ಪ್ಲಸ್ ಸೈಜ್ ಮಹಿಳೆಯರು ಸೀರೆ ಧರಿಸುವಾಗ ಈ ವಿಷ್ಯಗಳನ್ನು ಅವಾಯ್ಡ್ ಮಾಡ್ಲೇ ಬೇಡಿ

First Published Oct 7, 2022, 5:51 PM IST

ಹೊಟ್ಟೆ ಬಂದಿದೆ ಮತ್ತು ತೂಕವು ಹೆಚ್ಚಾಗಿರುತ್ತದೆ, ಆದರೆ ನಿಮಗೆ ಸ್ಟೈಲಿಶ್ ಆಗಿ ಸೀರೆಯನ್ನು ಧರಿಸಬೇಕು ಎಂಬ ಆಸೆ ಇದೆ, ಆದರೆ ಇಷ್ಟು ತೂಕ ಇರೋವಾಗ ನೀವು ಹೇಗೆ ಕಾಣುತ್ತೀರಿ ಎಂಬ ಭಯ ಕೂಡ ಇರುತ್ತೆ ಅಲ್ವಾ? ನಿಮ್ಮ ತೂಕ ಸ್ವಲ್ಪ ಜಾಸ್ತಿ ಇದ್ದರೂ ಸಹ, ಸೀರೆಯುಟ್ಟಾಗ ಅದ್ಭುತವಾಗಿ ಕಾಣುವಂತೆ ಮಾಡುವ ಸಲಹೆಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಈ ಟಿಪ್ಸ್ ಫಾಲೋ ಮಾಡಿದ್ರೆ ನೀವೂ ತುಂಬಾನೆ ಚೆನ್ನಾಗಿ ಕಾಣಿಸುತ್ತೀರಿ. 

ಈ ಲೇಖನವು ದಪ್ಪ ಹುಡುಗಿಯರು ಹೇಗೆ ತೆಳ್ಳಗೆ ಕಾಣಬೇಕು ಎಂದು ಹೇಳುವುದಿಲ್ಲ. ಯಾಕಂದ್ರೆ ದಪ್ಪ ಇರೋದು ಸಹ ಒಂದು ಬ್ಯೂಟಿ. ನಾವು ವಾಸಿಸುವ ಸಮಾಜದಲ್ಲಿ, ತೆಳ್ಳಗಿರಬೇಕು ಎಂಬ ಒತ್ತಡವು ಖಂಡಿತವಾಗಿಯೂ ದಪ್ಪ ಹುಡುಗಿಯ ಮೇಲೆ ಇರುತ್ತದೆ. ಈ ಕಾರಣಕ್ಕಾಗಿ, ಅಧಿಕ ತೂಕದ ಅನೇಕ ಹುಡುಗಿಯರು ಹೆಚ್ಚು ದಪ್ಪ ಕಂಡ್ರೆ ಅನ್ನೋ ಭಯದಿಂದ ಸೀರೆ ಉಡಲು ಹಿಂಜರಿಯುತ್ತಾರೆ. 

ಈ ಲೇಖನದಲ್ಲಿ, ನಾವು ನಿಮಗೆ ಬಿಂದಾಸ್ ಆಗಿ ಸೀರೆಯನ್ನು ಧರಿಸಲು ಅನುವು ಮಾಡಿಕೊಡುವ ಕೆಲವು ಸಲಹೆಗಳನ್ನು ತಿಳಿಸುತ್ತೇವೆ. ಯಾವ ರೀತಿಯ ಬಟ್ಟೆಯು ನಿಮಗೆ ಚೆನ್ನಾಗಿ ಕಾಣುತ್ತದೆ, ನೀವು ಯಾವ ಬಣ್ಣ ಆಯ್ಕೆ ಮಾಡಬೇಕು ಮತ್ತು ಸೀರೆಯನ್ನು ಹೇಗೆ ಧರಿಸಬೇಕು, ಮೊದಲಾದ ಸಲಹೆಗಳನ್ನು ನಿಮಗೆ ತಿಳಿಸುತ್ತೇವೆ.

ಸೀರೆಯು ಸಾಂಪ್ರದಾಯಿಕ ಉಡುಪಾಗಿರುವುದರಿಂದ(traditional wear), ಅದರಲ್ಲಿ ಪ್ರತಿಯೊಬ್ಬ ಮಹಿಳೆಯೂ ಸುಂದರವಾಗಿ ಕಾಣುವುದರಿಂದ, ಅಯ್ಯೋ ಹೇಗೆ ಕಾಣಿಸುತ್ತೇನೆ ಎಂಬ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಮುಂದಿನ ಬಾರಿ ನೀವು ಸೀರೆಯನ್ನು ಧರಿಸಿದಾಗ ಇಲ್ಲಿ ನೀಡಿರೋ ವಿಷ್ಯಗಳನ್ನೆಲ್ಲಾ ನೀವು ನೆನಪಿಟ್ಟುಕೊಂಡ್ರೆ ಉತ್ತಮ.

ಸರಿಯಾದ ಬಣ್ಣ ಆಯ್ಕೆಮಾಡಿ
ಯಾವ ರೀತಿಯ ಬಣ್ಣವು ನಿಮಗೆ ಚೆನ್ನಾಗಿ ಕಾಣುತ್ತದೆ ಅನ್ನೋದು ಮುಖ್ಯ. ನಿಮ್ಮನ್ನು ಸುಂದರವಾಗಿ ಮತ್ತು ಸೊಗಸಾಗಿ ಕಾಣುವಂತೆ ಮಾಡಲು, ನೀವು ಬಣ್ಣಕ್ಕೆ ಪ್ರಾಮುಖ್ಯತೆ ನೀಡುವುದು ಬಹಳ ಮುಖ್ಯ. ನೀವು ಟ್ರೆಂಡಿಂಗ್ ಬಣ್ಣ ಆಯ್ಕೆ ಮಾಡಲಿ ಅಥವಾ ಕಾಂಟ್ರಾಸ್ಟಿಂಗ್ ಶೇಡ್ಸ್ (contrasting shades)ಧರಿಸಲಿ, ನಿಮ್ಮ ಒಟ್ಟಾರೆ ಲುಕ್ ಅದರಲ್ಲಿ ಹೇಗೆ ಬರುತ್ತದೆ ಎಂಬುದು ಮುಖ್ಯ.

ಪ್ಲಸ್ ಗಾತ್ರದ ಮಹಿಳೆಯರು ಮಧ್ಯಮ-ಗಾಢ ಬಣ್ಣಗಳನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಲಾಗುತ್ತದೆ. ಡಾರ್ಕ್ ಶೇಡ್ ಗಳು ನಿಮ್ಮ ಫಿಗರ್ ಚೆನ್ನಾಗಿ ಕಾಣಲು ಸಹಾಯ ಮಾಡುತ್ತೆ. ಕಪ್ಪು, ನೀಲಿ, ಬಾಟಲ್ ಗ್ರೀನ್, ಮರೂನ್, ನೇರಳೆ ಇತ್ಯಾದಿಗಳು ನಿಮ್ಮ ಕರ್ವಿ ಬಾಡಿಗೆ ಒಂದೇ ಫ್ರೇಮ್ ನಲ್ಲಿ ಹೊಂದಿಸುವ ಕೆಲವು ಬಣ್ಣಗಳಾಗಿವೆ. 

ನೀವು ಚೆನ್ನಾಗಿ ಕಾಣಬೇಕು ಎಂದಾದರೆ ಎಂದಿಗೂ 2 ಮತ್ತು 3 ಶೇಡ್ ಗಳನ್ನು ಒಟ್ಟಿಗೆ ಕಂಬೈನ್ ಮಾಡಬೇಡಿ. ಸಿಂಗಲ್ ಶೇಡ್ ಜಾಸ್ತಿ ಆಯ್ಕೆ ಮಾಡಿ. ಹೌದು, ನೀವು ಕಿತ್ತಳೆ, ಹಳದಿ, ತಿಳಿ ನೀಲಿಯಂತಹ ಹಗುರವಾದ ಟೋನ್ ಧರಿಸಿದ್ದರೆ, ಅದನ್ನೆ ಮುಂದುವರೆಸಿ, ಆದರೆ ಅದರಲ್ಲಿ ಬಾರ್ಡರ್, ಪ್ರಿಂಟ್, ಲೆಂತ್ ಇತ್ಯಾದಿಗಳಲ್ಲಿ ಕೆಲಸ ಮಾಡಬೇಕು.

ಸರಿಯಾದ ಫ್ಯಾಬ್ರಿಕ್ ಆಯ್ಕೆಮಾಡುವುದು
ಪ್ರತಿ ಭಾರತೀಯ ಹಬ್ಬಕ್ಕಾಗಿ ವಿನ್ಯಾಸಕರು ಮತ್ತು ಫ್ಯಾಷನಿಸ್ಟ್ ಗಳು ವರ್ಷವಿಡೀ ಕೆಲಸ ಮಾಡುವ ಅನೇಕ ಬಟ್ಟೆಗಳಿವೆ. ಕೆಲವು ಉತ್ತಮ ಇಂಪೋರ್ಟೇಡ್ ಡ್ರೆಸ್ ಗಳೂ ಇರುತ್ತವೆ. ಬಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನೀವು ಸೀರೆ ಧರಿಸಿದರೆ, ಆಗ ಲುಕ್ ಸಖತ್ತಾಗಿರುತ್ತೆ. ಜೊತೆಗೆ ದಪ್ಪ ಇರೋ ಮಹಿಳೆಯರು ಶಿಫಾನ್, ಜಾರ್ಜೆಟ್, ಆರ್ಗನ್ಜಾ, ಟಿಶ್ಯೂ ಸಿಲ್ಕ್ ನಿಂದ ಮಾಡಿದ ಸೀರೆಗಳನ್ನು ಧರಿಸುತ್ತಾರೆ, ಆದ್ದರಿಂದ ಖಂಡಿತವಾಗಿಯೂ ಅವರ ಶೇಪ್ ಉತ್ತಮವಾಗಿ ಕಾಣುತ್ತದೆ.

ಕಾಂಜೀವರಂ ಸೀರೆಗಳು ಮತ್ತು ಹತ್ತಿ ಬಟ್ಟೆಗಳಲ್ಲಿ, ಕೆಲವು ಮಹಿಳೆಯರು ತಾವು ದಪ್ಪವಾಗಿ ಕಾಣುತ್ತೇವೆ ಎಂದು ಭಾವಿಸುತ್ತಾರೆ, ಆದರೆ ಅವುಗಳನ್ನು ಸರಿಯಾಗಿ ಧರಿಸಿದರೆ, ನೀವು ಒಂದೇ ರೀತಿ ಕಾಣುವುದಿಲ್ಲ. ತೂಕದಲ್ಲಿ ಹಗುರ ಮತ್ತು ಧರಿಸಲು ಅದ್ಭುತವಾಗಿದೆ, ಟಿಶ್ಯೂ ಸೀರೆಗಳು ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡ್ ನಲ್ಲಿವೆ. ನೀವು ಯಾವುದೇ ಕಾರ್ಯದಲ್ಲಿ ಹಿಂಜರಿಕೆಯಿಲ್ಲದೆ ಅದನ್ನು ಟ್ರೈ ಮಾಡಬಹುದು. 

ಸರಿಯಾದ ವಿನ್ಯಾಸ ಆಯ್ಕೆಮಾಡುವುದು
ದಪ್ಪ ಮತ್ತು ದೊಡ್ಡ ಪ್ರಿಂಟ್ ಇಷ್ಟಪಡುವವರಲ್ಲಿ ನೀವೂ ಒಬ್ಬರಾಗಿದ್ದೀರಾ? ನೀವು ಅಧಿಕ ತೂಕವನ್ನು ಹೊಂದಿದ್ದರೆ, ನೀವು ಒಂದು ವಿಷಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಅಂದರೆ, ನೀವು ಸಣ್ಣ ಮೋಟಿಫ್ ಗಳು ಮತ್ತು ಪ್ರಿಂಟ್ ಗಳನ್ನು ಧರಿಸಬೇಕು. ಇದು ನಿಮಗೆ ಪರ್ಫೆಕ್ಟ್ ಲುಕ್ ನೀಡುತ್ತೆ. 

ಎಲೆಗಳು, ಹೂವುಗಳು, ಕಲಾತ್ಮಕ ರೇಖಾಚಿತ್ರಗಳಂತಹ ಸಣ್ಣ ಪ್ರಿಂಟ್ ಗಳು ದಪ್ಪಗಿರುವ ಮಹಿಳೆಯರು ಚೆನ್ನಾಗಿ ಕಾಣುವಂತೆ ಮಾಡುತ್ತವೆ. ನೀವು ದೊಡ್ಡ ಅಂಚನ್ನು ಧರಿಸಿದರೆ, ಅದು ನಿಮ್ಮನ್ನು ಹೆಚ್ಚು ದಪ್ಪವಾಗಿ ಮತ್ತು ಪ್ರಬುದ್ಧವಾಗಿ ಕಾಣುವಂತೆ ಮಾಡುತ್ತದೆ, ಆದ್ದರಿಂದ ನೀವು ಸಣ್ಣ ಪ್ರಿಂಟ್ ಗಳು ಮತ್ತು ತೆಳುವಾದ ಅಂಚುಗಳನ್ನು ಹೊಂದಿರುವ ಸೀರೆ ಧರಿಸಬೇಕು. ಇದರಿಂದ ಸಖತ್ತಾಗಿ ಕಾಣಿಸುವಿರಿ.
 

click me!