ಇಲ್ಲಿರೋ ಫೋಟೋ ನೋಡಿದ್ರೆ ಆ ವ್ಯಕ್ತಿಗೆ ಎಷ್ಟು ವರ್ಷ ಇರಬಹುದು ಎಂದು ಅಂದ್ಕೊಳ್ತೀರಾ? 20, 25 ವರ್ಷ? ಅಥವಾ 30 ವರ್ಷ ಎಂದು ನೀವು ಅಂದುಕೊಂಡ್ರೆ ಅದು ತಪ್ಪು. ಇವರಿಗೆ ವಯಸ್ಸು 55 ಅಂದ್ರೆ ನೀವು ನಂಬಲೇ ಬೇಕು. ಆದ್ರೆ ಅಷ್ಟು ವಯಸ್ಸಾದವರಂತೆ ಇವರು ಕಾಣೋದೇ ಇಲ್ಲ, ಮುಖದಲ್ಲಿ ನೆರಿಗೆ ಕೂಡ ಮೂಡಿಲ್ಲ. ಹಾಗಿದ್ರೆ ಇವರ ಫಿಟ್ನೆಸ್ ರಹಸ್ಯ (fitness secret) ಏನು? ಇವರು ಯಾರು ಅನ್ನೋದನ್ನು ತಿಳಿಯೋಣ.
ಸಿಂಗಾಪುರದ ರೂಪದರ್ಶಿ (Supermodel of Singapore) ಮತ್ತು ಛಾಯಾಗ್ರಾಹಕ 55 ವರ್ಷದ ಚುವಾಂಡೊ ಟಾನ್ (Chuando Tan) ತಮ್ಮ ಲುಕ್ ನಿಂದ ಜನರ ಗಮನ ಸೆಳೆಯುತ್ತಿದ್ದಾರೆ. ಸುವಾಂಡೊ ಟಾನ್ 1967 ರಲ್ಲಿ ಜನಿಸಿದರು, ಅಂದರೆ ಅವರಿಗೆ 55 ವರ್ಷ ವಯಸ್ಸು, ಆದರೆ ಅವರು ತಮಗೆ ವಯಸ್ಸೇ ಆಗೋದಿಲ್ಲವೇನೋ ಎಂಬ ರೀತಿಯಲ್ಲಿ ತಮ್ಮ ದೇಹವನ್ನು ಸಿದ್ಧಪಡಿಸಿದರು. ಹಾಗಾಗಿ ಅವರು 55 ವರ್ಷದ ಬದಲು 20 ವರ್ಷ ವಯಸ್ಸಿನವರಂತೆ ಕಾಣುತ್ತಾರೆ.
ಚುವಾಂಡೊ ಟಾನ್ ಸಾಮಾನ್ಯ ವ್ಯಕ್ತಿಯಂತೂ ಅಲ್ಲ. ಟ್ಯಾನ್ 1980 ರ ದಶಕದಲ್ಲಿ ರೂಪದರ್ಶಿಯಾಗಿ ಕೆಲಸ ಮಾಡಿದರು, ಅವರು 90 ರ ದಶಕದಲ್ಲಿ ಪಾಪ್ ಗಾಯಕರೂ ಆಗಿದ್ದರು. ಅವರ ಗಾಯನ ವೃತ್ತಿಜೀವನದ ನಂತರ, ಸುವಾಂಡೋ ಟಾನ್ ಫೋಟೋಗ್ರಾಫರ್ (photographer) ಆಗಿಯೂ ಮಿಂಚಿದರು.
ಚೀನಾದ ಸುದ್ದಿ ಸಂಸ್ಥೆಯೊಂದು 2017 ರಲ್ಲಿ ಸುವಾಂಡೊ ಬಗ್ಗೆ ವೈರಲ್ ಕಥೆಯನ್ನು ತೋರಿಸಿದಾಗ ಅವರು ಮೊದಲ ಬಾರಿಗೆ ಮಾಧ್ಯಮಗಳ ಗಮನ ಸೆಳೆದರು. ಚುವಾಂಡೋ ಟಾನ್ 2019 ರಲ್ಲಿ "ಪ್ರೆಸಿಯಸ್ ಈಸ್ ದಿ ನೈಟ್" ಚಿತ್ರದ ಮೂಲಕ ನಟನಾ ಜಗತ್ತಿಗೂ ಪಾದಾರ್ಪಣೆ ಮಾಡಿದರು, ಇಂದು ಇನ್ಸ್ಟಾಗ್ರಾಮ್ನಲ್ಲಿ ಇವರು 1.2 ಮಿಲಿಯನ್ ಅನುಯಾಯಿಗಳನ್ನು (followers) ಹೊಂದಿದ್ದಾರೆ ಮತ್ತು ಇಲ್ಲಿಯವರೆಗೆ 600 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಶೇರ್ ಮಾಡಿದೆ.
ತನ್ನ ದೇಹದ 70 ಪ್ರತಿಶತವು ಆಹಾರವನ್ನು ಆಧರಿಸಿದೆ, ಆದರೆ ಕೇವಲ 30 ಪ್ರತಿಶತದಷ್ಟು ಮಾತ್ರ ವ್ಯಾಯಾಮ ಆಧರಿಸಿದೆ ಎಂದು ಟ್ಯಾನ್ ಹೇಳುತ್ತಾರೆ. ಅವರು ಬೆಳಗಿನ ಉಪಾಹಾರಕ್ಕಾಗಿ ಕೇವಲ 2 ಹಳದಿ ಲೋಳೆಗಳೊಂದಿಗೆ 6 ಬೇಯಿಸಿದ ಮೊಟ್ಟೆಗಳನ್ನು ತಿನ್ನುತ್ತಾರೆ. ಜೊತೆಗೆ ಒಂದು ಲೋಟ ಹಾಲು ಕುಡಿಯುತ್ತಾರೆ ಮತ್ತು ಕೆಲವೊಮ್ಮೆ ತನ್ನ ಉಪಾಹಾರದಲ್ಲಿ ಬೆರ್ರಿಗಳೊಂದಿಗೆ ಆವಕಾಡೊ ಸಹ ತಿನ್ನುತ್ತಾರೆ ಇವರು.
ಮೊಟ್ಟೆ , ಹಾಲು ತಿನ್ನೋದ್ರಿಂದ ದಿನದ ಆರಂಭದಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಶಕ್ತಿ ದೊರೆಯುತ್ತೆ. ಮೊಟ್ಟೆಗಳನ್ನು ಹೊರತುಪಡಿಸಿ, ಅವರು ಚಿಕನ್, ಗ್ರಿಲ್ಡ್ ತರಕಾರಿಗಳು ಮತ್ತು ಮೀನಿನ ಸೂಪ್ (fish soup) ಅನ್ನು ಅನ್ನದೊಂದಿಗೆ ಹಗಲಿನಲ್ಲಿ ತಿನ್ನುತ್ತಾರೆ. ಇವರಿಗೆ ಐಸ್ ಕ್ರೀಮ್ ಅಂದ್ರೆ ತುಂಬಾ ಇಷ್ಟವಂತೆ, ಆದ್ದರಿಂದ ಅವರು ಅದನ್ನು ಕೆಲವೊಮ್ಮೆ ದಿನದ ಮೊದಲಾರ್ಧದಲ್ಲಿ ಮಾತ್ರ ತಿನ್ನುತ್ತಾರಂತೆ.
ಕಾಫಿ ಮತ್ತು ಚಹಾಕ್ಕೆ ನೋ ಎನ್ನುವ ಇವರು ಸಾಕಷ್ಟು ನೀರು ಕುಡಿಯುತ್ತಾರೆ. ಚುವಾಂಡೋ ಟ್ಯಾನ್ ಧೂಮಪಾನ ಮಾಡುವುದಿಲ್ಲ ಮತ್ತು ಆಲ್ಕೋಹಾಲ್ ಅನ್ನು ಮುಟ್ಟುವುದಿಲ್ಲ. ಇದು ಮಾತ್ರವಲ್ಲ, ರಾತ್ರಿಯೂಟಕ್ಕೆ, ಅವರು ತಾಜಾ ಸೊಪ್ಪುಗಳಿಂದ ಮಾಡಿದ ಸಲಾಡ್ ತಿನ್ನುತ್ತಾರೆ. ಹಸಿರು ಸಲಾಡ್ (green veg salad) ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದೇ ಇವರ ಫಿಟ್ನೆಸ್ ಸೂತ್ರ ಎನ್ನುತ್ತಾರೆ.