ಕೆಂಪು ಡ್ರೆಸ್‌ನಲ್ಲಿ ಮಿಂಚಿದ 'ಕಿಸ್‌' ಬೆಡಗಿ, ರೆಡ್ ರೋಸ್ ಎಂದು ಕರೆದ ಫ್ಯಾನ್ಸ್‌

Published : Apr 04, 2024, 09:30 AM ISTUpdated : Apr 04, 2024, 09:45 AM IST

ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಸದ್ಯ ಬೇಡಿಕೆಯಲ್ಲಿರುವ ನಟಿಯರಲ್ಲಿ ಶ್ರೀಲೀಲಾ ಕೂಡಾ ಒಬ್ಬರು. ಮುದ್ದು ಮುದ್ದಾಗಿರುವ ಈ ಕನ್ನಡದ ಹುಡುಗಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್. ಇತ್ತೀಚಿಗೆ ರೆಡ್ ಕಲರ್ ಡ್ರೆಸ್‌ನಲ್ಲಿ ತಮ್ಮ ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

PREV
110
ಕೆಂಪು ಡ್ರೆಸ್‌ನಲ್ಲಿ ಮಿಂಚಿದ 'ಕಿಸ್‌' ಬೆಡಗಿ, ರೆಡ್ ರೋಸ್ ಎಂದು ಕರೆದ ಫ್ಯಾನ್ಸ್‌

ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಸದ್ಯ ಬೇಡಿಕೆಯಲ್ಲಿರುವ ನಟಿಯರಲ್ಲಿ ಶ್ರೀಲೀಲಾ ಕೂಡಾ ಒಬ್ಬರು. ಮುದ್ದು ಮುದ್ದಾಗಿರುವ ಈ ಕನ್ನಡದ ಹುಡುಗಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್. ಇತ್ತೀಚಿಗೆ ರೆಡ್ ಕಲರ್ ಡ್ರೆಸ್‌ನಲ್ಲಿ ತಮ್ಮ ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

210
sreeleela

ಶ್ರೀಲೀಲಾ, ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಲೇಟೆಸ್ಟ್ ಆಗಿ ರೆಡ್ ಕಲರ್ ಟಾಪ್ ತೊಟ್ಟು ಪಡ್ಡೆ ಹುಡುಗರ ಹಾರ್ಟ್‌ಬೀಚ್‌ ಹೆಚ್ಚುವಂತೆ ಮಾಡಿದ್ದಾರೆ.

310

ಅಭಿಮಾನಿಗಳು ಫೋಟೋಗೆ ಲೈಕ್ಸ್‌, ಹಾರ್ಟ್ ಎಮೋಜಿ ಕಳುಹಿಸಿದ್ದಾರೆ. ಕ್ಯೂಟ್, ಪ್ರೆಟ್ಟೀ, ಬ್ಯೂಟಿಫುಲ್, ಗಾರ್ಜಿಯಸ್‌ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಮತ್ತೆ ಹಲವರು, ಇಂಡಿಯನ್‌ ಸೆಲೆನಾ ಗೋಮೆಜ್‌ ಎಂದು ಶ್ರೀಲೀಲಾರನ್ನು ಹೊಗಳಿದ್ದಾರೆ.

410

ಶ್ರೀಲೀಲಾ, ತೆಲುಗಿನಲ್ಲಿ ಸಾಲು ಸಾಲು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕ್ರೇಜ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಫೋಟೋ ಶೂಟ್ ಮೂಲಕ ಅಭಿಮಾನಿಗಳಿಗೆ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ. ಈ ಬಾರಿ ರೆಡ್ ಡ್ರೆಸ್‌ನಲ್ಲಿ ಹಾಟ್‌ ಲುಕ್‌ ಕೊಟ್ಟಿದ್ದಾರೆ.

510

ಶ್ರೀಲೀಲಾ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಶ್ರೀಲೀಲಾ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗ್ತಿದೆ. ಭಗವಂತ ಕೇಸರಿ ಹಿಟ್ ಬಳಿಕ ಶ್ರೀಲೀಲಾಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್​ ಆಗಿದೆ.

610

ಧಮಾಕಾ ಸಿನಿಮಾ ಮೂಲಕ ಟಾಲಿವುಡ್ ಇಂಡಸ್ಟ್ರಿಯಲ್ಲಿ ಫೇಮಸ್​ ಆದ ಶ್ರೀಲೀಲಾ ಈ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಸೈಮಾ ಪ್ರಶಸ್ತಿಯನ್ನು ಪಡೆದರು. ಇತ್ತೀಚೆಗಷ್ಟೇ ಆಕೆ ನಟಿಸಿದ ಸ್ಕಂದ ಬಾಕ್ಸ್ ಆಫೀಸ್​ನಲ್ಲಿ ಆವರೇಜ್ ಹಿಟ್​ ಆಗಿತ್ತು.

710

ಬಾಲಯ್ಯ ಜೊತೆ ಶ್ರೀಲೀಲಾ ಭಗವಂತ ಕೇಸರಿ ಸಿನಿಮಾ ಮಾಡಿದ್ದಾರೆ. ದತ್ತು ಮಗಳ ಪಾತ್ರಕ್ಕೆ ಬಾಲಯ್ಯ ಜೊತೆ ಶ್ರೀಲೀಲಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸ್ಟಾರ್ ಹೀರೋ ಸಿನಿಮಾದಲ್ಲಿ ನಟಿಸಿದ್ದರೂ ತನ್ನ ನಟನೆಯಿಂದ ಶ್ರೀಲೀಲಾ ಇಂಪ್ರೆಸ್ ಮಾಡಿದ್ದಾರೆ.

810

ಭಗವಂತ ಕೇಸರಿ ಚಿತ್ರದ ಯಶಸ್ಸಿನೊಂದಿಗೆ ಶ್ರೀಲೀಲಾ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಒಂದೂವರೆ ಕೋಟಿ ವರೆಗೆ ತೆಗೆದುಕೊಂಡ ಶ್ರೀಲೀಲಾ, ಮುಂದಿನ ಚಿತ್ರಗಳಿಗೆ ರೂ. 3 ಕೋಟಿವರೆಗೂ ಸಂಭಾವನೆ ಪಡೆಯುತ್ತಿದ್ದಾರೆ.

910

ಡ್ಯಾನ್ಸ್ ವಿಚಾರದಲ್ಲಿಯೂ ಸಖತ್ ಫೇಮಸ್ ಆಗಿರುವ ಶ್ರೀಲೀಲಾ ಅವರ ನೃತ್ಯ ಎಲ್ಲರಿಗೂ ಇಷ್ಟ. ಸಿನಿಮಾಗಳಲ್ಲಿ ಶ್ರೀಲೀಲಾ ಅವರ ಡ್ಯಾನ್ಸ್ ನೋಡಿ ಜನರು ಫಿದಾ ಆಗುತ್ತಾರೆ. ಇದು ಕೂಡಾ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. 

1010

ಸ್ಯಾಂಡಲ್​ವುಡ್​ನಿಂದ ವೃತ್ತಿ ಜೀವನ ಆರಂಭಿಸಿ, ಬಳಿಕ ಬೇರೆ ಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಸ್ಟಾರ್​ ನಟಿಯಾಗಿ ಮಿಂಚುತ್ತಿರುವವರಲ್ಲಿ ಶ್ರೀಲೀಲಾ ಕೂಡ ಒಬ್ಬರು.

Read more Photos on
click me!

Recommended Stories