ಜೀನ್ಸ್ ಪ್ಯಾಂಟ್ ಯಾರು ಧರಿಸೋಲ್ಲ ಹೇಳಿ? ಅದಕ್ಕೆ ಈ ವಿಷ್ಯ ಗೊತ್ತಿರಲಿ

First Published | Jul 3, 2022, 2:29 PM IST

ಸರ್ವಕಾಲಕ್ಕೂ ಒಪ್ಪುವ ಫ್ಯಾಷನ್ ಜೀನ್ಸ್ (Jeans). ಹೆಣ್ಣು, ಗಂಡಲ್ಲದೇ, ವಯಸ್ಸಿನ ಭೇದವಿಲ್ಲದೆಯೂ ತೊಡುವ ಈ ಉಡುಗೆ (Dress) ಎಲ್ಲೆಡೆ ಫೇಮಸ್. ಆದರೆ, ಚಿಕ್ಕದಾಗಿಯೋ, ಫ್ಯಾಷನ್ (Fashion) ಬದಲಾಗಿಯೋ ಹಾಕಿದ ಬಟ್ಟೆ ಮತ್ತೊಮ್ಮೆ ಹಾಕಲು ಆಗೋಲ್ಲ. ಹಾಗಾಗಿ ಹಾಳಾದ ಈ ಜೀನ್ಸ್ ಅನ್ನು ಹೇಗೆಗೆಲ್ಲಾ ಬಳಸಬಹುದು ಎಂಬುದನ್ನು ಗೊತ್ತು ಮಾಡಿಕೊಳ್ಳುವುದು ಅತ್ಯಗತ್ಯ. 

- ಜೀನ್ಸ್ ಬಳಸದೇ ಹೋದರೆ ಎಸೆಯೋ ಮುನ್ನ ಯೋಚಿಸಿ. ಅದನ್ನು ಹಲವು ರೀತಿಯಲ್ಲಿ ಮರು ಬಳಕೆ (Re-Use) ಮಾಡಬಹುದು. ಕೆಲವು ಸುಲಭ ತಂತ್ರಗಳ ಮೂಲಕ ಈ ಬಳಸದ ಜೀನ್ಸ್ ಬಹು ಉಪಯೋಗಿಯಾಗಬಹುದು. ಬ್ಯಾಗ್ ಮಾಡಬಹುದು. ಕಟ್ ಮಾಡಿ ದುಪ್ಪಟ್ಟಾವೂ ಮಾಡಬಹುದು. 

- ಟೈಟ್ ಆಗ್ತಿದ್ಯಾ ಜೀನ್ಸ್? : 
ಲೂಸ್ ಆದ ಬಟ್ಟೆ ಟೈಟ್ ಮಾಡೋದು ಗೊತ್ತು. ಆದರೆ ಟೈಟ್ ಆದ ಜೀನ್ಸ್ ಲೂಸ್ ಮಾಡಲೂ ಇದೆ ಟೆಕ್ನಿಕ್. ಹೇಗೆ? ಜೀನ್ಸ್ ಟೈಟ್ ಆದರೆ ಲೂಸ್ ಮಾಡಲು ಇದೆ ಸೊಲ್ಯೂಷನ್. ಹೇಗೆ?  

Latest Videos


- ಹ್ಯಾಂಗರ್‌ನಲ್ಲಿ ನೇತು ಹಾಕಿ. ಸ್ಪ್ರೇ ಬಾಟಲಿಯಲ್ಲಿ ತುಂಬಾ ಬಿಸಿಯಾದ ನೀರು ತುಂಬಿಸಿ. ಪ್ಯಾಂಟಿನ ಸೊಂಟ, ತೊಡೆ ಸುತ್ತ ನೀರನ್ನು ಸಿಂಪಡಿಸಿ. ಜೀನ್ಸ್ ಅನ್ನು ಹಿಗ್ಗಿಸಿ, ಮತ್ತೆ ಹ್ಯಾಂಗರ್‌ನಲ್ಲಿ ನೇತು ಹಾಕಿ. 

- ಒಂದಿಪ್ಪತು ನಿಮಿಷ ಹಾಗೆಯೇ ಬಿಟ್ಟು ಆ ಪ್ಯಾಂಟ್ ಹಾಕ್ಕೊಂಡು ನೋಡಿ. ಆದರೂ ಟೈಟ್ ಆಗುತ್ತಿದೆ ಅನಿಸಿದರೆ ಇದೇ ಟ್ರಿಕ್ ಮತ್ತೆ ಮಾಡಿ. ಪ್ಯಾಂಟ್ ಸ್ವಲ್ಪನಾದರೂ ಲೂಸ್ ಆಗೋದು ಗ್ಯಾರಂಟಿ. 

ತೂಕ ಕಳೆದು ಕೊಂಡಿದ್ದೀರಾ?
- ಜೀನ್ಸ್ ಟೈಟ್ ಆದರೆ ಲೂಸ್ ಮಾಡಿಕೊಳ್ಳುವುದ ಹೇಳಿದ್ವಿ, ಈಗ ಟೈಟ್ ಮಾಡೋದು ಹೇಗೆ ಹೇಳ್ತೇವೆ ಕೇಳಿ. ಸಾಮಾನ್ಯವಾಗಿ ಎಲ್ಲರಿಗೂ ಆಫೀಸ್ ಶುರುವಾಯಿತು. ಮನೆಯಲ್ಲಿದ್ದು ದಪ್ಪಗೇ ಊದಿ ಕೊಂಡಿರೋರು ತೂಕ ಕಳೆದುಕೊಳ್ಳುತ್ತಿದ್ದಾರೆ. ಬಟ್ಟೆ ಎಲ್ಲಾ ಲೂಸ್ ಲೂಸ್ ಆಗುತ್ತಿದ್ಯಾ? ಇದಕ್ಕೆ ಬೇರೆ ಏನೂ ಮಾರ್ಗವಿಲ್ಲ. ಟೈಲರ್ ಹತ್ತಿರ ಸೊಂಟ ಹಿಡಿಸಿಕೊಂಡು ಬರಬೇಕಷ್ಟೆ.  ದೊಗಲೆ ದೊಗಲೆ ಜೀನ್ಸ್ ಹಾಕಿ ಕೊಳ್ಳುವುದು ಒಂಥರಾ ಫ್ಯಾಷನ್. 

ಜೀನ್ಸ್ ಬಣ್ಣ ಕಳೆದುಕೊಂಡರೇನು ಮಾಡಬೇಕು? 
ಬೇರೆ ಬಣ್ಣ ಹಾಕಿಸಬಹುದು. ನಿಮಗೆ ಯಾವ ಬಣ್ಣ ಹೊಂದುತ್ತೋ ಹಾಗೆ ಹಾಕಿಸಿಕೊಳ್ಳಬಹುದು. ಡಲ್ ಆಗಿರೋ ಜೀನ್ಸ್ ಹೊಸ ಫ್ಯಾಷನ್ ಬಿಡಿ. 

ನಿಮಗೆ ಗೊತ್ತಾ? ಮನೆಯಲ್ಲಿಯೇ ಜೀನ್ಸ್ ಕಲರ್ ಬದಲಾಯಿಸಿಕೊಳ್ಳಬಹುದು. ಮಾರ್ಕೆಟ್‌ನಲ್ಲಿ ಸಿಗೋ ಬಣ್ಣ ತಂದು, ಬಿಸಿನೀರಲ್ಲಿ ಮಿಕ್ಸ್ ಮಾಡಿ, ನೆನಸಿಟ್ಟರೆ ಸರಿ. ಬಣ್ಣ ಬದಲಾಗುತ್ತೆ. 

ಬಣ್ಣ ಹಾಕುವ ಮೊದಲು ಜೀನ್ಸ್ ಪ್ಯಾಂಟನ್ನ ಸ್ವಚ್ಛವಾಗಿ ಒಗೆದಿರಿ. ಸ್ವಲ್ಪ ಹೊತ್ತಿನ ನಂತರ ನೀರಿನಿಂದ ತೆಗೆದು ಒಣಗಲು ಬಿಡಿ. ಹೊಸದರಂತಾಗುತ್ತೆ ಹಳೇ ಪ್ಯಾಂಟ್. ಏನೇ ಹೇಳಿ ಈ ಜೀನ್ಸ್ ಇದ್ದರೆ ಬೆಸ್ಟ್. ಎಷ್ಟು ಸಾರಿ ಬೇಕಾದರೂ ಒಗೆಯದೇ ಬಳಸಬಹುದು. ಮಾಸಿದರೂ ಫ್ಯಾಷನ್, ಕಲರ್‌ಫುಲ್ ಆಗಿದ್ದರೂ ಟ್ರೆಂಡ್. ಅವೆಲ್ಲ ಇರಲಿ, ಹರಿದು ಹೋದರೂ ಹೊಸ ಫ್ಯಾಷನ್. 

ಅಕಸ್ಮಾತ್ ಗಿಡ್ಡವಾಯಿತೋ ತಲೆ ಬಿಸಿ ಬೇಡ. ಗಿಡ್ಡ ಪ್ಯಾಂಟ್ ಹಾಕಿದರೂ ಏನೋ ಆಗೋಲ್ಲ. ಹರಿದರಂತೂ ಅದೂ ಹೊಸ ಫ್ಯಾಷನ್. ಒಟ್ಟಿನಲ್ಲಿ ಸರ್ವಕಾಲಕ್ಕೂ, ಸರ್ವರಿಗೂ ಈ ಜೀನ್ಸ್ ಸೂಟ್ ಆಗುತ್ತೆ. ಹೇಗಿದ್ದರೂ ಹೊಸ ಟ್ರೆಂಡ್ ಸೃಷ್ಟಿ ಮಾಡಿ ಬಿಡುತ್ತೆ.

click me!