ಹೊಸ ಶೂ ಖರೀದಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು

First Published | Dec 16, 2022, 4:01 PM IST

ಶೂ ಖರೀದಿ ಮಾಡೋವಾಗ ನೀವು ಯಾವುದಕ್ಕೆ ಹೆಚ್ಚು ಆದ್ಯತೆ ಕೊಡ್ತೀರಿ? ಅದು ಸ್ಟೈಲಿಶ್ ಆಗಿದ್ಯಾ? ಹೆಚ್ಚಿನ ಜನ ಅದನ್ನೇ ತೆಗೊತಾರಾ ಅಂತ ನೋಡಿ ಅದನ್ನೇ ನೀವು ಖರೀದಿ ಮಾಡ್ತೀರಾ? ಆ ತಪ್ಪು ಮಾಡ್ಬೇಡಿ, ಯಾಕಂದ್ರೆ ಅಂತಹ ಶೂ ಕೆಲವೊಮ್ಮೆ ಆರಾಮದಾಯಕವಾಗಿರೋದಿಲ್ಲ. ಹಾಗಾದ್ರೆ ಸರಿಯಾದ ಶೂ ಆಯ್ಕೆ ಮಾಡೋದು ಹೇಗೆ ನೋಡಿ. 

ನೀವು ಶೂ ಪ್ರಿಯರಾಗಿದ್ರೆ, ಯಾವ ರೀತಿ ಶೂ ಖರೀದಿಸಬೇಕೆಂದು ಯೋಚನೆ ಮಾಡಿದ್ದೀರಾ? ಶಾಪ್‌ಗೆ ಹೋದಾಗ ಚೆನ್ನಾಗಿ ಕಂಡ ಶೂ ಖರೀದಿಸಿ. ಮತ್ತೆ ಪಶ್ಚತ್ತಾಪ ಪಡೋ ಬದಲು, ನೀವು ಸರಿಯಾಗಿ ಹೊಂದುವ, ಆರಾಮದಾಯಕವಾಗಿರುವ ಶೂ ಖರೀದಿ ಮಾಡೋದು ಉತ್ತಮ. ಆರಾಮದಾಯಕ ಶೂ ಖರೀದಿ ಮಾಡೋದು ಹೇಗೆ? 

ಪುರುಷರಿಗೆ ಸರಿಯಾದ ಶೂಗಳನ್ನು ಆಯ್ಕೆ ಮಾಡುವುದು ಹೇಗೆ?

ನೀವು ಎಲ್ಲಿ ನಡೆಯುತ್ತೀರಿ ಅನ್ನೋದು ತಿಳಿದಿರಲಿ
ಶೂ ಖರೀದಿಸುವ ಮುನ್ನ, ಅದನ್ನು ಎಲ್ಲಿ ಬಳಸಬೇಕೆಂದನ್ನು ಮೊದಲು ನಿರ್ಧರಿಸಿ. ಇದನ್ನು ಕ್ಯಾಶುವಲ್ ಆಗಿ ಖರೀದಿಸಿರೇ? ಮದುವೆಗೆ ಧರಿಸಲು ಖರೀದಿಸಿದ್ದೀರಾ? ಜಿಮ್ ಗೆ ಧರಿಸುತ್ತೀರಾ? ಅಥವಾ ಆಫ್-ರೋಡ್ ಓಟದ ಸಮಯದಲ್ಲಿ ಅವುಗಳನ್ನು ಧರಿಸಲು ಬಯಸುವಿರಾ? ಆಕ್ಸ್ಫರ್ಡ್ ಮತ್ತು ಡರ್ಬಿಯಂತಹ ಬೂಟುಗಳು ಕ್ಯಾಶುವಲ್ (casual shoes) ಆಗಿ ಧರಿಸಲು ಹೆಚ್ಚು ಸೂಕ್ತ. ಇವು ಅತ್ಯಂತ ಸ್ಟೈಲಿಶ್ ಮತ್ತು ಆರಾಮದಾಯಕ. ರೋಡ್ ಶೂಗಳನ್ನು ಹೆಚ್ಚು ನಯವಾದ ಮೇಲ್ಮೈಗಾಗಿ ವಿನ್ಯಾಸಗೊಳಿಸಲಾಗಿದೆ. ಆಫ್-ರೋಡ್ ಓಟಕ್ಕಾಗಿ, ನಿಮಗೆ ಕಡಿಮೆ ಕುಶನ್ ಇರುವ ಬೂಟುಗಳು ಬೇಕು, ಆದರೆ ಹೆಚ್ಚು ಹಿಡಿತ ಮತ್ತು ಬೆಂಬಲ ಇರಬೇಕು.
 

Tap to resize

ತೂಕವನ್ನು ಪರೀಕ್ಷಿಸಿ (check the weight)

ನಿಮ್ಮ ಬೂಟುಗಳ ತೂಕವು ಎಷ್ಟು ವ್ಯತ್ಯಾಸವನ್ನುಂಟು ಮಾಡುತ್ತದೆ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ. ಉದಾಹರಣೆಗೆ, ನೀವು ರನ್ನಿಂಗ್ ಶೂ (Running Shoes) ಖರೀದಿಸಲು ಹೊರಟರೆ, ಹೆಚ್ಚುವರಿ 100 ಗ್ರಾಂ ತೂಕ ಏನನ್ನೂ ಬದಲಾಯಿಸುವುದಿಲ್ಲ ಎಂದು ನೀವು ಭಾವಿಸಬಹುದು. ಆದರೆ ನಿಮ್ಮ ನಡಿಗೆಯ ಸಮಯ ಮತ್ತು ಸ್ಟೈಲ್ ನಲ್ಲಿ ಬದಲಾವಣೆ ಆಗುತ್ತೆ. ಹಾಗಾಗಿ ತೂಕದ ಬಗ್ಗೆ ಗಮನ ಇರಲಿ.

ಸ್ಟೈಲ್ ಬದಲು ಮೆಟೀರಿಯಲ್ ಬಗ್ಗೆ ಗಮನ ಇರಲಿ

ಅನೇಕ ಜನರು ಸ್ಟೈಲಿಶ್ ಆಗಿರುವ ಅಥವಾ ದುಬಾರಿ ಬೆಲೆ ನೋಡಿ ಶೂ ಖರೀದಿಸುತ್ತಾರೆ, ಆದರೆ ಅದನ್ನು ಧರಿಸಿದ ಮೇಲೆ ಸಮಸ್ಯೆ ಎದುರಿಸುತ್ತಾರೆ. ಹಾಗಾಗಿ ಸ್ಟೈಲ್ ಬದಲಿ ಮೆಟೀರಿಯಲ್ (material of shoes) ಕಡೆ ಗಮನ ಕೊಟ್ಟರೆ ಉತ್ತಮ. ವೇಗಕ್ಕಾಗಿ ತಯಾರಿಸಿದ ಎಲ್ಲಾ ಶೂಗಳು ಆರಾಮ ಮತ್ತು ಸಪೋರ್ಟ್ ನೀಡಲ್ಲ. ನೀವು ಟ್ರೆಂಡಿ ಪ್ರಾಡಕ್ಟ್ ಖರೀದಿಸಬಹುದು, ಅದು ಸುಂದರವಾಗಿರುತ್ತದೆ ಮತ್ತು ಬೆಲೆಯೂ ಕಡಿಮೆ. ಆದರೆ ಶಾಪಿಂಗ್ ಮಾಡುವಾಗ, ನಿಮ್ಮ ಗಮನ ಮೆಟೀರಿಯಲ್, ಕಂಫರ್ಟ್ ಮತ್ತು ಸಪೋರ್ಟ್ ಮೇಲೆ ಇರಬೇಕು ಹೊರತು ಅದರ ಸ್ಟೈಲ್ ಮೇಲೆ ಅಲ್ಲ.

ಟೆಕ್ನಾಲಾಜಿ ಬಗ್ಗೆ ತಿಳಿಯಿರಿ (know about technology)

ನೀವು ವಾರಕ್ಕೊಮ್ಮೆ ಹೊರಗೆ ಹೋಗುವವರಾಗಿದ್ದರೆ, ನೀವು ತುಂಬಾ ಆರಾಮದಾಯಕವಾದ ಆದರೆ ಉತ್ತಮವಾಗಿ ಕಾಣದ ಶೂಗಳನ್ನು ಖರೀದಿಸೋ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನೀವು ಪ್ರತಿದಿನ ಕೆಲಸಕ್ಕೆ ಹೋಗಲು ಶೂ ಧರಿಸುವವರಾದ್ರೆ, ಆ ಬಗ್ಗೆ ಯೋಚನೆ ಮಾಡಬೇಕು. ಅದಕ್ಕಾಗಿ ನೀವು ಟೆಕ್ನಾಲಾಜಿ ಬಗ್ಗೆ ತಿಳಿದಿದ್ದರೆ ಒಳಿತು. ಆ ಮೂಲಕ ನೀವು ಯಾವ ಶೂ ಉತ್ತಮವಾಗಿದೆ ಎನ್ನೋದನ್ನು ತಿಳಿಯಬಹುದು.

ನಕಲಿ ಬ್ರಾಂಡ್ಗಳಿಂದ ದೂರವಿರಿ (stay away from fake brand)

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಸಮಸ್ಯೆಯೆಂದರೆ ಅನೇಕ ನಕಲಿ ಬ್ರಾಂಡ್ಸ್ ಲಭ್ಯವಿವೆ. ಹಾಗಾಗಿ ಶೂಗಳನ್ನು ಖರೀದಿಸುವಾಗ ಜಾಗರೂಕರಾಗಿರಬೇಕು. ನೀವು ಬಾಕ್ಸ್, ಲೇಬಲ್ ನ ಗುಣಮಟ್ಟ, ಶೂ ಒಳಗಿನ ಟ್ಯಾಗ್ಸ್ ನೋಡಿ, ಬ್ರ್ಯಾಂಡ್ ನ ಲೇಬಲ್ ನ ಪ್ಲೇಸ್ ಮೆಂಟ್, ರಿಲೀಸ್ ಡೇಟ್, ಶೂ ಎಸ್ ಕೆಯುಗಳು ಮತ್ತು ಫ್ಯಾಕ್ಟರಿ ಕೋಡ್ ಬಗ್ಗೆ ತಿಳಿಯಿರಿ. ಈ ಎಲ್ಲಾ ವಿಷಯಗಳು ನಕಲಿ ಶೂಗಳನ್ನು ಖರೀದಿಸುವುದನ್ನು ತಡೆಯುತ್ತವೆ.

ಎಲ್ಲರೂ ಅದನ್ನೆ ಖರೀದಿಸುತ್ತಾರೆಂದು ನೀವು ಖರೀದಿ ಮಾಡಬೇಡಿ

ಪ್ರತಿಯೊಬ್ಬರೂ ಅದೇ ಶೂ ಖರೀದಿಸುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ನೀವು ಸಹ ಅದನ್ನೇ ಖರೀದಿಸಬೇಡಿ. ನಿಮ್ಮ ಸ್ವಂತ ಟ್ರೆಂಡ್ ಕಂಡುಕೊಳ್ಳಿ, ನಿಮ್ಮ ಅಗತ್ಯಗಳಿಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುವ ಮತ್ತು ನಿಮಗೆ ಸರಿಹೊಂದುವ ಶೂ ಹುಡುಕಿ.ಯಾವತ್ತೂ ಜಾಹಿರಾತು ನೋಡಿ ಅಥವಾ ಇನ್ಯಾರೋ ಖರೀದಿಸಿದರು ಎಂದು ನೀವು ಖರೀದಿಸಬೇಡಿ.

ಅಂಗಡಿಯಲ್ಲಿ ಶೂಗಳನ್ನು ಖರೀದಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳಿವೆ:
ಮಧ್ಯಾಹ್ನ ಬೂಟುಗಳನ್ನು ಖರೀದಿಸಿ. ನಿಮ್ಮ ಕಾಲುಗಳು ಹಗಲಿನಲ್ಲಿ ಹೆಚ್ಚು ಹಿಗ್ಗುತ್ತವೆ.
ಬೂಟುಗಳೊಂದಿಗೆ ನೀವು ಧರಿಸಲು ಇಷ್ಟಪಡುವ ಸಾಕ್ಸ್ ಕೂಡ ಧರಿಸಿ.
ನೀವು ನಿಂತಾಗ, ನಿಮ್ಮ ಕಾಲ್ಬೆರಳು ಮತ್ತು ಶೂನ ಒಳ ಅಂಚಿನ ನಡುವೆ ಕನಿಷ್ಠ ಕಾಲು ಭಾಗದಿಂದ ಅರ್ಧ ಇಂಚು ಜಾಗವಿದೆ ಎಂದು ಖಚಿತಪಡಿಸಿಕೊಳ್ಳಿ.

ಖರೀದಿಸುವ ಮೊದಲು ಸೋಲ್ ಮತ್ತು ಮೆಟೀರಿಯಲ್ ನ ಗುಣಮಟ್ಟವನ್ನು ಪರೀಕ್ಷಿಸಲು ಕೆಲವು ನಿಮಿಷಗಳ ಕಾಲ ಶೂಗಳನ್ನು ಧರಿಸಿ.
ಬೂಟುಗಳ ಮೇಲೆ ನಮೂದಿಸಲಾದ ಗಾತ್ರ ಮರೆತುಬಿಡಿ ಮತ್ತು ನಿಮ್ಮ ಪಾದಗಳ ಆರಾಮದ ಮಟ್ಟವನ್ನು ನಂಬಿರಿ.
ದೀರ್ಘ ನಡಿಗೆಯ ಸಮಯದಲ್ಲಿ ನಿಮ್ಮ ಪಾದಗಳಿಗೆ ಕಿರಿಕಿರಿ ಉಂಟುಮಾಡುವ ಟ್ಯಾಗ್ಸ್ ಮತ್ತು ಇತರ ವಸ್ತುಗಳನ್ನು ಪರಿಶೀಲಿಸಿ. ಆ ಬಳಿಕವೇ ಶೂ ಖರೀದಿಸಿ.
 

Latest Videos

click me!