ಹಬ್ಬಕ್ಕೆ 'ಕಾಂತಾರ' ಚೆಲುವೆಯ ಸ್ಟೈಲಿಶ್ ಲುಕ್ ಫಾಲೋ ಮಾಡಿ

Published : Oct 16, 2022, 12:40 PM IST

ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಹಬ್ಬ ಅಂದ್ಮೇಲೆ ಸ್ಟೈಲಿಶ್ ಆಗಿ ರೆಡಿಯಾಗದಿದ್ರೆ ಆಗುತ್ತಾ ? ಅದ್ರಲ್ಲೂ ಸೀರೆ ಉಟ್ರೆ ಹಬ್ಬದ ಕಳೆ ಇನ್ನಷ್ಟು ಹೆಚ್ಚುತ್ತೆ. ಈ ಸಾರಿ ಹಬ್ಬಕ್ಕೆ ಸೀರೆಯಲ್ಲಿ ಸಖತ್ತಾಗಿ ಕಾಣೋಕೆ ನಟಿ ಸಪ್ತಮಿ ಗೌಡ್ ಲುಕ್‌ ಕಾಪಿ ಮಾಡಬಹುದು. ಕೆಲವೊಂದು ಫೋಟೋಸ್ ಇಲ್ಲಿದೆ. 

PREV
18
ಹಬ್ಬಕ್ಕೆ 'ಕಾಂತಾರ' ಚೆಲುವೆಯ ಸ್ಟೈಲಿಶ್ ಲುಕ್ ಫಾಲೋ ಮಾಡಿ

ಕನ್ನಡದ ನಟಿ ಸಪ್ತಮಿ ಗೌಡ ಸದ್ಯ ತಮ್ಮ ಬ್ಲಾಕ್ ಬಸ್ಟರ್ ಚಿತ್ರ ಕಾಂತಾರ ಯಶಸ್ಸಿನ ಖುಷಿಯಲ್ಲಿದ್ದಾರೆ. ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಈ ಆಕ್ಷನ್ ಥ್ರಿಲ್ಲರ್ ಬಾಕ್ಸ್ ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡಿದೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರ ಅದ್ಭುತವಾದ ಅಭಿನಯ ಎಲ್ಲರ ಮನಗೆದ್ದಿದೆ. ಅದರಲ್ಲೂ ಸಪ್ತಮಿ ಗೌಡ ಅವರ ಲೀಲಾ ಪಾತ್ರವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. 

28

ಕಾಂತಾರ ಚಿತ್ರ ಬಿಡುಗಡೆಯಾದಾಗಿನಿಂದ ಸಪ್ತಮಿ ಗೌಡ ಸುದ್ದಿಯಲ್ಲಿದ್ದಾರೆ. ತಮ್ಮ ಸ್ಟೈಲಿಶ್ ಸ್ಯಾರಿ ಲುಕ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಟ್ರೆಡಿಶನಲ್ ಹಾಗೂ ಫ್ಯಾನ್ಸಿ ಲುಕ್‌ನಲ್ಲಿ ಕಾಂತಾರಾದ ಹೀರೋಯಿನ್ ಮಿಂಚಿದ್ದಾರೆ. ಈ ದೀಪಾವಳಿ ಹಬ್ಬಕ್ಕೆ ಸಪ್ತಮಿ ಗೌಡ ಅವರ ಸೀರೆಯ ಸ್ಟೈಲಿಶ್ ಲುಕ್ ಫಾಲೋ ಮಾಡೋಣ. ಕೆಲವೊಂದು ಸ್ಟೈಲಿಶ್ ಫೋಟೋಗಳು ಇಲ್ಲಿವೆ.

38

ಹಬ್ಬ ಅಂದ್ರೆ ರೇಷ್ಮೆ ಸೀರೆ ಉಡೋಕೆ ತುಂಬಾ ಚೆನ್ನಾಗಿರುತ್ತೆ. ಸ್ಟೈಲಿಶ್ ರೆಡ್ ಬ್ಲೌಸ್ ಮತ್ತು ನೇವಿ ಬ್ಲೂ ಸೀರೆಯಲ್ಲಿ ಕಾಂತಾರದ ಹೀರೋಯಿನ್ ಸಖತ್ತಾಗಿ ಕಾಣುತ್ತಿದ್ದರು. ಇದಕ್ಕೆ ಟ್ರೆಡಿಷನಲ್ ಜುಮ್ಕಾ, ಚೋಕರ್ ಹಾಗೂ ಬಳೆಯನ್ನು ಧರಿಸಿದ್ದರು.

48

ಸ್ಕೈ ಬ್ಲೂ ಸೀರೆ ತುಂಬಾ ಕ್ಲಾಸಿಕ್ ಕಲರ್. ಸಪ್ತಮಿ ಗೌಡ್ ಆಕಾಶ ನೀಲಿ ಸೀರೆಗೆ ಮೆರೂನ್ ಡಿಸೈನ್‌ ಇರುವ ವೈಟ್ ಬ್ಲೌಸ್ ಧರಿಸಿfದರು. ಇದಕ್ಕೆ ಟ್ರೆಡಿಶನಲ್ ಹಾರಂ ಹಾಗೂ ಡಾಬು ಧರಿಸಿ ಸುಂದರವಾಗಿ ಕಾಣುತ್ತಿದ್ದರು. ಹಬ್ಬಕ್ಕೆ ನೀವು ಈ ಲುಕ್ ಫಾಲೋ ಮಾಡಬಹುದು.

58

ಬೇಬಿ ಪಿಂಕ್ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಕಲರ್‌. ಎಲ್ಲರಿಗೂ ಈ ಕಲರ್ ಚೆನ್ನಾಗಿ ಒಪ್ಪುತ್ತದೆ ಸಹ. ತಿಳಿ ಗುಲಾಬಿ ಬಣ್ಣ ಮುಖ ಇನ್ನಷ್ಟು ಬ್ರೈಟ್ ಆಗಿ ಕಾಣುವಂತೆ ಮಾಡುತ್ತದೆ. ಸಪ್ತಮಿ ಗೌಡ ಬೇಬಿ ಪಿಂಕ್ ಬಣ್ಣಕ್ಕೆ ಮಿಂಟ್ ಗ್ರೀನ್ ಬ್ಲೌಸ್ ಧರಿಸಿದಗದರು. ಆಕ್ಸಿಡೈಸ್‌ಡ್‌ ಜ್ಯುವೆಲ್ಲರಿಯನ್ನು ಪೇರ್ ಮಾಡಿದ್ದರು.

68

ಹಬ್ಬಕ್ಕೆ ಹೇಳಿ ಮಾಡಿಸಿದ ಕಲರ್ ರೆಡ್‌. ಬ್ರೈಡೆಲ್ ರೆಡ್‌ ಕಲರ್ ಎಲ್ಲರಿಗೂ ಚೆನ್ನಾಗಿ ಒಪ್ಪುತ್ತದೆ. ಸಪ್ತಮಿ ಗೌಡ ಕೆಂಪು ಬಣ್ಣದ ಸೀರೆಗೆ ನೀಲಿ ಬಣ್ಣದ ಬ್ಲೌಸ್ ಪೇರ್ ಮಾಡಿದ್ದು, ಆಕರ್ಷಕವಾಗಿ ಕಾಣುತ್ತಿದ್ದರು.

78

ಪಿಂಕ್ ಆಂಡ್ ಬ್ಲೂ ಎವರ್‌ ಗ್ರೀನ್ ಕಾಂಬಿನೇಶನ್‌. ಹಬ್ಬಕ್ಕೆ ನೀವು ಈ ಕಾಂಬಿನೇಶನ್‌ನ್ನು ಟ್ರೈ ಮಾಡಬಹುದು. ಇದಕ್ಕೆ ಜುಮ್ಕಾ ಹಾಗೂ ಚೋಕರ್ ಧರಿಸಿದ್ದರು. ಜೊತೆಗೆ ಮ್ಯಾಚಿಂಗ್ ಬ್ಲೂ ಮತ್ತು ಪಿಂಕ್ ಬಳೆಗಳನ್ನು ಧರಿಸಿದ್ದರು.

88

ಸಿಂಪಲ್ ಸೀರೆಯಲ್ಲೂ ಸಪ್ತಮಿ ಗೌಡ ಆಕರ್ಷಕವಾಗಿ ಕಾಣುತ್ತಿದ್ದರು. ದೀಪಾವಳಿ ಹಬ್ಬಕ್ಕೆ ಸಿಂಪಲ್ ಆಗಿ ರೆಡಿಯಾಗಲು ಇಷ್ಟಪಡುವವರು ಈ ಲುಕ್ ಕಾಪಿ ಮಾಡಬಹುದಾಗಿದೆ.

Read more Photos on
click me!

Recommended Stories