ಸಾಕ್ಸ್ ಇದನ್ನು ಕೇವಲ ಫ್ಯಾಷನ್ ಗಾಗಿ ಕಾಲಿಗೆ ಬಳಸದೆ, ಇದು ಕಾಲಿನ ರಕ್ಷಣೆಯನ್ನು ಮಾಡುತ್ತದೆ. ಸಾಕ್ಸ್ ಗೆ ಪಾದಗಳ ತೇವಾಂಶವನ್ನು ಹಿಡಿದಿಟ್ಟು ಕೊಳ್ಳೋ ಗುಣವಿದೆ ಅಲ್ಲದೆ ಪಾದಗಳ ರಕ್ಷಣೆ ಮಾಡುತ್ತದೆ. ಶೂ ಹಾಕಿಕೊಳ್ಳೋವಾಗ ಸಾಕ್ಸ್ ಬಳಕೆ ಅವಶ್ಯ. ಇದು ಶೂ ಪಾದಕ್ಕೆ ಒತ್ತದಂತೆ ಕಾಪಾಡುತ್ತದೆ ಅಲ್ಲದೆ ತರಚುವ ಸನ್ನಿವೇಶ ಇರುವುದಿಲ್ಲ .
ಸಾಕ್ಸ್ ಇದು ಕುಶನ್ ನಂತೆ ಇದ್ದು ಶೂ ಒತ್ತದಂತೆ ಕಾಪಾಡುತ್ತದೆ . ಕಾಲಿನ ಪಾದಗಳಿಗೆ ಬಿಸಿಯ ಅನುಭವ ನೀಡುವ ಮೂಲಕ, ಚಳಿಯಿಂದ ಪಾದವು ಬೆಚ್ಚಗಿರುವಂತೆ ಮಾಡುತ್ತದೆ.
ಚಳಿಗಾಲದಲ್ಲಿ ಹಿಮ್ಮಡಿ ಬಿರುಕು ಮೂಡುತ್ತದೆ ಇದರಿಂದ ರಕ್ಷಿಸಲು ಪಾದಗಳಿಗೆ ಕ್ರೀಮ್ ಬಳಸಿ ಸಾಕ್ಸ್ ಹಾಕಿಕೊಂಡರೆ ಹಿಮ್ಮಡಿ ಬಿರುಕು ಮೂಡುವುದಿಲ್ಲ.
ಶೂ ವಿನ ಒಳಗೆ ಸಾಕ್ಸ್ ಹಾಕಿಕೊಳ್ಳೋಕಾರಣ ಟ್ರಕ್ಕಿಂಗ್ ಅಥವಾ ಪ್ರವಾಸ ಹೋಗುವಾಗ ಯಾವುದೇ ಹುಳಗಳು ಅಥವಾ ಲೀಚ್ ಅಂತಹ ಹುಳಗಳು ಪಾದಗಳಿಗೆ ಕಚ್ಚದಂತೆ ಕಾಪಾಡಿಕೊಳ್ಳಬಹುದು.
ಸಾಕ್ಸ್ ಗಳಲ್ಲಿ 32 ವಿಧಗಳಿವೆ. ಮುಖ್ಯವಾಗಿ ಎರಡು ವಿಧಾನ ಒಂದು ಆಂಕೆಲ್ ಸಾಕ್ಸ್ , ಇನ್ನೊಂದು ಕ್ರಿವ್ ಸಾಕ್ಸ್ ಬಳಕೆ ಗಂಡಸರು ಮತ್ತು ಹೆಂಗಸರು ಮಾಡುತ್ತಾರೆ. ಆಂಕೆಲ್ ಸಾಕ್ಸ್ ಕೇವಲ ಪಾದ ಗಳನ್ನು ಮುಚ್ಚುತ್ತದೆ. ಕ್ರಿವ್ ಸಾಕ್ಸ್ ಹೆಚ್ಚಾಗಿ ಇದನ್ನು ಆಫೀಸ್ , ಟ್ರೆಕ್ಕಿಂಗ್ , ಹೈಕಿಂಗ್ ಹಾಗೆ ದಿನನಿತ್ಯ ಬಳಸುತ್ತಾರೆ.
ಸಾಕ್ಸ್ ಗಳನ್ನು ಕಾಟನ್ , ನೈಲಾನ್ , ವೂಲನ್ , ಪಾಲಿಸ್ಟರ್ , ಬ್ಯಾಂಬೂ ಬಟ್ಟೆ ಗಳಲ್ಲಿ ತಯಾರಿಸುತ್ತಾರೆ. ಆದರೆ ಹೆಚ್ಚಾಗಿ ಕಾಟನ್ ಬಟ್ಟೆಗಳಿಂದ ತಯಾರಿಸಿದ ಸಾಕ್ಸ್ ಬಳಕೆ ಒಳ್ಳೆಯದು . ಇದು ತೇವಾಂಶ ಹೀರಿಕೊಂಡು ಬೆಚ್ಚಗಿಡುತ್ತದೆ . ಆದರೆ ಬೇಸಿಗೆಯಲ್ಲಿ ಬೆವರಿನಿಂದಾಗಿ ಪಾದಗಳಲ್ಲಿ ಫಂಗಲ್ ಇನ್ಫೆಕ್ಷನ್ ಆಗುವ ಸಂಭವ ಹೆಚ್ಚು.
ಸಾಕ್ಸ್ ಬಳಕೆ ಮಾಡಿ ಹಳೆಯದಾದರೆ ಬಿಸಾಡದೆ ಅದರ ಮರುಬಳಕೆ ಮಾಡಬಹುದು.ಹಳೆಯ ಸಾಕ್ಸ್ ನಿಂದ ಮನೆ ಸ್ವಚ್ಛ ಗೊಳಿಸಬಹುದು. ಕಿಟಕಿ , ಟೇಬಲ್ , ಶೆಲ್ಫ್ ಗಳ ಧೂಳು ತೆಗೆಯ ಬಹುದು. ಸಾಕ್ಸ್ ನಿಂದ ಬೇಗನೆ ಧೂಳು ಸ್ವಚ್ಛವಾಗುತ್ತದೆ.
ಹಳೆಯ ಸಾಕ್ಸ್ ನಿಂದ ಶೂ ಪಾಲಿಶ್ ಮಾಡಬಹುದು. ಹಳೆಯ ಸಾಕ್ಸ್ ನಿಂದ ಬಿಳಿಬೋರ್ಡ್ ಒರೆಸಬಹುದು. ಮಕ್ಕಳಿಗೆ ಆಟಿಕೆ ಯಾಗಿ ಹಳೆಯ ಸ್ವಚ್ಛ ಸಾಕ್ಸ್ ಅನ್ನು ಡಾಲ್ ಮಾಡಿಕೊಡಬಹುದು.
ಹಳೆಯ ಸಾಕ್ಸ್ ಗಳು ತುಂಬಾ ಇದ್ದರೆ ಅದರಿಂದ ಡೋರ್ ಮ್ಯಾಟ್ ಮಾಡಬಹುದು. ಕಸದಿಂದ ರಸ ಎನ್ನುವಹಾಗೆ ಹಳೆಯ ಸಾಕ್ಸ್ ಬಳಕೆಯನ್ನು ಅನೇಕ ರೀತಿಯಲ್ಲೂ ಮಾಡಬಹುದು.