ಆರೋಗ್ಯ ಯಾರಿಗೆ ಬೇಡ ಹೇಳಿ, ಈ ಭಾಗ್ಯ ಪಡೆಯಲು ಚಾಣಕ್ಯ ಹೇಳಿದ್ದನ್ನು ಕೇಳಿಸಿಕೊಳ್ಳಿ!

First Published Mar 1, 2023, 3:41 PM IST

ಆಚಾರ್ಯ ಚಾಣಕ್ಯನ ಹೆಸರನ್ನು ಭಾರತದ ಮಹಾನ್ ಜ್ಞಾನಿ. ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡುವಲ್ಲಿ ಚಾಣಕ್ಯನು ದೊಡ್ಡ ಕೊಡುಗೆ ನೀಡಿದ್ದಾನೆ. ಜೀವನವನ್ನು ಯಶಸ್ವಿಗೊಳಿಸಲು ಆಚಾರ್ಯ ಚಾಣಕ್ಯನು ಕೆಲವು ವಿಷಯಗಳನ್ನು ಹೇಳಿದ್ದಾನೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ. 

ಆಚಾರ್ಯ ಚಾಣಕ್ಯನ ನೀತಿಗಳು(Chanakya niti) ಅಂದಿಗೂ ಇಂದಿಗೂ ಪ್ರಸ್ತುತ. ಅವರು ಹೇಳಿದ ನೀತಿಯ  ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ವ್ಯಕ್ತಿಯು ಎಂದಿಗೂ ವಿಫಲವಾಗಲು ಸಾಧ್ಯವಿಲ್ಲ. ಇಂದಿನ ಕಾಲದಲ್ಲಿಯೂ ಆಚಾರ್ಯ ಚಾಣಕ್ಯನ ನೀತಿಗಳು ಬಹಳ ಜನಪ್ರಿಯವಾಗಿವೆ. ಆಚಾರ್ಯ ಚಾಣಕ್ಯನ ನೀತಿಗಳನ್ನು ಅನುಸರಿಸುವ ಮೂಲಕ ವ್ಯಕ್ತಿಯು ಯಶಸ್ಸನ್ನು ಸಾಧಿಸಬಹುದು. 

ಇಂದಿನ ಸಮಯದಲ್ಲಿ, ಜನರು ರೋಗಗಳ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ. ರೋಗಗಳಿಂದ(Diseases) ದೂರವಿರಲು, ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆಚಾರ್ಯ ಚಾಣಕ್ಯನು ಒಂದು ಶ್ಲೋಕದಲ್ಲಿ ಆರೋಗ್ಯವಾಗಿರಲು ಯಾವ ವಸ್ತುಗಳು ಅವಶ್ಯಕ ಎಂದು ಹೇಳಿದ್ದಾನೆ.
ಅನ್ನದಶ್ಗುಣಂ ಪಿಷ್ಟಾಮ್ ಪಿಷ್ಟದಶ್ಗುಣಂ ಪಾಯಃ 
ಪಾಯಸೊಷ್ಟಗುಣಂ ಮಾನಸಂ ಮಾನಸದಶಗುಣಂ ಘೃತಂ

Latest Videos


ಧಾನ್ಯ ಸೇವನೆ
• ಆರೋಗ್ಯವಾಗಿರಲು(Healthy) ಧಾನ್ಯಗಳನ್ನು ಸೇವಿಸಬೇಕು. ಧಾನ್ಯಗಳನ್ನು ಸೇವಿಸುವ ಮೂಲಕ, ವ್ಯಕ್ತಿಯು ಶಕ್ತಿಯುತವಾಗಿ ಉಳಿಯುತ್ತಾನೆ ಮತ್ತು ಜೀರ್ಣಾಂಗ ವ್ಯವಸ್ಥೆಯೂ ಬಲವಾಗಿರುತ್ತೆ. ಜೀರ್ಣಾಂಗ ವ್ಯವಸ್ಥೆಯು ಬಲವಾಗಿರುವ ವ್ಯಕ್ತಿಯು ಆರೋಗ್ಯಕರವಾಗಿರುತ್ತಾನೆ.

ಹಾಲಿನ ಸೇವನೆ (Drinking milk)
• ಹಾಲಿನ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ. ಹಾಲು ಧಾನ್ಯಗಳಿಗಿಂತ ಹತ್ತು ಪಟ್ಟು ಹೆಚ್ಚು ಶಕ್ತಿಯುತವಾಗಿದೆ. ಪ್ರತಿದಿನ ನಿಯಮಿತವಾಗಿ ಹಾಲನ್ನು ಸೇವಿಸುವ ಮೂಲಕ, ವ್ಯಕ್ತಿಯು ಆರೋಗ್ಯವಾಗಿರುತ್ತಾನೆ. ಹಾಲಿನ ಸೇವನೆಯು ಮೂಳೆಗಳಿಗೆ ಸಹ ಪ್ರಯೋಜನಕಾರಿಯಾಗಿದೆ.

ತುಪ್ಪದ(Ghee) ಸೇವನೆ
• ಹಾಲಿಗಿಂತ ತುಪ್ಪ ಹೆಚ್ಚು ಪ್ರಯೋಜನಕಾರಿ. ಪ್ರತಿದಿನ ನಿಯಮಿತವಾಗಿ ತುಪ್ಪ ಸೇವಿಸುವ ಮೂಲಕ, ನೀವು ಆರೋಗ್ಯವಾಗಿ ಉಳಿಯಬಹುದು. ರೋಗಗಳಿಂದ ದೂರವಿರಲು, ವ್ಯಕ್ತಿಯು ಪ್ರತಿದಿನ ತುಪ್ಪವನ್ನು ಸೇವಿಸಬೇಕು. ಇದರಿಂದ ನೀವು ಸದೃಢರಾಗಿರಲು ಸಹಾಯವಾಗುತ್ತೆ.

click me!