ಪಿಂಕ್‌ ಹೂಗಳ ಮಧ್ಯೆ ಸ್ಯಾರಿಯಲ್ಲಿ ಮಿಂಚಿದ ಸಾರಾ, ಸೀರೆಯುಟ್ಟ ನವಿಲು ನೀನು ಎಂದ ಫ್ಯಾನ್ಸ್‌

First Published Mar 1, 2024, 11:22 AM IST

ಚಳಿಗಾಲ ಶುರುವಾಗಿದೆ. ಬೆಂಗಳೂರಿನಲ್ಲಿ ರಸ್ತೆಯುದ್ದಕ್ಕೂ ಪಿಂಕ್‌ ಹೂಗಳು ಅರಳಿ ನಿಂತಿವೆ. ಈ ಹೂಗಳ ಮಧ್ಯೆ ಕಿರುತೆರೆ ನಟಿ ಸಾರಾ ಅಣ್ಣಯ್ಯ ಸೀರೆಯುಟ್ಟು ಮುದ್ದಾಗಿ ಫೋಟೋಶೂಟ್ ಮಾಡಿಸ್ಕೊಂಡಿದ್ದಾರೆ. ಸಾರಾ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸೀರಿಯಲ್‌ನಲ್ಲಿ ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳೋ ಸಾರಾ ರಿಯಲ್‌ ಲೈಫ್‌ನಲ್ಲಿ ಸೀರೆಯುಟ್ಟು ಮಿಂಚುತ್ತಾರೆ. 

ಚಳಿಗಾಲ ಶುರುವಾಗಿದೆ. ಬೆಂಗಳೂರಿನಲ್ಲಿ ರಸ್ತೆಯುದ್ದಕ್ಕೂ ಪಿಂಕ್‌ ಹೂಗಳು ಅರಳಿ ನಿಂತಿವೆ. ಈ ಹೂಗಳ ಮಧ್ಯೆ ಕಿರುತೆರೆ ನಟಿ ಸಾರಾ ಅಣ್ಣಯ್ಯ ಸೀರೆಯುಟ್ಟು ಮುದ್ದಾಗಿ ಫೋಟೋಶೂಟ್ ಮಾಡಿಸ್ಕೊಂಡಿದ್ದಾರೆ. ಸಾರಾ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

ಕ್ರೀಮ್‌ ಕಲರ್ ಬ್ಲೌಸ್ ಹಾಗೂ ರೆಡ್‌ ಸ್ಯಾರಿಯಲ್ಲಿ ಸಾರಾ ಅಣ್ಣಯ್ಯ ಸಖತ್ತಾಗಿ ಮಿಂಚಿದ್ದು, ಇದಕ್ಕೆ ಹರಳಿನ ನೆಕ್ಲೇಸ್ ಹಾಕ್ಕೊಂಡಿದ್ದಾರೆ. ಪಿಂಕ್ ಹೂಗಳನ್ನು ಬಿಟ್ಟಿರೋ ಮರಗಳ ಕೆಳಗೆ ಸೀರೆಯುಟ್ಟು ಮುದ್ದಾಗಿ ಫೋಟೋಗೆ ಫೋಸ್ ನೀಡಿದ್ದಾರೆ. 

ಸಾರಾ ಸ್ಯಾರಿ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದು, ಲೈಕ್ಸ್‌, ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಯೊಬ್ಬರು ಕನ್ನಡದ ಪ್ರಿಯಾಂಕ ಚೋಪ್ರಾ ಎಂದು ಹೊಗಳಿದ್ದಾರೆ. ಮತ್ತೊಬ್ಬರು, ಲುಕ್ಕಿಂಗ್ ಬ್ಯೂಟಿಫುಲ್ ಎಂದಿದ್ದಾರೆ. ಅಪ್ಸರೆ ಯಾವಾಗಲೂ ಎಂದು ಇನ್ನೊಬ್ಬರು ಕಮೆಂಟಿಸಿದ್ದಾರೆ.

ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಸೀರಿಯಲ್ ನಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ನಟಿ ಸಾರಾ ಅಣ್ಣಯ್ಯ ತಮ್ಮ ಸ್ಟೈಲ್ ನಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 

ಕನ್ನಡತಿ ಸೀರಿಯಲ್ ನಲ್ಲಿ ವರೂಧಿನಿ ಪಾತ್ರದ ಮೂಲಕ ಜನಕ್ಕೆ ಹತ್ತಿರವಾದ ನಟಿ ಸಾರಾ. ಈ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರೂ, ಆಕೆಯ ಸೈಕೋ ಕ್ಯಾರೆಕ್ಟರ್ ಜನರಿಗೆ ತುಂಬಾನೆ ಇಷ್ಟವಾಗಿತ್ತು. 

Sara annaiah

ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಈ ಮೂರು ಸೀರಿಯಲ್ ನಲ್ಲೂ ಸಾರಾ ತುಂಬಾನೆ ಮಾಡರ್ನ್ ಹುಡುಗಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಹಾಗೇ ನೋಡಿದ್ರೆ ಸಾರಾ ಮಾಡರ್ನ್ ಡ್ರೆಸ್ಸಲ್ಲೂ, ಸೀರೆಯಲ್ಲು ಅದ್ಭುತ ಬ್ಯೂಟಿ ಅನ್ನೋದ್ರಲ್ಲಿ ತಪ್ಪಿಲ್ಲ. 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಪ್ರತಿದಿನ ತಮ್ಮ ಮಾಡರ್ನ್ ಮತ್ತು ಟ್ರೆಡಿಶನಲ್ ಫೋಟೋ ಶೂಟ್ ಮಾಡಿಸುತ್ತಾ, ಶೇರ್ ಮಾಡುತ್ತಿರುತ್ತಾನೆ, ಆ ಮೂಲಕ ಜನರನ್ನು ಮತ್ತಷ್ಟು ಕನೆಕ್ಟ್ ಆಗುತ್ತಾರೆ ನಟಿ. 

ಬೆಂಗಳೂರಲ್ಲಿ ಹುಟ್ಟಿ ಬೆಳೆದಿರುವ ಈ ಬೋಲ್ಡ್ ಬ್ಯೂಟಿ  ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ತುಂಬಾನೆ ಫೇಮಸ್. ಮಾಡೆಲ್ ಆಗಿರುವ ಇವರು ತುಂಬಾನೆ ಬೋಲ್ಡ್ ಫೋಟೋ ಶೂಟ್ ಮಾಡಿಸುವ ಮೂಲಕವೂ ಪಡ್ಡೆಗಳ ನಿದ್ದೆ ಕದ್ದಿದ್ದರು. 

ಬೆಂಗಳೂರಲ್ಲಿ ಹುಟ್ಟಿ ಬೆಳೆದಿರುವ ಈ ಬೋಲ್ಡ್ ಬ್ಯೂಟಿ  ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ತುಂಬಾನೆ ಫೇಮಸ್. ಕನ್ನಡ ಸಿನಿಮಾ, ತಮಿಳು ವೆಬ್ ಸೀರೀಸ್ ಗಳಲ್ಲೂ ನಟಿಸಿರುವ ಸಾರಾ, ಸದ್ಯ ಅಮೃತಧಾರೆಯಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರ ಮಾಡುತ್ತಿದ್ದಾರೆ.

click me!