Smart shopping tips : ಆನ್ ಲೈನ್ ಶಾಪಿಂಗ್ ಮಾಡ್ತೀರಾ? ಹಾಗಿದ್ರೆ ಈ ಟ್ರಿಕ್ಸ್ ನೆನಪಿಡಿ

First Published | Sep 28, 2022, 5:46 PM IST

ಶಾಪಿಂಗ್ ಮಾಡೋದು ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ… ಅದರಲ್ಲೂ ಆನ್ ಲೈನ್ ಶಾಪಿಂಗ್ ಅಂದ್ರೆ ಎಲ್ಲರೂ ಇಷ್ಟ ಪಟ್ಟು ಮಾಡ್ತಾರೆ. ಹಬ್ಬದ ಸೀಸನ್ ಆಗಿರೋದರಿಂದ ಪ್ರಸ್ತುತ, ಬಹುತೇಕ ಎಲ್ಲಾ ಇ-ಕಾಮರ್ಸ್ ವೆಬ್ಸೈಟ್ನಲ್ಲಿ ಬಂಪರ್ ಮಾರಾಟ ನಡೆಯುತ್ತಿದೆ. ನೀವು ಶಾಪಿಂಗ್ ಮಾಡಲು ತುಂಬಾ ಆತುರರಾಗಿದ್ದೀರಿ ಅಂತಾ ಗೊತ್ತು. ಹಾಗಾಗಿ, ಇಂದು ನಾವು ನಿಮಗೆ ಸ್ಮಾರ್ಟ್ ಶಾಪಿಂಗ್ ಟಿಪ್ಸ್ ಹೇಳುತ್ತೇವೆ, ಇದರಿಂದ ನೀವು ಹೆಚ್ಚು ಹಣವನ್ನು ಖರ್ಚು ಮಾಡದೆಯೇ ನಿಮ್ಮ ನೆಚ್ಚಿನ ವಸ್ತುವನ್ನು ಖರೀದಿಸಬಹುದು.
 

ಪ್ರತಿಯೊಬ್ಬರೂ ಶಾಪಿಂಗ್ ಅನ್ನು(Shopping) ಇಷ್ಟಪಡುತ್ತಾರೆ ಮತ್ತು ನಮ್ಮ ನೆಚ್ಚಿನ ಬ್ರಾಂಡ್ ನಲ್ಲಿ ಬಂಪರ್ ಮಾರಾಟವಿದ್ದಾಗ, ಆಹಾ ಅನಿಸಿಬಿಡುತ್ತೆ .ಹಾಗಾಗಿ ಜನ ಬೇಕಾದಷ್ಟು ಶಾಪಿಂಗ್ ಮಾಡುತ್ತಾರೆ. ಆದರೆ ನಾವು ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸುತ್ತೇವೆ, ಇದು ನಮ್ಮ ಬಜೆಟ್ ಮೇಲೆ ಪರಿಣಾಮ ಬೀರುತ್ತೆ. ಅಂದರೆ ನಮ್ಮ ಜೇಬಿಗೆ ನಷ್ಟ ಆಗೋದು ಖಂಡಿತಾ. 

ಹಬ್ಬದ ಸೀಸನ್ ನಲ್ಲಿ ಬಹುತೇಕ ಎಲ್ಲಾ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಆನ್ಲೈನ್ ಮಾರಾಟಗಳನ್ನು ಹಾಕಲಾಗಿದೆ. ಅಂಗಡಿಗಳಲ್ಲಿ ಬಂಪರ್ ಕೊಡುಗೆಗಳನ್ನು(Bumper offer) ಸಹ ನೀಡಲಾಗುತ್ತಿದೆ. ಆದ್ದರಿಂದ ಇಂದು ನಾವು ನಿಮ್ಮ ನೆಚ್ಚಿನ ವಸ್ತುಗಳನ್ನು ಹೇಗೆ ಖರೀದಿಸಬಹುದು ಮತ್ತು ಹಣವನ್ನು ಹೇಗೆ ಉಳಿಸಬಹುದು ಎಂಬುದರ ಬಗ್ಗೆ ಸ್ಮಾರ್ಟ್ ಶಾಪಿಂಗ್ ಸಲಹೆಗಳನ್ನು ನೀಡುತ್ತೇವೆ…
 

Latest Videos


ಕ್ವಾಲಿಟಿ(Quality) ಬಗ್ಗೆ ಕಾಳಜಿ ವಹಿಸಿ 
ನೀವು ಆನ್ ಲೈನ್ ಶಾಪಿಂಗ್ ಅಥವಾ ಆಫ್ ಲೈನ್ ಶಾಪಿಂಗ್ ಆಗಿರಲಿ, ಕಡಿಮೆ ದರಗಳನ್ನು ನೋಡಿ ಏನನ್ನೂ ಖರೀದಿಸಬೇಡಿ. ಅದರ ಕ್ವಾಲಿಟಿ ಬಗ್ಗೆ ಕಾಳಜಿ ವಹಿಸಿ. ಆನ್ ಲೈನ್ ಶಾಪಿಂಗ್ ಮಾಡುವಾಗ, ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಓದಿ, ಅದರಲ್ಲಿ ಯಾವ ವಸ್ತುವನ್ನು ಬಳಸಲಾಗಿದೆ ಅನ್ನೋದನ್ನು ತಿಳಿಯಿರಿ. ಜೊತೆಗೆ ಯಾವಾಗಲೂ ವಿಶ್ವಾಸಾರ್ಹ ವೆಬ್ ಸೈಟ್ ಗಳಿಂದ ಬಟ್ಟೆಗಳನ್ನು ಖರೀದಿಸಿ.

ಯಾಕೆ ಶಾಪಿಂಗ್ ಮಾಡುತ್ತಿದ್ದೀರಿ ಅನ್ನೋದು ತಿಳಿದಿರಲಿ
ಬಟ್ಟೆಗಳಿಗಾಗಿ ಶಾಪಿಂಗ್ ಮಾಡುವ ಮೊದಲು, ನೀವು ಯಾವ ಉದ್ದೇಶಕ್ಕಾಗಿ ಬಟ್ಟೆ ಖರೀದಿಸುತ್ತೀರಿ ಅನ್ನೋದನ್ನು ತಿಳಿದಿರಬೇಕು. ಹಬ್ಬಕ್ಕಾಗಿ ನೀವು ಬಟ್ಟೆಗಳನ್ನು ಖರೀದಿಸಲು ಬಯಸಿದರೆ, ನೀವು ಆ ವಿಭಾಗಕ್ಕೆ ಹೋಗಿ ಬಟ್ಟೆಗಳನ್ನು ನೋಡಿ ಮತ್ತು ನೀವು ಕ್ಯಾಶುಯಲ್ ಅಥವಾ ಫಾರ್ಮಲ್ ಬಟ್ಟೆಗಳನ್ನು(Formal wear) ತೆಗೆದುಕೊಳ್ಳಲು ಬಯಸಿದರೆ, ನೀವು ಆ ವಿಭಾಗದಲ್ಲಿ ಬಟ್ಟೆಗಳನ್ನು ಹುಡುಕಿ. ನೀವು ಯಾವುದೇ ಸೈಟ್ ಅಥವಾ ಅಂಗಡಿಗೆ ಅಗತ್ಯವಿಲ್ಲದೆ ಹೋದರೆ ಮತ್ತು ಬಟ್ಟೆಗಳನ್ನು ನೋಡಿದರೆ, ನೀವು ಹೆಚ್ಚು ಬಟ್ಟೆ ಖರೀದಿಸುತ್ತೀರಿ, ಅದು ಔಟ್ ಆಫ್ ಫ್ಯಾಷನ್ ಆಗುತ್ತೆ.
 

ನಿಮ್ಮ ಬಜೆಟ್(Budget) ಫಿಕ್ಸ್ ಮಾಡಿ
ನೀವು ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿದಾಗ, 20 ರಿಂದ 70% ಅಥವಾ ಅದಕ್ಕಿಂತ ಹೆಚ್ಚಿನ ರಿಯಾಯಿತಿಗಳಿವೆ. ಹಾಗಾಗಿ, ನಿಮಗೆ ಎಷ್ಟು ಪ್ರತಿಶತದಷ್ಟು ರಿಯಾಯಿತಿ ಬೇಕು ಎಂಬುದರ ಮೇಲೆ ಫಿಲ್ಟರ್ ಮಾಡಬಹುದು ಮತ್ತು ಅದಕ್ಕೆ ಅನುಗುಣವಾಗಿ ನೀವು ನಿಮ್ಮ ಶಾಪಿಂಗ್ ಮಾಡಬಹುದು. 

ಇಷ್ಟೇ ಅಲ್ಲ, ನೀವು 1000 ಮತ್ತು 2000 ರ ನಡುವೆ ಅಥವಾ 1000 ರ ಒಳಗೆ ಬಟ್ಟೆಗಳನ್ನು(Cloth) ಬಯಸಿದರೆ, ಆ ಫಿಲ್ಟರ್ ಬಳಸುವ ಮೂಲಕ ನಿಮ್ಮ ಬಟ್ಟೆಗಳನ್ನು ಆಯ್ಕೆ ಮಾಡಬಹುದು. ಇದರೊಂದಿಗೆ, ನೀವು ಕಡಿಮೆ ದರದಲ್ಲಿ ಹೆಚ್ಚಿನ ಬಟ್ಟೆ ಖರೀದಿಸಬಹುದು.

ಹೆಚ್ಚುವರಿ ಕೂಪನ್(Coupon) ಬಳಸಿ
ಆನ್ ಲೈನ್ ಸೈಟ್ ಗಳಲ್ಲಿ ಶಾಪಿಂಗ್ ಮಾಡುವಾಗ ನೀವು ರಿಯಾಯಿತಿಗಳನ್ನು ಪಡೆಯುತ್ತೀರಿ. ಇದರ ನಂತರ, ನೀವು ಪಾವತಿ ಆಯ್ಕೆಗೆ ಹೋದಾಗ, ಹೆಚ್ಚುವರಿ ಕೂಪನ್ ಗಳನ್ನು ಹಾಕಲು ಮರೆಯಬೇಡಿ, ಏಕೆಂದರೆ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನಲ್ಲಿ ಕೆಲವು ಗಿಫ್ಟ್ ವೌಚರ್ ಅಥವಾ ಇ-ಕಾಮರ್ಸ್ ಸೈಟ್ ಕೂಡ ನಿಮಗೆ ಸ್ವಲ್ಪ ರಿಯಾಯಿತಿ ನೀಡಬಹುದು, ಆದ್ದರಿಂದ ನೀವು ಕೊನೆಯಲ್ಲಿ ನಿಮ್ಮ ಕೂಪನ್ ಬಳಸಬೇಕು, ಇದು ನಿಮ್ಮ 100 ರಿಂದ 500 ರೂಪಾಯಿಗಳನ್ನು ಕಡಿಮೆ ಮಾಡಬಹುದು.

click me!