ಹಬ್ಬ ಎಂದರೆ ಎಲ್ಲವೂ ಸಾಂಪ್ರದಾಯಿಕವಾಗಿರಬೇಕು ಎಂದು ಬಯಸುತ್ತಾರೆ. ಹಾಗಾಗಿ ಉಡುವ ಬಟ್ಟೆ ಸಹ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸಿದರೆ ಅದಕ್ಕಿಂತ ಬೇರೆ ಖುಷಿ ಉಂಟೇ? ಹಾಗಿದ್ರೆ ಹಬ್ಬಕ್ಕೆ ಬೆಸ್ಟ್ ಅಂದರೆ ಅದು ಸೀರೆ. ಹೌದು ಗಣೇಶ ಹಬ್ಬದ ಸಂಭ್ರಮ ಹೆಚ್ಚಿಸಲು ನೀವು ವಿವಿಧ ರೀತಿಯ ಸೀರೆಗಳನ್ನು ಟ್ರೈ ಮಾಡಬಹುದು. ಅದಕ್ಕಾಗಿ ನಿಮಗೆ ಒಂದಿಷ್ಟು ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ. ಅವುಗಳ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ.
ಕಾಂಟ್ರಾಸ್ಟ್ ಸೀರೆ -ಬ್ಲೌಸ್: (contrast saree with blouse)
ನೀವು ಪೂಜೆಗಾಗಿ ಅಲಂಕಾರ ಮಾಡಲು ಸಿದ್ಧರಿದ್ದರೆ, ನಿಮ್ಮ ಸೀರೆಗೆ ಕಾಂಟ್ರಾಸ್ಟ್ ಆಗಿರುವ ಶೇಡ್ ನ ಬ್ಲೌಸ್ ಟ್ರೈ ಮಾಡಿ. ಒಂದು ವೇಳೆ ನೀವು ಹಳದಿ ಸೀರೆ ಉಡೋದಾದ್ರೆ, ಅದಿಕ್ಕೆ, ಪಿಂಕ್ ಅಥವಾ ಕೆಂಪು, ಹಸಿರು ಬಣ್ಣದ ಬ್ಲೌಸ್ ಟ್ರೈ ಮಾಡಿ. ಜೊತೆಗೆ ನಿಮ್ಮ ಜಡೆಯ ಬನ್ ಗೆ ಮಲ್ಲಿಗೆಯನ್ನು ಮುಡಿಯಿರಿ, ಜೊತೆಗೆ ಕಿವಿಗೆ ಜುಮುಕಿ ಧರಿಸಿದ್ರೆ ವಾವ್ ನಿಮ್ಮ ಲುಕ್ ಕಂಪ್ಲೀಟ್ ಆದಂತೆಯೇ.
ಬನಾರಸಿ ಸೀರೆ (banarasi saree) :
ಬನಾರಸಿ ಪ್ರಿಂಟ್ ಸೀರೆಯೊಂದಿಗೆ ರಾಯಲ್ ಲುಕ್ ಪಡೆಯಿರಿ. ಬನಾರಸಿ ಪ್ರಸಿದ್ಧ ಕೆಂಪು ಸೀರೆಯನ್ನು ಟ್ರೈ ಮಾಡಬಹುದು ಮತ್ತು ಅದಕ್ಕೆ ಗೋಲ್ಡನ್ ಅಥವಾ ಕೆಂಪು ಬ್ಲೌಸ್ ನೊಂದಿಗೆ ಮ್ಯಾಚ್ ಮಾಡಬಹುದು. ಜೊತೆ ಹೆವಿ ನೆಕ್ಲೇಸ್ ಮತ್ತು ಮ್ಯಾಚಿಂಗ್ ಇಯರಿಂಗ್ ಧರಿಸಿ ಮತ್ತು ಸಿಂಪಲ್ ಆಗಿ ಹೇರ್ ಬನ್ ಮಾಡಿದ್ರೆ ಚೆನ್ನಾಗಿ ಕಾಣುತ್ತೆ.
ಫ್ಯಾನ್ಸಿ ಸೀರೆ (fancy saree) :
ನೀವು ಸಾಂಪ್ರದಾಯಿಕ ಉಡುಗೆಗೆ ಮಾತ್ರ ಧರಿಸಬೇಕು ಎಂದೇನಿಲ್ಲ. ಅದರ ಬದಲಾಗಿ ನೀವು ಸಂಪೂರ್ಣ ನೆಟ್ ಸೀರೆ ಟ್ರೈ ಮಾಡಬಹುದು ಮತ್ತು ಅದನ್ನು ಗಜ್ರಾ ಅಥವಾ ಸ್ಟೇಟ್ ಮೆಂಟ್ ನೆಕ್ಲೇಸ್ ನೊಂದಿಗೆ ಕಂಬೈನ್ ಮಾಡಿದ್ರೆ, ಸಿಂಪಲ್ ಮತ್ತು ಕ್ಲಾಸಿ ಲುಕ್ ನಿಮ್ಮದಾಗುತ್ತೆ.
ಸಾಲಿಡ್ ಕೆಂಪು ಸೀರೆ (solid saree) :
ಹಿಂದೂ ಪುರಾಣಗಳಲ್ಲಿ ಕೆಂಪು ಒಂದು ಪ್ರಮುಖ ಬಣ್ಣವಾಗಿದೆ. ಆದ್ದರಿಂದ ಗಣೇಶ ಚತುರ್ಥಿ ಪೂಜೆಗೆ, ನೀವು ಪಕ್ಕಾ ಸಂಪ್ರದಾಯವನ್ನು ನಂಬೋದಾದ್ರೆ ರೆಡ್ ಶೇಡ್ ಸೀರೆಗಳನ್ನು ಆಯ್ಕೆ ಮಾಡಬಹುದು. ಇದರೊಂದಿಗೆ ಗೋಲ್ಡನ್ ಇಯರಿಂಗ್, ಸಿಂಪಲ್ ನೆಕ್ ಲೆಸ್ ಮತ್ತು ಬ್ಯಾಂಗಲ್ಸ್ ಧರಿಸಿದ್ರೆ ಮತ್ತಷ್ಟು ಸುಂದರವಾಗಿ ಕಾಣುವಿರಿ.
ಬ್ರೈಟ್ ಶೇಡ್ಸ್ (bright shades):
ಈ ಗಣೇಶ ಚತುರ್ಥಿಗೆ ಬ್ರೈಟ್ ಶೇಡ್ಸ್ ಟ್ರೈ ಮಾಡಬಹುದು. ಹಸಿರು ಸೀರೆ, ನೀಲಿ ಸೀರೆ, ಹಳದಿ ಸೀರೆ ಹೀಗೆ ಬೇರೆ ಬೇರೆ ಬಣ್ಣದ ಸೀರೆಗಳನ್ನು ನೀವು ಟ್ರೈ ಮಾಡಬಹುದು. ಇದರ ಜೊತೆ ಯಾವುದೇ ರೀತಿಯ ಆರ್ನಮೆಂಟ್ಸ್ ಕೂಡ ನೀವು ಟ್ರೈ ಮಾಡಬಹುದು. ಆದರೆ ಅವೆಲ್ಲವೂ ಕಮ್ಮಿ ಇದ್ದಷ್ಟು ಚೆನ್ನಾಗಿ ಕಾಣಿಸುತ್ತೆ.
ಲಂಗ -ದಾವಣಿ (half saree) :
ಇದು ಎಷ್ಟೇ ಹಳೆಯ ಸಾಂಪ್ರದಾಯಿಕ ಉಡುಗೆಯಾಗಿದ್ದರೂ ಸಹ ಇದನ್ನು ಯಾವ ಸಮಯದಲ್ಲೂ ಸಹ ತೊಟ್ಟರೆ ತುಂಬಾನೆ ಚೆನ್ನಾಗಿ ಕಾಣಿಸುತ್ತೆ. ಕಾಂಟ್ರಾಸ್ಟ್ ಬಣ್ಣದ ಲಂಗ - ದಾವಣಿ ಧರಿಸಿದ್ರೆ ತುಂಬಾನೆ ಚೆನ್ನಾಗಿ ಕಾಣುವಿರಿ. ಈ ಹಬ್ಬಕ್ಕೆ ನೀವು ಟ್ರೈ ಮಾಡಿ ನೋಡಿ.