Published : Nov 27, 2022, 12:35 PM ISTUpdated : Nov 27, 2022, 12:38 PM IST
ಕಳೆದ ಕೆಲವು ದಿನಗಳಿಂದ, ಅರ್ಜೆಂಟೀನಾದ ಈ ದಂಪತಿಗಳು ಸಾಕಷ್ಟು ಚರ್ಚೆಯಲ್ಲಿದ್ದಾರೆ. ದಂಪತಿಗಳು ತಮ್ಮ ದೇಹದ ಮೇಲೆ 98 ಹಚ್ಚೆಗಳನ್ನು ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಟ್ಯಾಟೂ ಕ್ರೇಜ್ ಜನರಲ್ಲಿ ಹೆಚ್ಚುತ್ತಿದೆ. ಹಚ್ಚೆಗಳಿಗೆ ಸಂಬಂಧಿಸಿದ ಸಮಸ್ಯೆ ಮತ್ತು ಅದಕ್ಕೆ ಅಗತ್ಯವಿರುವ ಕೆಲವು ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದುಕೊಳ್ಳೋದು ಮುಖ್ಯ.
ಕೆಲವರು ಹವ್ಯಾಸಕ್ಕಾಗಿ ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಿರ್ತ್ತಾರೆ. ಹಾಗೆಯೇ, ನಿಮ್ಮ ಹವ್ಯಾಸದಲ್ಲಿ ನಿಮ್ಮನ್ನು ಬೆಂಬಲಿಸುವ ಯಾರನ್ನಾದರೂ ನೀವು ಕಂಡುಕೊಂಡ್ರೆ, ಬೇರೆ ಏನ್ಬೇಕು ಅಲ್ವಾ? ಅರ್ಜೆಂಟೈನಾದ ದಂಪತಿಗಳನ್ನು ನೋಡಿ ಜನರು ಈ ದಿನಗಳಲ್ಲಿ ಇದೇ ರೀತಿ ಏನನ್ನಾದರೂ ಹೇಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ, ಅರ್ಜೆಂಟೀನಾದ ಈ ದಂಪತಿಗಳು ನಿರಂತರವಾಗಿ ಹೆಡ್ ಲೈನ್ಸ್ನಲ್ಲಿದ್ದಾರೆ. ಅವರೇ ಗೇಬ್ರಿಯೆಲ್ಲಾ ಮತ್ತು ವಿಕ್ಟರ್ ಎಂಬ ದಂಪತಿಗಳು ಇತ್ತೀಚೆಗೆ ದಾಖಲೆಯನ್ನು ಸ್ಥಾಪಿಸಿದರು. ಅವರಿಬ್ಬರೂ ತಮ್ಮ ದೇಹದ ಮೇಲೆ 98 ಟ್ಯಾಟೂ ಮತ್ತು ಪಿಯರ್ಸಿಂಗ್ ಮಾಡುವ ಮೂಲಕ ಗಿನ್ನಿಸ್ ವಿಶ್ವದಾಖಲೆಯನ್ನು (world record) ಮಾಡಿದ್ದಾರೆ.
210
ಇದಕ್ಕೂ ಮೊದಲು, ಇದೇ ದಂಪತಿಗಳು 2014 ರಲ್ಲಿ ದೇಹದಲ್ಲಿ 84 ಮಾಡಿಫಿಕೇಶನ್ (Body Modification) ಮಾಡೋ ಮೂಲಕ ವಿಶ್ವದಾಖಲೆಯನ್ನು ಸ್ಥಾಪಿಸಿದ್ದರು. ಈಗ ಗೇಬ್ರಿಯೆಲಾ ಮತ್ತು ವಿಕ್ಟರ್ ತಮ್ಮದೇ ಆದ ದಾಖಲೆಯನ್ನು ಮುರಿದಿದ್ದಾರೆ. ದಂಪತಿಗಳಿಗೆ ಈವರೆಗೆ 98 ಹಚ್ಚೆಗಳು, 50 ಪಿಯರ್ಸಿಂಗ್, 8 ಮೈಕ್ರೊಡರ್ಮಲ್, 14 ಬಾಡಿ ಇಂಪ್ಲಾಂಟ್ , 5 ಡೆಂಟಲ್ ಇಂಪ್ಲಾಂಟ್, 4 ಇಯರ್ ಎಕ್ಸ್ ಪೆಂಡರ್, 2 ಇಯರ್ ಬೋಲ್ಟ್ ಮತ್ತು 1 ಫೋರ್ಕ್ಡ್ ನಾಲಗೆಯನ್ನು ಅವರ ದೇಹದ ಮೇಲೆ ಹಾಕಲಾಗಿದೆ.
310
ಇಷ್ಟೇ ಅಲ್ಲ, ಅವರಿಬ್ಬರೂ ತಮ್ಮ ಕಣ್ಣುಗಳ ಬಿಳಿ ಭಾಗದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ, ಇದರಿಂದ ಅವರ ಕಣ್ಣುಗಳು ಸಂಪೂರ್ಣವಾಗಿ ಕಪ್ಪಾಗಿ ಕಾಣುತ್ತವೆ. ಇತ್ತೀಚಿನ ದಿನಗಳಲ್ಲಿ, ಟ್ಯಾಟೂಗಳ ಬಗ್ಗೆ ಜನರ ಕ್ರೇಜ್ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಟ್ಯಾಟೂ ಎಷ್ಟು ಕೂಲಾಗಿ ಕಾಣುತ್ತದೆಯೋ ಅಷ್ಟೇ ಕೂಲ್ ಆಗಿ, ಇದು ಅನೇಕ ಅಪಾಯಗಳನ್ನು ಸಹ ತರಬಹುದು. ಟ್ಯಾಟೂಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿಯಿರಿ-
410
ಅಲರ್ಜಿಯ ರಿಯಾಕ್ಷನ್ (Allergic Reaction): ಸೂಕ್ಷ್ಮ ಚರ್ಮ ಹೊಂದಿರುವ ಜನರು ಹಚ್ಚೆಯ ವಿವಿಧ ಬಣ್ಣಗಳಿಗೆ ವಿಶೇಷವಾಗಿ ಕೆಂಪು, ಹಸಿರು, ಹಳದಿ ಮತ್ತು ನೀಲಿ ಬಣ್ಣಗಳಿಗೆ ಅಲರ್ಜಿ ಹೊಂದಿರಬಹುದು. ಈ ಬಣ್ಣಗಳು ಟ್ಯಾಟೂ ಹಾಕಿದ ಪ್ರದೇಶದ ಮೇಲೆ ತುರಿಕೆ ಮತ್ತು ಊತ ಸಹ ಉಂಟಾಗುವ ಚಾನ್ಸ್ ಇದೆ.
510
ಚರ್ಮದ ಸೋಂಕು (Skin Infection): ಟ್ಯಾಟೂ ಹಾಕಿದ ನಂತರ ಚರ್ಮದಲ್ಲಿ ಬ್ಯಾಕ್ಟೀರಿಯಾದ ಸೋಂಕು ಉಂಟಾಗುವ ಸಾಧ್ಯತೆಯಿದೆ. ಜೊತೆಗೆ ಕೆಲವರು ಊತದ ಸಮಸ್ಯೆಯನ್ನು ಸಹ ಅನುಭವಿಸ್ತಾರೆ. ಇದಲ್ಲದೆ, ಹಚ್ಚೆ ಹಾಕಿದ ಸ್ಥಳದ ಮೇಲೆ ಕಿರಿಕಿರಿಯೂ ಉಂಟಾಗಬಹುದು. ಇದರಿಂದ ನೋವು ಕೂಡ ಉಂಟಾಗುವ ಸಾಧ್ಯತೆ ಇದೆ..
610
ರಕ್ತದಿಂದ ಹರಡುವ ರೋಗಗಳು: ಟ್ಯಾಟೂ ಯಂತ್ರದ ಸೂಜಿಯು ಕಲುಷಿತವಾಗಿದ್ದರೆ ಅಥವಾ ಒಬ್ಬರಿಗೆ ಬಳಸಿದ ಸೂಜಿಯನ್ನು ಮತ್ತೊಮ್ಮೆ ಬಳಸಿದರೆ ಮತ್ತು ಸೋಂಕಿಗೆ ಒಳಗಾಗಿದ್ದರೆ, ಅದು ಹೆಪಟೈಟಿಸ್ ಬಿ, ಸಿ ಮತ್ತು ಎಚ್ಐವಿ ಸೇರಿದಂತೆ ವಿವಿಧ ರಕ್ತದಿಂದ ಹರಡುವ ರೋಗಗಳಿಗೆ ಕಾರಣವಾಗಬಹುದು, ಇದು ಮಾರಣಾಂತಿಕ ರೋಗಗಳಾಗಿವೆ.
710
ಸೆಪ್ಸಿಸ್: ಇದು ಮಾರಣಾಂತಿಕ ಕಾಯಿಲೆಯಾಗಿದ್ದು, ಸೋಂಕಿನಿಂದ ಉಂಟಾಗುತ್ತೆ. ಟ್ಯಾಟೂ (tattoo) ಹಾಕೋದರಿಂದ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ತುಂಬಾನೆ ಹೆಚ್ಚಾಗಿದೆ. ಈ ರೋಗಸಂಭವಿಸಿದರೆ, ಅಂಗಾಂಗ ವೈಫಲ್ಯ ಮತ್ತು ಸಾವು ಸಂಭವಿಸಬಹುದು.ಹುಷಾರ್!
810
ಸುರಕ್ಷಿತ ಟ್ಯಾಟೂಗಾಗಿ ಈ ಸಲಹೆಗಳನ್ನು ಅನುಸರಿಸಿ: ಲೈಸೆನ್ಸ್ ಪಡೆದ ಪಾರ್ಲರ್ ನಿಂದ (Licensed Tattoo Parlour) ಮಾತ್ರ ಯಾವಾಗಲೂ ಟ್ಯಾಟೂ ಹಾಕಿಸಿಕೊಳ್ಳಿ. ಶುಚಿಗೊಳಿಸುವ ಮತ್ತು ಸೋಂಕುನಿವಾರಕ ಉಪಕರಣಗಳನ್ನು ಸಹ ಪರಿಶೀಲಿಸಿ.
ಟ್ಯಾಟೂ ಕಲಾವಿದ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಕೈಗಳನ್ನು ತೊಳೆಯುತ್ತಾನೆ ಮತ್ತು ಹೊಸ ಗ್ಲೋವ್ಸ್ ಬಳಸುತ್ತಾನೆ ಎಂಬುದನ್ನು ಚೆಕ್ ಮಾಡಿ
910
ಬಳಸಿದ ಸೂಜಿ ಮತ್ತು ರೇಜರ್ ಗಳನ್ನು ಮರುಬಳಕೆ ಮಾಡಬಾರದು. ಹಚ್ಚೆ ಹಾಕುವ ಮೊದಲು, ಆ ಸ್ಥಳವನ್ನು ಸೋಂಕುನಿವಾರಕದಿಂದ ಸ್ವಚ್ಛಗೊಳಿಸೋದನ್ನು ಖಚಿತಪಡಿಸಿಕೊಳ್ಳಿ. ಬ್ಯಾಂಡೇಜ್ ಇತ್ಯಾದಿಗಳಿಂದ ತಾಜಾ ಟ್ಯಾಟೂಗಳನ್ನು ಮುಚ್ಚಿಡಿ. ಸುರಕ್ಷಿತ ಪಿಯರ್ಸಿಂಗ್ಗಾಗಿ ಈ ಸಲಹೆಗಳನ್ನು ಅನುಸರಿಸಿಕಿ.ವಿಯೋಲೆಗಳ ಮೇಲೆ ಪಿಯರ್ಸಿಂಗ್ ಮಾಡಲು ಪಿಕಿಂಗ್ ಗನ್ ಬಳಸಿ. ಇತರ ಸೂಕ್ಷ್ಮ ಭಾಗಗಳಿಗೆ ತೆಳುವಾದ ಸೂಜಿಗಳನ್ನು ಬಳಸಿ. ಪಿಯರ್ಸಿಂಗ್ ಪ್ರಾರಂಭಿಸುವ ಮೊದಲು, ಅದನ್ನು ಮಾಡುವಂತವರು ತಮ್ಮ ಕೈಗಳನ್ನು ತೊಳೆಯುವಂತೆ ಮತ್ತು ಗ್ಲೋವ್ಸ್ ಬಳಸುವಂತೆ ನೋಡಿಕೊಳ್ಳಿ.
1010
ಬಾಡಿ ಪಿಯರ್ಸಿಂಗ್ (Body Piercing) ಯಾವಾಗಲೂ ಒನ್ ಟೈಮ್ ಯೂಸ್ ಸೂಜಿಯಿಂದ ಮಾಡಬೇಕು, ಅದನ್ನು ನಂತರ ಡಿಸ್ಪೋಸ್ ಮಾಡಲಾಗುತ್ತೆ. ಪಿಯರ್ಸಿಂಗ್ ನಂತರ ಧರಿಸುವ ಆಭರಣಗಳನ್ನು ಯಾವಾಗಲೂ ಸ್ಯಾನಿಟೈಸ್ ಮಾಡಿ.ಪಿಯರ್ಸಿಂಗ್ ಸಲಕರಣೆ ಮತ್ತು ಸ್ಥಳಗಳನ್ನು ಯಾವಾಗಲೂ ಸ್ವಚ್ಛಗೊಳಿಸಬೇಕು ಎಂಬುದನ್ನು ಮರೀಬೇಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.