ನೀಲಿ ಸೀರೆಯುಟ್ಟು ರೆಡಿಯಾದ ವೈಷ್ಣವಿ ಗೌಡ, ಬ್ಲೌಸ್ ಮ್ಯಾಚೇ ಆಗ್ತಿಲ್ಲ ಮೇಡಂ ಎಂದ ನೆಟ್ಟಿಗರು!

First Published | May 11, 2024, 5:15 PM IST

ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀತಾರಾಮ ಸೀರಿಯಲ್ ಪ್ರೇಕ್ಷಕರ ಫೇವರಿಟ್‌. ಅದರಲ್ಲೂ ಸೀತಾ ಸರಳತೆ, ಸಾಂಪ್ರದಾಯಿಕ ಲುಕ್‌ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ರಿಯಲ್ ಲೈಫ್‌ನಲ್ಲೂ ಸೀರೆಯನ್ನು ಇಷ್ಟಪಡೋ ವೈಷ್ಣವಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಚೆಂದದ ಸ್ಯಾರಿಯುಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್‌ ಆಗಿರುವ ವೈಷ್ಣವಿ ಆಗಾಗ ತಮ್ಮ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ನೀಲಿ ಬಣ್ಣದ ಚೆಂದದ ಸೀರೆಯುಟ್ಟು ಮುದ್ದಾಗಿ ಸ್ಮೈಲ್ ಕೊಟ್ಟು ಫೋಟೋಗೆ ಫೋಸ್ ನೀಡಿದ್ದಾರೆ.

ವೈಷ್ಣವಿ ನೀಲಿ ಸೀರೆಗೆ ಗೋಲ್ಡನ್‌ ಕಲರ್ ಬ್ಲೌಸ್ ಹಾಕ್ಕೊಂಡಿದ್ದಾರೆ. ವೈಷ್ಣವಿ ಗೌಡ ಹೊಸ ಫೋಟೋಸ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಸಹ ಮಾಡಿದ್ದಾರೆ. ಕ್ಯೂಟ್, ಗಾರ್ಜಿಯಸ್‌, ಬ್ಯೂಟಿಫುಲ್ ಎಂದೆಲ್ಲಾ ಹೊಗಳಿದ್ದಾರೆ. 

Latest Videos


ಇನ್ನು ಕೆಲವರು, ಜಾತ್ರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಸೀರೆ ಮತ್ತು ಬ್ಲೌಸ್ ಮ್ಯಾಚೇ ಆಗ್ತಿಲ್ವಲ್ಲಾ ಮೇಡಂ ಅಂತ ಹೇಳಿದ್ದಾರೆ.

ಇನ್ನೊಬ್ಬರು ಸ್ಯಾರಿ ಕಲರ್ ಚೆನ್ನಾಗಿಲ್ಲ, ಬ್ಲೌಸ್ ಕೂಡಾ ಸ್ಪಲ್ವನೂ ಮ್ಯಾಚ್ ಆಗ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸನ್ನಿಧಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವೈಷ್ಣವಿ ಗೌಡ ಆಗಾಗ ತಮ್ಮ ಮಾಡರ್ನ್‌, ಟ್ರೆಡಿಶನಲ್ ಲುಕ್‌ನ ಫೋಟೋಸ್ ಶೇರ್ ಮಾಡುತ್ತಾರೆ. ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. 

ಮಾತ್ರವಲ್ಲ ಸೀರಿಯಲ್‌ಗಾಗಿ ಸುಂದರವಾಗಿ ರೆಡಿಯಾದಾಗಲ್ಲೆಲ್ಲಾ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಫೋಟೋಸ್ ಮಾತ್ರವಲ್ಲ, ಸೀರಿಯಲ್ ಟೀಮ್‌ ಜೊತೆ ಮಾಡಿದ ರೀಲ್ಸ್ ಸಹ ಶೇರ್ ಮಾಡಿಕೊಳ್ಳುತ್ತಾರೆ.

ಸೀರಿಯಲ್‌ ಪ್ರಿಯರಿಗೂ ವೈಷ್ಣವಿ ಅಚ್ಚುಮೆಚ್ಚು. ಅದರಲ್ಲೂ ಇತ್ತೀಚಿಗೆ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯಲ್ಲಿ ನಟಿಯ ಪಾತ್ರ ಹಾಗೂ ಅಭಿನಯ ಎಲ್ಲರಿಗೂ ಇಷ್ಟವಾಗಿದೆ. ಮುಗ್ದೆ ಸೀತೆಯ ಪಾತ್ರವನ್ನು ಎಲ್ಲರೂ ಕೊಂಡಾಡುತ್ತಾರೆ.

ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ.

click me!