ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್, ಯಾವಾಗ್ಲೂ ತಮ್ಮ ಸ್ಟೈಲಿಶ್ ಲುಕ್‌ನಲ್ಲಿ ಪೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ನಟಿ ಇತ್ತೀಚಿಗೆ ವಿಮೆನ್ಸ್ ಡೇಗೆ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಾರೆ.
ಸಾರಾ ಗ್ರೀನ್ ಕಲರ್‌ನ ಫ್ಲೋರಲ್ ಡ್ರೆಸ್‌ನಲ್ಲಿ ಸ್ಟೈಲಿಶ್ ಆಗಿ ಫೋಸ್ ಕೊಟ್ಟಿದ್ದಾರೆ. ಈ ಡ್ರೆಸ್ ಸಾರಾ ತೆಂಡೂಲ್ಕರ್ ಅವರ ಲಿಟ್ ಫಿಗರ್ ಮೇಲೆ ಪರಿಪೂರ್ಣವಾಗಿ ಹೊಂದಿಕೊಂಡಿದೆ. ಇದಕ್ಕೆ ಹರಳಿನ ದೊಡ್ಡ ಕಿವಿಯೋಲೆಯನ್ನು ಸಹ ಪೇರ್ ಮಾಡಿದ್ದಾರೆ.
ಫೋಟೋ ಶೂಟ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. 'ಶುಭ್‌ಮನ್ ಗಿಲ್ ಚೆನ್ನಾಗಿ ಆಟ ಆಡಿದಾಗಲೇ ನೀವು ಸುಂದರವಾದ ಪೋಟೋಗಳನ್ನು ಪೋಸ್ಟ್ ಮಾಡೋದ್ಯಾಕೆ' ಎಂದು ಕೆಲವರು ಪ್ರಶ್ನಿಸಿದ್ದಾರೆ.
'ಶುಭ್‌ಮನ್ ಗಿಲ್ ಸೆಂಚುರಿ ಹೊಡೆದ ಖುಷಿಗೆ ಈ ಪೋಸ್ಟ್' ಎಂದು ಇನ್ನೊಬ್ಬರು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಸೋ ಪ್ರೆಟ್ಟೀ, ಸೆಂಚುರಿ ಸ್ಪೆಷಲ್, 'ಶುಭ್‌ಮನ್ ಲಕ್ಕಿ ಹೈ', ಗ್ರೀನ್ ಫಾರೆಸ್ಟ್ ಎಂದು ಮತ್ತೆ ಹಲವರು ಕಾಮೆಂಟ್ ಮಾಡಿದ್ದಾರೆ.
'ಸಾರಾ ಸ್ಟೈಲಿಶ್ ಫೋಟೋಗಳನ್ನು ಪೋಸ್ಟ್ ಮಾಡಿದ್ಯಾಕೆ ಅನ್ನೋದು ಲೆಜೆಂಡ್‌ಗಳಿಗೆ ಮಾತ್ರ ಅರ್ಥವಾಗುತ್ತದೆ' ಎಂದು ಮತ್ತೆ ಕೆಲವರು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. 'ಹಮಾರಿ ಬಾಬಿ ಕೈಸಿ ಹೋ' ಎಂದು ಮತ್ತೆ ಹಲವರು ಕಾಲೆಳೆದಿದ್ದಾರೆ.
ಫ್ಯಾಶನ್ ವಿಷಯಕ್ಕೆ ಬಂದಾಗ ಸಾರಾ ಸಖತ್ ಅಪ್ಡೇಟೆಡ್. ಆಕೆಯ ಇನ್‌ಸ್ಟಾಗ್ರಾಮ್ ಖಾತೆಯು ಅಲ್ಟ್ರಾ-ಸ್ಟೈಲಿಶ್ ಬಟ್ಟೆಗಳನ್ನು ಹೊಂದಿರುವ ಫೋಟೋಗಳಿಂದ ತುಂಬಿದೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಅಂಜಲಿ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್. ಅ.12, 1997ರಲ್ಲಿ ಮುಂಬೈನಲ್ಲಿ ಹುಟ್ಟಿದ ಸಾರಾ ತೆಂಡುಲ್ಕರ್, ಧೀರುಬಾಯಿ ಅಂತಾರಾಷ್ಟ್ರೀಯ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ.
ಯುನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಮೆಡಿಸಿನ್ ಪದವಿ ಪಡೆದಿರುವ ಸಾರಾ, ಕ್ರಿಕೆಟಿಗ ಶುಬ್‌ಮನ್ ಗಿಲ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಕಳೆದ ಹಲವು ವರ್ಷಗಳಿಂದಾನೂ ಇದೆ.