ಈ ಹೆಸರುಗಳನ್ನು ಹೊಂದಿರೋ ಹುಡುಗೀರು ಗಂಡನಿಗೆ ಲಕ್ಕಿ ಚಾರ್ಮ್!

Published : Jun 08, 2022, 06:54 PM IST

ಯಾವುದೇ ವ್ಯಕ್ತಿಯನ್ನು ಅವನ ಅಥವಾ ಅವಳ ಹೆಸರಿನಿಂದ ಗುರುತಿಸಲಾಗುತ್ತದೆ. ಆದ್ದರಿಂದ,  ಹೆಸರು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ವಿಭಿನ್ನ ಮಹತ್ವವನ್ನು ಹೊಂದಿದೆ . ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಈ ಹೆಸರಿನ ಮಹತ್ವವನ್ನು ಉಲ್ಲೇಖಿಸಲಾಗಿದೆ.  ಹೆಸರಿನ ಮೂಲಕವೇ ನಾವು ಯಾವುದೇ ವ್ಯಕ್ತಿಯ ಸ್ವಭಾವ ಮತ್ತು ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಳ್ಳಬಹುದು.

PREV
19
ಈ ಹೆಸರುಗಳನ್ನು ಹೊಂದಿರೋ  ಹುಡುಗೀರು ಗಂಡನಿಗೆ ಲಕ್ಕಿ ಚಾರ್ಮ್!

ನಮ್ಮ ಹಣೆಬರಹವೂ ಈ ಹೆಸರಿನೊಂದಿಗೆ ಸೇರಿಕೊಂಡಿದೆ ಅನ್ನೋದು ನಿಮಗೂ ಗೊತ್ತಲ್ವಾ?. ಅದಕ್ಕಾಗಿಯೇ, ಹಿಂದೂ ಧರ್ಮದಲ್ಲಿ, ಹೆಸರನ್ನು ಸಾಕಷ್ಟು ಯೋಚನೆ ಮಾಡಿ ಇಡಲಾಗುತ್ತದೆ. ಇದಕ್ಕಾಗಿಯೇ ನಾಮಕರಣ ಶಾಸ್ತ್ರವನ್ನು(Naming ceremony) ಸಹ ಮಾಡಲಾಗುತ್ತೆ. ಹೆಸರಿನ ಮೊದಲ ಅಕ್ಷರವು ನಮ್ಮ ಜೀವನದೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ನಂಬಲಾಗಿದೆ.

29

ವಾಸ್ತವವಾಗಿ, ನಾವು ಹುಟ್ಟಿದ ಸಮಯದಲ್ಲಿ ಇರುವ ಗ್ರಹಗಳ ನಕ್ಷತ್ರಗಳನ್ನು ನೋಡುವ ಮೂಲಕ ಹೆಸರಿನ ಮೊದಲ ಅಕ್ಷರವನ್ನು ಇಡಲಾಗುತ್ತದೆ. ಹೆಣ್ಣುಮಕ್ಕಳ ಹೆಸರಿನಲ್ಲಿರುವ ಯಾವ  ಮೊದಲ ಅಕ್ಷರ ಅವರ ಗಂಡಂದಿರಿಗೆ ಅದೃಷ್ಟ(Lucky) ತರುತ್ತದೆ ನೋಡೋಣ.  

39

ಇಲ್ಲಿ ಹೇಳಲಾಗಿರುವ ಮೊದಲ ಅಕ್ಷರದಿಂದ ಆರಂಭವಾಗುವ ಹೆಸರಿನ ಹುಡುಗಿಯರು ಅದೃಷ್ಟವಂತರಾಗಿರುತ್ತಾರೆ. ಅವರ ಅದೃಷ್ಟದ ಅತಿದೊಡ್ಡ ಪ್ರಯೋಜನವೆಂದರೆ ಮದುವೆಯ ನಂತರ ಅವರ ಪತಿ. ಈ ಹುಡುಗಿಯರು ಮದುವೆಯಾಗುವ ಮನೆಯಲ್ಲಿ ಸಂಪತ್ತು(Money) ಸಮೃದ್ಧಿಯಾಗಲಿದೆ ಎನ್ನಲಾಗುತ್ತೆ. ಅವರು ಜೀವನದುದ್ದಕ್ಕೂ ಆರ್ಥಿಕ ಸಮಸ್ಯೆ ಎದುರಿಸೋದಿಲ್ಲ.

49

 'A ' ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರನ್ನು ಅದೃಷ್ಟವಂತೆ ಎನ್ನಲಾಗುತ್ತೆ. ಅವರು ಮದುವೆಯಾಗುವ ವ್ಯಕ್ತಿಯ ಹಣೆಬರಹವು ಮದುವೆಯ ನಂತರ ಬ್ರೈಟ್(Bright) ಆಗುತ್ತದೆ. ಅವರ ಹಣೆಬರಹ ಸಾಕಷ್ಟು ಸ್ಟ್ರಾಂಗ್ ಆಗಿರುತ್ತದೆ. ಈ ಹುಡುಗಿಯರು ಕೈ ಹಾಕುವ ಕೆಲಸದಲ್ಲಿ ಯಶಸ್ಸು ಕಾಣೋದೆ ಹೆಚ್ಚು. ಅವರು ಹಾರ್ಡ್ ವರ್ಕರ್ ಕೂಡ ಆಗಿರುತ್ತಾರೆ ಮತ್ತು ಬುದ್ಧಿವಂತರು ಕೂಡ ಆಗಿರುತ್ತಾರೆ.  

59

B ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಮದುವೆಯ ನಂತರ ಅತ್ತೆ-ಮಾವಂದಿರಿಗೆ(In laws) ಅದೃಷ್ಟವಂತರು. ಅವರು ತಮ್ಮ ಮನೆಯನ್ನು ಸ್ವರ್ಗವನ್ನಾಗಿಸುತ್ತಾರೆ. ತುಂಬಾ ಪ್ರೀತಿಸುವ ಗಂಡ ಅವರ ಜೊತೆ ಇರುತ್ತಾನೆ ಮತ್ತು ಅವರು ತಮ್ಮ ಗಂಡಂದಿರಿಗೂ ಇವರು ಅದೃಷ್ಟ ತರುತ್ತಾರೆ. ಈ ಹುಡುಗಿಯರು ಯಾವ ಮನೆಗೂ ಮದುವೆಯಾಗಿ ಹೋದರೂ, ಆ ಕುಟುಂಬದ ಎಲ್ಲಾ ಜನರು ಪ್ರಗತಿ ಹೊಂದುತ್ತಾರೆ. ಅವರು ತಮ್ಮ ನಡವಳಿಕೆಯಿಂದ ಎಲ್ಲರ ಹೃದಯ ಗೆಲ್ಲುತ್ತಾರೆ.  

69

E ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು ಸಹ ಅದೃಷ್ಟವಂತರು. ಅವರನ್ನು ಮದುವೆಯಾಗುವವರು ವಿವಾಹದ ನಂತರ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ.  ಹಣದ ಕೊರತೆ ಇರೋದಿಲ್ಲ. ಗಂಡಂದಿರು ಮತ್ತು ಅತ್ತೆ-ಮಾವಂದಿರ ಮನಸ್ಸನ್ನು ಸುಲಭವಾಗಿ ಗೆಲ್ಲುತ್ತಾರೆ. ಇವರು ಗಂಡನ ಪ್ರೀತಿಯ(Love) ವಿಷಯದಲ್ಲಿ ಅದೃಷ್ಟವಂತರು ಮತ್ತು ಇವರು ಪ್ರತಿ ತಿರುವಿನಲ್ಲೂ ಗಂಡನನ್ನು ಬೆಂಬಲಿಸುತ್ತಾರೆ. 

79

K ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹೊಂದಿರುವ ಹುಡುಗಿಯರು ಶುದ್ಧ ಮನಸ್ಸಿನವರು. ಇವರು ಸಮಾಜಕ್ಕಾಗಿ ಮತ್ತು ರಾಷ್ಟ್ರಕ್ಕಾಗಿ(Nation) ಬಹಳಷ್ಟು ಮಾಡುತ್ತಾರೆ. ಇವರು ಇತರರ ಹೃದಯ ಗೆಲ್ಲುವಲ್ಲಿ ನಿಪುಣರು. ಇವರನ್ನು ತನ್ನ ಗಂಡನ ಹಣೆಬರಹ ಬದಲಾಯಿಸಿದ  ಅದೃಷ್ಟಶಾಲಿ ಮಹಿಳೆ ಎನ್ನಲಾಗುತ್ತೆ.

89


L ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ತಮ್ಮದೇ ಆದ ಐಡೆಂಟಿಟಿ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಅವರು ಇತರರಿಗೆ ಸಹಾಯ ಮಾಡಲು ಇಷ್ಟಪಡ್ತಾರೆ. ಅವರು ಪ್ರತಿಯೊಂದು ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ. ಅಲ್ಲದೇ ತಮ್ಮ ಪ್ರೊಫೆಸಸ್ಷನಲ್ ಲೈಫ್ ನಲ್ಲಿ(Professional life)  ಬಹಳ ವೇಗವಾಗಿ ಸಕ್ಸಸ್ ಕಾಣುತ್ತಾರೆ. ಅವರ ಅದೃಷ್ಟವು ಅವರ ಕುಟುಂಬಗಳಿಗೆ ಪ್ರಯೋಜನ ನೀಡುತ್ತದೆ. 

99

P ಹೆಸರುಗಳ ಅಕ್ಷರದ ಹುಡುಗಿಯರ ಸ್ವಭಾವವು ತುಂಬಾ ಸರಳವಾಗಿರುತ್ತೆ. ಅವರ ಮಾತು ಸಾಕಷ್ಟು ಅಟ್ರಾಕ್ಟಿವ್ (Attractive)ಆಗಿರುತ್ತದೆ. ಅವರು ಕಾನ್ವೆರ್ಸಷನ್ ನಲ್ಲಿ ತುಂಬಾ ನಿಪುಣರು. ಅವರನ್ನು ಮದುವೆಯಾಗುವ ವ್ಯಕ್ತಿಯ ಹಣೆಬರಹವು ಮದುವೆಯ ನಂತರ ಬ್ರೈಟ್ ಆಗಿರುತ್ತದೆ. ಜೀವನದುದ್ದಕ್ಕೂ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ ಎನ್ನಲಾಗುತ್ತೆ.

Read more Photos on
click me!

Recommended Stories