ಭಾರಿ ವಿವಾದ ಬಳಿಕ 85 ಸಾವಿರ ರೂಗೆ ಕೊಲ್ಹಾಪುರಿ ಚಪ್ಪಲ್ ಲಾಂಚ್ ಮಾಡಿದ ಇಟಲಿಯ ಪ್ರಡಾ

Published : Apr 28, 2026, 01:06 PM IST

ಭಾರಿ ವಿವಾದ ಬಳಿಕ 85 ಸಾವಿರ ರೂಗೆ ಕೊಲ್ಹಾಪುರಿ ಚಪ್ಪಲ್ ಲಾಂಚ್ ಮಾಡಿದ ಇಟಲಿಯ ಪ್ರಡಾ ಬ್ರ್ಯಾಂಡ್, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಈ ಲಿಮಿಟೆಡ್ ಎಡಿಶನ್ ಚಪ್ಪಲ್ ಉತ್ಪಾದನೆಯಾಗಲಿದೆ 

PREV
16
ಕೊಲ್ಹಾಪುರಿ ಚಪ್ಪಲ್ ಬಿಡುಗಡೆ

ಇಟಲಿ ಪ್ರಡಾ ಬ್ರ್ಯಾಂಡ್ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಫ್ಯಾಶನ್ ಬ್ರ್ಯಾಂಡ್. ಅತೀ ದುಬಾರಿ ಹಾಗೂ ಲಕ್ಷುರಿ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಪ್ರಡಾ ಕಳೆದ ಕೆಲ ತಿಂಗಳ ಹಿಂದೆ ಭಾರಿ ವಿವಾದಕ್ಕೆ ಗುರಿಯಾಗಿತ್ತು. ಈ ವಿವಾದ ತಿಳಿಗೊಂಡ ಬೆನ್ನಲ್ಲೇ ಇದೀಗ ಇದೇ ಕೊಲ್ಹಾಪುರಿ ಚಪ್ಪಲಿಯನ್ನು ಬರೋಬ್ಬರಿ 85,000 ರೂಪಾಯಿಗೆ ಬಿಡುಗಡೆ ಮಾಡಿದೆ. 500 ರೂಪಾಯಿಂದ 2000, 3000 ರೂಪಾಯಿಗೆ ಸಿಗುತ್ತಿದ್ದ ಕೊಲ್ಹಾಪುರಿ ಚಪ್ಪಲಿ ಇದೀಗ ಪ್ರಡಾ ಬ್ರ್ಯಾಂಡ್ ಸೇರಿಕೊಂಡು 85,000 ರೂಪಾಯಿ ಆಗಿದೆ.

26
ಕರ್ನಾಟಕ ಮಹಾರಾಷ್ಟ್ರದಲ್ಲಿ ಉತ್ಪಾದನೆ

ಕೊಲ್ಹಾಪುರಿ ಚಪ್ಪಲಿಯ ಮೂಲಕ ಮಹಾರಾಷ್ಟ್ರ ಹಾಗೂ ಕರ್ನಾಟಕ, ಕೊಲ್ಹಾಪುರದಲ್ಲಿ ತಯಾರಾಗುತ್ತಿದ್ದ ಈ ಚಪ್ಪಲಿ ಕರ್ನಾಟಕದ ಗಡಿ ಭಾಗವಾದ ಬೆಳಗಾವಿ, ಧಾರವಾಡ, ಬಾಗಲಕೋಟೆ, ಬಿಜಾಪುರ ಹಾಗೂ ಮಹರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಸತಾರ, ಸೋಲಾಪುರದಲ್ಲಿ ತಯಾರಾಗುತ್ತದೆ. ಈ ಈ ಜಿಲ್ಲೆಗಳು ಜಿಐ ಟ್ಯಾಗ್ ಪಡೆದುಕೊಂಡಿದೆ. ಇದೀಗ ಇದೇ ಚಮ್ಮಾರರು, ಕರಕುಶಲಕರ್ಮಿಗಳ ಬಳಸಿಕೊಂಡು ಪ್ರಡಾ ಕೊಲ್ಹಾಪುರಿ ಚಪ್ಪಲ್ ಲಾಂಚ್ ಮಾಡಿದೆ.

36
ಕೇವಲ 2000 ಕೊಲ್ಹಾಪುರಿ ಚಪ್ಪಲ್ ಬಿಡುಗಡೆ

ಇಟಲಿಯ ಪ್ರಡಾ ಬ್ರ್ಯಾಂಡ್ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು, ಇದೇ ಕರಕುಶಲ ಕರ್ಮಿಗಳ ಬಳಸಿಕೊಂಡು ಇದೀಗ ಲಿಮಿಟೆಡ್ ಎಡಿಶನ್ ಕೊಲ್ಹಾಪುರಿ ಚಪ್ಪಲ್ ಬಿಡುಗಡೆ ಮಾಡಿದೆ. ಸದ್ಯ ಕೇವಲ 2000 ಕೊಲ್ಹಾಪುರಿ ಚಪ್ಪಲಿ ಮಾತ್ರ ಬಿಡುಗಡೆಯಾಗುತ್ತಿದೆ.

46
ಕೋಲ್ಹಾಪುರಿ ಚಪ್ಪಲಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ

ಪ್ರಡಾ ಬ್ರ್ಯಾಂಡ್ ಇದೀಗ ಲಿಮಿಟೆಡ್ ಎಡಿಶನ್ ಕೊಲ್ಹಾಪುರಿ ಚಪ್ಪಲಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಿದೆ. ಯೂರೋಪ್ ಸೇರಿದಂತೆ ವಿಶ್ವದ 40 ಪ್ರಡಾ ಸ್ಟೋರ್‌ಗಳಲ್ಲಿ ಇದೀಗ ಕೊಲ್ಹಾಪುರಿ ಚಪ್ಪಲಿ ಬಿಡುಗಡೆಯಾಗಿದೆ. ಇದರ ಬೆಲೆ 85,000 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.

56
ಏನಿದು ವಿವಾದ?

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಕರಕುಶಲ ಕರ್ಮಿಗಳಿಂದ ತಯಾರಾಗುವ ಕೊಲ್ಹಾಪುರಿ ಚಪ್ಪಲಿಯನ್ನು ಇಟಲಿಯ ಪ್ರಡಾಲ ಬ್ರ್ಯಾಂಡ್ ಕೆಲ ತಿಂಗಳ ಹಿಂದೆ ಅನಾವರಣ ಮಾಡಿತ್ತು. ಕೊಲ್ಹಾಪುರಿ ಚಪ್ಪಲಿ ಶೈಲಿ ನಕಲಿ ಮಾಡಿ ತನ್ನದೇ ಬ್ರ್ಯಾಂಡ್ ಆಡಿಯಲ್ಲಿ ಅನಾವರಣ ಮಾಡಿತ್ತು. ಇದು ಕೋಲಾಹಲಕ್ಕೆ ಕಾರಣವಾಗಿತ್ತು.

66
ಮೇಡ್ ಇನ್ ಇಂಡಿಯಾ ಬ್ರ್ಯಾಂಡ್

ಫ್ಯಾಶನ್ ಶೋ ಒಂದರಲ್ಲಿ ಪ್ರಡಾ ಈ ಕೊಲ್ಹಾಪುರಿ ಚಪ್ಪಲಿ ಬಿಡುಗಡೆ ಮಾಡಿತ್ತು. ಭಾರತದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರಡಾ ತನ್ನದೇ ಬ್ರ್ಯಾಂಡ್ ತನ್ನದೇ ವಿನ್ಯಾಸ ಎಂದು ಹೇಳಿಕೊಳ್ಳುವ ಪ್ರಯತ್ನ ಮಾಡಿತ್ತು. ಆದರೆ ಜಾಗತಿಕವಾಗಿ ಭಾರಿ ವಿರೋಧ ಎದುರಿಸಿದ ಬೆನ್ನಲ್ಲೇ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರ ಜೊತೆ ಮಾತುಕತೆ ನಡೆಸಿ ಇದೀಗ ಮೇಡ್ ಇನ್ ಇಂಡಿಯಾ ಎಂದು ಪ್ರಡಾ ಕೊಲ್ಹಾಪುರಿ ಚಪ್ಪಲ್ ಬಿಡುಗಡೆ ಮಾಡಿದೆ.

ಮೇಡ್ ಇನ್ ಇಂಡಿಯಾ ಬ್ರ್ಯಾಂಡ್

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories