ವೈಟ್‌ ಡ್ರೆಸ್‌ನಲ್ಲಿ ಮಿಂಚಿದ ಡಿಕೆಶಿ ಮಗಳು, ಬ್ಯೂಟಿ ವಿತ್ ಬ್ರೈನ್ ಅಂದ್ರೆ ನೀವೇ ಮೇಡಂ ಎಂದ ನೆಟ್ಟಿಗರು

Published : Mar 14, 2024, 03:14 PM ISTUpdated : Mar 14, 2024, 03:17 PM IST

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುದ್ದಿನ ಮಗಳು,  ಶಿಕ್ಷಣ ಸಂಸ್ಥೆಯ ಒಡತಿ, ಮೋಟಿವೇಶನಲ್ ಸ್ಪೀಕರ್ ಆಗಿರುವ ಐಶ್ವರ್ಯ ಶಿವಕುಮಾರ್ ಸೌಂದರ್ಯದಲ್ಲಿ ಯಾವುದೇ ಹಿರೋಯಿನ್ ಗೆ ಕಮ್ಮಿ ಇಲ್ಲ. ಇತ್ತೀಚಿಗೆ ಐಶ್ವರ್ಯಾ ವೈಟ್‌ ಕುರ್ತಾ ಧರಿಸಿ ಸುಂದರವಾಗಿ ನಗೆ ಬೀರಿದ್ದಾರೆ. 

PREV
19
ವೈಟ್‌ ಡ್ರೆಸ್‌ನಲ್ಲಿ ಮಿಂಚಿದ ಡಿಕೆಶಿ ಮಗಳು, ಬ್ಯೂಟಿ ವಿತ್ ಬ್ರೈನ್ ಅಂದ್ರೆ ನೀವೇ ಮೇಡಂ ಎಂದ ನೆಟ್ಟಿಗರು

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುದ್ದಿನ ಮಗಳು,  ಶಿಕ್ಷಣ ಸಂಸ್ಥೆಯ ಒಡತಿ , ಮೋಟಿವೇಶನಲ್ ಸ್ಪೀಕರ್ ಆಗಿರುವ ಐಶ್ವರ್ಯ ಶಿವಕುಮಾರ್ ಸೌಂದರ್ಯದಲ್ಲಿ ಯಾವುದೇ ಹಿರೋಯಿನ್ ಗೆ ಕಮ್ಮಿ ಇಲ್ಲ. ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆಕ್ಟಿವ್‌. 

29

ಐಶ್ವರ್ಯ ಶಿವಕುಮಾರ್, ಯಾವಾಗ್ಲೂ ಸ್ಟೈಲಿಶ್ ಆಗಿ ಡ್ರೆಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಫೋಟೋಸ್ ಪೋಸ್ಟ್ ಮಾಡಿಕೊಳ್ಳುತ್ತಾರೆ. ಮಾತ್ರವಲ್ಲ, ಮೋಟಿವೇಶನಲ್ ಸ್ಪೀಚ್‌ನ ವೀಡಿಯೋವನ್ನು ಸಹ ಶೇರ್ ಮಾಡುತ್ತಾರೆ.

39

ಶಿಕ್ಷಣ, ಸಬಲೀಕರಣ ಮತ್ತು ಉದ್ಯಮಶೀಲತೆ ಬಗ್ಗೆ ಮೋಟಿವೇಶನಲ್ ಸ್ಪೀಚ್ ಕೊಡುವ ಐಶ್ವರ್ಯ ಡಿಕೆಶಿಯವರ ಮಗಳಕ್ಕಿಂತ ಹೆಚ್ಚಾಗಿ ಒಬ್ಬ ಎಜುಕೇಶನ್ ಸ್ಪೀಕರ್ ಆಗಿ ಸದಾ ಸುದ್ದಿಯಲ್ಲಿರುತ್ತಾರೆ.

49
Aishwarya hegde

ಜೊತೆಗೆ ಫ್ಯಾಷನ್ ಐಕಾನ್ ಸಹ ಹೌದು. ಯಾವಾಗ್ಲೂ ಸ್ಟೈಲಿಶ್ ಡ್ರೆಸ್‌ಗಳಲ್ಲಿ ಕಾಣಸಿಗುತ್ತಾರೆ. ಕೆಲಸದ ಬಗ್ಗೆ ಹಾಗೂ ತಮ್ಮ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಪ್ಪಟ ಸುಂದರಿಯಾಗಿರುವ ಐಶ್ಚರ್ಯ ಹೊಸ ಫೋಟೋ ನೋಡಿದ್ರೆ ಯಾವುದೇ ಹಿರೋಯಿನ್ ಗೂ ಕಮ್ಮಿ ಇಲ್ಲ ಎನ್ನುವಂತೆ ಕಾಣಿಸುತ್ತಿದ್ದಾರೆ. 

59

ಇತ್ತೀಚಿಗೆ ಐಶ್ವರ್ಯಾ ವೈಟ್‌ ಕುರ್ತಾ ಧರಿಸಿರೋ ಫೋಟೋವನ್ನು ಶೇರ್ ಮಾಡಿದ್ದಾರೆ. ವೈಟ್ ಕುರ್ತಾಗೆ ವೈಟ್ ಪಲಾಝೋ ಹಾಕ್ಕೊಂಡು ಸುಂದರವಾಗಿ ನಗೆ ಬೀರಿದ್ದಾರೆ. ಇದಕ್ಕೆ ಜೊತೆಯಾಗಿ ಹಸಿರು ಕಲ್ಲಿನ ಲಾಂಗ್‌ ನೆಕ್ಲೇಸ್ ಧರಿಸಿದ್ದಾರೆ.

69

ಐಶ್ವರ್ಯಾ ಡಿಕೆಶಿ ಹೆಗ್ಡೆ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಏಂಜೆಲ್, ಗಾರ್ಜಿಯಸ್‌, ಪ್ರಿನ್ಸೆಸ್‌, ಬ್ಯೂಟಿಫುಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲ ಅಭಿಮಾನಿಗಳು, ಬ್ಯೂಟಿ ವಿತ್ ಬ್ರೈನ್ ಅಂದ್ರೆ ನೀವೇ ಮೇಡಂ ಎಂದು ಹೊಗಳಿದ್ದಾರೆ.

79

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಮೊಮ್ಮಗ ಹಾಗೂ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಪುತ್ರ ಅಮರ್ಥ್ಯ ಅವರನ್ನು ಐಶ್ವರ್ಯ  ಮದುವೆಯಾಗಿದ್ದಾರೆ. ಇತ್ತೀಚೆಗೆ ತಮ್ಮ ಸಹೋದರ ಸಂಬಂಧಿ ಮದುವೆಯ ಕ್ಷಣದಲ್ಲಿ ತೆಗೆದಂತಹ ಫೋಟೋ ಶೇರ್ ಮಾಡಿಕೊಂಡಿದ್ದರು. 

89

ತಿಳಿ ಗುಲಾಬಿ ಬಣ್ಣದ ಫ್ಲೋರಲ್ ಡಿಸೈನ್ ಸೀರೆ ಧರಿಸಿರುವ ಐಶ್ವರ್ಯಾ, ಅದಕ್ಕೆ ಮ್ಯಾಚ್ ಆಗುವಂತಹ ತಿಳಿ ಹಸುರು ಬಣ್ಣದ ನೆಕ್ ಪೀಸ್, ಇಯರಿಂಗ್ಸ್ ಮತ್ತು ಮುಂದಾಲೆ ಧರಿಸಿದ್ದರು. ಕಸಿನ್ ಮದ್ವೆಗೆ ಐಶ್ವರ್ಯಾ ತುಂಬಾ ಸುಂದರವಾಗಿ ಕಾಣುತ್ತಿದ್ದರು.

99

ತಿಳಿ ಗುಲಾಬಿ ಸೀರೆಯಲ್ಲಿ ಐಶ್ವರ್ಯ ಅಪ್ಸರೆಯಂತೆ ಕಾಣಿಸುತ್ತಿದ್ದರು. ಅಭಿಮಾನಿಗಳು ಇವರಿಗೆ ಬ್ಯೂಟಿ ವಿತ್ ಬ್ರೈನ್, ನಮ್ಮ ರಾಜ್ಯದ ಮೊದಲ ಲೇಡಿ ಸಿಎಂ ನೀವೆ ಆಗ್ತೀರಿ ಅನ್ಸುತ್ತೆ, ದೇವತೆ ತರ ಕಾಣಿಸ್ತೀರಾ, ಭೂಲೋಕದ ಸೌಂದರ್ಯ ರಾಣಿ ಎಂದೆಲ್ಲಾ ಕಾಮೆಂಟ್ ಮಾಡಿದ್ದರು.

Read more Photos on
click me!

Recommended Stories