Breast tape ಧರಿಸೋ ಮೂಲಕ ಬ್ರಾ ಧರಿಸೋ ಕಿರಿಕಿರಿ ದೂರ ಮಾಡಿ

First Published Nov 18, 2022, 3:53 PM IST

ಇತ್ತೀಚಿಗೆ ಮಹಿಳೆಯರು ತಮ್ಮ ಉಡುಪಿನ ಅಡಿಯಲ್ಲಿ ಬ್ರಾ ಬದಲಿಗೆ ಬ್ರೆಸ್ಟ್ ಟೇಪ್ ಬಳಸುತ್ತಿದ್ದಾರೆ. ಹೌದು, ಬ್ರೆಸ್ಟ್ ಟೇಪ್ ಹೆಚ್ಚು ಆರಾಮದಾಯಕವಾಗಿರುತ್ತೆ ಎಂದು ಹೆಚ್ಚಿನ ಜನ ಹೇಳುತ್ತಾರೆ. ಆದರೆ ಬ್ರೆಸ್ಟ್ ಟೇಪ್ ಅಂದ್ರೆ ಏನು ಮತ್ತು ಅದನ್ನು ಹೇಗೆ ಬಳಸಬಹುದು ಅನ್ನೋದನ್ನು ತಿಳಿಸುತ್ತೇವೆ.

ಪ್ರತಿಯೊಬ್ಬ ಮಹಿಳೆಯೂ ತನ್ನ ಸ್ತನಗಳು ಆಕಾರದಲ್ಲಿರಬೇಕೆಂದು ಮತ್ತು ಚೆನ್ನಾಗಿ ಕಾಣಬೇಕೆಂದು ಬಯಸುತ್ತಾಳೆ. ಆದರೆ ಕೆಲವು ಮಹಿಳೆಯರ ಸ್ತನ ಗಾತ್ರಗಳು ಚಿಕ್ಕದಾಗಿರುತ್ತವೆ, ಮತ್ತೆ ಕೆಲವರ ಸ್ತನಗಳ ಗಾತ್ರ ದೊಡ್ಡದಾಗಿರುತ್ತವೆ. ಅವುಗಳನ್ನು ನಿರ್ವಹಿಸುವುದು ತುಂಬಾ ಕಷ್ಟ. ಇದಕ್ಕಾಗಿ, ಮಹಿಳೆಯರು ವಿವಿಧ ರೀತಿಯ ಬ್ರಾ ಧರಿಸುತ್ತಾರೆ. ಆದರೆ ಈ ಬ್ರಾ ಕಂಫರ್ಟೇಬಲ್ ಆಗಿರೋಲ್ಲ ಮತ್ತು ಕೆಲವು ಬ್ರಾಗಳು, ಕೆಲವೊಂದು ಡ್ರೆಸ್ ನಿಂದ ಹೊರಗೆ ಬಂದು ಮತ್ತಷ್ಟು ಅನ್ ಕಂಫರ್ಟೇಬಲ್ ಆಗೋ ಹಾಗೆ ಮಾಡುತ್ತೆ.. ಅಂತಹ ಪರಿಸ್ಥಿತಿಯಲ್ಲಿ, ಬ್ರೆಸ್ಟ್ ಟೇಪ್ (breast tape) ನಿಮ್ಮ ಸಹಾಯಕ್ಕೆ ಬರಬಹುದು. ಇತ್ತೀಚಿನ ದಿನಗಳಲ್ಲಿ ಬ್ರೆಸ್ಟ್ ಟೇಪ್ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಇದನ್ನು ಬ್ಯಾಕ್ ಲೆಸ್ ಉಡುಪನ್ನು ಧರಿಸಲು ಸ್ತನವನ್ನು ಎತ್ತಲು ಬಳಸಲಾಗುತ್ತದೆ. 

ಎಲ್ಲಾ ಡ್ರೆಸ್ ಜೊತೆ ಚೆನ್ನಾಗಿ ಕಾಣುವಂತಹ, ಈ ಬ್ರೆಸ್ಟ್ ಟೇಪ್ ಎಂದರೇನು ಎಂಬ ಪ್ರಶ್ನೆಯನ್ನು ಅನೇಕ ಮಹಿಳೆಯರು ಕೇಳುತ್ತಾರೆ? ನೀವು ಕೂಡ ಅದನ್ನೇ ಕೇಳ್ತೀರಿ ಅನ್ನೋದು ಗೊತ್ತು. ಇಲ್ಲಿ ಅವುಗಳನ್ನು ಹೇಗೆ ಬಳಸಲಾಗುತ್ತದೆ ಮತ್ತು ಅದರ ಪ್ರಯೋಜನಗಳು ಯಾವುವು? ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ ತಿಳಿಯಿರಿ. 

ಬ್ರೆಸ್ಟ್ ಟೇಪ್ ಎಂದರೇನು?

ಬ್ರೆಸ್ಟ್ ಟೇಪ್ ಹತ್ತಿ ಮತ್ತು ಲ್ಯಾಟೆಕ್ಸ್ ನಿಂದ ಮಾಡಿದ ಟೇಪ್ ಆಗಿದೆ, ಇದು ಪ್ರತಿಯೊಂದು ಚರ್ಮದ ಪ್ರಕಾರಕ್ಕೂ ಸೂಕ್ತವಾಗಿದೆ. ಈ ಟೇಪ್ ಒಂದು ಸೈಡ್ ನಲ್ಲಿ ಅಂಟು ಇರುತ್ತದೆ, ಅಲ್ಲದೇ ಅದರ ಬಣ್ಣ ಚರ್ಮದಂತೆಯೇ ಇರುತ್ತದೆ. ಹಾಗಾಗಿ ಅದು ಯಾವುದೇ ಉಡುಪಿನ ಜೊತೆ ಧರಿಸಿದ್ರೂ ಕಾಣೋದೇ ಇಲ್ಲ. ಬ್ಯಾಕ್ ಲೆಸ್ (backless dress) ಮತ್ತು ಡೀಪ್ ನೆಕ್ ಉಡುಪು ಧರಿಸುವಾಗ ನೀವು ಈ ಬ್ರೆಸ್ಟ್ ಟೇಪ್ ಬಳಕೆ ಮಾಡಬಹುದು.

ಬ್ರೆಸ್ಟ್ ಟೇಪ್ ಹಾಕೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ?

ಆರಾಮದಾಯಕ
ಬ್ರೆಸ್ಟ್ ಟೇಪ್ ತುಂಬಾ ಆರಾಮದಾಯಕವಾಗಿವೆ. ಇದು ಬ್ರಾದಂತೆ ಅಲ್ಲ, ಇದರಲ್ಲಿ ನೀವು ಇಡೀ ದಿನ ಆರಾಮ ಅನುಭವಿಸುತ್ತೀರಿ. ಇದು ಬ್ರಾದಂತಹ ಯಾವುದೇ ಕ್ಲಿಪ್ಪಿಂಗ್ ಗಳು ಅಥವಾ ಸ್ಟ್ರಾಪ್ ಹೊಂದಿಲ್ಲ. ಹೀಗಾಗಿ, ಈ ಟೇಪ್ ನೋವಿನಿಂದ ಕೂಡಿರುವುದಿಲ್ಲ.

ಯಾವುದೇ ಡ್ರೆಸ್ ಗೂ ಧರಿಸಬಹುದು

ಮಹಿಳೆಯರು ವಿವಿಧ ರೀತಿಯ ಉಡುಪನ್ನು ಧರಿಸಲು ವಿವಿಧ ರೀತಿಯ ಬ್ರಾಗಳನ್ನು ಖರೀದಿಸಬೇಕಾಗುತ್ತದೆ ಅನ್ನೋದನ್ನ ನಾವು ಕೇಳಿದ್ದೇವೆ. ಉದಾಹರಣೆಗೆ, ನೀವು ಆಫ್ ಶೋಲ್ಡರ್ ಡ್ರೆಸ್ ಧರಿಸಬೇಕಾದರೆ, ಟ್ರಾನ್ಸ್ ಪರೆಂಟ್ ಸ್ಟ್ರಾಪ್ ಇರೋ ಬ್ರಾ  (transparant strap) ಧರಿಸಬೇಕು. ಬ್ಯಾಕ್ಲೆಸ್ ಉಡುಪನ್ನು ಧರಿಸಬೇಕಾದರೆ, ನೀವು ಬ್ಯಾಕ್ ಟ್ರಾನ್ಸ್ ಪರೆಂಟ್ ಬ್ರಾ ತೆಗೆದುಕೊಳ್ಳಬೇಕು, ಇದು ತುಂಬಾ ದುಬಾರಿಯಾಗಿದೆ ಮತ್ತು ಪ್ರತಿ ಉಡುಗೆಗೆ ಎಲ್ಲಾ ರೀತಿಯ ಬ್ರಾಗಳನ್ನು ಖರೀದಿಸಲು ಸಾಧ್ಯವಿಲ್ಲ. ಹೀಗಿರೋವಾಗ ಬ್ರೆಸ್ಟ್ ಟೇಪ್ ಬಳಸುವುದು ತುಂಬಾ ಪ್ರಯೋಜನಕಾರಿ ಮತ್ತು ಉಪಯುಕ್ತ, ಏಕೆಂದರೆ ನೀವು ಅದನ್ನು ಯಾವುದೇ ಉಡುಪಿನ ಅಡಿಯಲ್ಲಿ ಧರಿಸಬಹುದು ಮತ್ತು ನೀವು ಬ್ರಾ ಧರಿಸುವ ಅಗತ್ಯವಿಲ್ಲ. 

ಸ್ತನಗಳನ್ನು ನಿಯಂತ್ರಿಸಲು

ಅನೇಕ ಬಾರಿ ಬ್ರಾ ಧರಿಸಿದ ನಂತರವೂ, ದೊಡ್ಡ ಸ್ತನಗಳನ್ನು ಹೊಂದಿರುವ ಮಹಿಳೆಯರು ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಅವರ ಸ್ತನದಲ್ಲಿ ಸಾಕಷ್ಟು ನೋವು ಉಂಟಾಗುತ್ತದೆ. ನೀವು ಬ್ರೆಸ್ಟ್ ಟೇಪ್ ಬಳಸಿದ್ರೆ ಸ್ತನಗಳನ್ನು ಮ್ಯಾನೇಜ್ ಮಾಡೋದು ಸುಲಭ. ಇದು ಕಡಿಮೆ ಬೌನ್ಸ್ ನೀಡುತ್ತದೆ ಮತ್ತು ನೋವನ್ನು ನಿವಾರಿಸುತ್ತದೆ.

ಸ್ತನವನ್ನು ಮೇಲೆತ್ತಲು (lift breasst)

ಒಂದು ವಯಸ್ಸಿನ ನಂತರ, ಮಹಿಳೆಯರ ಸ್ತನಗಳು ಸಡಿಲಗೊಳ್ಳುತ್ತವೆ ಮತ್ತು ಅವು ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಬ್ರೆಸ್ಟ್ ಟೇಪ್ ಅನ್ನು ಉದ್ದಕ್ಕೆ ಹಾಕೋ ಮೂಲಕ ನೀವು ನಿಮ್ಮ ಸ್ತನವನ್ನು ಲಿಫ್ಟ್ ಮಾಡಬಹುದು, ಇದು ನಿಮ್ಮ ಸ್ತನಗಳು ಪರ್ಫೆಕ್ಟ್ ಆಕಾರದಲ್ಲಿ ಕಾಣುವಂತೆ ಮಾಡುತ್ತೆ. 

ಕ್ಲೀವೇಜ್ ಕಾಣಿಸಲು

ಕ್ಲೀವೇಜ್ ಕಾಣಬೇಕೆಂದು ಬಯಸಿದ್ರೆ ನೀವು ಬ್ರೆಸ್ಟ್ ಟೇಪ್ ಬಳಸಬಹುದು. ಚಪ್ಪಟೆಯಾದ ಸ್ತನಗಳನ್ನು ಹೊಂದಿರುವ ಮತ್ತು ಕ್ಲೀವೇಜ್ ಕಾಣಲು ಬಯಸಿದ ಮಹಿಳೆಯರು ಇದನ್ನ ಟ್ರೈ ಮಾಡಬಹುದು. ಇದಕ್ಕಾಗಿ, ನೀವು ಬ್ರೆಸ್ಟ್ ಟೇಪ್ ಅನ್ನು ಎರಡೂ ಸ್ತನಗಳ ಮೇಲೆ ಅಗಲದಲ್ಲಿ ಇರಿಸುವ ಮೂಲಕ ಅದನ್ನು ಹತ್ತಿರಕ್ಕೆ ತರಬೇಕು, ಇದರಿಂದ ಕ್ಲೀವೇಜ್ (cleavage) ಕಾಣಿಸುತ್ತೆ.

ಬ್ರೆಸ್ಟ್ ಲಿಫ್ಟ್ ಟೇಪ್ ಬಳಸಲು ಸಲಹೆಗಳು

- ಮೊದಲು, ಮೊಲೆತೊಟ್ಟುಗಳನ್ನು ಮುಚ್ಚಲು ನಿಪ್ಪಲ್ ಕವರ್ ಬಳಸಿ. ನಂತರ ಅದನ್ನು ಭದ್ರಪಡಿಸಲು ಅದರ ಮೇಲೆ ಸಣ್ಣ ಪ್ಯಾಡ್ ಅಥವಾ ಹತ್ತಿಯಂತಹ ಏನನ್ನಾದರೂ ಇರಿಸಿ. ಸ್ತನಗಳ ಮೇಲೆ ನೇರವಾಗಿ ಟೇಪ್ ಬಳಕೆ ಮಾಡಬೇಡಿ.
- ಟೇಪ್ ಬಳಸುವ ಮೊದಲು ಚರ್ಮವನ್ನು ಒಣಗಿಸಲು ಮತ್ತು ಸ್ವಚ್ಛಗೊಳಿಸಲು ಮರೆಯದಿರಿ. ಇಲ್ಲದಿದ್ದರೆ, ಕೊಳಕು ನಿಮ್ಮ ಚರ್ಮಕ್ಕೆ ಅಂಟಿಕೊಳ್ಳಬಹುದು.
- ನೀವು ಬ್ರೆಸ್ಟ್ ಟೇಪ್ ಬಳಸುವಾಗ, ನಿಮ್ಮ ದೇಹದ ಮೇಲೆ ದೊಡ್ಡ ಕೂದಲು ಇರಬಾರದು ಎಂಬುದನ್ನು ನೆನಪಿನಲ್ಲಿಡಿ, ಏಕೆಂದರೆ ನೀವು ಟೇಪ್ ಅನ್ನು ತೆಗೆದಾಗ, ಕೂದಲನ್ನು ಎಳೆಯಬಹುದು, ಇದರಿಂದ ನೋವು ಉಂಟಾಗುವ ಸಾಧ್ಯತೆ ಹೆಚ್ಚಿದೆ. 

- ಬ್ರೆಸ್ಟ್ ಟೇಪ್ ಬಳಸಿ ಸ್ತನವನ್ನು ಹೆಚ್ಚು ಎಳೆಯಬಾರದು ಏಕೆಂದರೆ ಇದು ಸ್ತನಗಳು ಉಬ್ಬಿದಂತೆ ಕಾಣುವಂತೆ ಮಾಡುತ್ತದೆ.
- ಹೆಚ್ಚು ಬೆವರು ಬಂದಾಗ ಬೂಬ್ ಟೇಪ್ ನ (boob tape) ಅಂಟು ಸಡಿಲಗೊಳ್ಳುತ್ತದೆ. ನಿಮ್ಮ ಚರ್ಮವು ಅತಿಯಾಗಿ ಬೆವರುತ್ತಿದ್ದರೆ ಟೇಪ್ ಬಳಸಬೇಡಿ.
- ಟೇಪ್ ತೆಗೆದುಹಾಕಲು, ಅದರ ಮೇಲೆ ಬಿಸಿ ನೀರನ್ನು ಹಾಕಬಹುದು ಅಥವಾ ಬಿಸಿ ನೀರಿನಿಂದ ಸ್ನಾನ ಮಾಡೋ ಮೂಲಕ ಸುಲಭವಾಗಿ ತೆಗೆಯಬಹುದು. ಟೇಪ್ ತೆಗೆದುಹಾಕಿದ ನಂತರ ನಿಮ್ಮ ಚರ್ಮದ ಮೇಲೆ ಸ್ವಲ್ಪ ಜಿಗುಟಾದ ಅವಶೇಷಗಳಿದ್ದರೆ, ಬೇಬಿ ಆಯಿಲ್ ನಿಂದ ಆ ಜಾಗ ಮಸಾಜ್ ಮಾಡಿ, ಅದನ್ನು ತೆಗೆದುಹಾಕಿ.

click me!