ನೀವು ಏನಾದರು ಫಂಕ್ಷನ್ ಗೆ ರೆಡಿಯಾಗಲು ಅಲ್ಮೆರಾವನ್ನು ಎಷ್ಟು ಬಾರಿ ತೆರೆಯುತ್ತೀರೋ, ಅಷ್ಟು ಹೆಚ್ಚಾಗಿ ಧರಿಸಲು ಏನೂ ಇಲ್ಲ ಎಂದು ತೋರುತ್ತದೆ ಅಲ್ವಾ?. ಇದು ಬಹುತೇಕ ಪ್ರತಿಯೊಬ್ಬ ಹುಡುಗಿಯ ಸಮಸ್ಯೆಯಾಗಿದೆ. ಆದರೆ ನೀವು ಈ ಪ್ರತಿದಿನದ ತೊಂದರೆಗಳನ್ನು ತಪ್ಪಿಸಲು ಮತ್ತು ಸ್ಟೈಲಿಶ್ ಆಗಿ ಕಾಣಲು ಬಯಸಿದರೆ, ಖಂಡಿತವಾಗಿಯೂ ನಿಮ್ಮ ವಾರ್ಡ್ರೋಬ್ನಲ್ಲಿ ಕೆಲವು ವಿಷಯಗಳನ್ನು ಸೇರಿಸಿ. ಅವು ಎಂದಿಗೂ ಔಟ್ ಆಫ್ ಟ್ರೆಂಡ್ (out pf trend) ಆಗಲೇ ಇಲ್ಲ. ಇದನ್ನ ನೀವು ಯಾವಾಗ ಬೇಕಾದರೂ ಧರಿಸಬಹುದು. ಅವುಗಳ ಬಗ್ಗೆ ನೋಡೋಣ..
ಸೀರೆ: ಸಾಂಪ್ರದಾಯಿಕ ಉಡುಗೆಯಲ್ಲಿ (traditional dress) ಯಾವುದನ್ನು ಧರಿಸಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಕಣ್ಣು ಮುಚ್ಚಿ, ಸೀರೆಯನ್ನು ಆಯ್ಕೆ ಮಾಡಿ. ಇದು ಶತಮಾನಗಳಿಂದ ಮಹಿಳೆಯರ ಟಾಪ್ ಲಿಸ್ಟ್ ನಲ್ಲಿದೆ. ಸ್ಟೈಲಿಶ್ ಬ್ಲೌಸ್ ಜೊತೆ ಸಿಂಪಲ್ ಸೀರೆ ಧರಿಸುವ ಮೂಲಕ ನೀವು ಮಾಡರ್ನ್ ಲುಕ್ ಪಡೆಯಬಹುದು.
ಡೆನಿಮ್ ಜಾಕೆಟ್ (Denim Jacket): ಡೆನಿಮ್ ಜಾಕೆಟ್ ಗಳು ಪುರುಷರು ಮಾತ್ರವಲ್ಲದೆ ಮಹಿಳೆಯರ ಸ್ಟೈಲಿಂಗ್ ನ ಪ್ರಮುಖ ಭಾಗವಾಗಿದೆ. ಅದು ಎಂದಿಗೂ ಔಟ್ ಆಫ್ ಟ್ರೆಂಡ್ ಆಗಲಿಲ್ಲ. ಜೀನ್ಸ್ ನಿಂದ ಹಿಡಿದು ಡ್ರೆಸ್ ವರೆಗೆ ನೀವು ಅದನ್ನು ಯಾವುದೇ ಉಡುಗೆ ಜೊತೆ ಧರಿಸಬಹುದು. ಇದು ಸ್ಟೈಲಿಶ್ ಜೊತೆಗೆ ಟ್ರೆಂಡಿ ಲುಕ್ ನೀಡುತ್ತೆ. .
ಪೆನ್ಸಿಲ್ ಸ್ಕರ್ಟ್ (Pencil Skirt): ಪೆನ್ಸಿಲ್ ಸ್ಕರ್ಟ್ ಇಲ್ಲಿವರೆಗೆ ಯಾವತ್ತೂ ಔಟ್ ಆಫ್ ಫ್ಯಾಷನ್ ಆದದ್ದೇ ಇಲ್ಲ. ಆದ್ದರಿಂದ ಅದನ್ನು ನಿಮ್ಮ ವಾರ್ಡ್ ರೋಬ್ ನಲ್ಲಿ ಯಾವಾಗಲೂ ಇರಿಸಿ. ನೀವು ಅವುಗಳನ್ನು ಟಿ-ಶರ್ಟ್ ಗಳಿಗೆ ಮತ್ತು ಬ್ಲೇಜರ್ ಗಳಿಗೆ ಅಥವಾ ಕ್ಯಾಶುವಲ್ ಶರ್ಟ್ ಗಳೊಂದಿಗೆ ಕಂಬೈನ್ ಮಾಡಿದ್ರೆ ಚೆನ್ನಾಗಿ ಕಾಣುತ್ತೆ.
ಬ್ಲೇಜರ್ (Blazer): ಚಳಿಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲಿಯೂ ಸಹ ಯಾವುದೇ ಉಡುಗೆಗಳೊಂದಿಗೆ ಅವುಗಳನ್ನು ಕ್ಯಾರಿ ಮಾಡುವ ಮೂಲಕ ನೀವು ನಿಮಿಷಗಳಲ್ಲಿ ನಿಮ್ಮ ಲುಕ್ ಬದಲಾಯಿಸಬಹುದು. ಇದು ನಿಮಗೆ ಮಾಡರ್ನ್ ಲುಕ್ ನೀಡುವುದಲ್ಲದೆ, ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತೆ.
ಸ್ಟೋಲ್ (Stoles): ಸ್ಕಾರ್ಫ್ ಗಳು ಅಥವಾ ಸ್ಟೋಲ್ ಗಳನ್ನು ವಾರ್ಡ್ ರೋಬ್ ನಲ್ಲಿ ಇಡಬೇಕು ಏಕೆಂದರೆ ಅವುಗಳನ್ನು ಸುಲಭವಾಗಿ ಯಾವುದೇ ಸಾಂಪ್ರದಾಯಿಕ, ಪಾಶ್ಚಿಮಾತ್ಯ ಅಥವಾ ಇಂಡೋ ವೆಸ್ಟರ್ನ್ ನೊಂದಿಗೆ ಮಿಕ್ಸ್ ಆಂಡ್ ಮ್ಯಾಚ್ ಮಾಡಬಹುದು. ಅಲ್ಲದೇ ಇದು ಎಲ್ಲಾ ಸೀಸನ್ ನಲ್ಲೂ ನಿಮಗೆ ಸ್ಟೈಲಿಶ್ ಲುಕ್ ನೀಡುತ್ತೆ.
ಸ್ಟ್ರೈಪ್ ಡ್ರೆಸ್ (Stripe Dress): ಪೋಲ್ಕಾ ಚುಕ್ಕೆಗಳಂತೆ, ಪಟ್ಟೆಗಳು ಅಥವಾ ಸ್ಟ್ರೈಪ್ ಡ್ರೆಸ್ ಸಹ ಟ್ರೆಂಡಿ ಮತ್ತು ಹಾಟ್ ಸ್ಟೈಲ್ ಮತ್ತು ಮಹಿಳೆಯರ ನೆಚ್ಚಿನ ಡ್ರೆಸ್ ಗಳ ಲಿಸ್ಟ್ ನಲ್ಲಿ ಸೇರಿವೆ. ಇಂದಿಗೂ, ಮಹಿಳೆಯರು ಪೋಲ್ಕಾ ಡಾಟ್ಸ್ ಉಡುಪುಗಳು, ಶರ್ಟ್ ಗಳು ಮತ್ತು ಕುರ್ತಿಗಳನ್ನು ಧರಿಸುವುದನ್ನು ನೀವು ನೋಡುತ್ತೀರಿ.
ಜೀನ್ಸ್ (Jeans): ಜೀನ್ಸ್ ಅಂದರೆ ಡೆನಿಮ್ ಎಂದಿಗೂ ಫ್ಯಾಷನ್ ನಿಂದ ಹೊರಗುಳಿಯುವುದಿಲ್ಲ. ಹೌದು, ಡೆನಿಮ್ ಕಟ್ ಮತ್ತು ಶೈಲಿ ಖಂಡಿತವಾಗಿಯೂ ಸಮಯದೊಂದಿಗೆ ಬದಲಾಗುತ್ತದೆ. ಕೆಲವೊಮ್ಮೆ ಬ್ಯಾಗಿ, ಕೆಲವೊಮ್ಮೆ ಬೂಟ್ ಕಟ್, ಕೆಲವೊಮ್ಮೆ ಸ್ಲಿಮ್ ಫಿಟ್, ಕೆಲವೊಮ್ಮೆ ತೆಳ್ಳಗೆ ಮತ್ತು ಕೆಲವೊಮ್ಮೆ ನೇರವಾಗಿ ಹೀಗೆ ಹಲವಾರು ಡಿಸೈನ್ ನಲ್ಲಿ ಬರುತ್ತೆ. ಆದರೆ ಎಲ್ಲವೂ ಎಲ್ಲಾ ಕಾಲದಲ್ಲೂ ಟ್ರೆಂಡ್ ನಲ್ಲಿರುತ್ತೆ.
ಎಲ್ಬಿಡಿ (LBD : Little Black Dress): ಪಾರ್ಟಿಗೆ ಅಥವಾ ಡಿನ್ನರ್ ಡೇಟ್ ಗೆ ಹೋಗಲು ಪ್ಲ್ಯಾನ್ ಮಾಡಿದ್ದು, ಈ ಸ್ಪೆಷಲ್ ದಿನದಂದು ನೀವು ಏನನ್ನು ಧರಿಸಬೇಕು ಎಂದು ಯೋಚಿಸುತ್ತಿದ್ದರೆ, ಆಗ LBD ಅಂದರೆ ಲಿಟಲ್ ಬ್ಲ್ಯಾಕ್ ಡ್ರೆಸ್ ಅನ್ನು ಆರಿಸಿ. ಹೌದು ಪಾರ್ಟಿಗಳಲ್ಲಿ ಮಿಂಚಲು ಬ್ಲ್ಯಾಕ್ ಡ್ರೆಸ್ ಪರ್ಫೆಕ್ಟ್ ಆಗಿದೆ. ನೀವು ಮಿನಿ ಸ್ಕರ್ಟ್ ಹಾಕಬಹುದು ಅಥವಾ, ಬ್ಲ್ಯಾಕ್ ಡ್ರೆಸ್ ಕೂಡ ಧರಿಸಬಹುದು.
ಸ್ಟ್ರೈಟ್ ಕುರ್ತಿ (Straight Kurti): ಅನಾರ್ಕಲಿಗಳು ಮತ್ತು ಗೌನ್ ಗಳ ಫ್ಯಾಷನ್ ಕೆಲವೇ ವರ್ಷಗಳಷ್ಟು ಹಳೆಯದಾಗಿದೆ, ಜೊತೆಗೆ ಅವು ಈಗ ಟ್ರೆಂಡ್ ನಿಂದ ಹೊರಗುಳಿದಿವೆ. ಆದರೆ ಸ್ಟ್ರೈಟ್ ಕುರ್ತಿಗಳ ಫ್ಯಾಷನ್ ಇನ್ನೂ ಇದೆ. ಇದು ಯಾವತ್ತೂ ಔಟ್ ಆಫ್ ಫ್ಯಾಶನ್ ಆಗೋದೆ ಇಲ್ಲ. ಅದರಲ್ಲೂ ಕಪ್ಪು, ಬಿಳಿ ಅಥವಾ ಪ್ರಿಂಟೆಡ್ ಸ್ಟ್ರೈಟ್ ಕುರ್ತಿಗಳು ಯಾವಾಗಲೂ ಟ್ರೆಂಡಿಯಾಗಿ ಕಾಣುತ್ತವೆ.
ಸ್ವೆಟ್ ಶರ್ಟ್ (Sweat Shirt): ಸ್ವೆಟ್ ಶರ್ಟ್ ಗಳು ಚಳಿಗಾಲದಲ್ಲಿ ಮಾತ್ರ ಸಹಾಯಕ್ಕೆ ಬರುತ್ತವೆ ಅನ್ನೋದು ನಿಜಾ, ಆದರೆ ಅವು ಯಾವತ್ತೂ ಔಟ್ ಆಫ್ ಟ್ರೆಂಡ್ ಆಗೋದೆ ಇಲ್ಲ. ಅವುಗಳನ್ನು ಕಾಲೇಜಿನಿಂದ ಕಚೇರಿಗೆ, ಟ್ರಿಪ್ ನಿಂದ ಹಿಡಿದು ಪಾರ್ಟಿಗಳವರೆಗೆ ಎಲ್ಲಿಯಾದರೂ ಕೊಂಡೊಯ್ಯುವ ಮೂಲಕ ನೀವು ಕೂಲ್ ಲುಕ್ ಪಡೆಯಬಹುದು. ಆದ್ದರಿಂದ ಸ್ವೆಟ್ ಶರ್ಟ್ ಗೆ ನಿಮ್ಮ ವಾರ್ಡ್ರೋಬ್ನಲ್ಲಿ ಸ್ಥಾನ ನೀಡಿ.
ಸ್ಪೋರ್ಟ್ಸ್ ಶೂಗಳು (Sports Shoes): ಪ್ರತಿಯೊಂದು ಉಡುಗೆಯೊಂದಿಗೆ ವಿವಿಧ ರೀತಿಯ ಪಾದರಕ್ಷೆಗಳನ್ನು ಇಡುವ ಬದಲು ನಿಮ್ಮ ವಾರ್ಡ್ರೋಬ್ನಲ್ಲಿ ಸ್ಪೋರ್ಟ್ಸ್ ಶೂಗಳನ್ನು ಇರಿಸಿಕೊಳ್ಳಿ. ಯಾಕಂದ್ರೆ ಸ್ಪೋರ್ಟ್ಸ್ ಶೂಗಳನ್ನು ನೀವು ಯಾವುದೇ ಡ್ರೆಸ್ ಜೊತೆ ಕ್ಯಾರಿ ಮಾಡಬಹುದು. ಇದು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತೆ.