನ ಮತ್ತು ದಕ್ಷಿಣೆಯನ್ನು ನೀಡಿ. ಹೀಗೆ ಮಾಡುವುದರಿಂದ ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ.