ಅನಂತ್- ರಾಧಿಕಾ ವಿವಾಹಕ್ಕೆ 1 ತಿಂಗಳು ಬಾಕಿ; ವಧುವಿನ ವೆಡ್ಡಿಂಗ್ ಪಾರ್ಟಿ ಡ್ರೆಸ್ ಲುಕ್ ಔಟ್!

First Published | May 20, 2024, 4:14 PM IST

ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ವಿವಾಹಕ್ಕೆ 1 ತಿಂಗಳಷ್ಟೇ ಬಾಕಿ ಇದೆ. ಇದೀಗ ರಾಧಿಕಾಳ ಮದುವೆಯ ಪಾರ್ಟಿ ಡ್ರೆಸ್‌ ಲುಕ್ ಹೊರಬಿದ್ದಿದೆ. 

ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ವಿವಾಹ ರಾಧಿಕಾ ಮರ್ಚೆಂಟ್ ಜೊತೆ ನಡೆಯಲು ದಿನಗಣನೆ ಆರಂಭವಾಗಿದೆ.

ಜುಲೈ 12, 2024 ವಿವಾಹ ನಡೆಯಲಿದೆ. ಈಗಾಗಲೇ ಮಾರ್ಚ್ 1 ರಿಂದ 3 ರವರೆಗೆ ಜಾಮ್‌ನಗರದಲ್ಲಿ ಈ ಜೋಡಿಗಾಗಿ ಅದ್ಧೂರಿ ವಿವಾಹದ ಪೂರ್ವಭಾವಿ ಕಾರ್ಯಕ್ರಮ ನಡೆದಿತ್ತು.

Tap to resize

ಈ ಕಾರ್ಯಕ್ರಮದ ಅದ್ದೂರಿತನ, ಸ್ಟಾರ್‌ಗಳನ್ನು ಒಟ್ಟು ಹಾಕಿದ ಪ್ರದರ್ಶನಗಳೆಲ್ಲವೂ ಅಂಬಾನಿ ಮನೆಯ ವಿವಾಹದತ್ತ ಎಲ್ಲರಲ್ಲಿ ಹೆಚ್ಚಿನ ನಿರೀಕ್ಷೆ, ಕುತೂಹಲ ಮೂಡಿಸಿವೆ. 

ಅದಕ್ಕೂ ಮುನ್ನ ದಕ್ಷಿಣ ಫ್ರಾನ್ಸ್‌ನ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ಮೇ 28 ಮತ್ತು 30ರ ನಡುವೆ ಅಂಬಾನಿಗಳು ಎರಡನೇ ಪೂರ್ವ ವಿವಾಹ ಸಮಾರಂಭವನ್ನು ಆಯೋಜಿಸಿದ್ದಾರೆ. 

ಇದೀಗ  ರಾಧಿಕಾ ಮದುವೆಯ ಪಾರ್ಟಿ ಡ್ರೆಸ್‌ನ ಫಸ್ಟ್ ಲುಕ್‌ ಹೊರಬಿದ್ದಿದ್ದು, ಇದು ವಿವಾಹದ ಅದ್ಧೂರಿತನಕ್ಕೆ ಸರಿ ಹೊಂದುವಂತಿದೆ. 

ವರದಿಗಳ ಪ್ರಕಾರ, ರಾಧಿಕಾ ಮರ್ಚೆಂಟ್ ಅವರ ಮದುವೆಯ ಪಾರ್ಟಿ ಡ್ರೆಸ್ ಅನ್ನು ಏಸ್ ಡಿಸೈನರ್ ಗ್ರೇಸ್ ಲಿಂಗ್ ಸಿದ್ಧಪಡಿಸಿದ್ದಾರೆ. ಈ ಪಾರ್ಟಿಯು ಬಾಹ್ಯಾಕಾಶ ಥೀಮ್ ಹೊಂದಿದೆ ಎನ್ನಲಾಗಿದೆ.
 

ವಿನ್ಯಾಸಕಾರರ ಪ್ರಕಾರ, ಧರಿಸಿದಾಕೆ ಗ್ಯಾಲಕ್ಸಿಯ ರಾಜಕುಮಾರಿಯೆಂಬಂತೆ ಫ್ಯಾಬ್ರಿಕ್‌ಗೆ ಎಫೆಕ್ಟ್‌ ನೀಡಲಾಗಿದೆ. ಏರೋಸ್ಪೇಸ್ ಅಲ್ಯೂಮಿನಿಯಂ ತಂತ್ರಜ್ಞಾನದಿಂದ ಮಾಡಲಾದ ಡ್ರೆಸ್‌ 3D ಕೆತ್ತನೆ ಹೊಂದಿದೆ.

3D ಅಂಶವು ಉಡುಪಿನ ಶಸ್ತ್ರಸಜ್ಜಿತ ಗೋಲ್ಡನ್ ಭಾಗಗಳ ಬಳಕೆಯನ್ನು ತೋರಿಸುತ್ತದೆಯಾದರೂ, ವಿನ್ಯಾಸಕರು ವಸ್ತುವು ಮೃದುವಾಗಿ, ಸೂಕ್ಷ್ಮವಾಗಿದೆ ಎಂದಿದ್ದಾರೆ. 

ಅಂದ ಹಾಗೆ, ಹೊಸ-ಯುಗದ ತಂತ್ರಜ್ಞಾನವನ್ನು ಬಳಸಿಕೊಂಡು ಉಡುಪನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅದನ್ನು ಪೂರ್ಣಗೊಳಿಸಲು 30 ಕುಶಲಕರ್ಮಿಗಳು ಕೆಲಸ ಮಾಡಿದ್ದಾರೆ. 

ಇತ್ತೀಚೆಗೆ, ರಾಧಿಕಾಗೆ ಆಪ್ತರು ಮತ್ತು ಕುಟುಂಬ ಸದಸ್ಯರು ರಾಯಲ್ ಬ್ರೈಡಲ್ ಶವರ್ ನೀಡಿ ಅಚ್ಚರಿಗೊಳಿಸಿದರು. ಇದರಲ್ಲಿ ಜಾನ್ವಿ ಕಪೂರ್ ಕೂಡಾ ಇದ್ದರು.

Latest Videos

click me!