ಶನಿ ದೇವರಿಗೆ ಹಾರ(Garland)
ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಅಥವಾ ಕೋರ್ಟ್ ಕಚೇರಿ ಅಲೆದಾಟ ತೊಡೆದು ಹಾಕಲು ಬಯಸೋದಾದ್ರೆ, ಶನಿವಾರ 11 ಅರಳಿ ಎಲೆಗಳನ್ನು ತೆಗೆದುಕೊಂಡು ಅವುಗಳಿಂದ ಹಾರ ತಯಾರಿಸಿ. ಇದರ ನಂತರ, ಶನಿ ದೇವಾಲಯದಲ್ಲಿ ಈ ಹಾರವನ್ನು ಅರ್ಪಿಸಿ. ಹಾರವನ್ನು ಅರ್ಪಿಸುವಾಗ, ಓಂ ಶ್ರೀ ಹ್ರೇನ್ ಶನೀಶ್ಚರಾಯ ನಮಃ ಎಂಬ ಮಂತ್ರವನ್ನು ಪಠಿಸಿ. ಇದನ್ನು ಮಾಡೋದರಿಂದ, ನೀವು ಶೀಘ್ರದಲ್ಲೇ ಪ್ರಯೋಜನಗಳನ್ನು ಪಡೆಯುತ್ತೀರಿ. ಮಾನಸಿಕ ಶಾಂತಿಗಾಗಿ, ಶನಿವಾರ ಅರಳಿ ಬೇರಿಗೆ ನೀರು ಮತ್ತು ಹಾಲನ್ನು ಅರ್ಪಿಸಿ. 5 ಸಿಹಿತಿಂಡಿಗಳನ್ನು ಸಹ ನೀಡಿ. ಅರಳಿ ಮರವನ್ನು ಪೂಜಿಸಿದ ನಂತರ, ಅದರ ಕೆಳಗೆ ಕುಳಿತು ಸುಂದರಕಾಂಡವನ್ನು ಪಠಿಸಿ ಮತ್ತು ನಂತರ ಅದನ್ನು 7 ಬಾರಿ ಪ್ರದಕ್ಷಿಣೆ ಹಾಕಿ.