ಸಲ್ವಾರ್‌ನಲ್ಲಿ ಮಿಂಚಿದ 'ಶ್ರಾವಣಿ ಸುಬ್ರಹ್ಮಣ್ಯ' ಸೀರಿಯಲ್‌ ನಟಿ, ಮುಗುಳ್ನಗೆಗೆ ಮರುಳಾದ್ವಿ ಎಂದ ಫ್ಯಾನ್ಸ್‌

First Published | May 11, 2024, 4:39 PM IST

ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ತನ್ನ ಪೆದ್ದು-ಮುದ್ದು ಪಾತ್ರದ ಮೂಲಕ ಎಲ್ಲರ ಗಮನ ಸೆಳೀತಿರೋ ನಟಿ ಆಸಿಯಾ. ಸೀರಿಯಲ್‌ ಮಾತ್ರವಲ್ಲದೆ ರಿಯಲ್ ಲೈಫ್‌ನಲ್ಲೂ ಟ್ರೆಡಿಶನಲ್‌ ಲುಕ್‌ನಲ್ಲಿ ಮುದ್ದಾಗಿ ಕಾಣಿಸುತ್ತಾರೆ. ಇತ್ತೀಚಿಗೆ ಸಲ್ವಾರ್ ಧರಿಸಿ ಮುದ್ದಾಗಿ ನಗು ಬೀರಿದ್ದಾರೆ.

ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ತನ್ನ ಪೆದ್ದು-ಮುದ್ದು ಪಾತ್ರದ ಮೂಲಕ ಎಲ್ಲರ ಗಮನ ಸೆಳೀತಿರೋ ನಟಿ ಆಸಿಯಾ. ಸೀರಿಯಲ್‌ ಮಾತ್ರವಲ್ಲದೆ ರಿಯಲ್ ಲೈಫ್‌ನಲ್ಲೂ ಟ್ರೆಡಿಶನಲ್‌ ಲುಕ್‌ನಲ್ಲಿ ಮುದ್ದಾಗಿ ಕಾಣಿಸುತ್ತಾರೆ. ಇತ್ತೀಚಿಗೆ ಸಲ್ವಾರ್ ಧರಿಸಿ ಮುದ್ದಾಗಿ ನಗು ಬೀರಿದ್ದಾರೆ.

ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಶ್ರಾವಣಿ ಸುಬ್ರಹ್ಮಣ್ಯ ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ. ಈ ಸೀರಿಯಲ್‌ನಲ್ಲಿ ಆಸಿಯಾ ಫಿರ್ದೋಸ್ ಶ್ರಾವಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Tap to resize

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಆಸಿಯಾ ತಮ್ಮ ಟ್ರೆಡಿಶನಲ್ ಲುಕ್‌ನ ಫೋಟೋವನ್ನು ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕ್ರೀಮ್‌ ಕಲರ್‌ನ ಸಲ್ವಾರ್ ಧರಿಸಿರೋ ಫೋಟೋಗೆ ಫ್ಯಾನ್ಸ್ ಲೈಕ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ಕ್ಯೂಟಿ ಪೈ, ಗಾರ್ಜಿಯಸ್‌, ಪ್ರೆಟ್ಟೀ, ಬ್ಯೂಟಿಫುಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಕನ್ಯಾಕುಮಾರಿ ಧಾರಾವಾಹಿಯಲ್ಲಿ ಕನ್ನಿಕಾ ಆಗಿ ಶ್ರೀಮಂತ ಮನೆತನದ ದೈವಭಕ್ತ ಹುಡುಗಿ ಮತ್ತು ದೇವಿಯಾಗಿ ಕಾಣಿಸಿಕೊಂಡ ಆಸಿಯಾ ಫಿರ್ದೋಸ್ ಇದೀಗ ಶ್ರಾವಣಿಯಾಗಿ ಜನಮನ ಗೆದ್ದಿದ್ದಾರೆ. 

ಶ್ರಾವಣಿಯಾಗಿ ಆಸಿಯಾ ನಟನೆ ಎರಡೂ ಸಿಕ್ಕಾಪಟ್ಟೆ ಹಿಡಿಸಿದೆ. ಶ್ರೀಮಂತ ಮನೆಯಲ್ಲಿ ಹುಟ್ಟಿದರೂ ಅಪ್ಪನ ಪ್ರೀತಿಗೆ ಹಂಬಲಿಸುವ ಮಗಳಾಗಿ ಆಸಿಯಾ ಅದ್ಭುತವಾಗಿ ನಟಿಸಿದ್ದಾರೆ. 

ಅಪ್ಪನ ಪ್ರೀತಿಯನ್ನು ಹೇಗಾದರೂ ಪಡೆಯಬೇಕು ಎಂದು ಹಂಬಲಿಸುವ ಶ್ರಾವಣಿ ಒಂಥರಾ ಎಡವಟ್ಟು ರಾಣಿ, ಪದೇ ಪದೇ ತಪ್ಪುಗಳನ್ನು ಮಾಡುವ ಮೂಲಕ ಅಪ್ಪನಿಂದ ಬೈಸಿಕೊಳ್ಳುತ್ತಲೇ ಇರುತ್ತಾಳೆ. ಆದರೂ ಛಲ ಬಿಡದೆ ಒಂದಲ್ಲ ಒಂದು ಸಾಹಸ ಮಾಡುತ್ತಿರುತ್ತಾಳೆ ಶ್ರಾವಣಿ. 

ಶಿಕ್ಷಣ ಮಂತ್ರಿಯವರ ಮಗಳಾಗಿದ್ದರು ಓದಿನಲ್ಲಿ ಹಿಂದೆ ಬಿದ್ದಿರುವ ಶ್ರಾವಣಿ, ಪಾಸ್ ಆಗೋದಕ್ಕೆ ಹರಕೆ ಹೊತ್ತು, ಯಾವುದೋ ಸ್ವಾಮಿಗಳ ಮಾತು ಕೇಳಿ ದೇವರ ಮುಂದೆ ನಿಂತು ಪೂಜೆ ಮಾಡುವ ಪೆದ್ದು ಹುಡುಗಿ. ಫಿಸಿಕ್ಸ್ ಪರೀಕ್ಷೆಗೆ ಕೆಮೆಸ್ಟ್ರಿ ಓದಿ ಮತ್ತೆ ಫೈಲ್ ಆಗುವ ಶ್ರಾವಣಿಯ ಮುದ್ದು ಪೆದ್ದು ತನ ವೀಕ್ಷಕರಿಗೆ ಇಷ್ಟವಾಗಿದೆ. 

ಕನ್ಯಾಕುಮಾರಿ ಬಳಿಕ ದ್ವಂಧ್ವ ಎನ್ನುವ ಸಿನಿಮಾದಲ್ಲಿ, ಮಿಲನ ಎನ್ನುವ ವೆಬ್ ಸೀರೀಸ್ ನಲ್ಲೂ ನಟಿಸಿದ್ದಾರೆ ಆಸಿಯಾ. ಇನ್ನು ಕೋಮಲ್ ಜೊತೆಗೆ ಕಾಲಾಯ ನಮಃ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ. ಇದರ ಮಧ್ಯೆ ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ ಆಸಿಯಾ

Latest Videos

click me!