ಗಂಡನನ್ನು ಚಿನ್ನದಂತೆ ಜೋಪಾನ ಮಾಡುವ ಮಹಿಳೆಯರು ಈ 4 ತಿಂಗಳಲ್ಲೇ ಹುಟ್ಟಿರುತ್ತಾರೆ!

Published : Sep 25, 2025, 02:25 PM IST

Best Wife by Birth Month Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ತಿಂಗಳುಗಳಲ್ಲಿ ಜನಿಸಿದ ಮಹಿಳೆಯರು ತಮ್ಮ ಪತಿಯನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಕಾಣುತ್ತಾರೆ. ತಮ್ಮ ಸಂಗಾತಿಯ ಸಂತೋಷಕ್ಕೆ ಆದ್ಯತೆ ನೀಡಿ, ಅವರನ್ನು ರಾಜನಂತೆ ನೋಡಿಕೊಳ್ಳುತ್ತಾರೆ.

PREV
16
ಮದುವೆ ಜೀವನ

ಮದುವೆ ಜೀವನದ ಪ್ರಮುಖ ಘಟ್ಟವಾಗಿದ್ದು, ಸತಿ ಹಿತವಾಗಿದ್ದರೆ ಪತಿ ಖುಷಿಯಾಗಿರುತ್ತಾನೆ ಎಂಬ ಮಾತಿದೆ. ವೈವಾಹಿಕ ಜೀವನದಲ್ಲಿ ಪುರುಷರು ಪತ್ನಿಯಿಂದ ಅಗಾಧವಾದ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಾರೆ. ಕೆಲವರಿಗೆ ಮಾತ್ರ ತಮ್ಮ ಎಲ್ಲ ಮಾತುಗಳನ್ನು ಕೇಳುವ ಪತ್ನಿ ಸಿಗುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಜ್ಯೋತಿಷ್ಯದ ಪ್ರಕಾರ, ಕೆಲವು ತಿಂಗಳಲ್ಲಿ ಜನಿಸಿದ ಮಹಿಳೆಯರು, ತಮ್ಮ ಪತಿಯನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಕಾಣುತ್ತಾರೆ ಎಂದು ಹೇಳಲಾಗುತ್ತದೆ.

26
ಗಂಡನೇ ರಾಜ, ಮಹಾರಾಜ

ಕೆಲವು ತಿಂಗಳಲ್ಲಿ ಜನಿಸಿದ ಮಹಿಳೆಯರು, ಸಂಗಾತಿಯನ್ನು ರಾಜನಂತೆ ಗೌರವಿಸುತ್ತಾರೆ. ಕುಟುಂಬದ ಸಂತೋಷಕ್ಕಾಗಿ ಎಲ್ಲಾ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಈ ಲೇಖನದಲ್ಲಿ ಆ ತಿಂಗಳು ಯಾವುದು ಮತ್ತು ಆ ಮಾಸದಲ್ಲಿ ಜನಿಸಿದ ಮಹಿಳೆಯರ ಗುಣಲಕ್ಷಣಗಳು ಹೇಗಿರುತ್ತೆ ಎಂಬುದರ ಮಾಹಿತಿಯನ್ನು ಒಳಗೊಂಡಿದೆ

36
ಮಾರ್ಚ್

ಈ ತಿಂಗಳಲ್ಲಿ ಜನಿಸಿದ ಮಹಿಳೆಯರು ಕರುಣಾಮಯಿ ಮತ್ತು ಪ್ರೀತಿಯ ರೂಪವಾಗಿರುತ್ತದೆ. ಗಂಡನ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿಪುಣರಾಗಿದ್ದು, ಪತಿಯ ಎಲ್ಲಾ ಕೆಲಸಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ತಾಳ್ಳೆಯ ಗುಣದಿಂದಲೇ ಗಂಡ ಮತ್ತು ಕುಟುಂಬವನ್ನು ಸಂತೋಪಪಡಿಸುತ್ತಾರೆ. ಸಂಗಾತಿ ಕನಸುಗಳನ್ನು ಪ್ರೋತ್ಸಾಹಿಸೋದರ ಜೊತೆ ತುಂಬಾ ಗೌರವಿಸುತ್ತಾರೆ.

46
ಜುಲೈ

ಈ ತಿಂಗಳಲ್ಲಿ ಜನಿಸಿದ ಮಹಿಳೆಯರು ಉತ್ಸಾಹ ಮತ್ತು ನಿಷ್ಠೆಯ ಪ್ರತಿರೂಪವಾಗಿರುತ್ತಾರೆ. ಗಂಡ ಮತ್ತು ಕುಟುಂಬದ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುವ ಮಹಿಳೆಯರು ಸಮರ್ಪಣೆ ಮತ್ತು ಪ್ರೀತಿಯ ಕಾರ್ಯಗಳ ಮೂಲಕ ಕುಟುಂಬದಲ್ಲಿ ಸಾಮರಸ್ಯ ಸೃಷ್ಟಿಗೆ ಕಾರಣವಾಗಿರುತ್ತಾರೆ. ಗಂಡನ ಪ್ರತಿಯೊಂದು ಯೋಜನೆಯನ್ನು ಮೆಚ್ಚುವ ಮಹಿಳೆಯರು ಅತ್ಯಂತ ಶಾಂತ ಸ್ವಭಾವ ಹೊಂದಿರುತ್ತಾರೆ. ಪತಿಯ ಆಶಯಗಳಿಗೆ ಪ್ರಾಮುಖ್ಯತೆ ನೀಡಿ, ಗಂಡನನ್ನು ರಾಜನಂತೆ ಕಾಣುತ್ತಾರೆ.

ಇದನ್ನೂ ಓದಿ: Chanakya Niti: ನಿಮ್ಮ ಸುತ್ತಲಿರೋ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಜನರನ್ನು ಗುರುತಿಸೋದು ಹೇಗೆ?

56
ಸೆಪ್ಟೆಂಬರ್

ಸೆಪ್ಟೆಂಬರ್‌ನಲ್ಲಿ ಜನಿಸಿದ ಮಹಿಳೆಯರು ತುಂಬಾ ಪ್ರ್ಯಾಕ್ಟಿಕಲ್ ಆಗಿ ಯೋಚಿಸುತ್ತಾರೆ. ಪತಿಯನ್ನು ಮೆಚ್ಚಿಸಲು ಎಲ್ಲಾ ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ಒಂದು ವೇಳೆ ಪತಿ ಸೋತರೆ, ಆ ಸಮಯದಲ್ಲಿ ಸಾಂತ್ವಾನ ನೀಡುತ್ತಾರೆ. ಈ ತಿಂಗಳಲ್ಲಿ ಜನಿಸಿದ ಮಹಿಳೆಯರು ಸಂಗಾತಿಯನ್ನು ಗೌರವಿಸುತ್ತಾರೆ ಮತ್ತು ಪತಿಗೆ ಯಾವುದೇ ಹಾನಿಯನ್ನು ಸಹಿಸುವುದಿಲ್ಲ. ಇವರು ಪತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ.

ಇದನ್ನೂ ಓದಿ: ಮದುವೆ ನಡೆಯುವಾಗ ಮಳೆ ಬಂದರೆ ಒಳ್ಳೆಯ ಶಕುನವೇ? ಕೆಟ್ಟ ಶಕುನವೇ?

66
ಡಿಸೆಂಬರ್

ಡಿಸೆಂಬರ್‌ನಲ್ಲಿ ಜನಿಸಿದ ಮಹಿಳೆಯರು ಹರ್ಷಚಿತ್ತದಿಂದ ಮತ್ತು ಆಶಾವಾದಿಗಳಾಗಿರುತ್ತಾರೆ. ಪತಿಯರನ್ನು ಸಂತೋಷವಾಗಿರಿಸಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಮದುವೆ ಬಂಧನ ಪವಿತ್ರವಾದದ್ದು, ತಾಳ್ಮೆಯಿಂದ ನಡೆದುಕೊಂಡ್ರೆ ಸಂಸಾರ ಸಂತೋಷವಾಗಿರುತ್ತದೆ ಎಂಬುದನ್ನು ತಿಳಿದುಕೊಂಡಿರುತ್ತಾರೆ. ಗಂಡನ ಆಶಯಗಳು ಮತ್ತು ಅಭಿಪ್ರಾಯಗಳಿಗೆ ಆದ್ಯತೆ ನೀಡುವ ಜೊತೆ ಉತ್ತಮ ಸಲಹೆಗಳನ್ನು ನೀಡುವ ಜಾಣೆಯೂ ಆಗಿರುತ್ತಾರೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: Two-faced zodiac: ಪ್ರೀತಿಯಿಂದ ಮಾತನಾಡುತ್ತಲೇ ನಂಬಿಕೆ ದ್ರೋಹ ಮಾಡುವ ರಾಶಿಗಳಿವು!

Read more Photos on
click me!

Recommended Stories