ಕರ್ನಾಟಕದಾದ್ಯಂತ ರಕ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಪೂಜಾ ವೇಳಾಪಟ್ಟಿ ಬದಲಾವಣೆ ಮತ್ತು ದೇವಾಲಯ ಬಂದ್ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಂದು ಕ್ಷೇತ್ರವು ತನ್ನದೇ ಆದ ಪರಂಪರೆ ಮತ್ತು ಆಚರಣೆಗಳನ್ನು ಪಾಲಿಸುತ್ತಿದೆ.
ಕರ್ನಾಟಕದಾದ್ಯಂತ ಭಾನುವಾರ ರಾತ್ರಿ ರಕ್ತ ಚಂದ್ರಗ್ರಹಣ ಗೋಚರಿಸುವ ಹಿನ್ನೆಲೆಯಲ್ಲಿ ಹಲವು ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಹಾಗೂ ದೇವಾಲಯ ಬಂದ್ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಂದು ಕ್ಷೇತ್ರವು ತನ್ನದೇ ಆದ ಪರಂಪರೆ ಹಾಗೂ ಆಚರಣೆಗಳನ್ನು ಅನುಸರಿಸುತ್ತಿದೆ.
29
ಬೆಂಗಳೂರು
ಗವಿಗಂಗಾಧರೇಶ್ವರ ದೇವಸ್ಥಾನ
ನಗರದ ಐತಿಹಾಸಿಕ ಗವಿಗಂಗಾಧರೇಶ್ವರ ದೇವಸ್ಥಾನವು ಭಾನುವಾರ ಬೆಳಗ್ಗೆ 11 ಗಂಟೆಗೆ ಬಂದ್ ಆಗಲಿದೆ.
ಬೆಳಗ್ಗೆ 7 ಗಂಟೆಗೆ ಮಹಾಭಿಷೇಕ ಹಾಗೂ ಪೂಜೆ ನೆರವೇರಿಸಲಾಗುತ್ತದೆ.
ಗಂಗಾಧರನಿಗೆ ಕ್ಷೀರ ನೈವೇದ್ಯ ಸಲ್ಲಿಸಲಾಗುವುದು.
ಬೆಳಗ್ಗೆ 11 ಗಂಟೆಯೊಳಗೆ ತೈಲಾಭಿಷೇಕ ಮತ್ತು ದರ್ಬೆಬಂಧನ ನೆರವೇರಿಸಿ ದೇವಾಲಯ ಸಂಪೂರ್ಣ ಬಂದ್ ಮಾಡಲಾಗುವುದು.
ಸೋಮವಾರ ಸೂರ್ಯೋದಯದ ನಂತರ ದೇವಸ್ಥಾನವನ್ನು ಶುದ್ಧಿಗೊಳಿಸಿ ಪುಣ್ಯಾಹ ನೆರವೇರಿಸಿ, ಬೆಳಗ್ಗೆ 8:30ಕ್ಕೆ ಮಹಾಭಿಷೇಕ ನಡೆಸಿದ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅರ್ಚಕರಾದ ಶ್ರೀಕಂಠ ದೀಕ್ಷಿತ್ ತಿಳಿಸಿದ್ದಾರೆ.
39
ರಾಜರಾಜೇಶ್ವರಿ ನಿಮಿಷಾಂಬ ದೇವಸ್ಥಾನ
ರಾತ್ರಿ 9:50ಕ್ಕೆ ಚಂದ್ರಗ್ರಹಣ ಗೋಚರಿಸುವುದರಿಂದ, ಮುಂಚಿತವಾಗಿಯೇ ವಿಶೇಷ ಪೂಜೆ ನಡೆಸಲಾಗುತ್ತದೆ.
ದೇವಾಲಯದ ಅರ್ಚಕ ಜಗನ್ನಾಥ ಭಟ್ರು ಅವರ ಮಾಹಿತಿ ಪ್ರಕಾರ, ಗ್ರಹಣಕ್ಕೂ ಮುನ್ನ ಪೂಜೆ ನೆರವೇರಿಸಿ ಸಂಜೆ ದೇವಾಲಯ ಬಾಗಿಲು ಮುಚ್ಚಲಾಗುತ್ತದೆ.
ಸೋಮವಾರ ಬೆಳಿಗ್ಗೆ ದೇವಸ್ಥಾನ ಶುದ್ಧಿಗೊಳಿಸಿ ಪುನಃ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಗಾಳಿ ಆಂಜನೇಯಸ್ವಾಮಿ ದೇವಸ್ಥಾನ
ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ದೇವಾಲಯ ಮುಚ್ಚಲಾಗುವುದು.
ಬೆಳಗ್ಗೆ ಸತ್ಯನಾರಾಯಣ ಪೂಜೆ ಹಾಗೂ ಪ್ರಸಾದ ವಿತರಣೆ ನಡೆದ ನಂತರ ಭಕ್ತರ ದರ್ಶನ ನಿಲ್ಲಿಸಲಾಗುತ್ತದೆ.
ಸೋಮವಾರ ಸೂರ್ಯೋದಯದ ನಂತರ ದೇವಾಲಯ ಶುದ್ಧಿಗೊಳಿಸಿ ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆಸಲಾಗುವುದು.
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಬೆಳಗ್ಗೆ 10:45ರವರೆಗೆ ದರ್ಶನಕ್ಕೆ ಅವಕಾಶ ನೀಡಲಿದ್ದು, ಬಳಿಕ ಮಧ್ಯಾಹ್ನ 12:30ಕ್ಕೆ ಮಹಾಪೂಜೆ ನಡೆಯಲಿದೆ. ರಾತ್ರಿ 9:45ರಿಂದ ಮಧ್ಯರಾತ್ರಿ 1:26ರವರೆಗೆ ಮಾತ್ರ ದರ್ಶನ ಅವಕಾಶ.
ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ರಾತ್ರಿ 10ರಿಂದಲೂ ದರ್ಶನ ಸಿಗಲಿದೆ.
ಮುರುಡೇಶ್ವರದಲ್ಲಿ ಮಧ್ಯಾಹ್ನ 11:30ರಿಂದ 12:30ರವರೆಗೆ ಊಟ, ಸಂಜೆ 6:30ಕ್ಕೆ ವಿಶೇಷ ಪೂಜೆ ನಡೆಯಲಿದೆ.
ಚಿಕ್ಕಮಗಳೂರು
ಶೃಂಗೇರಿ ಶಾರದಾಂಬೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ರಾತ್ರಿ ಪ್ರಸಾದ ಸೇವೆ ಇರುವುದಿಲ್ಲ.
ರಾತ್ರಿ 8:30ಕ್ಕೆ ದೇವಸ್ಥಾನ ಬಂದ್ ಆಗಿ, ಸೋಮವಾರ ಬೆಳಗ್ಗೆ 6ಕ್ಕೆ ಪುನಃ ದರ್ಶನಕ್ಕೆ ಅವಕಾಶ.
99
ಕೊಡಗು
ಮಡಿಕೇರಿ ಓಂಕಾರೇಶ್ವರ, ಭಾಗಮಂಡಲ ಭಗಂಡೇಶ್ವರ ಹಾಗೂ ತಲಕಾವೇರಿ ದೇವಸ್ಥಾನಗಳಲ್ಲಿ ಸಂಜೆ 5 ಗಂಟೆಯ ನಂತರ ದರ್ಶನ ಅವಕಾಶವಿಲ್ಲ.
ಸೋಮವಾರ ಬೆಳಗ್ಗೆ ಪುನಃ ದೇವಸ್ಥಾನ ತೆರೆದಿಡಲಾಗುವುದು.
ಚಿಕ್ಕಬಳ್ಳಾಪುರ – ಬೆಂಗಳೂರು ಗ್ರಾಮಾಂತರ
ಐತಿಹಾಸಿಕ ಭೋಗನಂದೀಶ್ವರ ದೇವಸ್ಥಾನ ಹಾಗೂ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಭಾನುವಾರ ಸಂಜೆ 4 ಗಂಟೆಯ ನಂತರ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.