ಆಕಾಶ ನೀಲಿ-ಪಿಂಕ್ ಲಂಗ ದಾವಣಿಯಲ್ಲಿ ಬೆಳದಿಂಗಳಂತೆ ಕಂಡ ಶೋಭಾ ಶೆಟ್ಟಿ, ಸೊಂಟ ಸೂಪರ್ ಎಂದ ಫ್ಯಾನ್ಸ್!

Published : Mar 14, 2024, 04:22 PM ISTUpdated : Mar 14, 2024, 04:54 PM IST

ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಆಕಾಶ ನೀಲಿ ಮತ್ತು ಪಿಂಕ್‌ ಸ್ಯಾರಿಯಲ್ಲಿ ಬೆಳದಿಂಗಳಂತೆ ಮಿಂಚಿದ್ದಾರೆ. 

PREV
18
ಆಕಾಶ ನೀಲಿ-ಪಿಂಕ್ ಲಂಗ ದಾವಣಿಯಲ್ಲಿ ಬೆಳದಿಂಗಳಂತೆ ಕಂಡ ಶೋಭಾ ಶೆಟ್ಟಿ, ಸೊಂಟ ಸೂಪರ್ ಎಂದ ಫ್ಯಾನ್ಸ್!

ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಬಿಗ್‌ಬಾಸ್‌ 7ರಲ್ಲಿ ಭಾಗವಹಿಸಿದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಇನ್‌ಸ್ಟಾಗ್ರಾಂನಲ್ಲಿ ಮಾಡರ್ನ್ ಹಾಗೂ ಟ್ರೆಡಿಶನಲ್‌ ಲುಕ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. 

28

ಇತ್ತೀಚಿಗೆ ಆಕಾಶ ನೀಲಿ ಮತ್ತು ಪಿಂಕ್‌ ಸ್ಯಾರಿಯಲ್ಲಿ ಬೆಳದಿಂಗಳಂತೆ ಮಿಂಚಿದ್ದಾರೆ. ನೆಟ್ಟಿಗರು ಕನ್ನಡತಿಯ ಅಂದಕ್ಕೆ ಬೆರಗಾಗಿದ್ದಾರೆ. ಇದಕ್ಕೆ ಮ್ಯಾಚಿಂಗ್‌ ಪಿಂಕ್ ಬಳೆಗಳನ್ನು ಸಹ ಹಾಕಿ ನಗೆ ಬೀರಿದ್ದಾರೆ.

38

ಶೋಭಾ ಶೆಟ್ಟಿಯ ಈ ಗ್ರ್ಯಾಂಡ್ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಲೈಕ್ಸ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ಬ್ಯೂಟಿಫುಲ್, ಕ್ಯೂಟ್, ಏಂಜೆಲ್‌, ನೈಸ್ ಲುಕ್ಕಿಂಗ್‌, ಗಾರ್ಜಿಯಸ್, ಸೂಪರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 

48

ಮತ್ತೆ ಕೆಲವರು ದೇವಕನ್ಯಾ, ಸೊಂಟ ಸೂಪರ್ ಎಂದೆಲ್ಲಾ ಹೊಗಳಿದ್ದಾರೆ. ಇನ್ನು ಕೆಲವರು ಸರಿಯಾಗಿ ಮುಖಕ್ಕೆ ಪೆಂಟ್ ಹಚ್ಚಿದ್ದೀರಾ ಎಂದು ಟೀಕಿಸಿದ್ದಾರೆ.

58
Shobha shetty

ತೆಲುಗು ಧಾರಾವಾಹಿಗಳಲ್ಲಿ ಸಕ್ರಿಯವಾಗಿರುವ ನಟಿ ಶೋಭಾ ಶೆಟ್ಟಿ ಇತ್ತೀಚಿಗಷ್ಟೇ ತಮ್ಮ ಸಹನಟ ಯಶವಂತ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಶೋಭಾ ಶೆಟ್ಟಿ-ಯಶವಂತ್‌ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು

68

ಕನ್ನಡದಲ್ಲಿ ನಟಿ ಮೊದಲು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದರು. ಇದರಲ್ಲಿ ಶೋಭಾ ಶೆಟ್ಟಿ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 6 ವರ್ಷಗಳಿಗೂ ಅಧಿಕ ಕಾಲ ಕಲರ್ಸ್​ ಕನ್ನಡದಲ್ಲಿ 'ಅಗ್ನಿಸಾಕ್ಷಿ' ಪ್ರಸಾರವಾಗಿತ್ತು. ಇದರಲ್ಲಿ ಶೋಭಾ ಶೆಟ್ಟಿ  ತನು ಪಾತ್ರದಲ್ಲಿ ನಟಿಸಿದ್ದರು.

78

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರಾವಗುತ್ತಿದ್ದ ರುಕ್ಕು ಧಾರಾವಾಹಿಯಲ್ಲೂ ಶೋಭಾ ಶೆಟ್ಟಿ ಕೆಲ ತಿಂಗಳ ಕಾಲ ನಟಿಸಿದರು. ಈ ಸೀರಿಯಲ್‌ನ ಟಿಆರ್‌ಪಿ ಚೆನ್ನಾಗಿಲ್ಲವಾದ ಕಾರಣ ಧಾರಾವಾಹಿಯಿಂದ ಹೊರ ನಡೆದರು.

88

ಆ ನಂತರ ನಟಿ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಲು ಆರಂಭಿಸಿದರು. ಇವರು ಅಭಿನಯಿಸಿದ 'ಕಾರ್ತಿಕ ದೀಪಂ' ಸೀರಿಯಲ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಾರಣ ಶೋಭಾ ಶೆಟ್ಟಿ ಅವರನ್ನು ಬಿಗ್‌ಬಾಸ್‌ಗೆ ಆಯ್ಕೆ ಮಾಡಲಾಗಿತ್ತು. 

Read more Photos on
click me!

Recommended Stories