ಭಾರತ ಕಂಡ ಟಾಪ್‌ 10 ಮಾಡೆಲ್‌ಗಳಲ್ಲಿ ಕರ್ನಾಟಕದ ಕೃಷ್ಣ ಸುಂದರಿಯರೇ ಹೆಚ್ಚು!

Published : Sep 13, 2023, 11:36 AM IST

ಮಾಡೆಲ್ ಎಂದರೆ ವಾಣಿಜ್ಯ ಉತ್ಪನ್ನಗಳನ್ನು ಪ್ರಚಾರ ಮಾಡಲು, ಪ್ರದರ್ಶಿಸಲು ಅಥವಾ ಜಾಹೀರಾತು ಮಾಡಲು (ಮುಖ್ಯವಾಗಿ ಫ್ಯಾಶನ್ ಶೋಗಳಲ್ಲಿ ಫ್ಯಾಷನ್ ಉಡುಪುಗಳು) ಅಥವಾ ಕಲಾಕೃತಿಗಳನ್ನು ರಚಿಸುವ ಅಥವಾ ಛಾಯಾಗ್ರಹಣಕ್ಕಾಗಿ ಪೋಸ್ ನೀಡುವ ಜನರಿಗೆ ದೃಶ್ಯ ಸಹಾಯವಾಗಿ ಕಾರ್ಯನಿರ್ವಹಿಸುವ ಪಾತ್ರವನ್ನು ಹೊಂದಿರುವ ವ್ಯಕ್ತಿ. ಮಾಡೆಲ್‌ಗಳು ಪ್ರಧಾನವಾಗಿ ಸ್ತ್ರೀಯರಾಗಿದ್ದರೂ, ವಿಶೇಷವಾಗಿ ಮಾದರಿ ಉಡುಪುಗಳಿಗೆ ಪುರುಷ ಕೂಡ ಮಾಡೆಲ್‌ಗಳಿದ್ದಾರೆ. ಅಂತಹ ಮಾಡೆಲ್‌ಗಳಲ್ಲಿ ಭಾರತದ ಟಾಪ್‌ 10 ಮಾಡೆಲ್‌ಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ವಿಶೇಷವೆಂದರೆ ಈ ಟಾಪ್‌ ಮಾಡೆಲ್‌ಗಳಲ್ಲಿ ಕರ್ನಾಟಕದವರೇ ಹೆಚ್ಚು ಎಂಬುದು ಹೆಮ್ಮೆಯ ಸಂಗತಿ.

PREV
110
 ಭಾರತ ಕಂಡ ಟಾಪ್‌ 10 ಮಾಡೆಲ್‌ಗಳಲ್ಲಿ ಕರ್ನಾಟಕದ ಕೃಷ್ಣ ಸುಂದರಿಯರೇ ಹೆಚ್ಚು!
ಅನಿತಾ ಕುಮಾರ್

ಅನಿತಾ ಕುಮಾರ್ ದೇಶಾದ್ಯಂತ ಫ್ಯಾಶನ್ ಶೋಗಳಲ್ಲಿ ನಿರಂತವಾಗಿ ಭಾಗವಹಿಸುತ್ತಾರೆ.   ವಿನ್ಯಾಸಕರ ಅಚ್ಚುಮೆಚ್ಚಿನ ರೂಪದರ್ಶಿ ಎನಿಸಿಕೊಂಡಿದ್ದಾರೆ. ಈಕೆ ಲೆಹೆಂಗಾ ಅಥವಾ ಪವರ್ ಸೂಟ್ ಧರಿಸಿ ಸುಲಭವಾಗಿ ಚಲಿಸಬಲ್ಲಳು. ಈಕೆ ಮುಂಬೈ ಮೂಲದ ಚೆಲುವೆ.

210
ಎರಿಕಾ ಪ್ಯಾಕರ್ಡ್

ಎರಿಕಾ ಪ್ಯಾಕರ್ಡ್ ಬಾಂಬೆಯ ಯುವತಿ  ರಾಷ್ಟ್ರ ಪ್ರಶಸ್ತಿ ವಿಜೇತ ಬಾಡಿಬಿಲ್ಡರ್ ಮತ್ತು ಬಾಲಿವುಡ್ ನಟ ಗೇವಿನ್ ಪ್ಯಾಕರ್ಡ್ ಅವರ ಪುತ್ರಿ.  ಪ್ಯಾಕರ್ಡ್, ಫ್ಯಾಷನ್‌ ನಲ್ಲಿ ನಡಿಗೆಯ ಮೂಲಕ ತನ್ನ ಶಕ್ತಿಯುತ, ವರ್ಣರಂಜಿತ ಮತ್ತು ಆಕರ್ಷಕ ಪಾತ್ರವನ್ನು ವ್ಯಕ್ತಪಡಿಸುತ್ತಾಳೆ. 

310
ನಿಧಿ ಸುನೀಲ್

ಮೂಲತಃ ಬೆಂಗಳೂರಿನ ಈ ಕೃಷ್ಣ ಸುಂದರಿ ಮೊದಲಿಗೆ ಕಿಂಗ್‌ಫಿಷರ್ ಕ್ಯಾಲೆಂಡರ್ ನಲ್ಲಿ ಮಾಡೆಲ್‌ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದಳು. ಈಕೆ ಕಾನೂನು ವಿದ್ಯಾರ್ಥಿ ಮತ್ತು ಮಾಡೆಲ್ ಆಗಿದ್ದಾರೆ. ಈ ಕೃಷ್ಣ ವರ್ಣದ ಸುಂದರಿಯ ಸೌಂದರ್ಯವು ವೋಗ್ ಮತ್ತು ಎಲ್ಲೆ ಮುಂತಾದ ಹಲವಾರು ಫ್ಯಾಷನ್ ನಿಯತಕಾಲಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿದೆ, ಇವರು ಗಾರ್ನಿಯರ್‌ ಬ್ರಾಂಡ್‌ನ  ರಾಯಭಾರಿಯಾಗಿದ್ದಾರೆ.

410
ಊರ್ವಶಿ ರೌಟೇಲಾ

ಬಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡುವುದಕ್ಕೂ ಮುನ್ನ ಊರ್ವಶಿ ರೌಟೇಲಾ ಅವರು ಈಗಾಗಲೇ ಭಾರತೀಯ ಫ್ಯಾಷನ್ ಉದ್ಯಮದಲ್ಲಿ ಭಾರಿ ಯಶಸ್ಸನ್ನು ಹೊಂದಿದ್ದರು, ದೇಶಕ್ಕಾಗಿ ಹಲವಾರು ಸೌಂದರ್ಯ ಸ್ಪರ್ಧೆಗಳನ್ನು ಗೆದ್ದಿದ್ದಾರೆ. ಮಿಸ್ ದಿವಾ ಯೂನಿವರ್ಸ್ 2015 ಕಿರೀಟ ಗೆದ್ದಿದ್ದಾರೆ. ಈಕೆ ಉತ್ತರಾಖಂಡದವರು.

510
ಸೋನಿ ಕೌರ್

ಪ್ರತೀ ವಾರ ನಡೆಯುವ ಹೆಸರಾಂತ ಫ್ಯಾಷನ್ ಶೋ ಗಳಲ್ಲಿ ಸೋನಿ ಕೌರ್ ಭಾಗವಹಿಸುವುದರಿಂದ ಹಿಡಿದು ಹೆಸರಾಂತ ವಿನ್ಯಾಸಕರ ಉಡುಪುಗಳನ್ನು ಧರಿಸುವವರೆಗೆ, ಸೋನಿ ಮಾಡೆಲಿಂಗ್ ಜಗತ್ತಿನಲ್ಲಿ ಅಸಾಧಾರಣ ವ್ಯಕ್ತಿಯಾಗಿದ್ದಾರೆ. ಈಕೆ ಮುಂಬೈನ ಮಾಡೆಲ್. 
 

610
ರಾಚೆಲ್ ಮಾರಿಯಾ ಬೇರೋಸ್

16 ನೇ ವಯಸ್ಸಿನಲ್ಲಿ ಮಾಡೆಲಿಂಗ್‌ಗೆ ಬಂದಿದ್ದ ರಾಚೆಲ್ ಬೇರೋಸ್ ಭಾರತೀಯ ಫ್ಯಾಷನ್ ಉದ್ಯಮದ ರಾಣಿ. 35 ವರ್ಷದ ಈ ಚೆಲುವೆ ಆಕೆಯ ಖ್ಯಾತಿಯು ಹೆಚ್ಚಾದಾಗ  ದೆಹಲಿಗೆ ಸ್ಥಳಾಂತರಗೊಂಡರು, ಅಲ್ಲಿ ಅವರು ಫ್ಯಾಷನ್ ಪ್ರಪಂಚದಿಂದ ಶೀಘ್ರವಾಗಿ ಗುರುತಿಸಲ್ಪಟ್ಟರು. ಈಕೆ ಕೂಡ ಕನ್ನಡದ ಕುವರಿಯಾಗಿದ್ದಾರೆ. ಬೆಂಗಳೂರಿನವರು. 

710
ಅರ್ಚನಾ ಅಕಿಲ್ ಕುಮಾರ್

ಸಬ್ಯಸಾಚಿ ಹುಡುಗಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಅರ್ಚನಾ ಅಕಿಲ್ ಕುಮಾರ್ ಭಾರತೀಯ ಫ್ಯಾಷನ್ ಉದ್ಯಮದಲ್ಲಿ ಪ್ರಸಿದ್ಧ ಮಾಡೆಲ್. ಈಕೆ ಕೂಡ ಕೃಷ್ಣ ಸುಂದರಿ. ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಮಾಡೆಲಿಂಗ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮನೀಶ್ ಮಲ್ಹೋತ್ರಾ, ಗೌರವ್ ಗುಪ್ತಾ, ತರುಣ್ ತಹಿಲಿಯಾನಿ ಮತ್ತು ಸಬ್ಯಸಾಚಿಯಂತಹ ಅನೇಕ ಪ್ರಸಿದ್ಧ ಭಾರತೀಯ ವಿನ್ಯಾಸಕರೊಂದಿಗೆ ದಿವಾ ಕೆಲಸ ಮಾಡಿದ್ದಾರೆ. ಅರ್ಚನಾ ಅಕಿಲ್ ಕುಮಾರ್ ಹುಟ್ಟಿ ಬೆಳೆದಿದ್ದು ಕರ್ನಾಟಕದ ಬೆಂಗಳೂರಿನಲ್ಲಿ.

810
ಲಕ್ಷ್ಮಿ ರಾಣಾ

ಮಾಡೆಲಿಂಗ್ ಕ್ಷೇತ್ರದ ತಾರೆ ಲಕ್ಷ್ಮಿ ರಾಣಾ ದೆಹಲಿಯಲ್ಲಿ ನಡೆದ ಕಾರ್ಯಕ್ರಮದೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಅಂದಿನಿಂದ ಇಂದಿನವರೆಗೆ ಆಕೆ ಮಾಡೆಲಿಂಗ್ ಕ್ಷೇತ್ರದ ತಾರೆ ಎನಿಸಿಕೊಂಡಿದ್ದಾರೆ. ಅವರು ಫೆಮಿನಾ ಮಿಸ್ ಇಂಡಿಯಾ 2000 ರೊಂದಿಗೆ ತಮ್ಮ ಯಶಸ್ವಿ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು, ಅಲ್ಲಿ ಅವರು ಲಾರಾ ದತ್ತಾ, ಪ್ರಿಯಾಂಕಾ ಚೋಪ್ರಾ ಮತ್ತು ದಿಯಾ ಮಿರ್ಜಾರಂತಹ ಅಗ್ರ ಐದು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಅವರು ಚಲನಚಿತ್ರಗಳಿಗಿಂತ ಮಾಡೆಲಿಂಗ್ ಅನ್ನು ಆಯ್ಕೆ ಮಾಡಿದರು.  ಈಕೆ ಹರಿಯಾಣದ ಬೆಡಗಿ.
 

910
ಅವಂತಿ ನಾಗರತ್

ಆವಂತಿ ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.  ಅವರ ಸಾಮರ್ಥ್ಯಕ್ಕಾಗಿ ಶೀಘ್ರವಾಗಿ ಫ್ಯಾಷನ್‌ ಲೋಕದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಹೀಗಾಗಿ ಶೀಘ್ರದಲ್ಲೇ IMG ಮಾಡೆಲ್ಸ್ ಯುರೋಪ್‌ ಗೆ ಸಹಿ ಹಾಕಿದರು ಮತ್ತು ಈಗ ಫ್ಯಾಷನ್ ಉದ್ಯಮದಲ್ಲಿ ಜನಪ್ರಿಯ ಮುಖವಾಗುತ್ತಿದ್ದಾರೆ. ಈಕೆ ದೆಹಲಿಯವಳು.

1010
ಏಂಜೆಲಾ ಜಾನ್ಸನ್

ಏಂಜೆಲಾ ಭಾರತೀಯ ಮತ್ತು ಐಸ್ಲ್ಯಾಂಡಿಕ್ ಪರಂಪರೆಯನ್ನು ಹೊಂದಿರುವ ಮಾಡೆಲ್, 2011 ರಲ್ಲಿ ಕಿಂಗ್‌ಫಿಶರ್ ಕ್ಯಾಲೆಂಡರ್ ಮಾದರಿ ಸ್ಪರ್ಧೆಯಲ್ಲಿ ಗೆದ್ದರು ಮತ್ತು ಮೂಲತಃ ಚೆನ್ನೈನವರು. ಪ್ರಸ್ತುತ, ಏಂಜೆಲಾ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾರೆ. ಫ್ಯಾಷನ್‌ ಲೋಕದಲ್ಲಿ ಹೆಜ್ಜೆ ಹಾಕಲು ಮತ್ತು LA, ನ್ಯೂಯಾರ್ಕ್ ಮತ್ತು ಭಾರತದ ನಡುವೆ ಪ್ರಯಾಣಿಸುತ್ತಾರೆ.
 

Read more Photos on
click me!

Recommended Stories