ಸ್ಟೈಲಿಶ್‌ ಡ್ರೆಸ್‌ನಲ್ಲಿ ಮಿಂಚಿದ ಅನುಪಮಾ, ನೀವು ಮೆಟ್‌ಗಾಲಾಕ್ಕೆ ಹೋಗ್ಬೇಕಿತ್ತು ಎಂದ ಫ್ಯಾನ್ಸ್‌

First Published | May 10, 2024, 4:57 PM IST

ಸೀರಿಯಲ್ ನಟಿ ಹಾಗೂ ನಿರೂಪಕಿ ಅನುಪಮಾ ಯಾವಾಗ್ಲೂ ಸ್ಟೈಲಿಶ್‌ ಸೀರೆಯುಟ್ಟು ಮಿಂಚುತ್ತಿರುತ್ತಾರೆ. ಆದರೆ ಇತ್ತೀಚಿಗೆ ಇದೆಲ್ಲಕ್ಕಿಂತ ವಿಭಿನ್ನವಾಗಿ ಸ್ಟೈಲಿಶ್ ಡ್ರೆಸ್ ಹಾಕ್ಕೊಂಡು ಫೋಸ್ ಕೊಟ್ಟಿದ್ದಾರೆ.

ಸೀರಿಯಲ್ ನಟಿ ಹಾಗೂ ನಿರೂಪಕಿ ಅನುಪಮಾ ಯಾವಾಗ್ಲೂ ಸ್ಟೈಲಿಶ್‌ ಸೀರೆಯುಟ್ಟು ಮಿಂಚುತ್ತಿರುತ್ತಾರೆ. ಆದರೆ ಇತ್ತೀಚಿಗೆ ಇದೆಲ್ಲಕ್ಕಿಂತ ವಿಭಿನ್ನವಾಗಿ ಸ್ಟೈಲಿಶ್ ಡ್ರೆಸ್ ಹಾಕ್ಕೊಂಡು ಫೋಸ್ ಕೊಟ್ಟಿದ್ದಾರೆ.

ಕಿರುತೆರೆಯಲ್ಲಿ ಕಮಾಲ್ ಮಾಡಿ ಹಿರಿತೆರೆಯತ್ತ ಮುಖ ಮಾಡಿದ ನಟಿ ಅನುಪಮಾ ಗೌಡ. ನಟನೆ ಮಾತ್ರವಲ್ಲ ನಿರೂಪಣೆಯಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ್ದಾರೆ.

Latest Videos


ಫ್ಲೋರಲ್‌ ಪ್ರಿಂಟ್‌ನ ಡ್ರೆಸ್‌ನಲ್ಲಿ ಅನುಪಮಾ ಮುದ್ದಾಗಿ ಕಾಣುತ್ತಿದ್ದಾರೆ. ಇದಕ್ಕೆ ಪಿಂಕ್ ಬಣ್ಣದ ಬೋ ಹಾಕ್ಕೊಂಡು ಪೋಸ್ ಕೊಟ್ಟಿದ್ದಾರೆ. ನೆಟ್ಟಿಗರು ಫೋಟೋಗೆ ಲೈಕ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ.

ಫ್ಯಾನ್ಸ್ ಗಾರ್ಜಿಯಸ್, ಬ್ಯೂಟಿಫುಲ್‌, ಕ್ರಶ್‌, ಪ್ರೆಟ್ಟೀ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು ಡ್ರೀಮ್‌ ಗರ್ಲ್‌ ವೈಬ್‌ ಎಂದು ಕಾಮೆಂಟ್ ಮಾಡಿದ್ದಾರೆ.

ನೂರು ಕಾಲ ಸುಖವಾಗಿರಿ ಅನುಪಮಾ ಎಂದು ಇನ್ನೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, ನೀವು ಮೆಟ್‌ಗಾಲಾಕ್ಕೆ ಹೋಗ್ಬೇಕಿತ್ತು ಎಂದಿದ್ದಾರೆ.

ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ನಟಿ ಅನುಪಮಾ ಗೌಡ. ಕನ್ನಡದ ಕಿರುತೆರೆ ನಟಿ 'ಅಕ್ಕ' ಸೀರಿಯಲ್‌ನಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ಎರಡು ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದವರು. 

ಆ ನಂತರ ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಅದರಿಂದ ಬಂದ ಮೇಲೆ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

ಅನುಪಮಾ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಈ ಗೆಲುವೇ ಅವರನ್ನು ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗುವಂತೆ ಮಾಡಿತ್ತು.

ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಪಮಾ ನಾಯಕಿಯಾಗಿ ನಟಿಸಿದ್ದರು. ಆ ಕರಾಳ ರಾತ್ರಿ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. 

click me!