ಈ ರಾಜಕುಮಾರ ವಿಶ್ವದ ಅತ್ಯಂತ ಸೆಕ್ಸಿಯಸ್ಟ್ ಬೋಳು ತಲೆ ಮನುಷ್ಯ; ಟಾಪ್ 10 ರಲ್ಲಿ ಯಾರ್ಯಾರಿದ್ದಾರೆ?

First Published | Nov 28, 2023, 6:12 PM IST

ಆಕರ್ಷಣೆಯ ವಿಷಯಕ್ಕೆ ಬಂದಾಗಲೆಲ್ಲಾ, ಪ್ರಪಂಚದಾದ್ಯಂತ ವಿಭಿನ್ನ ಮಾಪಕಗಳಿವೆ. ಇದು ಪುರುಷರಿಗೆ ಮತ್ತು ಮಹಿಳೆಯರಿಗೂ ಸಹ ಬೇರೆ ಬೇರೆ ರೀತಿಯದ್ದಾಗಿದೆ. ಇದರ ಬಗ್ಗೆ ಪ್ರಪಂಚದಾದ್ಯಂತ ವಿವಿಧ ರೀತಿಯ ಸಮೀಕ್ಷೆಗಳಿವೆ ಮತ್ತು ಇದೇ ರೀತಿಯ ಸಮೀಕ್ಷೆಯನ್ನು ವಿಶ್ವದ ಅತ್ಯಂತ ಸೆಕ್ಸಿಯಸ್ಟ್ ಬೋಳು ಮನುಷ್ಯನ ಬಗ್ಗೆಯೂ ನಡೆಸಲಾಯಿತು, ಇದರಲ್ಲಿ ರಾಜಕುಮಾನೊಬ್ಬ ಟಾಪ್ ನಲ್ಲಿದ್ದಾರೆ. 

ಪ್ರತಿ ವರ್ಷ, ಪ್ರಪಂಚದಾದ್ಯಂತ ಲುಕ್ ಗೆ ಸಂಬಂಧಿಸಿದ ವಿವಿಧ ಸಮೀಕ್ಷೆಗಳು ನಡೆಯುತ್ತವೆ, ಅವುಗಳಲ್ಲಿ ಅನೇಕವು ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡಿವೆ. ಬೋಳು ಪುರುಷರ ಆಕರ್ಷಣೆಯ ಬಗ್ಗೆ ಅಂತಹ ಒಂದು ಸಮೀಕ್ಷೆಯನ್ನು ಮಾಡಲಾಗಿದೆ. ನಿವ್ವಳ ಮೌಲ್ಯ, ಎತ್ತರ, ಶರ್ಟ್ ಲೆಸ್, ಹೆಚ್ಚು ಸರ್ಚ್,  ಧ್ವನಿ ಆಕರ್ಷಣೆ ಮತ್ತು ಹೊಳಪು ಮೊದಲಾದ ಅಂಶದ ಆಧಾರದ ಮೇಲೆ 2023 ರ ವಿಶ್ವದ ಅತ್ಯಂತ ಸೆಕ್ಸಿಯಸ್ಟ್ ಬೋಳು ಪುರುಷ (Sexiest Bald Men) ಸಮೀಕ್ಷೆಗೆ ಒಳಪಡಿಸಲಾಯಿತು. ಇಲ್ಲಿದೆ ನೋಡಿ ವಿಶ್ವದ ಟಾಪ್ 10 ಸೆಕ್ಸಿಯೆಸ್ಟ್ ಬೋಳು ತಲೆಯ ಪುರುಷರು.

ಇವರು ವಿಶ್ವದ ನಂ.1 ಸೆಕ್ಸಿಯಸ್ಟ್ ಬೋಳು ತಲೆ ಪುರುಷ: ಬ್ರಿಟನ್ ರಾಜಕುಮಾರ ವಿಲಿಯಮ್ಸ್ (Prince William)ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪ್ರತಿ ಮಾನದಂಡದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಸ್ಕೋರ್ನಲ್ಲಿ ಅವರು 10 ರಲ್ಲಿ 9.88 ಅಂಕಗಳನ್ನು ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. 

Tap to resize

ವಿನ್ ಡೀಸೆಲ್ (Vin Diesel): ಈ ಪಟ್ಟಿಯಲ್ಲಿ ವಿನ್ ಡೀಸೆಲ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 10 ರಲ್ಲಿ 8.81 ಅಂಕಗಳನ್ನು ಗಳಿಸಿದ್ದಾರೆ. ನಟ ಹಾಗೂ ನಿರ್ಮಾಪಕರಾಗಿರುವ ಇವರು ಫಾಸ್ಟ್ ಆಂಡ್ ಫ್ಯೂರಿಯಸ್ ಮೂಲಕ ಖ್ಯಾತಿ ಪಡೆದಿದ್ದಾರೆ.

ಜೇಸನ್ ಸ್ಟಾಥಮ್ (Jason Statham): ಜೇಸನ್ ಸ್ಟಾಥಮ್ 10ರಲ್ಲಿ 8.51 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಹಾಲಿವುಡ್ ನ ಖ್ಯಾತ ನಟರಾಗಿರುವ ಇವರು ಎಕ್ಸಪಂಡೇಬಲ್, ಆಪರೇಶನ್ ಫಾರ್ಚ್ಯೂನ್, ಮೆಗ್ ಸಿನಿಮಾದ ಮೂಲಕ ಖ್ಯಾತಿ ಪಡೆದಿದ್ದಾರೆ. 
 

ಸ್ಯಾಮ್ಯುಯೆಲ್ ಎಲ್. ಜಾಕ್ಸನ್ (Samuel L. Jackson): ಹಾಲಿವುಡ್ ಹಿರಿಯ ನಟ ಸ್ಯಾಮ್ಯುಯೆಲ್ ಎಲ್ ಜಾಕ್ಸನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ಸ್ಕೋರ್ 7.31 ಆಗಿತ್ತು. ಕ್ಯಾಪ್ಟನ್ ಮಾರ್ವನ್, ಸೀಕ್ರೆಟ್ ಇನ್ವೇಶನ್ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 

ಜೆಫ್ ಬೆಜೋಸ್ (Jeff Bezos): ಜೆಫ್ ಬೆಜೋಸ್ ಸಂಪತ್ತಿನ ವಿಷಯದಲ್ಲಿ ಮಾತ್ರವಲ್ಲದೆ ಆಕರ್ಷಣೆಯ ದೃಷ್ಟಿಯಿಂದಲೂ ಟಾಪ್ ನಲ್ಲಿದ್ದಾರೆ . ಅವರು ಸೆಕ್ಸಿಯಸ್ಟ್ ಬಾಲ್ಡ್ ಪುರುಷರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ ಮತ್ತು ಅವರ ಸ್ಕೋರ್ 7.12 ಆಗಿತ್ತು. 
 

ಮೈಕೆಲ್ ಜೋರ್ಡಾನ್ (Michael Jordan): ಬ್ಯಾಸ್ಕೆಟ್ಬಾಲ್ ಜಗತ್ತಿನಲ್ಲಿ ಬ್ಲ್ಯಾಕ್ ಜೀಸಸ್ ಎಂದು ಕರೆಯಲ್ಪಡುವ ಮೈಕೆಲ್ ಜೋರ್ಡಾನ್ 7.05 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

ಡ್ವೇನ್ ಜಾನ್ಸನ್ (Dwayne Johnson): ಫಾಸ್ಟ್ & ಫ್ಯೂರಿಯೆಸ್, ಬೇವಾಚ್, ಜುಮಾಂಜಿ, ಫಾಸ್ಟ್ X ಮೊದಲಾದ ಟಾಪ್ ಸಿನಿಮಾಗಳಲ್ಲಿ ನಟಿಸಿದ ಜನಪ್ರಿಯ ನಟ ಡ್ವೇನ್ ಜಾನ್ಸನ್ 10 ರಲ್ಲಿ 6.90 ಅಂಕಗಳನ್ನು ಗಳಿಸಿ 7ನೇ ಸ್ಥಾನದಲ್ಲಿದ್ದಾರೆ.

ಶೆಮರ್ ಮೂರ್ (Shemar Moore): ನಟ ಮತ್ತು ಮಾಜಿ ರೂಪದರ್ಶಿ ಶೆಮರ್ ಮೂರ್ ಅವರಿಗೆ 50 ವರ್ಷ ದಾಟಿದ್ದರೂ ಸಹ ಸಂಪೂರ್ಣವಾಗಿ ಫಿಟ್ ಮತ್ತು ಸುಂದರವಾಗಿದ್ದಾರೆ. ಅದಕ್ಕಾಗಿಯೇ ಅವರು ಈ ಪಟ್ಟಿಯಲ್ಲಿ 8ನೇ  ಸ್ಥಾನ ಪಡೆದರು. ಮೂರ್ 10 ರಲ್ಲಿ 6.75 ಅಂಕಗಳನ್ನು ಗಳಿಸಿದರು. 

ಶಕೀಲ್ ಒ'ನೀಲ್ (Shaquille O'Neal): ಅತ್ಯಂತ ಪ್ರಭಾವಶಾಲಿ ಮತ್ತು ಅಪ್ರತಿಮ ಬ್ಯಾಸ್ಕೆಟ್ ಬಾಲ್ ಆಟಗಾರ ಶಕೀಲ್ ಒ'ನೀಲ್ ಇನ್ನೂ ಜಗತ್ತಿನಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅವರು 6.50 ಅಂಕಗಳೊಂದಿಗೆ ಈ ಪಟ್ಟಿಯಲ್ಲಿ 9 ನೇ ಸ್ಥಾನ ಪಡೆದರು. 
 

ಟೆರ್ರಿ ಕ್ರೂಜ್ (Terry Crews): ನಟ, ನಿರೂಪಕ ಮತ್ತು ಮಾಜಿ ಫುಟ್ಬಾಲ್ ಆಟಗಾರ ಟೆರ್ರಿ ಕ್ರೂಜ್ ಕೂಡ ಈ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಸ್ಕೋರ್ 6.32 ಆಗಿತ್ತು. ಬಾಲ್ಡ್ ಆದರೂ ತುಂಬಾನೆ ಹಾಟ್ ಇದ್ದಾರಲ್ವಾ ಈ ನಟರು. 

Latest Videos

click me!