miss world
ಜಗತ್ತು ಹೊಸ ವಿಶ್ವ ಸುಂದರಿಯನ್ನು ಪಡೆದಿದೆ. ಜೆಕ್ ಗಣರಾಜ್ಯದ ರೂಪದರ್ಶಿ ಕ್ರಿಸ್ಟಿನಾ ಪಿಸ್ಕೋವಾ 2024ರ ಮಿಸ್ ವರ್ಲ್ಡ್ ಎನಿಸಿಕೊಂಡಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಅದ್ಧೂರಿ ಕಾರ್ಯಕ್ರಮ ನಡೆಯಿತು.
ಸರಿಯಾಗಿ 28 ವರ್ಷಗಳ ಹಿಂದೆ ಕೂಡಾ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆದಿತ್ತು. ಆಗ ಈ ಕಾರ್ಯಕ್ರಮ ಬಿಗ್ ಬಿ ಅಮಿತಾಬ್ ಅವರನ್ನು ಅಕ್ಷರಶಃ ಬೀದಿಗೆ ತಂದಿತ್ತು ಎಂದರೆ ಅಚ್ಚರಿಯಾಗಬಹುದು.
ಹೌದು, ಭಾರತವು ಈ ಸ್ಪರ್ಧೆಯನ್ನು ಆಯೋಜಿಸುತ್ತಿರುವುದು ಇದು ಎರಡನೇ ಬಾರಿ. 1996ರ ವಿಶ್ವ ಸುಂದರಿ ಸ್ಪರ್ಧೆ ಕೂಡಾ ಭಾರತದಲ್ಲಿ ನಡೆದಿತ್ತು. ಆಗ ಬಾಲಿವುಡ್‌ನ ಘಟಾನುಘಟಿ ನಟ ಅಮಿತಾಬ್ ಬಚ್ಚನ್ ಈ ಕಾರ್ಯಕ್ರಮವನ್ನು ವಹಿಸಿಕೊಡುವ ಹೊಣೆ ಹೊತ್ತರು.
ಇದು ಅವರು ತೆಗೆದುಕೊಂಡಿದ್ದ ಅತಿ ಕೆಟ್ಟ ನಿರ್ಧಾರವಾಗಿ ಬದಲಾಯಿತು. ಇಂದು ನಾವು ನಿಮಗೆ ಅಮಿತಾಬ್ ಬಚ್ಚನ್ ಅವರ ಕೆಟ್ಟ ಹಂತದ ಬಗ್ಗೆ ಹೇಳಲಿದ್ದೇವೆ..
1996ರಲ್ಲಿ ಅಮಿತಾಬ್ ಬಚ್ಚನ್ ಚಿತ್ರರಂಗದಲ್ಲಿ ದೊಡ್ಡ ಹೆಸರು. ಈ ಸಮಯದಲ್ಲಿ, ಅಮಿತಾಬ್‌ಗೆ ವಿಶ್ವ ಸುಂದರಿ ಆತಿಥ್ಯ ವಹಿಸುವ ಆಫರ್ ಬಂದಾಗ, ಅವರು ತಕ್ಷಣವೇ ಓಕೆ ಎಂದು ಹೇಳಿದರು. ಬಿಗ್ ಬಿಯ ಕಂಪನಿ ಎಬಿಸಿಎಲ್ ವಿಶ್ವ ಸುಂದರಿ 1996ನ್ನು ವಹಿಸಿಕೊಂಡಿತ್ತು. ಇದರಿಂದ ಭಾರೀ ಲಾಭವನ್ನು ಅವರು ನಿರೀಕ್ಷಿಸಿದ್ದರು. ಆದರೆ ಈ ಒಪ್ಪಂದವು ಅವರನ್ನು ರಸ್ತೆಗೆ ತಳ್ಳುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ.
ಕರ್ನಾಟಕದಲ್ಲಿ ಭಾರೀ ಕೋಲಾಹಲ ಎದ್ದಿತ್ತು
ವಾಸ್ತವವಾಗಿ, ವಿಶ್ವ ಸುಂದರಿ ಘೋಷಣೆಯಾದ ನಂತರ, ಕರ್ನಾಟಕದ ಕೆಲವರು ಈ ಘಟನೆಯ ವಿರುದ್ಧ ವಿವಿಧ ರೀತಿಯ ಪ್ರತಿಭಟನೆ ಪ್ರಾರಂಭಿಸಿದರು. ಭಾರತದ ಇತರ ಮಹಿಳೆಯರನ್ನು ಅವಮಾನಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದು ಯಾರೋ ಹೇಳಿದರು.
ಇತರ ಅನೇಕ ಜನರು ಇದನ್ನು ವಿರೋಧಿಸಿದರು ಮತ್ತು ಇದು ಅವರ ಸಂಸ್ಕೃತಿಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ, ಹಾಳು ಮಾಡುತ್ತದೆ ಎಂದು ಚರ್ಚೆಯಾಯಿತು. ಸ್ವಲ್ಪ ಸಮಯದೊಳಗೆ ವಿವಾದವು ಎಷ್ಟು ಉಲ್ಬಣಗೊಂಡಿತು ಎಂದರೆ ಇದು ದೇಶಾದ್ಯಂತ ಹಬ್ಬಿತು ಮತ್ತು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸ್ವಿಮ್ ಸೂಟ್ ಸುತ್ತನ್ನು ರದ್ದುಗೊಳಿಸಲಾಯಿತು ಮತ್ತು ಸೀಶೆಲ್ಸ್‌ಗೆ ಸ್ಥಳಾಂತರಿಸಲಾಯಿತು.
ಇದಕ್ಕಿಂತ 2 ವರ್ಷ ಮುಂಚೆಯಷ್ಟೇ ಐಶ್ವರ್ಯಾ ರೈ ಹಾಗೂ ಸುಶ್ಮಿತಾ ಸೇನ್ ಮಿಸ್ ವರ್ಲ್ಡ್ ಮತ್ತು ಮಿಸ್ ಯೂನಿವರ್ಸ್ ಪಟ್ಟ ಗೆದ್ದಾಗ ಭಾರತ ಬೀಗಿತ್ತು. ಅಲ್ಲದೆ 1947ರಿಂದಲೂ ಮಿಸ್ ಇಂಡಿಯಾ ಸ್ಪರ್ಧೆ ನಡೆಯುತ್ತಿಲೇ ಇತ್ತು. ಎಂದೂ ಅಷ್ಟೊಂದು ವಿರೋಧ ವ್ಯಕ್ತವಾಗಿರಲಿಲ್ಲ. ಹಾಗಾಗಿ, ಭಾರತೀಯರ ಈ ಪ್ರತಿಕ್ರಿಯೆ ಪೂರ್ಣ ಅನಿರೀಕ್ಷಿತವಾಗಿತ್ತು.
ಬಿಗ್ ಬಿ ತಮ್ಮ ಬಂಗಲೆಯನ್ನು ಅಡಮಾನವಿಟ್ಟಿದ್ದರು
ಈ ಪರಿಸ್ಥಿತಿಯಿಂದಾಗಿ ಬಿಗ್ ಬಿ ಸಂಸ್ಥೆ ಭಾರೀ ನಷ್ಟ ಅನುಭವಿಸಬೇಕಾಯಿತು. ಇಂಡಿಯಾ ಟುಡೇ ವರದಿಯ ಪ್ರಕಾರ ಅಮಿತಾಬ್ ಬಚ್ಚನ್ ಸುಮಾರು 70 ಕೋಟಿ ರೂಪಾಯಿ ಸಾಲ ಮಾಡಬೇಕಾಯಿತು.
ಹಣವನ್ನು ವಾಪಸ್ ಮಾಡುವಂತೆ ಬ್ಯಾಂಕ್ ಅವರಿಗೆ ನೋಟಿಸ್ ಕಳುಹಿಸಿತು. ಬ್ಯಾಂಕ್‌ನಿಂದ ಪಡೆದ ಸಾಲವನ್ನು ತೀರಿಯಲು, ಅಮಿತಾಬ್ ಬಚ್ಚನ್ ಜುಹೂನಲ್ಲಿರುವ ತಮ್ಮ ಬಂಗಲೆಯನ್ನು ಅಡಮಾನವಿಟ್ಟರು.