ಅನೇಕರು ಮುಖಕ್ಕೆ ಬಾಡಿ ಲೋಷನ್, ಸೋಪುಗಳನ್ನು ಬಳಸುತ್ತಾರೆ. ಆದರೆ ಇವುಗಳನ್ನು ನೇರವಾಗಿ ಮುಖಕ್ಕೆ ಹಚ್ಚಬಾರದು. ಏಕೆಂದರೆ ಮುಖದ ಚರ್ಮವು ದೇಹದ ಚರ್ಮಕ್ಕಿಂತ ಸೂಕ್ಷ್ಮವಾಗಿರುತ್ತದೆ. ಹೀಗಾಗಿ, ಬಾಡಿ ಲೋಷನ್, ಸೋಪು ಹಚ್ಚಿದರೆ ರಾಶಸ್, ಕಜ್ಜಿ ಬರಬಹುದು. ಒಮ್ಮೆ ಈ ಸಮಸ್ಯೆ ಶುರುವಾದರೆ ವಾಸಿಯಾಗಲು ಸಮಯ ತೆಗೆದುಕೊಳ್ಳುತ್ತದೆ.