ಇದೋ ನೋಡಿ ನಿತ್ಯಾನಂದನ ಕೈಲಾಸದ ಕನ್ಯೆಯರ ಸಿಗ್ನೇಚರ್ ಸ್ಟೈಲ್!

Published : Mar 01, 2023, 03:08 PM ISTUpdated : Mar 01, 2023, 03:09 PM IST

ಅಬ್ಬಬ್ಬಾ! ಏನ್ ಸ್ಟೈಲು, ಏನ್ ಲುಕ್ಕು, ಇದೆಂಥಾ ಫ್ಯಾಶನ್ ಗುರೂ... ಸ್ವಘೋಷಿತ ದೇವಮಾನವ ನಿತ್ಯಾನಂದನ ಸ್ವಘೋಷಿತ ದೇಶ ಕೈಲಾಸದ ಭಗಿನಿಯರ ವೇಷಭೂಷಣ ನೋಡಿದರೆ ಅವರು ಪೌರಾಣಿಕ ಪುಸ್ತಕವೊಂದರಿಂದ ಹೊರ ನಡೆದು ಬಂದರೋ ಎಂದು ಅನುಮಾನವಾಗದಿರದು!

PREV
19
ಇದೋ ನೋಡಿ ನಿತ್ಯಾನಂದನ ಕೈಲಾಸದ ಕನ್ಯೆಯರ ಸಿಗ್ನೇಚರ್ ಸ್ಟೈಲ್!

ನೋಡಿ ನೋಡಿ, ಇವಳೇ ವಿಜಯಪ್ರಿಯ ನಿತ್ಯಾನಂದ.. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಲ್ಪಿತ ದೇಶ ಕೈಲಾಸದ ಪ್ರತಿನಿಧಿಯಾಗಿ ಭಾಗವಹಿಸಿ ಜಗತ್ತನ್ನು ತನ್ನೆಡೆಗೆ ಸೆಳೆದಾಕೆ. 

29

ಸ್ವಘೋಷಿತ ದೇವಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದನ ಸ್ವಘೋಷಿತ ದೇಶ ಕೈಲಾಶವೇ ಇದೆಯೋ ಇಲ್ಲವೋ ಎಂಬ ಗೊಂದಲ ಎಲ್ಲರಲ್ಲಿದೆ. ಇದು ಈಕ್ವೆಡಾರ್‌ನ ಕರಾವಳಿಯಲ್ಲಿದೆ ಎಂದು ವರದಿಯಾಗಿದೆ. ಆದರೆ, ಈಕ್ವೆಡಾರ್ ಮಾತ್ರ ತನ್ನ ದ್ವೀಪಗಳನ್ನು ನಿತ್ಯಾನಂದನಿಗೆ ಮಾರಿದ್ದನ್ನು ಅಲ್ಲಗೆಳೆದಿದೆ.

39

ಅಂಥದ್ದರಲ್ಲಿ ಈ 'ಇ-ದೇಶ'(ಕೈಲಾಸ ವೆಬ್‌ಸೈಟ್‌ನಲ್ಲಿ ಹೇಳಿದಂತೆ)ದ ಸಂಸ್ಥಾನದ ದೊಡ್ಡ ಹುದ್ದೆಗಳಲ್ಲಿರುವುದಾಗಿ ಈ ನಿತ್ಯಾನಂತ ಭಕ್ತೆಯರು ಅಮೆರಿಕದಲ್ಲಿ ಕಾಣಿಸಿಕೊಂಡಿದ್ದಾರೆ. 

49

ಒಮ್ಮೆ ಈ ಕೈಲಾಸದ ಅಪ್ಸರೆಯರ ವೇಷಭೂಷಣ ನೋಡಿ, ಹಿಂದೂ ಧರ್ಮ ಪಾಲಿಸುವ ಅತ್ಯುತ್ತಮ ತಳಿಗಳು ತಾವು ಎಂದು ಹೇಳಿಕೊಳ್ಳುವ ಈ ಕೈಲಾಸದ ಅಪ್ಸರೆಯರು ಸೀರೆ ಉಟ್ಟಿರುವುದೇನೋ ಸರಿ.. ಜೊತೆಗೆ, ಕೈಯ್ಯಲ್ಲಿ ನಿತ್ಯಾನಂದನ ಹಚ್ಚೆ!

59

ಜೊತೆಗೆ ಕತ್ತಿನ ತುಂಬಾ ರುದ್ರಾಕ್ಷಿ, ತಲೆಯಲ್ಲಿ ಜಟೆಯಂಥಾ ಕೃತಕ ಕೂದಲು, ಕತ್ತು, ನತ್ತು, ಕೈ ತುಂಬಾ ಬಂಗಾರದ ಒಡವೆಗಳು.. ಹೈಲಾಟಾಗುತ್ತಿರುವ ಬೈತಲೆ ಬೊಟ್ಟು.. ಸಾಲದೆಂಬಂತೆ ತೋಳಿಲ್ಲದ, ಆಫ್ ಶೋಲ್ಡರ್ ಬ್ಲೌಸ್‌ಗಳು!

69

ಇದು ಈ ಕೈಲಾಶಿನಿಯರ ಸಿಗ್ನೇಚರ್ ಸ್ಟೈಲ್. ಪೌರಾಣಿಕತೆ ಹಾಗೂ ಆಧುನಿಕತೆಯ ವಸ್ತ್ರವಿನ್ಯಾಸಗಳ ಸಂಪೂರ್ಣ ಮಿಶ್ರಣ. ಪೌರಾಣಿಕ ಸಾಧ್ವಿನಿಯರಂತೆ ವೇಷವೆಂದುಕೊಂಡರೆ ಆ ಬಂಗಾರದ ಒಡವೆಗಳು ನಾವು ರಾಜಕುಮಾರಿಯರು ಎನ್ನುತ್ತವೆ..  ಆದರೆ, ಅವೆಲ್ಲಕ್ಕೂ ವ್ಯತಿರಿಕ್ತವಾಗಿ ಕೆಲವರು ಕಾಲಿಗೆ ತೊಟ್ಟ ಕಪ್ಪು ಶೂ ಮಾಡರ್ನ್ ವೆಸ್ಟರ್ನ್ ಸ್ಟೈಲ್ ಅನುಕರಣೆಯಾಗಿದೆ. 

79

ಎಲ್ಲೋ ಕೆಲವರು ಮಾತ್ರ ಬಿಳಿ ಸೀರೆಯನ್ನು ಸಭ್ಯವಾಗಿ ಧರಿಸಿ ನಿತ್ಯಾನಂದನನ್ನೇ ದೇವರೆಂದು ಆರಾಧಿಸುತ್ತಿರುವುದನ್ನು ನೋಡಬಹುದು. 

89

ಈಕೆ ನೋಡಿ ಸರ್ವಾಭರಣಾಲಂಕೃತೆ.. ಜೊತೆಗೆ ಎದ್ದು ಕಾಣುವ ದಪ್ಪನೆಯ ರುದ್ರಾಕ್ಷಿ ಮಾಲೆ.. ಇವರೆಲ್ಲರೂ ದೇವಲೋಕದ ವಿವಿಧ ಮುಖ್ಯ ಹುದ್ದೆಗಳಲ್ಲಿರುವ ದೇವತೆಯರಂತೆ ಸಿಂಗರಿಸಿಕೊಂಡಿರುವುದು ನೋಡಿದರೆ, ಕೈಲಾಸವೆಂಬುದು ಇವರೆಲ್ಲರ ಕಾಲ್ಪನಿಕ ಬದುಕಿನ ಸಾಕಾರದಂತೆನಿಸುತ್ತದೆ..

99

ಇವರೆಲ್ಲರನ್ನೂ ನೋಡುತ್ತಿದ್ದರೆ ಭಕ್ತಿ, ನಂಬಿಕೆ ಎಂಬುದಕ್ಕೆ ಅದೆಷ್ಟು ಮಗ್ಗುಲುಗಳಿವೆಯೋ ಎಂದು ಅಚ್ಚರಿಯಾಗುತ್ತದೆ! ವ್ಯಕ್ತಿಯನ್ನು ದೈವತ್ವಕ್ಕೇರಿಸಿ ಸ್ವತಃ ತಮ್ಮನ್ನು ಯಾವುದೋ ಪ್ರಮುಖ ಉದ್ದೇಶದ ದೇವಲೋಕದ ರಾಯಭಾರಿಗಳು ಎಂದುಕೊಂಡಿರುವ ಈ ಮಹಿಳೆಯರು ಖಂಡಿತವಾಗಿಯೋ ಮತ್ತೊಂದೇ ಲೋಕದಲ್ಲಿ ಬದುಕುತ್ತಿರುವುದರಲ್ಲಿ ಅನುಮಾನವಿಲ್ಲ..

Read more Photos on
click me!

Recommended Stories