ಹಬ್ಬದ ಸೀಸನ್ ನಲ್ಲಿ ಮನೆಯಲ್ಲಿ ಸಾಕಷ್ಟು ಕೆಲಸಗಳಿರುತ್ತವೆ, ಅದರ ನಡುವೆ ಸಲೂನ್ ಗೆ ಹೋಗಿ ರೆಡಿಯಾಗೋದು ತುಂಬಾನೆ ಕಷ್ಟ. ಹೀಗಿರುವಾಗ ಪಾರ್ಲರ್ ಚಿಂತೆ ಬಿಟ್ಟು, ಮನೆಯಲ್ಲಿ ನೀವೇ ಮೇಕಪ್ ಮಾಡುವ ಮೂಲಕ ವಿಭಿನ್ನವಾಗಿ ಕಾಣಬಹುದು. ಹಬ್ಬದ ಸಂದರ್ಭದಲ್ಲಿ ಹಬ್ಬದ ಲುಕ್ (festival look) ಪಡೆಯಲು ಹೇಗೆ ಮೇಕಪ್ ಮಾಡಬೇಕು ಅನ್ನೋದನ್ನು ತಿಳಿಯಿರಿ.
- ಮೇಕಪ್ ಮಾಡಲು ಕ್ಲೆನ್ಸರ್ನಿಂದ ನಿಮ್ಮ ಮುಖ ಸ್ವಚ್ಛಗೊಳಿಸಿ.
-ಇದರ ನಂತರ, ಮುಖದ ಮೇಲೆ ಪ್ರೈಮರ್ ಅಥವಾ ಮಾಯಿಶ್ಚರೈಸರ್ (moisturiser) ಬಳಸಿ.
- ಇದು ಮುಖದ ಮೇಲೆ ಮೇಕಪ್ ಅನ್ನು ಚೆನ್ನಾಗಿ ಹೊಂದಿಸುತ್ತದೆ.
- ಅಲ್ಲದೆ, ಮುಖದ ಮೇಲೆ ಹೊಳಪು ಬರುತ್ತದೆ.
- ಹೊಳೆಯುವ ಮೇಕಪ್ ಗಾಗಿ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ.
- ಮೇಕಪ್ ಮಾಡಲು ಮುಖಕ್ಕೆ ಫೌಂಡೇಶನ್ (foundation) ಹಾಕಿ.
- ಫೌಂಡೇಶನ್ ಹಚ್ಚೋದ್ರಿಂದ ಮುಖಕ್ಕೆ ಸ್ಮೂತ್ ಟಚ್ ಸಿಗುತ್ತೆ.
- ನಿಮ್ಮ ಸ್ಕಿನ್ ಟೋನ್ ಗೆ ಯಾವಾಗಲೂ ಒಂದು ಶೇಡ್ ಅಥವಾ ಎರಡು ಶೇಡ್ ಡಾರ್ಕ್ ಫೌಂಡೇಶನ್ - ಹಚ್ಚಿ.
- ಮುಖದ ಮೇಲೆ ಕಲೆಗಳು ಮತ್ತು ಮೊಡವೆಗಳಿದ್ದರೆ, ಕನ್ಸೀಲರ್ (concealer) ಬಳಸಬಹುದು.
- ಕನ್ಸೀಲರ್ ಮುಖಕ್ಕೆ ಹಚ್ಚುವುದರಿಂದ ಬ್ಲ್ಯಾಕ್ ಸರ್ಕರಲ್ ಮತ್ತು ಕಲೆಗಳನ್ನು ಮರೆಮಾಡುತ್ತದೆ.
- ಇದು ಮುಖಕ್ಕೆ ಅಂದವಾದ ಲುಕ್ ಕೊಡುತ್ತದೆ. ಎಲ್ಲರೆದುರು ಸುಂದರವಾಗಿ ಕಾಣುವಂತೆ ಮಾಡುತ್ತೆ.
- ಕನ್ಸೀಲರ್ ಮತ್ತು ಫೌಂಡೇಶನ್ ಬೇಸ್ ಮುಖಕ್ಕೆ ಹಚ್ಚಿದ ನಂತರ, ಕಣ್ಣಿನ ಮೇಕಪ್ ಮಾಡಿ.
- ಇದಕ್ಕಾಗಿ, ನೀವು ನಿಮ್ಮ ನೆಚ್ಚಿನ ಐಶಾಡೋ ಹಚ್ಚಿ.
- ಐಷಾಡೋ ಹಚ್ಚಿದ ನಂತರ ಮಸ್ಕರಾ ಹಚ್ಚಿ.
- ಈಗ ಮಸ್ಕರಾ ಹಚ್ಚುವ ಮೂಲಕ ಕಣ್ಣಿನ ಮೇಕಪ್ ಪೂರ್ಣಗೊಳಿಸಿ.
- ಮಸ್ಕರಾ ಹಚ್ಚಿದ ನಂತರ, ಕಣ್ಣುಗಳು ತುಂಬಾ ಸುಂದರವಾಗಿ ಕಾಣುತ್ತವೆ.
- ಕಣ್ಣಿನ ಮೇಕಪ್ ನಂತರ, ಚೀಕ್ ಬೋನ್ ಮೇಲೆ ಗುಲಾಬಿ ಬಣ್ಣದ ಬ್ಲಷರ್ ಹಚ್ಚಿ (blusher).
- ಇದರ ನಂತರ, ಮೂಗಿನ ಮೇಲೆ ಮತ್ತು ಕೆನ್ನೆ ಮೂಳೆಗಳ ಮೇಲೆ ಹೈಲೈಟರ್ ಹಚ್ಚಿ.
- ಇದು ಮುಖಕ್ಕೆ ಹೊಳಪನ್ನು ತರುತ್ತದೆ. ನೀವು ಸುಂದರವಾಗಿ ಕಾಣೋದ್ರಲ್ಲಿ ಸಂಶಯವಿರೋದಿಲ್ಲ.
- ಮೇಕಪ್ ಪೂರ್ಣಗೊಳಿಸಲು ಲಿಪ್ ಸ್ಟಿಕ್ ಹಚ್ಚಿ.
- ಹಬ್ಬದ ಋತುವಿನಲ್ಲಿ ನೀವು ಪಿಂಕ್ ಶೇಡ್ ಅನ್ನು ಬಳಸಬಹುದು.
- ಇಲ್ಲವಾದರೆ ನಿಮಗೆ ಡ್ರೆಸ್, ಸೀರೆಯ ಬಣ್ಣಗಳಿಗೆ ತಕ್ಕಂತಹ ಶೇಡ್ ಆಯ್ಕೆ ಮಾಡಬಹುದು.
- ನೀವು ಮ್ಯಾಟ್ ಅಥವಾ ಲಿಕ್ವಿಡ್ ಲಿಪ್ ಸ್ಟಿಕ್ (liquid lipstick) ಹಚ್ಚಿದರೆ ಲುಕ್ ಇನ್ನಷ್ಟು ಚೆನ್ನಾಗಿ ಕಾಣುತ್ತೆ.