Weird Temple: ಭಾರತದ ವಿಶಿಷ್ಟ ಮಂದಿರದಲ್ಲಿ ಭಕ್ತರ ಬೈಗುಳಗಳೇ ದೇವಿಗೆ ಅರ್ಚನೆ… ವಿಶಿಷ್ಟ ಸಂಪ್ರದಾಯದ ರಹಸ್ಯ ಏನು?

Published : Sep 25, 2025, 12:48 PM IST

ದೇಶದಲ್ಲಿ ವಿಶಿಷ್ಟ ಪೂಜಾ ವಿಧಾನಗಳಿಗೆ ಹೆಸರುವಾಸಿಯಾದ ಅನೇಕ ದೇವಾಲಯಗಳಿವೆ. ಅದರಲ್ಲೂ ಕೇರಳದಲ್ಲಿ ಒಂದು ವಿಶಿಷ್ಟ ದೇವಾಲಯವಿದೆ. ಅಲ್ಲಿ ದೇವಿ ಭದ್ರಕಾಳಿಯನ್ನು ಪೂಜಿಸಲಾಗುತ್ತದೆ. ಅದರಲ್ಲೂ ಭದ್ರಕಾಳಿ ದೇವಿಯನ್ನು ನಿಂದಿಸುವುದು ಇಲ್ಲಿನ ವಿಶೇಷವಾಗಿದೆ. ಈ ವಿಶಿಷ್ಟ ನಂಬಿಕೆಯ ಹಿಂದಿನ ಕಾರಣ ತಿಳಿಯಿರಿ.

PREV
16
ದುರ್ಗಾ ದೇವಿಯ ಒಂಬತ್ತು ರೂಪಗಳು

ಹಿಂದೂ ಧರ್ಮದಲ್ಲಿ, ದುರ್ಗಾ ದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು ಪೂಜಿಸಲಾಗುತ್ತದೆ ಮತ್ತು ಈ ಸಮಯದಲ್ಲಿ, ಭಕ್ತರು ಆಕೆಯನ್ನು ಸಮಾಧಾನಪಡಿಸಲು ಆಚರಣೆಗಳನ್ನು ಮಾಡುತ್ತಾರೆ. ಮಂತ್ರಗಳನ್ನು ಪಠಿಸುವುದು, ಹವನಗಳನ್ನು ಮಾಡುವುದು ಮತ್ತು ಧಾರ್ಮಿಕ ವಿಧಿಗಳನ್ನು ನಡೆಸುವುದು ಮುಂತಾದ ಆಚರಣೆಗಳನ್ನು ಸಹ ನಡೆಸಲಾಗುತ್ತದೆ.

26
ಇಲ್ಲಿ ಭದ್ರಕಾಳಿ ದೇವಿಯನ್ನು ನಿಂದಿಸಲಾಗುತ್ತೆ

ಆದರೆ ಕೇರಳದಲ್ಲಿ ಭದ್ರಕಾಳಿ ದೇವಿಗೆ ಮೀಸಲಾಗಿರುವ ದೇವಾಲಯವಿದ್ದು, ಭಕ್ತರು ಅಲ್ಲಿ ಪೂಜಿಸುವಾಗ ಆಕೆಗೆ ಬೈಗುಳಗಳ ಅಭಿಷೇಕವನ್ನು ಮಾಡಲಾಗುತ್ತೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದೇನು ದೇವರಿಗೆ ಅವಮಾನ ಮಾಡುವ ವಿಧಾನ ಅಲ್ಲ. ಬದಲಿಗೆ ಭಕ್ತಿಯ ರೂಪವಾಗಿ ನೋಡಲಾಗುತ್ತದೆ.

36
ಭದ್ರಕಾಳಿಯ ಉಗ್ರ ರೂಪ

ಕೇರಳದಲ್ಲಿರುವ ಈ ದೇವಾಲಯದಲ್ಲಿ ಕುರುಂಬ ಭಗವತಿ ಎಂದು ಕರೆಯುವ ಕಾಳಿಯ ಉಗ್ರ ಮತ್ತು ಕ್ರೋಧಭರಿತ ರೂಪವನ್ನು ಪೂಜಿಸುತ್ತಾರೆ. ದೇವಾಲಯದಲ್ಲಿರುವ ಭದ್ರಕಾಳಿಯ ವಿಗ್ರಹವು 6 ಅಡಿ ಎತ್ತರ, 8 ತೋಳುಗಳನ್ನು ಹೊಂದಿರುವ, ರೌದ್ರ ರೂಪದ ದೇವಿಯ ಅವತಾರ ಇದಾಗಿದೆ.

46
ತಾಯಿ ಭದ್ರಕಾಳಿಯನ್ನು ಏಕೆ ನಿಂದಿಸುತ್ತಾರೆ?

ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಈ ದೇವಾಲಯದಲ್ಲಿ ಭರಣಿ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಬೈಗುಳಗಳೇ ತುಂಬಿರುತ್ತದೆ. ಇದೊಂದು ಆಚರಣೆಯಾಗಿದ್ದು, ದೇವಿಯನ್ನು ಒಲಿಸಿಕೊಳ್ಳಲು ಇದನ್ನು ಮಾಡಲಾಗುತ್ತೆ. ಇದನ್ನು ಹೆಚ್ಚಾಗಿ ದೈವ ಪಾತ್ರಿಗಳು ಮಾಡುತ್ತಾರೆ ಎನ್ನಲಾಗಿದೆ.

56
ಯಾಕೆ ಈ ಆಚರಣೆ ಬಂತು?

ಧಾರ್ಮಿಕ ನಂಬಿಕೆಗಳ ಪ್ರಕಾರ, ರಕ್ತಬೀಜಾಸುರನ ಜೊತೆಗಿನ ಯುದ್ಧದ ನಂತರ ತಾಯಿ ಭದ್ರಕಾಳಿ ರುದ್ರಾವತಾರ ತಾಳಿದಳು ಮತ್ತು ಆ ಸಮಯದಲ್ಲಿ, ಭಕ್ತರು ಆಕೆಯನ್ನು ನಿಂದಿಸುವ ಮೂಲಕ ಸಮಾಧಾನಪಡಿಸಿದರು. ಅಂದಿನಿಂದ ಈ ವಿಶಿಷ್ಟ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ ಎನ್ನಲಾಗಿದೆ.

66
ಭದ್ರಕಾಳಿ ತಾಯಿಯ ಶುದ್ಧೀಕರಣ

ಭರಣಿ ಹಬ್ಬ ಮುಗಿದ ನಂತರ, ಭದ್ರಕಾಳಿಯ ವಿಗ್ರಹವನ್ನು ಶ್ರೀಗಂಧದ ಲೇಪದಿಂದ ಶುದ್ಧೀಕರಿಸಲಾಗುತ್ತದೆ. ಭದ್ರಕಾಳಿಯ ಕೋಪ ಕಡಿಮೆಯಾದಾಗ, ಅವಳು ಮತ್ತೆ ಕೋಪಗೊಳ್ಳದಂತೆ ಅವಳಿಗೆ ಶ್ರೀಗಂಧವನ್ನು ಹಚ್ಚಲಾಗುವುದು ಎಂದು ಹೇಳಲಾಗುತ್ತೆ.

Read more Photos on
click me!

Recommended Stories