ಈ ಹೆಣ್ಣು ಸುಂದರವಾಗಿ ಕಾಣಬೇಕು ಅಂದ್ರೆ ಹೀಗೂ ಮಾಡ್ತಾರಾ? ವ್ಯಾಕ್!

Published : Sep 11, 2023, 05:34 PM ISTUpdated : Sep 11, 2023, 05:35 PM IST

ಪ್ರಪಂಚದಾದ್ಯಂತದ ಹಲವಾರು ಸಂಸ್ಕೃತಿಗಳು ಶತಮಾನಗಳಾದ್ಯಂತ ತಮ್ಮ ಸಾಂಪ್ರದಾಯಿಕ ಚರ್ಮದ ಆರೈಕೆ ಪಾಕವಿಧಾನಗಳನ್ನು ಅನುಸರಿಸಿಕೊಂಡು ಬಂದಿದೆ. ಈ ಪದ್ಧತಿಗಳನ್ನು ತಲೆಮಾರಿನಿಂದ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಿಕೊಂಡು ಬರಲಾಗಿದೆ, ಮತ್ತು ಅವುಗಳನ್ನು ಈಗಲೂ ಅಭ್ಯಾಸ ಮಾಡಲಾಗುತ್ತಿದೆ. ಅಂತಹ ಕೆಲವು ದೇಶಗಳ ಸೌಂದರ್ಯ ಸಲಹೆ ಬಗ್ಗೆ ತಿಳಿಯೋಣ.  

PREV
110
ಈ ಹೆಣ್ಣು ಸುಂದರವಾಗಿ ಕಾಣಬೇಕು ಅಂದ್ರೆ ಹೀಗೂ ಮಾಡ್ತಾರಾ? ವ್ಯಾಕ್!

ಸಾಫ್ಟ್ ತ್ವಚೆಗಾಗಿ ಕೊರಿಯನ್ನರು ಬಸವನ ಹುಳದ ಲೋಳೆ ಬಳಸುತ್ತಾರೆ
ಕೊರಿಯನ್ನರು ತಮ್ಮ ಚರ್ಮದ ಆರೈಕೆ ಬಗ್ಗೆ ತುಂಬಾ ಗಮನ ಹರಿಸ್ತಾರೆ. ಕ್ಲಿಯರ್ ಆಗಿರುವ ಗ್ಲಾಸ್ ಸ್ಕಿನ್ ಪಡೆಯಲು ಅವರು ಬಸವನಹುಳದ ಲೋಳೆ (Snail mucus) ಅಥವಾ ಸ್ಲಿಮ್ ಅನ್ನು ಸ್ಕಿನ್ ಕೇರ್ ಉತ್ಪನ್ನಗಳಲ್ಲಿ (Skin Care Products) ಬಳಸುತ್ತಾರೆ. ಬಸವನ ಹುಳದ ಲೋಳೆಯು ಸತ್ತ ಚರ್ಮದ ಕೋಶವನ್ನು ತೆಗೆದುಹಾಕುತ್ತೆ. ಅಲ್ಲದೇ ಇದು ಚರ್ಮದ ಸುಕ್ಕು, ನೆರಿಗೆಗಳನ್ನು ನಿವಾರಿಸಿ ಸುಂದರ ತ್ವಚೆಯನ್ನು ನೀಡುತ್ತೆ.

210

ಪನಾಮದ ಮಹಿಳೆಯರು ಕೋಕೋ ಉಪಯೋಗಿಸ್ತಾರೆ
ಕೆರಿಬಿಯನ್ ಚಾಕೊಲೇಟ್, ಮುಖ್ಯವಾಗಿ ಪನಾಮದಲ್ಲಿ ಉತ್ಪಾದಿಸಲಾಗುತ್ತದೆ, ಇದನ್ನು ಸ್ಥಳೀಯರು ತಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಮತ್ತು ವಯಸ್ಸಾದ ಚಿಹ್ನೆಗಳನ್ನು ಮರೆಮಾಚಲು ಆರೋಗ್ಯ ಪಾನೀಯವಾಗಿ ದೀರ್ಘಕಾಲದಿಂದ ಬಳಸುತ್ತಿದ್ದಾರೆ. ದಿನಕ್ಕೆ ಕನಿಷ್ಠ 3 - 4 ಕಪ್ ಸಿಹಿರಹಿತ ಕೋಕೋ (cocoa) ಸೇವಿಸೋದರಿಂದ ಅಧಿಕ ರಕ್ತದೊತ್ತಡ ಮತ್ತು ಟೈಪ್ 2 ಮಧುಮೇಹ ಕಡಿಮೆಯಾಗುತ್ತೆ.

310

ಜಪಾನಿನ ಮಹಿಳೆಯರು ತಮ್ಮ ಕೂದಲಿಗೆ ಮಾಚಾ ಬಳಸ್ತಾರೆ
ಮ್ಯಾಚಾ (Matcha green tea powder) ಎಂದು ಕರೆಯಲ್ಪಡುವ ಜಪಾನಿನ ಗ್ರೀನ್ ಟೀ ಪುಡಿ, ತೂಕ ಇಳಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು (Immunity Power) ಸುಧಾರಿಸಲು ಸಹಾಯ ಮಾಡುವುದರ ಹೊರತಾಗಿ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತದೆ. ಇದು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ.

410

ಟರ್ಕಿಶ್ ಮಹಿಳೆಯರು ಮಣ್ಣಿನ ಸ್ನಾನ(Mud Bath) ಮಾಡಿ ಸೌಂದರ್ಯ ಹೆಚ್ಚಿಸ್ತಾರೆ
ಟರ್ಕಿಶ್ ಮಹಿಳೆಯರು ಸ್ನಾನವನ್ನು ಉದ್ವೇಗವನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಅವರ ಚರ್ಮದ ಆಕರ್ಷಣೆಗಾಗಿ ಬಳಸುತ್ತಾರೆ. ಇಲ್ಲಿನ ಮಹಿಳೆಯರು ಬಿಸಿನೀರು, ಗಂಧಕ ಮತ್ತು ಇತರ ಖನಿಜಗಳಿಂದ ತಯಾರಿಸಿದ ನೈಸರ್ಗಿಕ ಮಣ್ಣಿನ ಸ್ನಾನಗಳನ್ನು(mud bath) ಮಾಡ್ತಾರೆ. ಈ ಅಂಶಗಳು ಸತ್ತ ಜೀವಕೋಶಗಳನ್ನು ಮತ್ತು ಚರ್ಮದಿಂದ ವಿಷವನ್ನು ತೆಗೆದುಹಾಕುತ್ತವೆ, ಜೊತೆಗೆ ಸ್ನಾಯು ಮತ್ತು ಕೀಲು ನೋವು ನಿವಾರಿಸುತ್ತೆ.

510

ಕ್ಯಾಕ್ಟಿ  ಬಳಸ್ತಾರೆ
ಕ್ಯಾಕ್ಟಿ (cacti), ಅಥವಾ ನೋಪಲ್ಸ್, ಮೆಕ್ಸಿಕನ್ ಆಚರಣೆಯ ಸಂದರ್ಭದಲ್ಲಿ ಊಟದಲ್ಲಿ ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತೆ. ಕ್ಯಾಕ್ಟಿಗಳಲ್ಲಿ ಕಂಡುಬರುವ ಅನೇಕ ಜೀವಸತ್ವಗಳು, ಫೈಟೊಕೆಮಿಕಲ್ಸ್ ಮತ್ತು ಪಾಲಿಸ್ಯಾಕರೈಡ್‌ಗಳಿಂದಾಗ ಇದನ್ನು ಮುಖಕ್ಕೆ ಬಳಸ್ತಾರೆ, ಇದರಿಂದ ಆರೋಗ್ಯಕರ ತ್ವಚೆ ಪಡೆಯಲು ಸಾಧ್ಯವಾಗುತ್ತದೆ.

610

ಚೀನಾದಲ್ಲಿ, ಅಕ್ಕಿ ನೀರನ್ನು ಫೇಸ್ ಕ್ಲೆನ್ಸರ್ ಆಗಿ ಬಳಸಲಾಗುತ್ತದೆ
ಸಾವಿರಾರು ವರ್ಷಗಳಿಗೂ ಹೆಚ್ಚು ಕಾಲದಿಂದ, ಪೂರ್ವ ಏಷ್ಯನ್ನರು ತಮ್ಮ ಸೌಂದರ್ಯವರ್ಧಕಗಳು ಮತ್ತು ಚರ್ಮದ ಆರೈಕೆಯಲ್ಲಿ ಅಕ್ಕಿ ನೀರನ್ನು (rice water) ಬಳಸುತ್ತಾರೆ. ಚೀನೀ ಮಹಿಳೆಯರು ಇನ್ನೂ ಸಹ ಅಕ್ಕಿ ನೀರನ್ನೇ ಬಳಸುತ್ತಿದ್ದಾರೆ, ಇದು ತ್ವಚೆ ಯಂಗ್ ಆಗಿರಲು ಮತ್ತು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದೆ. ಹಿತವಾದ ಸ್ನಾನದಿಂದ ಹಿಡಿದು ಹೇರ್ ಕ್ಲೆನ್ಸರ್, ಸ್ಕಿನ್ ಟೋನರ್ ಅಥವಾ ಸನ್ಸ್ಕ್ರೀನ್ ವರೆಗೂ ಅಲ್ಲಿನ ಜನರು ಅಕ್ಕಿಯನ್ನು ಬಳಸುತ್ತಾರೆ. 

710

ಆಲಿವ್ ಎಣ್ಣೆ ಬಳಸುವ ಗ್ರೀಕ್ ಮಹಿಳೆಯರು
ಗ್ರೀಸ್ ನಲ್ಲಿ ಆಲಿವ್ ಎಣ್ಣೆಯ (olive oil) ಉತ್ಪಾದನೆ ಮತ್ತು ಆಲಿವ್ ಮರಗಳ ಸಂಖ್ಯೆ ಎರಡೂ ಹೆಚ್ಚಾಗಿದೆ. ಹಾಗಾಗಿ ಅಲ್ಲಿನ ಮಹಿಳೆಯರು ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಲು ಆಲಿವ್ ಎಣ್ಣೆ ಬಳಕೆ ಮಾಡ್ತಾರೆ. ಅವು ಚರ್ಮದ ಜೀವಿತಾವಧಿ ಮತ್ತು ನೈಸರ್ಗಿಕ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತವೆ. ಆಲಿವ್ ಎಣ್ಣೆ ಡ್ರೈ ಸ್ಕಿನ್ ಸಮಸ್ಯೆ ನಿವಾರಿಸುತ್ತೆ. 

810

ಶಿಯಾ ಬಟರ್ 
ಪೂರ್ವ ಆಫ್ರಿಕಾದ ಮಹಿಳೆಯರು ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಶಿಯಾ ಬಟರ್ (shea butter) ಬಳಸ್ತಾರೆ., ಏಕೆಂದರೆ ಇದು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಎಣ್ಣೆಯಿಂದ ಸಮೃದ್ಧವಾಗಿರುವ ಟನ್ ಗಟ್ಟಲೆ ಕಚ್ಚಾ ಶಿಯಾ ಬಟರ್ ಶಿಯಾ ಮರದಿಂದ ಕೊಯ್ಲು ಮಾಡಿದ ಶಿಯಾ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಒಣ ಚರ್ಮ, ಮೊಡವೆ ಅಥವಾ ಸುಟ್ಟಗಾಯಗಳಿರುವ ಜನರು ಈ ಬೆಣ್ಣೆಯ ಮಾಯಿಶ್ಚರೈಸಿಂಗ್ ಗುಣಲಕ್ಷಣಗಳಿಂದ ಪ್ರಯೋಜನ ಪಡೆಯಬಹುದು.

910

ಥಾಯ್ ಮಹಿಳೆಯರು ಲೆಮನ್ ಗ್ರಾಸ್ ಟೀ ಕುಡಿಯುತ್ತಾರೆ
ಥಾಯ್ ಮಹಿಳೆಯರು ತೂಕ ಇಳಿಸಿ, ಫಿಟ್ ಆಗಿರಲು ಲೆಮನ್ ಗ್ರಾಸ್ ಚಹಾಗಳನ್ನು ಕುಡಿಯುತ್ತಾರೆ. ಲೆಮನ್ ಗ್ರಾಸ್ ಚಹಾ (lemon grass tea) ಸೇವಿಸೋದರಿಂದ ಚೆನ್ನಾಗಿ ನಿದ್ರೆ ಬರುತ್ತದೆ, ಅಲ್ಲದೇ ಒತ್ತಡ ಸಹ ದೂರವಾಗುತ್ತದೆ. ಇದು ನಿಮ್ಮ ಹಲ್ಲುಗಳು ಮತ್ತು ಜೀರ್ಣಾಂಗ ವ್ಯವಸ್ಥೆಯ ಸ್ಥಿತಿಯನ್ನು ಒಂದೇ ಸಮಯದಲ್ಲಿ ಸುಧಾರಿಸುತ್ತದೆ.

1010

ಭಾರತದಲ್ಲಿ ಅರಿಶಿನ ಬಳಸ್ತಾರೆ
ಭಾರತದಲ್ಲಿ ಮಹಿಳೆಯರು ಅರಿಶಿನವನ್ನು ಅಡುಗೆ ಮತ್ತು ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅರಿಶಿನವನ್ನು (turmeric) ಮಸಾಲೆಯಾಗಿ ಬಳಸಲಾಗುತ್ತದೆ, ಇದರಲ್ಲಿರುವ ಔಷದೀಯ ಗುಣದಿಂದಾಗಿ ಇದನ್ನು ನ್ಯಾಚುರಲ್ ಫೇಶಿಯಲ್ ಆಗಿ ಬಳಸಬಹುದು. ಅರಿಶಿನ, ಮೊಸರು ಮತ್ತು ಜೇನುತುಪ್ಪದಿಂದ ಮಾಡಿದ ಪೇಸ್ಟ್ ಅನ್ನು ಹಚ್ಚುವುದರಿಂದ ನಿಮ್ಮ ಚರ್ಮಕ್ಕೆ ತಾಜಾ, ಕಾಂತಿಯುತ ಲುಕ್ ನೀಡುತ್ತದೆ.  

click me!

Recommended Stories