ಮದುವೆಯಲ್ಲಿ ವಧುವಿನ ಸೌಂದರ್ಯ ಹೆಚ್ಚಿಸುತ್ತೆ ನೆಕ್ಲೇಸ್

Published : Aug 27, 2022, 02:38 PM IST

ನೀವು ಮದುವೆಗೆ ರೆಡಿ ಆಗ್ತಿದ್ದೀರಾ? ನೀವು ಮದುವೆಯಲ್ಲಿ ಯಾವ ರೀತಿ ಕಾಣಬೇಕು ಅನ್ನೋದನ್ನು ನೀವು ಈಗಾಗ್ಲೆ ಡಿಸೈಡ್ ಮಾಡಾಗಿದೆ ಅಲ್ವಾ? ಯಾಕಂದ್ರೆ ವಧು ಸೆಂಟರ್ ಆಫ್ ಅಟ್ರಾಕ್ಷನ್ ಆದ್ದರಿಂದ ತುಂಬಾನೆ ಸುಂದರವಾಗಿ ಕಾಣಬೇಕು. ವಧುವಿನ ಲುಕ್ ವಿಷಯಕ್ಕೆ ಬಂದಾಗ, ಯಾವ ಹುಡುಗಿಯೂ ಡಲ್ ಆಗಿ ಕಾಣಲು ಬಯಸುವುದಿಲ್ಲ.ಅಕ್ಸೆಸರಿಗಳಿಂದ ಹಿಡಿದು ನೆಕ್ಲೇಸ್, ಔಟ್ ಫಿಟ್ ಗಳು, ಹುಡುಗಿಯರು ಬಯಸುವ ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ನೀವು ಉಡುಗೆಗಳೊಂದಿಗೆ ಹೊಂದಿಕೆಯಾಗುವ ಹಾರ ಧರಿಸದಿದ್ದರೆ, ಇಡೀ ಲುಕ್ ಡಲ್ ಆಗುತ್ತೆ. ಹಾಗಿದ್ರೆ ನಿಮ್ಮ ಲುಕ್ ಹೆಚ್ಚುವ ಚೋಕರ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

PREV
16
ಮದುವೆಯಲ್ಲಿ ವಧುವಿನ ಸೌಂದರ್ಯ ಹೆಚ್ಚಿಸುತ್ತೆ ನೆಕ್ಲೇಸ್

ಚೋಕರ್ ನೆಕ್ಲೇಸ್ ಗಳು (choker necklace) ಸಹ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೆಂಡ್ ನಲ್ಲಿವೆ. ನೀವು ಕೂಡ ಮದುವೆಯಲ್ಲಿ ಚೋಕರ್ ಧರಿಸಲು ಬಯಸಿದರೆ, ನೀವು ಇಲ್ಲಿಂದ ಸಲಹೆಗಳನ್ನು ತೆಗೆದುಕೊಳ್ಳಬಹುದು. ಇಲ್ಲಿ ಬೇರೆ ಬೇರೆ ವಿಧದ ಚೋಕರ್ ಬಗ್ಗೆ ನೀಡಲಾಗಿದೆ. ಅವುಗಳ ಬಗ್ಗೆ ನೋಡೋಣ.

26
ಭವ್ಯವಾದ ಚೋಕರ್

ನೀವು ಹೆವಿ ಚೋಕರ್‌ಗಳನ್ನು ಇಷ್ಟಪಟ್ಟರೆ, ಭವ್ಯವಾದ ರಾಜಸಿ ಚೋಕರ್ ಲುಕ್ ನಿಮಗೆ ಪರ್ಫೆಕ್ಟ್ ಲುಕ್ ನೀಡುತ್ತೆ. ವಿಶಿಷ್ಟ ವಿನ್ಯಾಸದ ಈ ಚೋಕರ್‌ನೊಂದಿಗೆ, ನೀವು ಮದುವೆಯಲ್ಲಿ ರಾಜಸ್ಥಾನಿ ವಧುವಿಗಿಂತ ಸುಂದರವಾಗಿ ಕಾಣೋದು ಖಂಡಿತಾ. 
 

36
ಮಲ್ಟಿ ಕಲರ್ ಚೋಕರ್

ಮದುವೆಯಲ್ಲಿ ನೀವು ಮಲ್ಟಿಮಕಲರ್ ಚೋಕರ್ ಗಳನ್ನು (multi color choker) ಸಹ ಟ್ರೈ ಮಾಡಬಹುದು. ಈ ರೀತಿಯ ಚೋಕರ್ ಅನ್ನು ಸಾಂಪ್ರದಾಯಿಕ ಅಥವಾ ಪಾಶ್ಚಿಮಾತ್ಯ ಯಾವುದೇ ಉಡುಗೆಯೊಂದಿಗೆ ಕಂಬೈನ್ ಮಾಡಬಹುದು. ನೀವು ಅದನ್ನು ಮದುವೆಯಲ್ಲಿ ಧರಿಸಲು ಬಯಸದಿದ್ದರೆ, ನೀವು ಅದನ್ನು ಮದುವೆಯ ನಂತರ ಗೌನ್ ನಂತಹ ವೆಸ್ಟರ್ನ್ ವೇರ್ ಜೊತೆ  ಕ್ಯಾರಿ ಮಾಡಬಹುದು. 

46
ಮಲ್ಟಿ ಕಲರ್ ಚೋಕರ್

ನೀವು ಹೆವಿ ಚೋಕರ್  ಕ್ಯಾರಿ ಮಾಡಲು ಬಯಸಿದರೆ, ಲೇಯರ್ ಲುಕ್ ನಿಮ್ಮ ವೆಡ್ಡಿಂಗ್ ಲುಕ್ ಗೆ ಪರ್ಫೆಕ್ಟ್ ಆಗಿದೆ. ಈ ಚೋಕರ್ (layered choker) ಧರಿಸಿದ್ರೆ ಕುತ್ತಿಗೆ ಖಾಲಿ ಎಂದೆನಿಸೋದಿಲ್ಲ ಮತ್ತು ಈ ಚೋಕರ್ ವಧುವಿನ ಲುಕ್ ಅನ್ನು ಮತ್ತಷ್ಟು ಆಕರ್ಷಕಗೊಳಿಸುತ್ತೆ. 

56
ಡೈಮಂಡ್ ಚೋಕರ್

ಮದುವೆಯಲ್ಲಿ ನೀವು ಡೈಮಂಡ್ ಚೋಕರ್ ಸೆಟ್ (diamond choker set) ಅನ್ನು ಸಹ  ಕ್ಯಾರಿ ಮಾಡಬಹುದು. ಈ ಚೋಕರ್ ಸೆಟ್ ನೊಂದಿಗೆ, ನೀವು ಮದುವೆಯಲ್ಲಿ ಇನ್ನೂ ಹೆಚ್ಚು ಸುಂದರವಾಗಿ ಕಾಣಬಹುದು. ವಜ್ರದ ಹೊಳಪು ನಿಮ್ಮ ವ್ಯಕ್ತಿತ್ವವನ್ನು ದೂರದಿಂದ ಎತ್ತಿ ತೋರಿಸುತ್ತದೆ. 

66
ಮಾಡರ್ನ್ ಚೋಕರ್

ನೀವು ಮದುವೆಯಲ್ಲಿ ಸ್ಟೈಲಿಶ್ ಆಗಿ ಕಾಣಲು ಬಯಸಿದರೆ, ಮಾಡರ್ನ್ ಚೋಕರ್ (modern chocker) ಕ್ಯಾರಿ ಮಾಡಬಹುದು. ಡೈಮಂಡ್ ಡ್ಯೂ ಡ್ರಾಪ್ ಲುಕ್ ಚೋಕರ್ ನೆಕ್ಲೇಸ್ ಮತ್ತು ಕಿವಿಯೋಲೆ ಸೆಟ್ ನೊಂದಿಗೆ, ನೀವು ನಿಮ್ಮ ಲುಕ್ ಹೆಚ್ಚಿಸಬಹುದು. ಹೆವಿ ಸೀರೆ ಅಥವಾ ಲೆಹೆಂಗಾದೊಂದಿಗೆ ಅಂತಹ ಚೋಕರ್ ಸೆಟ್ ಕ್ಯಾರಿ ಮಾಡಬಹುದು. 

Read more Photos on
click me!

Recommended Stories