Men’s Fashion : ಈ ಡ್ರೆಸ್ ನಿಮ್ಮ ಬಳಿ ಇದ್ರೆ ಚಳಿಗಾಲದಲ್ಲೂ ಸ್ಟೈಲಿಶ್ ಆಗಿ ಕಾಣುವಿರಿ

First Published Dec 8, 2022, 10:29 AM IST

ಚಳಿಗಾಲ ಬಂದ ತಕ್ಷಣ, ಜನರು ಚಳಿಯ ಜೊತೆ ತಮ್ಮ ಸ್ಟೈಲಿಂಗ್ ಸಹ ನೋಡಿಕೊಳ್ಳುತ್ತಾರೆ . ಹುಡುಗಿಯರು ಮಾತ್ರವಲ್ಲ, ಹುಡುಗರು ಸಹ ಚಳಿಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಲು ಬಯಸುತ್ತಾರೆ. ಚಳಿಗಾಲದ ಋತುವಿನಲ್ಲಿ ನೀವು ಸಹ ಸುಂದರವಾಗಿ ಕಾಣಲು ಬಯಸೋದಾದ್ರೆ, ಖಂಡಿತವಾಗಿಯೂ ಈ ಡ್ರೆಸಸ್ ಪ್ರಯತ್ನಿಸಿ. 
 

ಈಗಿನ ಕಾಲದಲ್ಲಿ, ಪ್ರತಿಯೊಬ್ಬರೂ ಸ್ಟೈಲಿಶ್ (stylish)  ಮತ್ತು ಫ್ಯಾಷನೆಬಲ್ ಆಗಿ ಕಾಣಲು ಬಯಸ್ತಾರೆ. ಅದು ಹುಡುಗ ಅಥವಾ ಹುಡುಗಿಯಾಗಿರಲಿ, ಇಂದಿನ ಯುಗದಲ್ಲಿ, ಪ್ರತಿಯೊಬ್ಬರೂ ತಮ್ಮನ್ನು ತಾವು ಅಪ್ಡೇಟ್ ಆಗಿಡಲು ಬಯಸ್ತಾರೆ. ಚಳಿಗಾಲ ಬಂದ ಕೂಡಲೇ, ಹುಡುಗಿಯರು ತಮ್ಮ ಸ್ಟೈಲಿಂಗ್ ಬಗ್ಗೆ ಚಿಂತಿಸಲು ಪ್ರಾರಂಭಿಸುತ್ತಾರೆ, ಹುಡುಗರು ಚಳಿ ತಪ್ಪಿಸುವ ಜೊತೆಗೆ ಸ್ಟೈಲಿಶ್ ಆಗಿ ಕಾಣಲು ಬಯಸ್ತಾರೆ. ಈ ದಿನಗಳಲ್ಲಿ, ಹುಡುಗರು ಸುಂದರವಾಗಿ ಕಾಣಲು ತಮ್ಮ ಬಗ್ಗೆ ಸಾಕಷ್ಟು ಗಮನ ಹರಿಸಲು ಪ್ರಾರಂಭಿಸಿದ್ದಾರೆ. 

ಚಳಿಗಾಲದಲ್ಲಿ ನೀವು ನಿಮ್ಮ ಸ್ವಂತ ಸ್ಟೈಲಿಂಗ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸೋದು ಮತ್ತು ಚಳಿ ತಪ್ಪಿಸೋದು ಬಹಳ ಮುಖ್ಯ. ಈ ಚಳಿಗಾಲದ ಋತುವಿನಲ್ಲಿ ನೀವು ಫ್ಯಾಷನೇಬಲ್ ಮತ್ತು ಟ್ರೆಂಡಿಯಾಗಿ(Trendy) ಉಳಿಯಲು ಬಯಸೋದಾದ್ರೆ, ನಿಮ್ಮ ವಾರ್ಡ್‌ರೋಬ್‌ನಲ್ಲಿ ಚಳಿಗಾಲಕ್ಕಾಗಿ ಕೆಲವು ವಿಶೇಷ ರೀತಿಯ ಉಡುಗೆಗಳನ್ನು ಇರಿಸಿಕೊಳ್ಳಿ.
 

ಟರ್ಟಲ್ ನೆಕ್(Turtle neck)
ಟರ್ಟಲ್ ನೆಕ್ ಸ್ವೆಟರ್ ಹುಡುಗಿಯರಲ್ಲಿ ದೀರ್ಘಕಾಲದಿಂದ ಸಾಕಷ್ಟು ಟ್ರೆಂಡಿಯಾಗಿವೆ. ಆದರೆ ಕೆಲವು ಸಮಯದಿಂದ, ಈ ಸ್ಟೈಲ್ ನ ಸ್ವೆಟರ್ ಹುಡುಗರಲ್ಲಿ ತುಂಬಾ ಜನಪ್ರಿಯವಾಗಿದೆ. ಇದನ್ನು ಧರಿಸೋದರಿಂದ ಅವರು ಆಕರ್ಷಕವಾಗಿ ಕಾಣುತ್ತಾರೆ, ಟರ್ಟಲ್ ನೆಕ್ ಸ್ವೆಟರ್ ತುಂಬಾ ಸ್ಟೈಲಿಶ್ ಲುಕ್ ನೀಡುತ್ತೆ. ಹಾಗಾಗಿ, ಈ ಚಳಿಗಾಲದಲ್ಲಿ ನಿಮ್ಮನ್ನು ಫ್ಯಾಷನಬಲ್ ಆಗಿ ಕಾಣುವಂತೆ ಮಾಡಲು ಬಯಸೋದಾದ್ರೆ, ಖಂಡಿತವಾಗಿಯೂ ನಿಮ್ಮ ವಾರ್ಡ್‌ರೋಬ್‌ನಲ್ಲಿ ಈ ವಿನ್ಯಾಸದ ಸ್ವೆಟರ್  ಸೇರಿಸಿ.

ಪಫರ್ ಜಾಕೆಟ್(Puffer jacket)
ಚಳಿಯನ್ನು ತಪ್ಪಿಸಲು ಪಫರ್ ಜಾಕೆಟ್ ಗಳನ್ನು ಬಳಸುವ ಸಮಯವೊಂದಿತ್ತು. ಆದರೆ ಈಗ ಈ ಜಾಕೆಟ್ ನಿಮ್ಮನ್ನು ಚಳಿಯಿಂದ ರಕ್ಷಿಸುವಲ್ಲಿ ಮತ್ತು ನಿಮ್ಮನ್ನು ಫ್ಯಾಷನೇಬಲ್ ಆಗಿ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.

ಪಫರ್ ಜಾಕೆಟ್ ನ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ, ಈಗ ಮಾರುಕಟ್ಟೆಯಲ್ಲಿ ಅನೇಕ ವಿನ್ಯಾಸ ಮತ್ತು ಬಣ್ಣದ ಪಫರ್ ಜಾಕೆಟ್ ಗಳು ಲಭ್ಯವಿವೆ. ಇದನ್ನು ಧರಿಸುವ ಮೂಲಕ, ನೀವು ಚಳಿಯನ್ನು ತಪ್ಪಿಸೋದು ಮಾತ್ರವಲ್ಲದೆ, ಸ್ಟೈಲಿಶ್ ಆಗಿಯೂ ಕಾಣುತ್ತೀರಿ. ಆದ್ದರಿಂದ ಈ ಚಳಿಗಾಲದ ಋತುವಿನಲ್ಲಿ ನೀವು ಸಹ ಸುಂದರವಾಗಿ ಕಾಣಲು ಬಯಸೋದಾದ್ರೆ, ಖಂಡಿತವಾಗಿಯೂ ಪಫರ್ ಜಾಕೆಟ್ ಪ್ರಯತ್ನಿಸಿ.

ಬೈಕರ್ ಜಾಕೆಟ್ (Biker jacket)
ಬೈಕರ್ ಜಾಕೆಟ್ ಹುಡುಗರಲ್ಲಿ ಟ್ರೆಂಡ್‌ ನಲ್ಲಿರುವ ಚಳಿಗಾಲದ ಜಾಕೆಟ್ ಗಳಲ್ಲಿ ಒಂದಾಗಿದೆ. ಈ ಜಾಕೆಟ್ ಧರಿಸುವ ಮೂಲಕ, ಚಳಿಯಿಂದ ತಪ್ಪಿಸಿಕೊಳ್ಳಬಹುದು ಮತ್ತು ಸುಂದರವಾಗಿ ಕಾಣಬಹುದು.

ಬೈಕರ್ ಜಾಕೆಟ್ ನ ವಿಶೇಷವೆಂದರೆ ಅದನ್ನು ಪ್ರತಿಯೊಂದು ಸಂದರ್ಭದಲ್ಲಿಯೂ ಧರಿಸಬಹುದು. ಪಾರ್ಟಿಯಿಂದ(Party) ಫಾರ್ಮಲ್ ಲುಕ್ ವರೆಗೆ,  ಬೈಕರ್ ಜಾಕೆಟ್ ಅನ್ನು ಎಲ್ಲಿ ಬೇಕಾದರೂ ಹಾಕಬಹುದು. ಹಾಗಾಗಿ, ಈ ಚಳಿಗಾಲದಲ್ಲಿ ಸ್ಟೈಲಿಶ್ ಲುಕ್ ಪಡೆಯಲು ನಿಮ್ಮ ವಾರ್ಡ್‌ರೋಬ್‌ನಲ್ಲಿ ಬೈಕರ್ ಜಾಕೆಟ್  ಇರಿಸಿ.

ಥರ್ಮಲ್ ಇನ್ನರ್ ವೇರ್(Thermal inner wear)
ಇತ್ತೀಚೆಗೆ, ಚಳಿಯನ್ನು ತಪ್ಪಿಸಲು ಥರ್ಮಲ್ ಒಳ ಉಡುಪುಗಳ ಬಳಕೆಯು ಗಮನಾರ್ಹವಾಗಿ ಹೆಚ್ಚಾಗಿದೆ. ಥರ್ಮಲ್ ವೇರ್ ಧರಿಸೋದರಿಂದ ನೀವು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತೆ. ಯಾವುದೇ ಚಳಿಗಾಲದ ಉಡುಗೆಯಿಲ್ಲದೆ ನಿಮ್ಮ ಸಾಮಾನ್ಯ ಉಡುಪಿನಲ್ಲೂ ಸಹ ಚಳಿ ಆಗೋದರಿಂದ ತಪ್ಪಿಸುತ್ತೆ. ಇದನ್ನು ಧರಿಸಿದ್ರೆ, ನೀವು ಪ್ರತಿ ಲುಕ್ ನಲ್ಲಿ ಆರಾಮದಾಯಕ ಮತ್ತು ಸುಂದರವಾಗಿ ಕಾಣುತ್ತೀರಿ.

ಮಫ್ಲರ್ (Muffler)
ಸುಂದರವಾಗಿ ಕಾಣಲು ಮತ್ತು ಚಳಿ ತಪ್ಪಿಸಲು ಮಫ್ಲರ್ ಉತ್ತಮ ಆಯ್ಕೆಯಾಗಿದೆ. ಅದರ ವಿಶೇಷತೆಯೆಂದರೆ, ಒಂದೇ ಮಫ್ಲರ್ ಅನ್ನು ನೀವು ವಿಭಿನ್ನ ರೀತಿಯಲ್ಲಿ ಸ್ಟೈಲ್ ಮಾಡೋ ಮೂಲಕ ಸುಂದರವಾದ ಲುಕ್ ನಿಮ್ಮದಾಗುತ್ತೆ. ಇದರೊಂದಿಗೆ, ಶೀತದಿಂದ ನಿಮ್ಮನ್ನು ರಕ್ಷಿಸಲು ಇದು ತುಂಬಾ ಸಹಾಯ ಮಾಡುತ್ತೆ .

click me!