Ponniyin Selvan: ಸಾರಿಯಲ್ಲಿ ಸಖತ್ತಾಗಿ ಮಿಂಚಿದ ಸೌತ್ ಬೆಡಗಿ ತ್ರಿಶಾ ಕೃಷ್ಣನ್‌

First Published | Sep 30, 2022, 11:53 AM IST

ನಿರ್ದೇಶಕ ಮಣಿರತ್ನಂ ಅವರ ಚಿತ್ರ ಪೊನ್ನಿಯಿನ್ ಸೆಲ್ವನ್ ಇಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಸಂಚಲನ ಮೂಡಿಸುತ್ತಿದೆ. ಚಿತ್ರದಲ್ಲಿ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಜೊತೆ ಸೌತ್ ನಟಿ ತ್ರಿಶಾ ಕೃಷ್ಣನ್ ಸಹ ಅಭಿನಯಿಸಿದ್ದಾರೆ. ಹಲವು ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ನಟಿಸಿರುವ ತ್ರಿಶಾ ಕೃಷ್ಣನ್‌ ಪೊನ್ನಿಯಿನ್ ಸೆಲ್ವನ್‌ ಚಿತ್ರದ ಪ್ರಮೋಷನ್‌ನಲ್ಲಿ ಅತ್ಯಾಕರ್ಷಕ ಸ್ಯಾರಿಗಳಲ್ಲಿ ಮಿಂಚಿದ್ದಾರೆ. ಅದರ ಝಲಕ್ ಇಲ್ಲಿದೆ.

ಪೊನ್ನಿಯನ್ ಸೆಲ್ವನ್ 1 ಚಿತ್ರದಲ್ಲಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮಾರು 4 ವರ್ಷಗಳ ನಂತರ, ಐಶ್ವರ್ಯಾ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಕುಂದವೈಯ ರಾಜಕುಮಾರಿಯ ಪಾತ್ರದಲ್ಲಿ ತ್ರಿಶಾ ಕೃಷ್ಣನ್ ನಟಿಸುತ್ತಿದ್ದಾರೆ. ಇಬ್ಬರು ಹೆಸರಾಂತ ನಟಿಯರು ಹಲವಾರು ವಾರಗಳಿಂದ ಚಿತ್ರದ ಪ್ರಮೋಷನ್‌ನಲ್ಲಿ ಬಿಝಿಯಾಗಿದ್ದರು.

ಪೊನ್ನಿಯಿನ್ ಸೆಲ್ವನ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಿಜಕ್ಕೂ ಅದ್ಧೂರಿಯಾಗಿಯೇ ನಡೆದಿತ್ತು. ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ರಜನಿಕಾಂತ್, ಕಮಲ್ ಹಾಸನ್‌ನಿಂದ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಐಶ್ವರ್ಯಾ ರೈ ಬಚ್ಚನ್, ತ್ರಿಶಾ ಮತ್ತು ಶೋಭಿತಾ ಸೇರಿದಂತೆ ಪ್ರಖ್ಯಾತ ನಟ-ನಟಿಯರೂ ಪಾಲ್ಗೊಂಡಿದ್ದರು. ಐಶ್ವರ್ಯಾ ಕಪ್ಪು ಸೂಟ್‌ನಲ್ಲಿ ಕಂಡು ಬಂದರೆ, ತ್ರಿಶಾ ಪಿಂಕ್‌ ಗೋಲ್ಡನ್‌ ವರ್ಕ್‌ ಸೀರೆಯಲ್ಲಿ ಹೆಚ್ಚು ಅತ್ಯಾಕರ್ಷಕವಾಗಿ ಕಾಣುತ್ತಿದ್ದರು.

Tap to resize

ಪೊನ್ನಿಯಿನ್ ಸೆಲ್ವನ್ ಚಿತ್ರದ ಪ್ರಮೋಷನ್‌ಗೆ ಸಾಂಪ್ರದಾಯಿಕ ದಿರಿಸನ್ನು ಆರಿಸುವ ಮೂಲಕ ತ್ರಿಷಾ ಸೀರೆಗಳ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ತ್ರಿಷಾ ಕೃಷ್ಣನ್‌ ತಮ್ಮ ಚಲನಚಿತ್ರ ಪ್ರಚಾರದ ನೋಟಕ್ಕಾಗಿ ಡಿಸೈನರ್ ಸೀರೆಗಳನ್ನು ಧರಿಸಿದ್ದರು. ಭಾರೀ ರೇಷ್ಮೆ ಸೀರೆ ಮತ್ತು ಸಿಂಪಲ್‌ ನೆಟೆಡ್ ಸೀರೆಯನ್ನು ಸಹ ಉಟ್ಟಿದ್ದರು.

ನಟಿ ಭಾರವಾದ ಗೋಲ್ಡನ್ ಜುಮ್ಕಾಗಳೊಂದಿಗೆ ಗೋಲ್ಡನ್ ಮತ್ತು ಕಪ್ಪು ಸೀರೆಯನ್ನು ಧರಿಸಿದ್ದರು. ಸರಳವಾದ ಗೋಲ್ಡನ್ ಬಳೆಗಳು ಇನ್ನಷ್ಟು ಸುಂದರವಾಗಿತ್ತು. ಸರಳ ಸೀರೆಯ ಲುಕ್ ಜೊತೆ ಓಪನ್ ಹೇರ್ ಮತ್ತು ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು.ಪೊನ್ನಿಯನ್‌ ಸೆಲ್ವನ್ ನಟಿ ತಮ್ಮ ಸರಳವಾದ ಲುಕ್‌ನಲ್ಲೂ ಅದ್ಭುತವಾಗಿ ಕಾಣುತ್ತಿದ್ದರು.

ಚಿತ್ರದ ಪ್ರಮೋಷನ್‌ಗಾಗಿ ಉಟ್ಟಿದ್ದ ಸಿಂಪಲ್‌ ಬ್ಲ್ಯಾಕ್ ಸೀರೆ ಎಲಿಗೆಂಟ್ ಲುಕ್ ನೀಡಿತ್ತು. ಇದಕ್ಕೆ ಜತೆಯಾಗಿ ಶಿಮ್ಮರ್‌ಡ್‌ ಬ್ಲೌಸ್ ಹಾಗೂ ಪಚ್ಚೆ ಹರಳಿನ ನೆಕ್ಲೇಸ್‌ ಧರಿಸಿದ್ದು ಅತ್ಯಾಕರ್ಷಕಾಗಿತ್ತು. ಸಿಂಪಲ್ ಬ್ಲೇಸ್‌ಲೆಟ್ ದರಿಸಿ ಸರಳವಾದ ಬ್ರೇಸ್‌ಲೆಟ್ ಹಾಕಿಕೊಂಡಿದ್ದರು.

ಕಾರ್ಯಕ್ರಮವೊಂದರಲ್ಲಿ, ತ್ರಿಶಾ ಬರ್ಗಂಡಿ ಕಸೂತಿಯ ಸೀರೆ ಮತ್ತು ಸ್ಲೀವ್‌ಲೆಸ್ ಬ್ಲೌಸ್‌ ಧರಿಸಿದ್ದರು. ಪಚ್ಚೆ ಹರಳಿನ ದೊಡ್ಡ ಕಿವಿಯೋಲೆ ಸೀರೆಗೆ ಅತ್ಯಾಕರ್ಷಕವಾಗಿ ಕಾಣಿಸುತ್ತಿತ್ತು. ಬನ್‌ ಮಾದರಿಯಲ್ಲಿ ಕಟ್ಟಿದ ಕೂದಲು ಮತ್ತು ಇಳಿಬಿಟ್ಟ ಸುರುಳಿಗಳು ಲುಕ್‌ನ್ನು ಇನ್ನಷ್ಟು ಆಕರ್ಷಕಗೊಳಿಸಿತ್ತು. ನಿಮ್ಮ ಬೆಸ್ಟ್ ಫ್ರೆಂಡ್‌ನ ಮದುವೆಗೆ ಅಥವಾ ಕುಟುಂಬದ ಔತಣಕೂಟಕ್ಕೆ ಹಾಜರಾಗಲು ಒಬ್ಬರು ಈ ಲುಕ್‌ನ್ನು ಸುಲಭವಾಗಿ ಧರಿಸಬಹುದು. 

Latest Videos

click me!