ಮುಖದ(Face) ಮೇಲೆ ಶಾಶ್ವತ ಹೊಳಪನ್ನು ಪಡೆಯಲು ಬಯಸೋದಾದ್ರೆ, ಮನೆಯ ಅಡುಗೆ ಮನೆಯಲ್ಲಿರುವ ಅನೇಕ ವಸ್ತುಗಳು ಮುಖವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತೆ. ಶತಮಾನಗಳಿಂದ ಮನೆಮದ್ದುಗಳ ಮೂಲಕ ಚರ್ಮಕ್ಕೆ ಸಂಬಂಧಿಸಿದ ಅನೇಕ ರೀತಿಯ ಸಮಸ್ಯೆಗಳನ್ನು ಗುಣಪಡಿಸಲಾಗಿದೆ. ನೈಸರ್ಗಿಕ ವಸ್ತುಗಳ ಬಳಕೆಯು ಪರಿಣಾಮ ತೋರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ಅವು ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡೋದಿಲ್ಲ. ಅಡುಗೆಮನೆಯಲ್ಲಿ ಲಭ್ಯವಿರುವ ಅಂತಹ ಕೆಲವು ವಸ್ತುಗಳನ್ನು ನೋಡೋಣ-
ಆಲೂಗಡ್ಡೆ ಮತ್ತು ಟೊಮೆಟೊ (Tomato)
ಆಲೂಗಡ್ಡೆ ಮತ್ತು ಟೊಮೆಟೊ ವಿಶೇಷವಾಗಿ ಕಣ್ಣುಗಳ ಕೆಳಗಿನ ಡಾರ್ಕ್ ಸರ್ಕಲ್ ತೆಗೆದು ಹಾಕಲು ಸಹಾಯ ಮಾಡುತ್ತೆ. ಹಾಗೇ ಅವುಗಳ ನಿಯಮಿತ ಬಳಕೆಯಿಂದಾಗಿ, ಗಾಯದ ಕಲೆಗಳು ಸಹ ಲೈಟ್ ಆಗಲು ಪ್ರಾರಂಭಿಸುತ್ತವೆ.ಆಲೂಗಡ್ಡೆಯನ್ನು ತುಂಡು ಮಾಡಿ ಕಣ್ಣಿನ ಕೆಳಗೆ ಮಸಾಜ್ ಮಾಡಬೇಕು. ಅಥವಾ ಟೋಮಾಟೋ ರಸವನ್ನು ಕಣ್ಣಿನ ಸುತ್ತಲು ಹಚ್ಚಿದ್ರೆ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತೆ.
ಬೇಕಿಂಗ್ ಸೋಡಾ (Baking soda)
ವಾರದೊಳಗೆ ಕಲೆಗಳನ್ನು ತೆಗೆದುಹಾಕಲು ನೀವು ಬಯಸೋದಾದ್ರೆ, ಒಂದು ಟೀಸ್ಪೂನ್ ಅಡುಗೆ ಸೋಡಾಕ್ಕೆ ಮೂರು ಟೀಸ್ಪೂನ್ ನೀರು ಸೇರಿಸಿ. ಈ ಮಿಶ್ರಣವನ್ನು ಕಲೆ ಮೇಲೆ ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ಬಿಡಿ.ನಂತರ ಮುಖ ತೊಳೆಯಿರಿ. ಕಲೆ ರಹಿತ ಸ್ಕಿನ್ ನಿಮ್ಮದಾಗುತ್ತೆ.
ಸೌತೆಕಾಯಿ(Cucumber)
ಸೌತೆಕಾಯಿ ಚರ್ಮದಿಂದ ಕಲೆಯನ್ನು ತಿಳಿಗೊಳಿಸುವುದು ಮಾತ್ರವಲ್ಲದೆ ಮುಖದ ಹೊಳಪನ್ನು ಹೆಚ್ಚಿಸುತ್ತೆ. ಹಾಗಾಗಿ ಸೌತೆಕಾಯಿ ಬಳಸಿ ಕಲೆ ಹೇಗೆ ಮಾಯವಾಗುತ್ತೆ ನೀವೇ ನೋಡಿ. ಸೌತೆಕಾಯಿಯನ್ನು ಕತ್ತರಿಸಿ ಕಣ್ಣುಗಳ ಮೇಲೆ ಇಡೋದು, ಕಣ್ಣುಗಳಿಗೆ ಆರಾಮ ನೀಡುತ್ತೆ. ಇದಲ್ಲದೇ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚೋದ್ರಿಂದ ಹೊಳಪು ಹೆಚ್ಚುತ್ತೆ.
ಜೇನುತುಪ್ಪ(Honey)
ಕಲೆಗಳನ್ನು ತೆಗೆದುಹಾಕಲು ಪ್ರಾಚೀನ ಕಾಲದಿಂದಲೂ ಜೇನುತುಪ್ಪ ಬಳಸಲಾಗುತ್ತಿದೆ. ಜೇನುತುಪ್ಪ, ಓಟ್ ಮೀಲ್ ಮತ್ತು ನೀರನ್ನು ಒಟ್ಟಿಗೆ ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿ ಗಾಯದ ಕಲೆಗಳ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತರ ಮುಖ ತೊಳೆಯಿರಿ. ಹೀಗೆ ಮಾಡೋದ್ರಿಂದ ಸ್ಕಿನ್ ಹೆಲ್ತಿಯಾಗುತ್ತೆ.
ಅಲೋವೆರಾ(Aloevera)
ಅಲೋವೆರಾ ಜೆಲ್ ಕಲೆಗಳನ್ನು ತೆಗೆದು ಹಾಕಲು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತೆ. ರಾತ್ರಿ ಈ ಜೆಲ್ ಮುಖಕ್ಕೆ ಹಚ್ಚಿ ಮಲಗಿ ಮತ್ತು ಬೆಳಗ್ಗೆ ಮುಖವನ್ನು ತೊಳೆಯಿರಿ. ಹೇಗೆ ದಿನ ಮಾಡೋದ್ರಿಂದ ರಿಸಲ್ಟ್ ಶೀಘ್ರದಲ್ಲೇ ಕಾಣಿಸುತ್ತೆ.
ಈರುಳ್ಳಿ(Onion)
ಈರುಳ್ಳಿ ತುಂಡುಗಳಾಗಿ ಕತ್ತರಿಸಿ ಮತ್ತು ಅದರ ರಸವನ್ನು ತೆಗೆಯಿರಿ. ಈ ರಸವನ್ನು ಹತ್ತಿಯ ಸಹಾಯದಿಂದ ಕಲೆಗಳ ಮೇಲೆ ಹಚ್ಚಿ. ಈ ಪ್ರಕ್ರಿಯೆಯನ್ನು ದಿನಕ್ಕೆ ಹಲವಾರು ಬಾರಿ ರಿಪೀಟ್ ಮಾಡಬಹುದು. ನೀವು ಸ್ವಲ್ಪ ಸಮಯದಲ್ಲಿ ಉತ್ತಮ ಫಲಿತಾಂಶ ನೋಡುತ್ತೀರಿ. ಟ್ರೈ ಮಾಡಿ ನೋಡಿ.