ದಾನದ ಬಗ್ಗೆ ತಿಳಿಸಲು ಡೀಪ್‌ ನೆಕ್‌ ಬ್ಲೌಸ್ ಧರಿಸಿ ಬಂದ ಜ್ಯೋತಿಷಿ ನಿಧಿ ಚೌಧರಿ.. ವಿಡಿಯೋ ಫುಲ್ ಟ್ರೋಲ್

Published : Jan 15, 2026, 01:01 PM IST

Astrologer Nidhi Choudhary: ನಿಧಿ ಆಗಾಗ್ಗೆ ದೈನಂದಿನ ಜೀವನ, ದಾನ ಮತ್ತು ಧರ್ಮದ ಬಗ್ಗೆ ವಿಡಿಯೋ ಮಾಡುತ್ತಾರೆ. ಇದನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ ಕೂಡ. ಆದರೆ ಇದೀಗ ಅವರ ಧಾರ್ಮಿಕ ವಿಡಿಯೋಗಳಿಗಿಂತ ಅವರ ಲುಕ್ ಮತ್ತು ಡ್ರೆಸ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ.

PREV
16
ಲುಕ್ ಮತ್ತು ಡ್ರೆಸ್ ಹೆಚ್ಚು ಜನಪ್ರಿಯ

ಜ್ಯೋತಿಷಿ (Astrologer) ನಿಧಿ ಚೌಧರಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿಯೇ 134.8K ಅನುಯಾಯಿಗಳು ಇದ್ದಾರೆ. ನಿಧಿ ಆಗಾಗ್ಗೆ ದೈನಂದಿನ ಜೀವನ, ದಾನ ಮತ್ತು ಧರ್ಮದ ಬಗ್ಗೆ ವಿಡಿಯೋ ಮಾಡುತ್ತಾರೆ. ಇದನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ ಕೂಡ. ಆದರೆ ಇದೀಗ ಅವರ ಧಾರ್ಮಿಕ ವಿಡಿಯೋಗಳಿಗಿಂತ ಅವರ ಲುಕ್ ಮತ್ತು ಡ್ರೆಸ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ.

26
ಟ್ರೋಲ್ ಆಯ್ತು

ಹೌದು. ನಿಧಿ ಚೌಧರಿ ಅವರು ಚೆಂದದ ಸೀರೆಯ ಜೊತೆ ಡೀಪ್-ನೆಕ್ ಬ್ಲೌಸ್‌ಗಳನ್ನು ಧರಿಸಿ ಶೂಟ್ ಮಾಡುವುದನ್ನು ಹೆಚ್ಚಾಗಿ ಕಾಣಬಹುದು. ಇದು ಸಾಮಾಜಿಕ ಮಾಧ್ಯಮದಲ್ಲಿ ಅವರು ಸಾಕಷ್ಟು ಟ್ರೋಲಿಂಗ್ ಎದುರಿಸಲು ಕಾರಣವಾಗಿದೆ. ಬಳಕೆದಾರರು ಅವರ ವಿಡಿಯೋಗಳಿಗೆ ಬಾಯಿಗೆ ಬಂದಂತೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

36
ದಾನದ ಬಗ್ಗೆ ವಿಡಿಯೋ

ಜ್ಯೋತಿಷಿ ನಿಧಿ ಚೌಧರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ದಾನಕ್ಕೆ ನೀಡುವ ಮಹತ್ವವನ್ನು ಚರ್ಚಿಸಿದ್ದು, ಶೀರ್ಷಿಕೆಯಲ್ಲಿ, "ದಾನ ಮಾಡುವುದು ನಿಮ್ಮ ಕರ್ಮವನ್ನು ಸುಧಾರಿಸಲು ದೊಡ್ಡ ಮತ್ತು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ" ಎಂದು ಬರೆದಿದ್ದಾರೆ. ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

46
ಬಿಳಿ ಸೀರೆ ಮತ್ತು ಕಪ್ಪು ಡೀಪ್ ನೆಕ್ ಬೌಸ್

ನೀವು ನೋಡುವ ಹಾಗೆ ಈ ವಿಡಿಯೋದಲ್ಲಿ, ನಿಧಿ ಚೌಧರಿ ಬಿಳಿ ಸೀರೆ ಮತ್ತು ಕಪ್ಪು ಡೀಪ್ ನೆಕ್ ಬೌಸ್ ಧರಿಸಿರುವುದು ಕಂಡುಬರುತ್ತದೆ. ಇದೀಗ ಬಳಕೆದಾರರು ಇದೇ ವಿಡಿಯೋದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.

56
ಬಳಕೆದಾರರ ಕಾಮೆಂಟ್ಸ್

ನಿಧಿ ಚೌಧರಿ ಅವರ ದೇಣಿಗೆ ವಿಡಿಯೋದ ಬಗ್ಗೆ ಕಾಮೆಂಟ್ ಮಾಡುತ್ತಾ ಓರ್ವ ಬಳಕೆದಾರರು, "ನಾನು ದುರ್ಬಲನಾಗಿದ್ದೆ, ಆದರೆ ಈಗ ನೀವು ಬಂದಿರುವುದರಿಂದ ನನಗೆ ಜ್ವರ ಬರಬಹುದು" ಎಂದು ಬರೆದಿದ್ದಾರೆ. ಮತ್ತೋರ್ವ ಬಳಕೆದಾರರು, "ನಾನು ಮನುಷ್ಯನಾಗಲು ಪ್ರಯತ್ನಿಸುತ್ತೇನೆ, ಮತ್ತು ನಾನು ಮನುಷ್ಯನಾಗಲು ಹೊರಟಾಗ ನಿಮ್ಮ ವಿಡಿಯೋ ನೋಡುತ್ತೇನೆ. ನಂತರ ನನ್ನ ಮನಸ್ಸಿನಲ್ಲಿರುವ ದೆವ್ವ ಮತ್ತೆ ಎಚ್ಚರಗೊಳ್ಳುತ್ತದೆ" ಎಂದು ಬರೆದಿದ್ದಾರೆ.

66
ಈ ರೀತಿಯ ನಾಟಕ ಮಾಡಬೇಡಿ

"ಸರಿಯಾಗಿ ಉಡುಗೆ ತೊಟ್ಟಾಗಲೂ ನಿಮ್ಮ ಜ್ಞಾನವನ್ನು ಹಂಚಿಕೊಳ್ಳಬಹುದು. ಮೇಡಂ, ನಿಮಗೆ ಲೈಕ್ಸ್ ಮತ್ತು ರೀಚ್ ಮಾತ್ರ ಬೇಕಾದರೆ ಇನ್ನೂ ಕಡಿಮೆ ಬಟ್ಟೆ ಧರಿಸಿ ಮತ್ತು ಓನ್ಲಿಫ್ಯಾನ್ಸ್‌ನಲ್ಲಿ ಖಾತೆಯನ್ನು ರಚಿಸಿ. ಈ ರೀತಿಯ ನಾಟಕ ಮಾಡಬೇಡಿ" ಎಂದು ಫಾಲೋವರ್ಸ್ ಹಲವು ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories