ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚುವಾಗ ಈ ಮಿಸ್ಟೇಕ್ ಮಾಡ್ಬೇಡಿ

First Published Aug 20, 2022, 11:02 AM IST

ಮ್ಯಾಟ್ ಮತ್ತು ಶೈನಿ ಲಿಪ್ ಸ್ಟಿಕ್ ಅಲ್ಲದೇ, ಕೆಲವು ಮಹಿಳೆಯರು ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚಲು ಇಷ್ಟಪಡುತ್ತಾರೆ. ಈ ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚೋವಾಗ, ಮಹಿಳೆಯರು ಆಗಾಗ್ಗೆ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ, ಇದರಿಂದ ಅವರು ಲಿಪ್ ಸ್ಟಿಕ್ ನ ಸ್ಮೂತ್ ಟಚ್ ಪಡೆಯಲು ಸಾಧ್ಯವಾಗೋದಿಲ್ಲ. ಹಾಗಿದ್ರೆ ಬನ್ನಿ ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿ. ಇವುಗಳನ್ನು ತಿಳ್ಕೊಂಡ್ರೆ ಸುಲಭವಾಗಿ ಲಿಪ್ ಸ್ಟಿಕ್ ಹಚ್ಚಬಹುದು. ಜೊತೆಗೆ ಸುಂದರವಾಗಿ ಸಹ ಕಾಣಬಹುದು.

ಮೃದು ಮತ್ತು ಸುಂದರ ತುಟಿ ಮುಖದ ಸೌಂದರ್ಯ ಹೆಚ್ಚಿಸಲು ಸಹಾಯ ಮಾಡುತ್ತೆ. ಮೇಕಪ್ ಮಾಡುವಾಗ ಸಹ, ಮಹಿಳೆಯರು ತುಟಿಗಳನ್ನು ಅಲಂಕರಿಸಲು ಅತ್ಯುತ್ತಮ ಶೇಡ್ ಲಿಪ್ ಸ್ಟಿಕ್ ಆಯ್ಕೆ ಮಾಡ್ತಾರೆ. ಅದೇ ಸಮಯದಲ್ಲಿ, ಹೆಚ್ಚಿನ ಮಹಿಳೆಯರು ಹೊಳೆಯುವ ತುಟಿಗಳಿಗೆ ಲಿಕ್ವಿಡ್ ಲಿಪ್ಸ್ಟಿಕ್ ಹಚ್ಚಲು ಬಯಸುತ್ತಾರೆ. ನೀವು ಬಯಸಿದರೆ, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚುವಾಗ ನೀವು ತುಟಿಗಳಿಗೆ ಸ್ಮೂತ್ ಟಚ್ ನೀಡಬಹುದು.

ಸಹಜವಾಗಿ, ಲಿಕ್ವಿಡ್ ಲಿಪ್ ಸ್ಟಿಕ್ ತುಟಿಗಳನ್ನು ಹೈಲೈಟ್ ಮಾಡುವ ಮೂಲಕ ಅತ್ಯುತ್ತಮ ಮೇಕಪ್ ಲುಕ್ ನೀಡಲು ಸಹಾಯ ಮಾಡುತ್ತದೆ. ಆದ್ರೂ, ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚುವಾಗ ಕೆಲವು ವಿಷಯಗಳನ್ನು ನಿರ್ಲಕ್ಷಿಸುವುದು ತುಟಿಗಳ ಸೌಂದರ್ಯ ಹಾಳಾಗಲು ಕಾರಣವಾಗುತ್ತದೆ, ಇದು ನಿಮ್ಮ ತುಟಿಗಳಿಗೆ ಸ್ಮೂತ್ ಟಚ್ ನೀಡೋದಿಲ್ಲ.

ಅಲ್ಲದೇ ಇದು ನಿಮ್ಮ ಮೇಕಪ್ ಅನ್ನು ಡಲ್ ಆಗಿ ಕಾಣುವಂತೆ ಮಾಡುತ್ತೆ. ಲಿಕ್ವಿಡ್ ಲಿಪ್ ಸ್ಟಿಕ್ (liquid lipstick) ಹಚ್ಚಲು ಕೆಲವು ಟಿಪ್ಸ್ ಹೇಳ್ತೀವಿ, ಅದನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಪರ್ಫೆಕ್ಟ್ ಮೇಕಪ್ ಲುಕ್ ಪಡೆಯಬಹುದು.

ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚುವಾಗ ಅವಸರ ಮಾಡಬೇಡಿ

ಮೇಕಪ್ ಮಾಡೋವಾಗ ಮ್ಯಾಟ್ ಮತ್ತು ಶೈನಿಂಗ್ ಲಿಪ್ ಸ್ಟಿಕ್ ಗಳನ್ನು ತಕ್ಷಣವೇ ಹಚ್ಚಬಹುದಾದರೂ, ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕಾಗಿ, ನೀವು ಔಟ್ ಲೈನಿಂಗ್ (out lining)ನಂತರ ಫಿನಿಶಿಂಗ್ ಸಹ ನೀಡಬೇಕು, ಆದ್ದರಿಂದ ಲಿಕ್ವಿಡ್ ಲಿಪ್ಸ್ಟಿಕ್ ಹಚ್ಚುವಾಗ ಆತುರಪಡಬೇಡಿ.

ಲಿಪ್ ಸ್ಟಿಕ್ ನ ಪ್ರಮಾಣದ ಬಗ್ಗೆ ಗಮನ ಹರಿಸಿ

ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚಲು ಕೇವಲ ಒಂದು ಕೋಟ್ ಸಾಕು. ಅದೇ ಸಮಯದಲ್ಲಿ, ಹೆಚ್ಚು ಲಿಪ್ಸ್ಟಿಕ್ (lipstick) ಹಚ್ಚೋದ್ರಿಂದ ನಿಮ್ಮ ತುಟಿಗಳ ಶೇಪ್ ಹಾಳಾಗಬಹುದು. ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚುವಾಗ ಕಡ್ಡಿಯಿಂದ ಹೆಚ್ಚುವರಿ ಲಿಪ್ ಸ್ಟಿಕ್ ಅನ್ನು ತೆಗೆದುಹಾಕಿ.

ಮೇಕಪ್ ಮಾಡೋದನ್ನು ಮರೀಬೇಡಿ

ಲಿಕ್ವಿಡ್ ಲಿಪ್ ಸ್ಟಿಕ್ ನೋಡಲು ಸಾಕಷ್ಟು ಮಾಯಿಸ್ಚರೈಸ್ ಮತ್ತು ಶೈನಿಯಾಗಿರುತ್ತೆ. ಹಾಗಾಗಿ, ಮೇಕಪ್ (makeup)ಇಲ್ಲದೆ ಲಿಕ್ವಿಡ್ ಲಿಪ್ ಸ್ಟಿಕ್ ಮಾತ್ರ ಹಚ್ಚಿದ್ರೆ ನಿಮ್ಮ ಮುಖದ ಅಂದ ಹಾಳಾಗುತ್ತೆ. ಆದ್ದರಿಂದ ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚುವ ಜೊತೆಗೆ, ಸ್ವಲ್ಪ ಮೇಕಪ್ ಮಾಡೋದನ್ನು ಮರಿಬೇಡಿ. 

ತುಟಿಗಳನ್ನು ಹೈಡ್ರೇಟ್ ಮಾಡಿ

ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚುವ ಮೊದಲು ತುಟಿಗಳನ್ನು ಮಾಯಿಶ್ಚರೈಸ್ ಮಾಡಲು ಮರೆಯಬೇಡಿ. ಬಿರುಕು ಬಿಟ್ಟ ಮತ್ತು ಒಣಗಿದ ತುಟಿ ಮೇಲೆ ಲಿಪ್ ಸ್ಟಿಕ್ ಚೆನ್ನಾಗಿ ಕಾಣೋದಿಲ್ಲ, ಆದ್ದರಿಂದ ಲಿಪ್ ಸ್ಟಿಕ್ ಹಚ್ಚುವ ಮೊದಲು ತುಟಿಗಳ ಮೇಲೆ ಲಿಪ್ ಬಾಮ್ ಹಚ್ಚಿ. ಇದು ನಿಮ್ಮ ತುಟಿಗಳ ಮಾಯಿಶ್ಚರೈಸರ್ ಅನ್ನು ನಿರ್ವಹಿಸುತ್ತದೆ ಮತ್ತು ಲಿಪ್ಸ್ಟಿಕ್ ಸಹ ಸಾಫ್ಟ್ ಟಚ್ ಪಡೆಯುತ್ತದೆ.

ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚೋದು ಹೇಗೆ?

ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚುವಾಗ, ಯಾವಾಗಲೂ ಕೆಳಗಿನ ತುಟಿಗೆ ಲಿಪ್ ಸ್ಟಿಕ್ ಹಚ್ಚಿ. ಇದರ ನಂತರ, ಎರಡೂ ತುಟಿಗಳನ್ನು ಒಟ್ಟಿಗೆ ಒತ್ತಿ ಮತ್ತು ಲಿಪ್ ಸ್ಟಿಕ್ ಅನ್ನು ಮಿಕ್ಸ್ ಮಾಡಿ. ಇದು ಲಿಪ್ ಸ್ಟಿಕ್ ಅನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಜೊತೆಗೆ, ಲಿಪ್ ಸ್ಟಿಕ್ ನೊಂದಿಗೆ ಡಾರ್ಕ್ ಶೇಡ್ ಲಿಪ್ ಲೈನರ್ ಬಳಸಿ.

click me!