Flowers For Skin - Hair: ಸುಳ್ಳಲ್ಲ… ಹೂವುಗಳು ಹೆಚ್ಚಿಸುತ್ತೆ ತ್ವಚೆಯ ಸೌಂದರ್ಯವನ್ನು

First Published Jan 31, 2023, 5:24 PM IST

ಚರ್ಮದ ಮೇಲೆ ರೋಸ್ ವಾಟರ್ ಮತ್ತು ಕೂದಲಿಗೆ ದಾಸವಾಳ ಬಳಸಿದ್ದೀರಾ? ಬಳಸಿರಬಹುದು ಅಲ್ವಾ? ಆದರೆ ಇವೆರಡು ಮಾತ್ರವಲ್ಲ, ಹಲವಾರು ಹೂವುಗಳು ಚರ್ಮದ ಆರೋಗ್ಯ, ಸೌಂದರ್ಯ ಕಾಪಾಡಲು ಸಹಾಯ ಮಾಡುತ್ತವೆ., ಇಲ್ಲಿ ಕೂದಲು ಮತ್ತು ಚರ್ಮಕ್ಕೆ ಉತ್ತಮವೆಂದು ಸಾಬೀತುಪಡಿಸುವ 7 ಹೂವುಗಳ ಬಗ್ಗೆ ತಿಳಿದುಕೊಳ್ಳೋಣ.

ಸುಂದರವಾದ ಚರ್ಮ(Skin) ಮತ್ತು ಕೂದಲನ್ನು ಯಾರು ಬಯಸೋದಿಲ್ಲ ಹೇಳಿ? ಅದನ್ನು ಪಡೆಯಲು ಜನ ಏನೆಲ್ಲ ಮಾಡುತ್ತಾರೆ ಅಲ್ವಾ. ದುಬಾರಿ ಉತ್ಪನ್ನಗಳನ್ನು ಖರೀದಿಸುತ್ತಾರೆ ಮತ್ತು ಚಿಕಿತ್ಸೆಗಾಗಿ ಹಣ ಖರ್ಚು ಮಾಡುತ್ತಾರೆ. ಆದರೆ ಅಷ್ಟು ಒಳ್ಳೆ ರಿಸಲ್ಟ್ ಎಲ್ಲರಿಗೂ ಸಿಗೋದಿಲ್ಲ. ಆದ್ದರಿಂದ ಇಲ್ಲಿ ಚರ್ಮ ಮತ್ತು ಕೂದಲಿಗೆ ಕೆಲವು ಸುಲಭ ಪರಿಹಾರಗಳನ್ನು ಹೇಳಲಾಗಿದೆ. ನೀವು ಕಡಿಮೆ ಹಣದಲ್ಲಿ ಇವುಗಳನ್ನು ಟ್ರೈ ಮಾಡಬಹುದು. 

ಇಲ್ಲಿ ಕೆಲವೊಂದು ಹೂವುಗಳ ಬಗ್ಗೆ ಹೇಳಲಾಗಿದೆ, ಅವುಗಳ ನೈಸರ್ಗಿಕ ಗುಣಲಕ್ಷಣಗಳು ನಮ್ಮ ಚರ್ಮ ಮತ್ತು ಕೂದಲನ್ನು(Hair) ಸುಂದರವಾಗಿಸುವ ಕೆಲಸ ಮಾಡುತ್ತವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ ಬನ್ನಿ. ಇನ್ನು ಮುಂದೆ ನೀವೂ ಸಹ ಮನೆಯಲ್ಲಿ ಇವುಗಳನ್ನ ಬಳಸುವ ಮೂಲಕ ಉತ್ತಮ ತ್ವಚೆ ಮತ್ತು ಕೂದಲನ್ನು ಪಡೆಯಬಹುದು.

ಸೂರ್ಯಕಾಂತಿ ಹೂವು(Sunflower)

ಕೆಲವು ಸೂರ್ಯಕಾಂತಿ ಹೂವು ತೆಗೆದುಕೊಂಡು ಅವುಗಳನ್ನು ಒಣಗಿಸಿ. ಒಣಗಿದಾಗ, ಅದಕ್ಕೆ ರೋಸ್ ವಾಟರ್ ಅಥವಾ ಹಾಲನ್ನು ಸೇರಿಸಿ ಮತ್ತು ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತೆ, ಟ್ಯಾನಿಂಗ್  ಗೆದುಹಾಕುತ್ತೆ ಮತ್ತು ಚರ್ಮವನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತೆ .

ಗುಲಾಬಿ (Rose)

ಗುಲಾಬಿ ತಂಪಾಗಿರುತ್ತೆ ಮತ್ತು ಮಾಯಿಶ್ಚರೈಸಿಂಗ್ ಗುಣಗಳನ್ನು ಸಹ ಹೊಂದಿದೆ. ನೀವು ಮೊಡವೆ ಸಮಸ್ಯೆ ಹೊಂದಿದ್ದರೆ, ರೋಸ್ ವಾಟರ್ ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತೆ. ಇದು ಮಾತ್ರವಲ್ಲ, ರೋಸ್ ವಾಟರ್ ಕಲೆ, ಮೊಡವೆ ಮತ್ತು ಚರ್ಮದ ಶಾಖವನ್ನು ಸಹ ತೆಗೆದುಹಾಕುತ್ತೆ .

ವಾಟರ್ ಲಿಲ್ಲಿ(Water Lily)

ವಾಟರ್ ಲಿಲ್ಲಿ ಪಿತ್ತರಸಕ್ಕೆ ಸಂಬಂಧಿಸಿದ ಚರ್ಮದ ಸಮಸ್ಯೆಗಳನ್ನು ಪರಿಹರಿಸುತ್ತೆ. ಅಂದರೆ, ಕೆಂಪಾಗುವಿಕೆ, ದದ್ದುಗಳು, ಮೊಡವೆಗಳು ಹೆಚ್ಚಾಗಿ ಚರ್ಮದ ಮೇಲೆ ಇರುತ್ತವೆ, ಆದ್ದರಿಂದ ನೀವು ಈ ಹೂವಿನ ಫೇಸ್ ಮಾಸ್ಕ್ ತಯಾರಿಸಬೇಕು. ಮತ್ತು ಅದನ್ನು ನಿಮ್ಮ ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ನಂತರ ಮುಖ ತೊಳೆಯಿರಿ.  

ಕಮಲ (Lotus)

ಗುಲಾಬಿಯಂತೆ, ಕಮಲದ ಹೂವು ಚರ್ಮವನ್ನು ತಂಪಾಗಿಸುತ್ತೆ ಮತ್ತು ಆಂಟಿಮೈಕ್ರೊಬಿಯಲ್ ಗುಣ ಲಕ್ಷಣಗಳನ್ನು ಹೊಂದಿದೆ. ಕಮಲದ ಹೂವುಗಳಿಂದ ತಯಾರಿಸಿದ ಫೇಸ್ ಪ್ಯಾಕ್ ಚರ್ಮದ ಬಣ್ಣ ಹೆಚ್ಚಿಸುತ್ತೆ, ಹೊಳಪನ್ನು ತರುತ್ತೆ ಮತ್ತು ಇದು ವಯಸ್ಸಾಗೋದನ್ನು ತಡೆಯುವ ಗುಣಗಳನ್ನು ಸಹ ಹೊಂದಿದೆ.

ದಾಸವಾಳ (Hibiscus)

ದಾಸವಾಳವು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ. ಇದರ ಹೂವು ಮತ್ತು ಎಲೆ ನಿಮ್ಮ ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮವೆಂದು ಸಾಬೀತಾಗಿದೆ. ಇದರಲ್ಲಿ ವಿಟಮಿನ್-ಸಿ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣ ಸಮೃದ್ಧವಾಗಿದೆ, ಇದು ಕೂದಲನ್ನು ಬಲಪಡಿಸುತ್ತೆ.

ದುಂಡು ಮಲ್ಲಿಗೆ

ದುಂಡು ಮಲ್ಲಿಗೆಯನ್ನು ಕುದಿಸಿ ಮತ್ತು ಅದರ ನೀರನ್ನು ತಯಾರಿಸಬಹುದು ಅಥವಾ ಅದರ ಎಣ್ಣೆಯನ್ನು ಸಹ ತಯಾರಿಸಬಹುದು. ಇದು ಮೊಡವೆ (Pimples), ಕಿರಿಕಿರಿ, ಊತ ಮತ್ತು ಉರಿ ಮೊದಲಾದ ಸಮಸ್ಯೆಗಳನ್ನು ತೆಗೆದುಹಾಕುತ್ತೆ. ಚರ್ಮಕ್ಕೆ ತಾಜಾತನ ನೀಡುತ್ತೆ.

ಮಲ್ಲಿಗೆ (Jasmine)

ಮೊಡವೆ ಸಮಸ್ಯೆ ಹೊಂದಿದ್ದರೆ, ಮಲ್ಲಿಗೆ ಹೂವುಗಳನ್ನು ಕುದಿಸಿ ಆ ನೀರನ್ನು ಬಳಸಬಹುದು. ಈ ನೀರಿನಿಂದ ಮುಖ ತೊಳೆಯಬೇಕು. ಇದು ಸೂಕ್ಷ್ಮ ಚರ್ಮವನ್ನು ಸಡಿಲಗೊಳಿಸುತ್ತೆ.ಮೊಡವೆ ಸಮಸ್ಯೆ ನಿವಾರಿಸುತ್ತದೆ. 

ಇಲ್ಲಿ ಹೇಳಿರುವ ಕೆಲವು ಹೂವುಗಳನ್ನು ನೀವು ಟ್ರೈ ಮಾಡಿ ನೋಡಿ, ರಿಸಲ್ಟ್ ಹೇಗಿದೆ ಅಂತ ಹೇಳಿ!  
 

click me!