Latest Videos

ಗ್ರ್ಯಾಂಡ್‌ ಲೆಹಂಗಾದಲ್ಲಿ ದೇವತೆಯಂತೆ ಕಂಡ ವೈಷ್ಣವಿ ಗೌಡ, ಎಂಗೇಜ್‌ಮೆಂಟ್ ಆಯ್ತಾ ಕೇಳ್ತಿದ್ದಾರೆ ಫ್ಯಾನ್ಸ್‌!

First Published May 24, 2024, 1:08 PM IST

ಟ್ರೆಡಿಶನಲ್ ಲುಕ್ ಇಷ್ಟಪಡೋ ಕಿರುತೆರೆ ನಟಿ ವೈಷ್ಣವಿ ಗೌಡ ಇತ್ತೀಚಿಗೆ ಗ್ರ್ಯಾಂಡ್ ಲೆಹಂಗಾ ತೊಟ್ಟು ಮಿಂಚಿದ್ದಾರೆ. ಫ್ಯಾನ್ಸ್ ವೈಶ್‌ ಸೌಂದರ್ಯವನ್ನು ಹೊಗಳಿದ್ದು, ಎಂಗೇಜ್‌ಮೆಂಟ್ ಆಯ್ತಾ ಕೇಳ್ತಿದ್ದಾರೆ.

ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀತಾರಾಮ ಸೀರಿಯಲ್ ಪ್ರೇಕ್ಷಕರ ಫೇವರಿಟ್‌. ಅದರಲ್ಲೂ ಸೀತಾ ಸರಳತೆ, ಸಾಂಪ್ರದಾಯಿಕ ಲುಕ್‌ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ರಿಯಲ್ ಲೈಫ್‌ನಲ್ಲೂ ಟ್ರೆಡಿಶನಲ್ ಲುಕ್ ಇಷ್ಟಪಡೋ ವೈಷ್ಣವಿ ಗೌಡ ಇತ್ತೀಚಿಗೆ ಗ್ರ್ಯಾಂಡ್ ಲೆಹಂಗಾ ತೊಟ್ಟು ಮಿಂಚಿದ್ದಾರೆ.

ಲೈಟ್ ಪಿಂಕ್‌ ಕಲರ್‌ನ ಲೆಹಂಗಾ ತೊಟ್ಟ ವೈಷ್ಣವಿ ಗೌಡ ಸ್ಟೋನ್‌ ನೆಕ್ಲೇಸ್, ಬಳೆ ತೊಟ್ಟು ತುಂಬಾ ಬ್ಯೂಟಿಫುಲ್‌ ಆಗಿ ಕಾಣಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್‌ ಆಗಿರುವ ವೈಷ್ಣವಿ ಆಗಾಗ ತಮ್ಮ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ಗ್ರ್ಯಾಂಡ್ ಲೆಹಂಗಾ ತೊಟ್ಟು ನಾನಾ ರೀತಿ ಫೋಸ್ ನೀಡಿದ್ದಾರೆ.

ವೈಷ್ಣವಿ ಗೌಡ ಹೊಸ ಫೋಟೋಸ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಸಹ ಮಾಡಿದ್ದಾರೆ. ಕ್ಯೂಟ್, ಗಾರ್ಜಿಯಸ್‌, ಬ್ಯೂಟಿಫುಲ್ ಎಂದೆಲ್ಲಾ ಹೊಗಳಿದ್ದಾರೆ. 

ಒಬ್ಬ ಫ್ಯಾನ್ಸ್‌, 'ನಾವು ಎಂಗೇಜ್‌ಮೆಂಟ್ ಆಗಿದೆ ಅಂದ್ಕೊಂಡ್ವಿ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಯಪ್ಪಾ ಹೆವಿ ಡ್ರೆಸ್‌' ಎಂದಿದ್ದಾರೆ.

ಮತ್ತೊಬ್ಬ ಅಭಿಮಾನಿ, 'ನನ್ನ ಕನಸಿನ ರಾಣಿ ತುಂಬಾ ಸುಂದರವಾಗಿದ್ದಾಳೆ' ಎಂದು ಹೊಗಳಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಸೀತಾ ಭಾರ್ಗವಿ ಕೆಟ್ಟವರು ನಂಬಬೇಡಿ' ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಸೀರಿಯಲ್‌ ಪ್ರಿಯರಿಗೂ ವೈಷ್ಣವಿ ಅಚ್ಚುಮೆಚ್ಚು. ಅದರಲ್ಲೂ ಇತ್ತೀಚಿಗೆ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯಲ್ಲಿ ನಟಿಯ ಪಾತ್ರ ಹಾಗೂ ಅಭಿನಯ ಎಲ್ಲರಿಗೂ ಇಷ್ಟವಾಗಿದೆ. ಮುಗ್ದೆ ಸೀತೆಯ ಪಾತ್ರವನ್ನು ಎಲ್ಲರೂ ಕೊಂಡಾಡುತ್ತಾರೆ.

ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ.

ವೈಷ್ಣವಿ ಗೌಡ, ಇದೀಗ ಸೀತಾ ರಾಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು, ಇದು ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ರಾಮ-ಸೀತಾ, ಸಿಹಿಯ ಕಥೆ ಎಲ್ಲರ ಮನ ಗೆಲ್ಲುತ್ತಿದೆ.

click me!