ಗೋಲ್ಡನ್‌ ಸ್ಯಾರಿಯಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ, ಯೋಗ ಗರ್ಲ್‌ ಫಿಗರ್ ಸೂಪರ್ ಎಂದ ಫ್ಯಾನ್ಸ್‌

First Published Feb 29, 2024, 5:15 PM IST

ಬಾಲಿವುಡ್‌ ನಟಿಯರು ಸ್ಟೈಲಿಶ್ ಆಗಿ ಡ್ರೆಸ್ ಮಾಡೋದ್ರಲ್ಲಿ ಎತ್ತಿದ ಕೈ. ಮಾಡರ್ನ್‌ ಲುಕ್ ಆದ್ರೂ ಸೈ,, ಟ್ರೆಡಿಶನಲ್ ಲುಕ್ ಆದ್ರೂ ಸೈ. ಹಾಗೆಯೇ ಇತ್ತೀಚಿಗೆ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಗೋಲ್ಡನ್ ಸೀರೆಯಲ್ಲಿ ಸಖತ್ತಾಗಿ ಫೋಸ್ ಕೊಟ್ಟಿದ್ದಾರೆ.

ಬಾಲಿವುಡ್‌ ನಟಿಯರು ಸ್ಟೈಲಿಶ್ ಆಗಿ ಡ್ರೆಸ್ ಮಾಡೋದ್ರಲ್ಲಿ ಎತ್ತಿದ ಕೈ. ಮಾಡರ್ನ್‌ ಲುಕ್ ಆದ್ರೂ ಸೈ,, ಟ್ರೆಡಿಶನಲ್ ಲುಕ್ ಆದ್ರೂ ಸೈ ಸಖತ್ತಾಗಿ ಮಿಂಚುತ್ತಾರೆ. ಬಾಲಿವುಡ್ ದಿವಾಗಳ ಮಧ್ಯೆ ಹೈಲೈಟ್ ಆಗೋ ನಟಿಯರಲ್ಲೊಬ್ಬರು ಶಿಲ್ಪಾ ಶೆಟ್ಟಿ.

ಶಿಲ್ಪಾ ಶೆಟ್ಟಿ ಬಾಲಿವುಡ್ ನ ಅತ್ಯಂತ ಫಿಟ್ ನಟಿ. 48 ವರ್ಷ ದಾಟಿದ್ದರೂ, ಫಿಟ್ನೆಸ್ ವಿಷಯದಲ್ಲಿ ಯಾವ ಯುವತಿಯರನ್ನು ಸಹ ಮೆಟ್ಟಿ ನಿಲ್ಲಬಹುದು. ವಯಸ್ಸು ಹೆಚ್ಚಾಗುತ್ತಾ ಹೋಗುತ್ತಿದ್ದಂತೆ, ಶಿಲ್ಪಾ ಶೆಟ್ಟಿ ಯಂಗ್ ಆಗುತ್ತಾ ಬರ್ತಿದ್ದಾರೆ. 

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಇತ್ತೀಚಿಗೆ ಗೋಲ್ಡನ್ ಕಲರ್ ಸ್ಯಾರಿಯುಟ್ಟಿರೋ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಂಪೂರ್ಣ ಶೈನಿಂಗ್ ಇರೋ ಗೋಲ್ಡನ್ ಸ್ಯಾರಿಗೆ, ಗೋಲ್ಡನ್‌ ವರ್ಕ್ ಇರೋ ಬಾರ್ಡರ್‌ನ್ನು ಲಗತ್ತಿಸಲಾಗಿದೆ.

ಮಿರ ಮಿರ ಮಿಂಚೋ ಸೀರೆಯಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ ಲುಕ್‌ಗೆ ಫ್ಯಾನ್ಸ್ ಸಹ ಫಿದಾ ಆಗಿದ್ದಾರೆ. ಲೈಕ್ಸ್, ಕಾಮೆಂಟ್ ಮಾಡಿದ್ದಾರೆ. ಅಮೇಜಿಂಗ್‌, ಸೂಪರ್, ಹಾಟ್, ಬ್ಯೂಟಿಫುಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಒಬ್ಬ ಅಭಿಮಾನಿ, 'ಯೋಗ ಗರ್ಲ್‌ ಫಿಗರ್ ಸೂಪರ್' ಎಂದಿದ್ದಾರೆ. ಇನ್ನೊಬ್ಬರು, 'ವಯಸ್ಸಾಗ್ತಾ ಹೋದಂತೆ ನೀವು ಚಿಕ್ಕವರಂತೆ ಕಾಣುತ್ತಾ ಹೋಗುತ್ತಿದ್ದೀರಿ' ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಶಿಲ್ಪಾ ಶೆಟ್ಟಿ, ಅಲ್ಲೂ ಕೂಡ ತಮ್ಮ ಫಿಟ್ನೆಸ್ ಬಗ್ಗೆ ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಅವರ ಸರಳ ತಾಲೀಮು ಯಾವಾಗಲೂ ಅವರ ಅನುಯಾಯಿಗಳಿಗೆ ಸ್ಫೂರ್ತಿ ನೀಡುತ್ತದೆ. 

ಶಿಲ್ಪಾ ಶೆಟ್ಟಿಯವರ ಒಂದು ರೂಲ್ಸ್ ಎಂದರೆ ನಿಮಗೆ ಎಷ್ಟೇ ಕೆಲಸವಿರಲಿ, ಅಥವಾ ನೀವು ಬೇರೆ ಯಾವುದೇ ಸ್ಥಳದಲ್ಲಿರಲಿ ಯಾವತ್ತೂ ಯೋಗ ಅಥವಾ ಜಿಮ್ ಮಾಡೋದನ್ನು ಮಿಸ್ ಮಾಡಬಾರದು ಎನ್ನುತ್ತಾರೆ.

ಶೂಟಿಂಗ್ ಇದ್ದರೂ ಶಿಲ್ಪಾ ತಮ್ಮ ವರ್ಕ್ ಔಟ್ ಮಾತ್ರ ಯಾವತ್ತೂ ಮಿಸ್ ಮಾಡಿಕೊಳ್ಳೋದೆ ಇಲ್ಲ. ಹೀಗಾಗಿಯೇ ಇವತ್ತಿಗೂ ಯಂಗ್ ಆಗಿಯೇ ಕಾಣಿಸುತ್ತಾರೆ.

ಉದ್ಯಮಿ ರಾಜ್‌ ಕುಂದ್ರಾರನ್ನು ಮದುವೆಯಾಗಿರುವ ಶಿಲ್ಪಾ ಶೆಟ್ಟಿಗೆ ಇಬ್ಬರು ಒಬ್ಬ ಗಂಡು ಮಗು ಹಾಗೂ ಇನ್ನೊಬ್ಬ ಹೆಣ್ಣು ಮಗಳಿದ್ದಾರೆ. ಮಕ್ಕಳ ಹೆಸರು ವಿವಾನ್ ಮತ್ತು ಸಮೀಶಾ.

click me!