ಫೇಶಿಯಲ್ ನಂತರ ಈ ತಪ್ಪನ್ನೆಲ್ಲಾ ಮಾಡಬೇಡಿ, ಸ್ಕಿನ್ ಹಾಳಾಗುತ್ತೆ!

First Published Dec 13, 2022, 4:33 PM IST

ಅನೇಕ ಮಹಿಳೆಯರು ಮದುವೆ ಪಾರ್ಟಿ ಅಥವಾ ಹೊಸ ವರ್ಷದ ಕ್ರಿಸ್ ಮಸ್ ಆಚರಣೆಗೆ ಮುಂಚಿತವಾಗಿ ಫೇಶಿಯಲ್ ಮಾಡಿಸುತ್ತಾರೆ. ಆದರೆ ಫೇಶಿಯಲ್ ಮಾಡಿದ ನಂತರ, ನೀವು ಈ ಕೆಲಸಗಳನ್ನು ಎಂದಿಗೂ ಮಾಡಬಾರದು. ಮಾಡಿದ್ರೆ ಮುಖದ ಹೊಳಪು ದೂರ ಆಗೋದು ಖಂಡಿತಾ. 

ಧೂಳು, ಪೊಲ್ಲ್ಯೂಷನ್(Pollution) ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ, ಚರ್ಮವು ನಿಸ್ತೇಜವಾಗುತ್ತೆ. ಅಕಾಲಿಕವಾಗಿ ರಿಂಕಲ್ಸ್ ಮೂಡುತ್ತೆ. ಹಾಗಾಗಿ, ಮಹಿಳೆಯರು ಹೆಚ್ಚಾಗಿ ಚರ್ಮಕ್ಕೆ ಹೊಳಪು ನೀಡಲು ಫೇಶಿಯಲ್ ಮಾಡಿಸುತ್ತಾರೆ.  ವಿಶೇಷವಾಗಿ ಮದುವೆಯ ಸೀಸನ್ ನಡೆಯುತ್ತಿರುವಾಗ ಮತ್ತು ಮುಂಬರುವ ದಿನಗಳಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪಾರ್ಟಿಗಳು ಸಹ ನಡೆಯಲಿವೆ, ಇದಕ್ಕೂ ಮೊದಲು, ಅನೇಕ ಮಹಿಳೆಯರು ತಮ್ಮ ಮುಖ ಹೊಳೆಯುವಂತೆ ಮಾಡಲು ದುಬಾರಿ ಫೇಶಿಯಲ್ ಸಹ ಮಾಡಿಸಿಕೊಳ್ಳುತ್ತಾರೆ.

ಫೇಶಿಯಲ್ (Facial) ಮಾಡಿಸೋದೇನೋ ಸರಿ. ಆದರೆ ನಂತರ, ಕೆಲವು ತಪ್ಪುಗಳನ್ನು ಮಾಡಬಾರದು, ಇದರಿಂದ ಮುಖದ ಹೊಳಪು ಕಡಿಮೆಯಾಗುತ್ತೆ. ಚರ್ಮ ಡ್ರೈ ಮತ್ತು ಡಲ್ ಆಗಿ ಕಾಣುತ್ತೆ. ಹಾಗಾಗಿ, ಫೇಶಿಯಲ್ ನಂತರ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ.
 

ಸೂರ್ಯನಿಂದ(Sun) ದೂರ ಇರಿ

ನೀವು ಫೇಶಿಯಲ್ ಮಾಡಿಸಿದರೆ, ಒಂದು ಅಥವಾ ಎರಡು ದಿನಗಳವರೆಗೆ ಬಿಸಿಲಿನಲ್ಲಿ ಹೊರಗೆ ಹೋಗದಿರಲು ಪ್ರಯತ್ನಿಸಿ. ಯಾವುದೇ ಕೆಲಸ ಮಾಡಿದರೂ, ಮಧ್ಯಾಹ್ನ 12:00 ಗಂಟೆ ಮೊದಲು ಅದನ್ನು ಮಾಡಿ ಮತ್ತು ಸಂಜೆ 5:00 ರ ನಂತರ ಮನೆಯಲ್ಲಿ ಸನ್ ಸ್ಕ್ರೀನ್ ಬಳಸಿ, ಏಕೆಂದರೆ ಫೇಶಿಯಲ್ ಮಾಡಿದ ನಂತರ, ಚರ್ಮದ ರಂಧ್ರಗಳು ತೆರೆಯುತ್ತವೆ ಮತ್ತು ಸೂರ್ಯನ ಬಲವಾದ ಕಿರಣಗಳು ಚರ್ಮದ ಮೇಲೆ ಬಿದ್ದಾಗ, ಅದು ಕಪ್ಪು ಬಣ್ಣಕ್ಕೆ ತಿರುಗುತ್ತೆ.

ಮೇಕಪ್ ನಿಂದ(Makeup) ದೂರವಿರಿ

ಫೇಶಿಯಲ್ ನಂತರ, ನೀವು ಕನಿಷ್ಠ 2 ರಿಂದ 3 ದಿನಗಳವರೆಗೆ ನಿಮ್ಮ ಮುಖಕ್ಕೆ ಯಾವುದೇ ಮೇಕಪ್ ಉತ್ಪನ್ನ ಹಚ್ಚಬಾರದು. ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ ಮತ್ತು ನೀವು ಮುಖಕ್ಕೆ ಮೇಕಪ್ ಹಚ್ಚಿದಾಗ, ಮೇಕಪ್ ಅದರಲ್ಲಿ ಸಂಗ್ರಹವಾಗಬಹುದು. ಇದು ಮೊಡವೆ ಮತ್ತು ವೈಟ್ ಹೆಡ್ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಯಾವುದೇ ಪಾರ್ಟಿ ಅಥವಾ ಮದುವೆಗೆ ಹೋಗುವ 5 ರಿಂದ 6 ದಿನಗಳ ಮೊದಲು ಫೇಶಿಯಲ್ ಮಾಡಿಸಿಕೊಳ್ಳಿ.

ಸೋಪ್ ಅಥವಾ ಫೇಸ್ ವಾಶ್ (Facewash)ಬಳಸಬೇಡಿ.

ಫೇಶಿಯಲ್ ಮಾಡಿದ ನಂತರ, ನೀವು ಸಾಬೂನು ಅಥವಾ ಫೇಸ್ ವಾಶ್ ಬಳಸಬಾರದು, ಯಾಕಂದ್ರೆ ಫೇಸ್ ವಾಶ್ ಬಳಸಿದ್ರೆ, ಫೇಶಿಯಲ್ ಮುಖಕ್ಕೆ ಪರಿಣಾಮಕಾರಿಯಾಗೋದಿಲ್ಲ. ಹಾಗಾಗಿ, 1-2 ದಿನಗಳವರೆಗೆ ಖಾಲಿ ನೀರಿನಿಂದ ಮುಖ ತೊಳೆಯಿರಿ ಮತ್ತು ಲೈಟಾಗಿ ಒರೆಸಿ ಮತ್ತು ಒಣಗಿಸಿ. 

ಸ್ಕಿನ್ ಕೇರ್ ಪ್ರಾಡಕ್ಟ್ಸ್(Skin care products) ತಪ್ಪಿಸಿ

ಫೇಶಿಯಲ್ ನಂತರ ಮುಖಕ್ಕೆ ಕೆಮಿಕಲ್ ಯುಕ್ತ ಸ್ಕಿನ್ ಕೇರ್ ಪ್ರಾಡಕ್ಟ್ಸ್ ಹಚ್ಚಬೇಡಿ, ಯಾಕಂದ್ರೆ ಫೇಶಿಯಲ್ ನಂತರ, ನಿಮ್ಮ ಮುಖ ಸ್ವಚ್ಛವಾಗಿ ಮತ್ತು ತೇವಾಂಶದಿಂದ ಕೂಡಿರುತ್ತೆ. ಹಾಗಾಗಿ, ನಿಮಗೆ ಯಾವುದೇ ರೀತಿಯ ರಾಸಾಯನಿಕ ಉತ್ಪನ್ನದ ಅಗತ್ಯವಿಲ್ಲ. ಚರ್ಮವನ್ನು ಹೈಡ್ರೇಟ್ ಮಾಡಲು ನೀವು ಅಲೋವೆರಾ ಜೆಲ್ ಹಚ್ಚಬಹುದು.

ಒತ್ತಡ (Stress) ತೆಗೆದುಕೊಳ್ಳಬೇಡಿ

ಹೌದು, ಫೇಶಿಯಲ್ ಪರಿಣಾಮ ನಿಮ್ಮ ಮುಖದ ಮೇಲೆ ಮಾತ್ರ ಕಂಡುಬರುತ್ತೆ ಮತ್ತು ನೀವು ಒತ್ತಡದಿಂದ ಮುಕ್ತರಾದಾಗ ಮಾತ್ರ ನಿಮ್ಮ ಚರ್ಮವು ಹೊಳೆಯುತ್ತೆ. ನೀವು ಹೆಚ್ಚು ಒತ್ತಡ ತೆಗೆದುಕೊಂಡರೆ, ಆಗ ಮುಖದ ಗ್ಲೋ ಕಡಿಮೆಯಾಗುತ್ತೆ ಮತ್ತು ಚರ್ಮವು ಮಂದ ಮತ್ತು ಡಲ್ ಆಗಿ ಕಾಣುತ್ತೆ.
 

click me!