ಡಿಯೋಡ್ರಂಟ್ ಪರಿಮಳವೇನೋ ಇಷ್ಟ, ಆದ್ರೆ ಅಪಾಯ..?

First Published | Mar 3, 2021, 1:55 PM IST

ಬೇಸಿಗೆ ಕಾಲ ಆರಂಭವಾಗಿದ್ದು, ಈ ಸೀಸನ್ ನಲ್ಲಿ ಫ್ರೆಶ್ ಆಗಿ ಕಾಣಲು ಉತ್ತಮ ವಿಧಾನವೆಂದರೆ ಡಿಯೋಡ್ರೆಂಟ್. ಬೆವರಿನ ದುರ್ವಾಸನೆಯನ್ನು ನಿವಾರಿಸುವ ಮೂಲಕ ಡಿಯೋಡ್ರೆಂಟ್ ದೇಹಕ್ಕೆ ಉತ್ತಮ ಸುಗಂಧ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಈ ಸುಗಂಧ ದ್ರವ್ಯಗಳು ಎಷ್ಟು ಸುರಕ್ಷಿತ. ಬಳಕೆ ಮಾಡುವ ಮುನ್ನ ಅದು ದೇಹಕ್ಕೆ ಉತ್ತಮವೇ ಎಂದು ತಿಳಿದುಕೊಳ್ಳುವುದು ಮುಖ್ಯ.
 

ಬೆವರಿನ ನಿವಾರಣೆಗಾಗಿ ಆಂಟಿ ಬ್ಯಾಕ್ಟೀರಿಯಲ್ ಡಿಯೋಡ್ರೆಂಟ್ ಗಳನ್ನು ತಯಾರಿಸುವಾಗ ಟ್ರೈಕ್ಲೋಸಾನ್ ರಾಸಾಯನಿಕಗಳನ್ನು ಬಳಸಲಾಗುತ್ತದೆ ಎಂಬುದೂ ಸತ್ಯ. ಈ ರಾಸಾಯನಿಕಗಳು ದೇಹದ ಉತ್ತಮ ಬ್ಯಾಕ್ಟೀರಿಯಾ ನಿವಾರಕ ವನ್ನು ನಾಶಮಾಡಿ, ದೇಹಕ್ಕೆ ಅಲರ್ಜಿಯನ್ನು ಉಂಟುಮಾಡುತ್ತದೆ. ಅಲ್ಲದೇ ಇತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
undefined
ಡಿಯೋಡ್ರೆಂಟ್ ನ ಅಡ್ಡ ಪರಿಣಾಮಗಳು:ಡಿಯೋಡ್ರೆಂಟ್ ನಲ್ಲಿರುವ ಅಲ್ಯೂಮಿನಿಯಂ ಅಂಶವು ಕಿರುಚೀಲಗಳನ್ನು ಮುಚ್ಚುವ ಮೂಲಕ ಬೆವರಿನ ಸ್ರವಿಕೆಯನ್ನು ತಡೆಗಟ್ಟುತ್ತದೆ, ಆ ಮೂಲಕ ದೇಹದ ವಿಷಕಾರಿ ವಸ್ತುಗಳನ್ನು ಬೆವರಿನ ರೂಪದಲ್ಲಿ ಹೊರಹಾಕುವುದನ್ನು ತಡೆಯುತ್ತದೆ.
undefined

Latest Videos


ಅಲ್ಯೂಮಿನಿಯಂ ಅಂಶಗಳು ಇರುವುದರಿಂದ ಚರ್ಮದ ಕಿರಿಕಿರಿ, ಕೆಂಪಾಗುವುದು, ತುರಿಕೆಯಂತಹ ಇತರ ಚರ್ಮದ ತೊಂದರೆಗಳು ಉಂಟಾಗುವ ಸಾಧ್ಯತೆಹೆಚ್ಚುತ್ತದೆ.
undefined
ಅಷ್ಟೇ ಅಲ್ಲ, ಡಿಯೋಡ್ರೆಂಟ್ ಅಲ್ಯೂಮಿನಿಯಂ ಅಂಶವಿರುವ ಹಲವಾರು ರಾಸಾಯನಿಕಗಳನ್ನು ಹೊಂದಿದೆ, ಇದು ಈಸ್ಟ್ರೋಜನ್ ಹಾರ್ಮೋನ್ ಗಳು ಮತ್ತು ಸ್ತನ ಅಂಗಾಂಶಗಳ ಮೇಲೆ, ವಿಶೇಷವಾಗಿ ಮಹಿಳೆಯರ ದೇಹದ ಮೇಲೆ ಪರಿಣಾಮ ಬೀರುತ್ತದೆ.
undefined
ಬೆವರಿನ ವಾಸನೆಯನ್ನು ತಪ್ಪಿಸಲು ಡಿಯೋಡ್ರೆಂಟ್ ಬಳಸಲು ಬಯಸುವವರು ಸ್ಪ್ರೇ ಬದಲಿಗೆ ಸ್ಟಿಕ್ ಡಿಯೋಡ್ರೆಂಟ್ ಬಳಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
undefined
ಡಿಯೋಡ್ರೆಂಟ್ ಸ್ಪ್ರೇಗಳಿಗಿಂತ ಕಡ್ಡಿಗಳು ಉತ್ತಮ. ಸ್ಪ್ರೇ ಡಿಯೋಡ್ರೆಂಟ್ ನಲ್ಲಿ ಸುವಾಸನೆಯನ್ನು ಕಾಯ್ದುಕೊಳ್ಳಲು ವಿವಿಧ ರಾಸಾಯನಿಕಗಳನ್ನು ಬಳಸಲಾಗುತ್ತದೆ, ಹಾಗೆಯೇ ಸ್ಟಿಕ್ ಡಿಯೋಡ್ರೆಂಟ್ ತಯಾರಿಕೆಯಲ್ಲಿ ರಾಸಾಯನಿಕಗಳನ್ನು ಅಲ್ಪ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದರಿಂದ ಚರ್ಮಕ್ಕೆ ಹಾನಿಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
undefined
ಆಲ್ಕೋಹಾಲ್ ಮುಕ್ತ ಡಿಯೋಡ್ರೆಂಟ್ ಬಳಸಿ: ಮಾರುಕಟ್ಟೆಯಲ್ಲಿ ಕೆಲವು ಡಿಯೋಡ್ರೆಂಟ್ ಗಳು ಲಭ್ಯವಿದ್ದು, ಆಲ್ಕೋಹಾಲ್ ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬಳಸುವುದಿಲ್ಲ. ಚರ್ಮಶಾಸ್ತ್ರಜ್ಞರು ಈ ರೀತಿಯ ಡಿಯೋಡ್ರೆಂಟ್ ನ ಬಳಕೆ ಉತ್ತಮ ಎನ್ನುತ್ತಾರೆ.
undefined
ಆಲ್ಕೋಹಾಲ್ ಮುಕ್ತ ಈ ಡಿಯೋಡ್ರೆಂಟ್ ತ್ವಚೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇವುಗಳ ಬಳಕೆಯಿಂದ ಚರ್ಮದ ಯಾವುದೇ ಸಮಸ್ಯೆಗಳು ಅಥವಾ ಅಲರ್ಜಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
undefined
ಅಲ್ಯೂಮಿನಿಯಂ ಅಂಶವನ್ನೂ ಡಿಯೋಡ್ರೆಂಟ್ ನಲ್ಲಿ ಆಲ್ಕೋಹಾಲ್ ರಹಿತ ತಯಾರಿಕೆಯಲ್ಲಿ ಬಳಸುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇಂತಹ ಡಿಯೋಡ್ರೆಂಟ್ ಸ್ವಲ್ಪ ದುಬಾರಿಯಾದರೂ ಅದನ್ನು ಬಳಸುವುದರಿಂದ ಚರ್ಮದ ಮೇಲೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
undefined
click me!