ಸ್ಟೈಲಿಷ್ ಆಗಿ ಕಾಣಿಸಬೇಕು ಎಂದಾದರೆ ಉಗುರಿನ ಸೌಂದರ್ಯದ ಕಡೆಗೆ ಗಮನ ಹರಿಸುವುದು ಮುಖ್ಯವಾಗಿದೆ. ಉಗುರುಗಳನ್ನು ಬಿಳಿ ಮತ್ತು ಹೊಳೆಯುವಂತೆ ಮಾಡಲು ಬಯಸಿದರೆ, ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳಿ. ಉಗುರು ಹಳದಿ ಇರುವುದನ್ನು ಹೋಗಲಾಡಿಸಲು ಈ ಮನೆಮದ್ದುಗಳು ಸಹಾಯ ಮಾಡುತ್ತವೆ...
ಅಡುಗೆ ಸೋಡಾ :ಅರ್ಧ ಚಮಚ ಅಡುಗೆ ಸೋಡಾದಲ್ಲಿ 12 ಚಮಚ ನಿಂಬೆ ರಸ ಬೆರೆಸಿ ಉಗುರುಗಳಿಗೆ ಹಾಕಿ. ಐದು ನಿಮಿಷ ಕಾಲ ಹಗುರವಾಗಿ ಮಸಾಜ್ ಮಾಡಿ ಮತ್ತು ಉಗುರುಗಳನ್ನು ಹಾಗೆಯೇ ಬಿಡಿ. ಹತ್ತು ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ಕೈಗಳನ್ನು ತೊಳೆಯಿರಿ.
ವಿನೆಗರ್ ಬಳಕೆ:ಉಗುರಿನಿಂದ ಹಳದಿಯನ್ನು ತೆಗೆದುಹಾಕಲು ವಿನೆಗರ್ ಸಹ ಸಹಾಯ ಕಾರಿಯಾಗಿದೆ. ಒಂದು ಕಪ್ ಉಗುರು ಬೆಚ್ಚನೆಯ ನೀರಿನಲ್ಲಿ ಒಂದು ಚಮಚ ಬಿಳಿ ಬಣ್ಣದ ವಿನೆಗರ್ ಹಾಕಿ. ನಂತರ ಹತ್ತು ನಿಮಿಷ ಈ ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿ. ಸ್ವಚ್ಛ ನೀರಿನಿಂದ ತೊಳೆಯಿರಿ ಮತ್ತು ಒರೆಸಿ.
ನಿಂಬೆಯಿಂದ ಉಗುರುಗಳ ಕೊಳೆಯನ್ನು ತೆಗೆದುಹಾಕಿ:ನಿಂಬೆಯು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿದ್ದು, ಉಗುರುಗಳು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಗಿ ನಿಂಬೆಯನ್ನು ನೇರವಾಗಿ ಉಗುರುಗಳಿಗೆ ಉಜ್ಜಿಕೊಳ್ಳಿ .
ಒಂದು ಲೋಟ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಸುರಿಯಿರಿ. ನಂತರ ಈ ನೀರಿನಲ್ಲಿ 10-15 ನಿಮಿಷ ಕಾಲ ಮುಳುಗಿಸಿ. ನಂತರ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಉಗುರಿನ ಕಲೆ ನಿವಾರಣೆಯಾಗುತ್ತದೆ.
ಬೆಳ್ಳುಳ್ಳಿ :ಹಳದಿ ಉಗುರುಗಳಿಂದ ತೊಂದರೆಯಾದರೆ ಬೆಳ್ಳುಳ್ಳಿಯನ್ನು ಬಳಸಿ. ಬೆಳ್ಳುಳ್ಳಿ ಯು ಹಳದಿ ಉಗುರುಗಳನ್ನು ಸುಲಭವಾಗಿ ನಿವಾರಿಸುತ್ತದೆ.
ಬೆಳ್ಳುಳ್ಳಿಯನ್ನು ಜಜ್ಜಿ ಉಗುರುಗಳ ಹಳದಿ ಭಾಗದ ಮೇಲೆ ಉಜ್ಜಿ, ಎರಡು ನಿಮಿಷಗಳ ನಂತರ ಟಿಶ್ಯೂ ಪೇಪರ್ ನಿಂದ ಒರೆಸಿ. ವಾರಕ್ಕೆ ಎರಡು ಬಾರಿ ಈ ವಿಧಾನಗಳನ್ನು ಅನುಸರಿಸುವ ಮೂಲಕ ಉಗುರಿನ ಮೇಲಿನ ಕಲೆಯನ್ನು ನಿವಾರಣೆ ಮಾಡಬಹುದು.