Dear Men ವ್ಯಾಕ್ಸ್ ಮಾಡೋ ಮುನ್ನ ಈ ಟಿಪ್ಸ್ ಟ್ರೈ ಮಾಡಿ

Published : Oct 16, 2022, 01:05 PM IST

ವ್ಯಾಕ್ಸಿಂಗ್ ಅಂದರೆ ಯಾವಾಗಲೂ ಅದು ಹುಡುಗಿಯರ ವಿಷ್ಯ ಅಂತ ಅಂದುಕೊಳ್ತೀವಿ. ಆದರೆ ವ್ಯಾಕ್ಸಿಂಗ್ ಪುರುಷರು ಸಹ ಮಾಡ್ತಾರೆ. ಆದರೆ ವ್ಯಾಕ್ಸಿಂಗ್ ಮಾಡೋದು ಅವರ ಮನಸ್ಸಿನಲ್ಲಿ ಭಯವನ್ನು ಸಹ ಸೃಷ್ಟಿಸುತ್ತದೆ. ವ್ಯಾಕ್ಸಿಂಗ್ ಮಾಡೋದ್ರಿಂದ ಉಂಟಾಗುವ ನೋವಿನಿಂದಾಗಿ ಹೆಚ್ಚಿನ ಪುರುಷರು ವ್ಯಾಕ್ಸ್ ಮಾಡೋದೇ ಇಲ್ಲ. ಬೆನ್ನು, ಎದೆ ಮತ್ತು ಕಾಲುಗಳಲ್ಲಿನ ಅನಗತ್ಯ ಕೂದಲನ್ನು ತೆಗೆದುಹಾಕಲು ಕ್ಷೌರ ಮಾಡುವುದು ಇಂದಿಗೂ ಅವರ ಮೊದಲ ಆದ್ಯತೆಯ ಆಯ್ಕೆಯಾಗಿದೆ. 

PREV
111
Dear Men ವ್ಯಾಕ್ಸ್ ಮಾಡೋ ಮುನ್ನ ಈ ಟಿಪ್ಸ್ ಟ್ರೈ ಮಾಡಿ

ಪುರುಷರ ವ್ಯಾಕ್ಸಿಂಗ್ (men waxing) ಈ ದಿನಗಳಲ್ಲಿ ಟ್ರೆಂಡ್ ನಲ್ಲಿದೆ. ಅದು ಕ್ರೀಡಾಪಟುಗಳಾಗಿರಲಿ ಅಥವಾ ಸಾಮಾನ್ಯ ಜನರಾಗಿರಲಿ, ಸುಂದರವಾದ ಮತ್ತು ಸ್ವಚ್ಛವಾದ ಕಾಲುಗಳಿಗಳಿಗಾಗಿ ಪುರುಷರು ಸಹ ವ್ಯಾಕ್ಸ್ ಮಾಡಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಕೂದಲನ್ನು ಹೊಂದಿರುತ್ತಾರೆ. ಆದ್ದರಿಂದ ವ್ಯಾಕ್ಸಿಂಗ್ ಕಲ್ಪನೆಯು ಪುರುಷರಿಗೆ ತುಂಬಾ ನೋವಿನಿಂದ ಕೂಡಿದ್ದರೂ, ಇದು ಅಷ್ಟೊಂದೇನೂ ಕೆಟ್ಟದಲ್ಲ. 

211

ವ್ಯಾಕ್ಸಿಂಗ್ ಪುರುಷರು ಮತ್ತು ಮಹಿಳೆಯರಿಗೆ ಹೆಚ್ಚಿನ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ಆದರೂ, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ನೀವು ಕೂಡ ವ್ಯಾಕ್ಸ್ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ನಾವು ನಿಮಗಾಗಿ ಕೆಲವು ವ್ಯಾಕ್ಸಿಂಗ್ ಸಲಹೆಗಳನ್ನು (waxing tips) ಹೇಳಲಿದ್ದೇವೆ.

311

ಪುರುಷರಿಗೆ ವ್ಯಾಕ್ಸಿಂಗ್ ಸಲಹೆಗಳು
ಮೊದಲನೆಯದಾಗಿ, ನಿಮ್ಮ ದೇಹದಿಂದ ಕೂದಲನ್ನು ತೆಗೆದುಹಾಕಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವುದು ತಪ್ಪೇನಿಲ್ಲ ಎಂಬುದನ್ನು ನೆನಪಿಡಿ. ವ್ಯಾಕ್ಸಿಂಗ್ ಮಾಡುವಾಗ ನೀವು ನೋವನ್ನು ಕಡಿಮೆ ಮಾಡಲು ಬಯಸಿದರೆ ಮತ್ತು ಪ್ರಕ್ರಿಯೆ ಸುಲಭವಾಗಲು ಬಯಸಿದ್ರೆ, ಪ್ರೊಫೆಶನಲ್ಸ್ ಗಳಿಂದ ವ್ಯಾಕ್ಸ್ ಮಾಡೋದನ್ನು ಖಚಿತಪಡಿಸಿ. ಇಂದು ನಾವು ನಿಮಗೆ 6 ಪ್ರಮುಖ ಸಲಹೆಗಳನ್ನು ಹೇಳಲಿದ್ದೇವೆ, ಅವುಗಳನ್ನು ವ್ಯಾಕ್ಸಿಂಗ್ ಮಾಡುವ ಮೊದಲು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.

411

ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡಿ
ವ್ಯಾಕ್ಸಿಂಗ್ ಮಾಡೋ ಮೊದಲು ನಿಮ್ಮ ಚರ್ಮವನ್ನು ಸಿದ್ಧಪಡಿಸಿಕೊಳ್ಳಿ. ಇದು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಅನ್ವಯಿಸುತ್ತದೆ. ನಿಮ್ಮ ಚರ್ಮವನ್ನು ಎಕ್ಸ್ಫೋಲಿಯೇಟ್ (exfoliate) ಮಾಡೋದ್ರಿಂದ ನಿಮ್ಮ ಚರ್ಮದ ಮೇಲ್ಮೈಯಿಂದ ಸತ್ತ ಚರ್ಮದ ಕೋಶಗಳು ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ಚರ್ಮವನ್ನು ಮೃದು ಮತ್ತು ನಯವಾಗಿಸುತ್ತೆ. 

511

ನೀವು ವ್ಯಾಕ್ಸ್ ಮಾಡಲು ಬಯಸುವ ಭಾಗವನ್ನು ಎಕ್ಸ್ಫೋಲಿಯೇಟ್ ಮಾಡಲು ನೀವು ಮಾರುಕಟ್ಟೆಯಿಂದ ಖರೀದಿಸಿದ ಅಥವಾ ನೈಸರ್ಗಿಕ ಸ್ಕ್ರಬ್ (natural scurb) ಬಳಸಬಹುದು. ವ್ಯಾಕ್ಸಿಂಗ್ ಸೆಷನ್ ಗೆ ಕನಿಷ್ಠ ಎರಡು ದಿನಗಳ ಮೊದಲು ಇದನ್ನು ಮಾಡಿ. ಇದು ನಿಮ್ಮ ಚರ್ಮವನ್ನು ಕೆಲವು ಗಂಟೆಗಳ ಕಾಲ ಸ್ವಲ್ಪ ಸೂಕ್ಷ್ಮವಾಗಿಸುತ್ತದೆ. ಚರ್ಮ ಮೃದುವಾಗುತ್ತೆ, ಇದರಿಂದ ವ್ಯಾಕ್ಸ್ ಮಾಡೋದು ಸುಲಭವಾಗುತ್ತೆ. 

611

ಚರ್ಮ ಸೂಕ್ಷ್ಮವಾಗಿದ್ದರೆ, ಮತ್ತೊಮ್ಮೆ ಯೋಚಿಸಿ
ನಿಮ್ಮ ಚರ್ಮವು ಅತ್ಯಂತ ಸೂಕ್ಷ್ಮವಾಗಿದ್ದರೆ, ಕೂದಲನ್ನು ತೆಗೆದು ಹಾಕಲು ವ್ಯಾಕ್ಸಿಂಗ್ ಉತ್ತಮ ಮಾರ್ಗವಲ್ಲ. ವ್ಯಾಕ್ಸಿಂಗ್ ದೇಹದ ಕೂದಲನ್ನು ತೆಗೆದುಹಾಕಲು ಒಂದು ಒರಟು ಮಾರ್ಗವಾಗಿರಬಹುದು, ಆದ್ದರಿಂದ ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ, ಎರಡು ಬಾರಿ ಯೋಚಿಸಿ.

711

ರಿಯಾಕ್ಟೀವ್ ಚರ್ಮದ ಮೇಲೆ ವ್ಯಾಕ್ಸಿಂಗ್ ಮಾಡುವುದರಿಂದ ನಿಮ್ಮ ಚರ್ಮದ ಮೇಲೆ ಕೆಂಪು ಕಲೆಗಳು (red rashes) ಅಥವಾ ಇತರ ರೋಗಲಕ್ಷಣಗಳು ಉಂಟಾಗಬಹುದು. ವ್ಯಾಕ್ಸ್ ಮಾಡಲು ನಿರ್ಧರಿಸುವ ಮೊದಲು ನೀವು ಚರ್ಮದ ತಜ್ಞರೊಂದಿಗೆ ಮಾತನಾಡಬಹುದು. ಅವರು ಸರಿಯಾದ ಸಲಹೆ ನೀಡಬಹುದು.

811

ಐಸ್ ಪ್ಯಾಕ್ ಗಳಿಂದ ನೋವನ್ನು ಕಡಿಮೆ ಮಾಡಿ
ಐಸ್ ಅಥವಾ ಕೋಲ್ಡ್ ಪ್ಯಾಕ್ ಗಳು (cold pack) ವ್ಯಾಕ್ಸಿಂಗ್ ಸಮಯದಲ್ಲಿ ನೋವನ್ನು ಕಡಿಮೆ ಮಾಡಬಹುದು. ವ್ಯಾಕ್ಸಿಂಗ್ ಸಮಯದಲ್ಲಿ ಐಸ್ ಕ್ಯೂಬ್ ನಿಮ್ಮ ಚರ್ಮವನ್ನು ಸ್ಟ್ರಿಪ್ಪಿಂಗ್ ಮಾಡುವ ಮೊದಲು ತಂಪಾಗಿಸಲು ಮತ್ತು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮದ ಮೇಲೆ ದದ್ದುಗಳು, ತುರಿಕೆ ಮತ್ತು ಕಿರಿಕಿರಿಯನ್ನು ತಡೆಯಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಸಹ ಇದನ್ನು ಮಾಡಲು ಸಹಾಯ ಮಾಡುತ್ತೆ.

911

ವಾಕ್ಸ್ ಪರೀಕ್ಷಿಸಿ
ಕೂದಲಿಗೆ ಬಣ್ಣ ಹಚ್ಚುವ ಮೊದಲು, ಅದರ ಫಲಿತಾಂಶಗಳನ್ನು ನೋಡಲು ಅಥವಾ ಯಾವುದೇ ಇನ್ ಫೆಕ್ಷನ್ ತಪ್ಪಿಸಲು ಅದನ್ನು ಸ್ವಲ್ಪ ಕೂದಲಿಗೆ ಹಚ್ಚಲಾಗುತ್ತೆ. ಅದೇ ರೀತಿ, ನಿಮ್ಮ ಚರ್ಮದ ಮೇಲೆ ವ್ಯಾಕ್ಸಿಂಗ್ ಸಹ ನೀವು ಪರೀಕ್ಷಿಸಬಹುದು. ಸರಿಯಾದ ವ್ಯಾಕ್ಸ್ ಆರಿಸಿ ಮತ್ತು ಅದಕ್ಕೆ ಚರ್ಮವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಿ. ಪೂರ್ಣ ದೇಹಕ್ಕೆ ವ್ಯಾಕ್ಸ್ ಮಾಡೋ ಮೊದಲು, ಚರ್ಮದ ಒಂದು ಸಣ್ಣ ಭಾಗಕ್ಕೆ ಹಚ್ಚಿ ಪರೀಕ್ಷಿಸಿ. ಅಲರ್ಜಿ ಇದ್ದರೆ, ವ್ಯಾಕ್ಸ್ ಮಾಡುವ ವಿಧಾನ ಬದಲಾಯಿಸಿ.

1011

ಉತ್ತಮ ಗುಣಮಟ್ಟದ ವ್ಯಾಕ್ಸ್ ಬಳಸಿ
ದೇಹದ ಮೇಲೆ ಯಾವ್ಯಾವುದೋ ವ್ಯಾಕ್ಸ್ ಬಳಸಬೇಡಿ. ಉತ್ತಮ ಗುಣಮಟ್ಟದ ವ್ಯಾಕ್ಸ್ (good quality wax) ಆರಿಸಿ. ವ್ಯಾಕ್ಸ್ ನಲ್ಲಿ ಅನೇಕ ವಿಧಗಳಿವೆ. ನೀವು ಸರಿಯಾದ ವ್ಯಾಕ್ಸ್ ಆಯ್ಕೆ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಇದು ನಿಮ್ಮ ದೇಹದ ಮೇಲೆ ಎಷ್ಟು ಕೂದಲಿರುತ್ತೆ ಅನ್ನೋದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ತೆಳುವಾದ ಕೂದಲಿಗೆ ಸೌಮ್ಯ ಮೇಣದ ಅಗತ್ಯವಿದೆ, ಆದರೆ ದಪ್ಪ ಕೂದಲನ್ನು ಹೊಂದಿರುವವರಿಗೆ ಬಲವಾದ ಮೇಣದ ಅಗತ್ಯವಿದೆ. 

1111

ಉತ್ತಮ ಗುಣಮಟ್ಟದ ವ್ಯಾಕ್ಸ್ ಬಳಸಿ
ದೇಹದ ಮೇಲೆ ಯಾವ್ಯಾವುದೋ ವ್ಯಾಕ್ಸ್ ಬಳಸಬೇಡಿ. ಉತ್ತಮ ಗುಣಮಟ್ಟದ ವ್ಯಾಕ್ಸ್ ಆರಿಸಿ. ವ್ಯಾಕ್ಸ್ ನಲ್ಲಿ ಅನೇಕ ವಿಧಗಳಿವೆ. ನೀವು ಸರಿಯಾದ ವ್ಯಾಕ್ಸ್ ಆಯ್ಕೆ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಇದು ನಿಮ್ಮ ದೇಹದ ಮೇಲೆ ಎಷ್ಟು ಕೂದಲಿರುತ್ತೆ ಅನ್ನೋದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ತೆಳುವಾದ ಕೂದಲಿಗೆ ಸೌಮ್ಯ ಮೇಣದ ಅಗತ್ಯವಿದೆ, ಆದರೆ ದಪ್ಪ ಕೂದಲನ್ನು ಹೊಂದಿರುವವರಿಗೆ ಬಲವಾದ ಮೇಣದ ಅಗತ್ಯವಿದೆ. 

click me!

Recommended Stories