ಗಡ್ಡ ಬಿಡೋದು ಪುರುಷರ ಟ್ರೆಂಡ್ (beard trend) ಆಗಿದೆ. ಆದರೆ ಈ ಗಡ್ಡ ಬಿಡೋದರ ಬಗ್ಗೆ ಅನೇಕ ಸಂಶೋಧನೆಗಳು ಸಹ ನಡೆದಿವೆ. ಗಡ್ಡಧಾರಿ ಪುರುಷರು ಅಪರಾಧಗಳನ್ನು ಮಾಡುವ ಸಾಧ್ಯತೆ ಹೆಚ್ಚು ಎಂದು ಕೆಲವು ಅಧ್ಯಯನ ತೋರಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಗಡ್ಡ ಬಿಡೋದು ವ್ಯಕ್ತಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಎಂದು ಮತ್ತೊಂದು ಅಧ್ಯಯನ ತೋರಿಸುತ್ತದೆ. ಆದಾಗ್ಯೂ, ಗಡ್ಡ ಮತ್ತು ಪುರುಷತ್ವದ ನಡುವೆ ಮಾನಸಿಕ ಸಂಬಂಧವಿದೆ, ಇದು ವಾಸ್ತವವಾಗಿ ಪುರುಷರ ಗುಣಗಳಿಗೂ ಸಂಬಂಧಿಸಿದೆ.
ಇತ್ತೀಚಿನ ಒಂದು ಸಂಶೋಧನೆಯು ಗಡ್ಡ ಬಿಡೋದು ಯಾಕೆ ಎಂಬುದಕ್ಕೆ 'ಸಕಾರಾತ್ಮಕ' ಕಾರಣವನ್ನು ಕಂಡುಹಿಡಿದಿದೆ. ಈ ಸಂಶೋಧನೆಯಲ್ಲಿ, ಗಡ್ಡವನ್ನು ಇಟ್ಟುಕೊಳ್ಳುವುದು ಮನುಷ್ಯನಿಗೆ ಆಕರ್ಷಕವಾಗಿದೆಯೇ ಎಂಬ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಲಾಯಿತು. ಇದರ ಬಗ್ಗೆ ತಿಳಿದುಕೊಳ್ಳೋಣ.
ಗಡ್ಡ ಪುರುಷರನ್ನು ಆಕರ್ಷಕವಾಗಿ ಕಾಣುವಂತೆ ಮಾಡಬಹುದೇ?
ಇತ್ತೀಚಿನ ಸಮೀಕ್ಷೆಯೊಂದು ಗಡ್ಡ ಬಿಟ್ಟ ಪುರುಷರು ಹೆಚ್ಚು ಆತ್ಮವಿಶ್ವಾಸವನ್ನು (self confidence) ಹೊಂದಿರುತ್ತಾರೆ ಎಂದು ಕಂಡುಹಿಡಿದಿದೆ. ಪ್ರತಿ ಐದರಲ್ಲಿ ಒಬ್ಬರು ಪರಿಪೂರ್ಣ ಗಡ್ಡವನ್ನು ಪಡೆಯಲು ಒಂದು ವರ್ಷದವರೆಗೆ ಪ್ರೀತಿಯನ್ನು ಬಿಡಲು ಸಹ ತಯಾರಾಗಿರುತ್ತಾರೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಪುರುಷರು ಪರಿಪೂರ್ಣ ಗಡ್ಡಕ್ಕೆ ಬದಲಾಗಿ ಸೆಕ್ಸ್ ಮಾಡೋದನ್ನು ಬಿಡೋದಿಲ್ಲವಾದರೂ, ಇದರರ್ಥ ಅವರು ಗಡ್ಡ ಬಿಡಲು (grow beard) ಇಷ್ಟಪಡುವುದಿಲ್ಲ ಎಂದು ಅರ್ಥವಲ್ಲ. ಅನೇಕ ಅಧ್ಯಯನಗಳು ಮತ್ತು ತಜ್ಞರು ಮನುಷ್ಯನ ಗಡ್ಡ ಮತ್ತು ಆತ್ಮವಿಶ್ವಾಸದ ನಡುವಿನ ಸಂಬಂಧವನ್ನು ಅಧ್ಯಯನ ಮಾಡಿದ್ದಾರೆ.
ಆತ್ಮವಿಶ್ವಾಸ ಹೆಚ್ಚಿಸುತ್ತೆ
ಈ ಸಮೀಕ್ಷೆಯ ಪ್ರಕಾರ, ಗಡ್ಡ ಬಿಡೋದು ನಿಮ್ಮ ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ. ಇದಲ್ಲದೆ, ಗಡ್ಡ ಶಕ್ತಿ, ಪುರುಷತ್ವ ಮತ್ತು ಇತರ ಸಕಾರಾತ್ಮಕ ಗುಣಲಕ್ಷಣಗಳ ಪ್ರಾಚೀನ ಸಂಕೇತವಾಗಿದೆ, ಇದು ಕನ್ನಡಿಯಲ್ಲಿ ನೋಡಿದಾಗ ನಿಮ್ಮ ಆತ್ಮಗೌರವವನ್ನು ಹೆಚ್ಚಿಸುತ್ತದೆ ಅನ್ನೋದನ್ನು ಸಹ ಅಧ್ಯಯನಗಳು ಸೂಚಿಸುತ್ತವೆ. ಅದಕ್ಕಾಗಿಯೇ ಗಡ್ಡ ಬಿಟ್ಟಿರೋ ಪುರುಷರು ಪದೇ ಪದೇ ಕನ್ನಡಿ ನೋಡ್ಕೊತ್ತಿರುತ್ತಾರೆ.
ಅಲ್ಲದೆ ನೀವು ಉದ್ದವಾದ ಗಡ್ಡವನ್ನು ಹೊಂದಿದ್ದರೆ, ನೂರು ಜನ ಇದ್ದರೂ ಸಹ ಅಲ್ಲಿ ನೀವು ವಿಭಿನ್ನವಾಗಿ ಕಾಣಿಸೋದು ಖಚಿತ. ದೊಡ್ಡ ಗಡ್ಡ ಹೊಂದಿರುವ ವ್ಯಕ್ತಿಯು ಪಾರ್ಟಿಯಲ್ಲಿ ತನ್ನ ಬಲವಾದ ಉಪಸ್ಥಿತಿಯನ್ನು ಅನುಭವಿಸುವುದು ಮಾತ್ರವಲ್ಲದೆ, ಅಲ್ಲಿ ಉಪಸ್ಥಿತರಿರುವ ಮಹಿಳೆಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಾನೆ.
ಇತಿಹಾಸ ಪುಸ್ತಕಗಳನ್ನು (history book) ಓದಿದರೆ ಗಡ್ಡಗಳು ಅಧಿಕಾರ ಮತ್ತು ಸಂಪತ್ತಿನೊಂದಿಗೆ ಸಂಬಂಧ ಹೊಂದಿದ್ದರೂ, ಗಡ್ಡಗಳನ್ನು ಪುರುಷರಲ್ಲಿ ಗೌರವಾನ್ವಿತ ಪ್ರಬುದ್ಧತೆಯ ಸಂಕೇತವಾಗಿ ನೋಡಲಾಗುತ್ತದೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ರಾಜರು, ಮುಖ್ಯಸ್ಥರು ಮಾತ್ರ ಗಡ್ಡ ಬಿಡುತ್ತಿದ್ದರು ಅನ್ನೋದು ತಿಳಿದು ಬಂದಿದೆ.
ಸ್ವಯಂ ಆರೈಕೆ
ಗಡ್ಡವನ್ನು ಚೆನ್ನಾಗಿ ಆರೈಕೆ ಮಾಡೋದು ತುಂಬಾ ಕಷ್ಟ. ಗಡ್ಡವನ್ನು ಸುಂದರವಾಗಿ ಕಾಣುವಂತೆ ಮಾಡಲು, ನೀವು ಆರೋಗ್ಯಕರವಾಗಿ ತಿನ್ನಬೇಕು ಮತ್ತು ಸಾಕಷ್ಟು ನೀರು ಕುಡಿಯಬೇಕು. ಸುಂದರವಾಗಿ ಕಾಣುವ ಗಡ್ಡಕ್ಕೆ ನಿಯಮಿತ ನಿರ್ವಹಣೆಯ ಅಗತ್ಯವಿದೆ. ಸರಿಯಾದ ಆರೈಕೆ ಸಿಕ್ಕಾಗ ಮಾತ್ರ ಗಡ್ಡ ಚೆನ್ನಾಗಿ ಬೆಳೆಯುತ್ತೆ.
ಗಡ್ಡವನ್ನು ನೋಡಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು (healthy lifestyle) ಕಾಪಾಡಿಕೊಳ್ಳುವುದು, ಚೆನ್ನಾಗಿ ಗಡ್ಡ ಅಲಂಕರಿಸೋದು ಉತ್ತಮ. ಇದು ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೀರಿ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದನ್ನು ತೋರಿಸುತ್ತದೆ. ಇದರಿಂದ ಗಡ್ಡವೂ ಚೆನ್ನಾಗಿ ಬೆಳೆಯುತ್ತೆ.
ನೀವು ಗಡ್ಡ ಬೆಳೆಸಲು ಬಯಸಿದ್ರೆ, ಆರಂಭಿಕ ದಿನಗಳಲ್ಲಿ ನಿಮಗೆ ತುರಿಕೆ ಸಮಸ್ಯೆಗಳು ಇರಬಹುದು. ಬೆವರೋದ್ರಿಂದ ತುರಿಕೆ ಉಂಟಾಗುತ್ತೆ ಮತ್ತು ಅದನ್ನು ತೊಡೆದುಹಾಕಲು, ಗಡ್ಡವನ್ನು ಸ್ವಚ್ಛವಾಗಿಡಬೇಕು. ಇದಕ್ಕಾಗಿ, ಗಡ್ಡವನ್ನು ವಾರಕ್ಕೆ 2 ಬಾರಿ ಶಾಂಪೂ ಮಾಡಿ. ಅದನ್ನು ಸ್ವಚ್ಛವಾಗಿ ಮತ್ತು ಬೆವರು ಮುಕ್ತವಾಗಿರಿಸಿಕೊಳ್ಳಿ.
ಹೆಚ್ಚಿನ ಆಕರ್ಷಣೆ
ಒಂದು ಸಂಶೋಧನೆಯ ಪ್ರಕಾರ, ಮಹಿಳೆಯರು ಗಡ್ಡ ಹೊಂದಿರುವ ಪುರುಷರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಮಹಿಳೆಯರನ್ನು ಆಕರ್ಷಿಸಲು ಪುರುಷರು ಗಡ್ಡವನ್ನು ಬಳಸ್ತಾರೆ. ಹಿಂದಿನ ಕಾಲದಲ್ಲಿ ಗಡ್ಡ ಹೊಂದಿರೋ ಪುರುಷರು ತಂದೆಯರಾಗುವ ಸಾಧ್ಯತೆ ಹೆಚ್ಚು ಎಂದು ಸಹ ಹೇಳಲಾಗುತ್ತಿತ್ತು, ಏಕೆಂದರೆ ಮಹಿಳೆಯರು ಗಡ್ಡ ಬಿಟ್ಟಿರೋ ಪುರುಷರ ಕಡೆಗ ಹೆಚ್ಚು ಆಕರ್ಷಿತರಾಗುತ್ತಿದ್ದರು.
ಗಡ್ಡಧಾರಿ ಪುರುಷರು ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚು ಪರಿಣಾಮಕಾರಿ ಎಂದು ತೋರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ, ಬಹುಶಃ ಮಹಿಳೆಯರು ಅವರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಗಡ್ಡಧಾರಿ ಹುಡುಗರು ಸಾಕಷ್ಟು ತಾಳ್ಮೆ ಹೊಂದಿರುತ್ತಾರೆ ಮತ್ತು ಅವರು ಯಾವುದೇ ಪರಿಸ್ಥಿತಿಯನ್ನು ಹೆಚ್ಚು ತಾಳ್ಮೆ ಮತ್ತು ಶಾಂತಿಯಿಂದ ನಿರ್ವಹಿಸುತ್ತಾರೆ ಎಂದು ಹೇಳಲಾಗುತ್ತದೆ.