ಬಾಲಿವುಡ್ ದಿವಾಗಳ ಸ್ಟೈಲಿಶ್ ಲುಕ್ಗೆ ಬೆರಗಾದವರಿಲ್ಲ. ಯಾವಾಗ್ಲೂ ಫಿಗರ್ ಮೆಂಟೈನ್ ಮಾಡ್ಕೊಂಡು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈಕೆ ಬಿಟೌನ್ ನಾಯಕಿಯಲ್ಲ..ಆದರೆ ಈಕೆಯ ಅಂದಕ್ಕೆ ಮಾರು ಹೋಗದವರಿಲ್ಲ. ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಬಾಲಿವುಡ್ ದಿವಾಗಳ ಸ್ಟೈಲಿಶ್ ಲುಕ್ಗೆ ಬೆರಗಾದವರಿಲ್ಲ. ಯಾವಾಗ್ಲೂ ಫಿಗರ್ ಮೆಂಟೈನ್ ಮಾಡ್ಕೊಂಡು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈಕೆ ಬಿಟೌನ್ ನಾಯಕಿಯಲ್ಲ..ಆದರೆ ಈಕೆಯ ಅಂದಕ್ಕೆ ಮಾರು ಹೋಗದವರಿಲ್ಲ. ಆಕೆ ಮತ್ಯಾರೂ ಅಲ್ಲ, ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್.
ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್, ಯಾವಾಗ್ಲೂ ತಮ್ಮ ಸ್ಟೈಲಿಶ್ ಲುಕ್ನಲ್ಲಿ ಪೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇನ್ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ನಟಿ ಇತ್ತೀಚಿಗೆ ಗ್ಲಿಟರಿಂಗ್ ಬ್ಲ್ಯಾಕ್ ಗೌನ್ ತೊಟ್ಟು ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಸಾರಾ ಸಂಪೂರ್ಣವಾಗಿ ಬ್ಲ್ಯಾಕ್ ಆಗಿರೋ ಗೌನ್ ತೊಟ್ಟು ಮುದ್ದಾಗಿ ನಗು ಬೀರಿದ್ದಾರೆ. ಇದಕ್ಕೆ ದೊಡ್ಡದಾದ ಇಯರಿಂಗ್ಸ್ ಸಹ ಪೇರ್ ಮಾಡಿದ್ದಾರೆ. ಈ ಡ್ರೆಸ್ ಸಾರಾ ತೆಂಡೂಲ್ಕರ್ ಅವರ ಲಿಟ್ ಫಿಗರ್ ಮೇಲೆ ಪರಿಪೂರ್ಣವಾಗಿ ಹೊಂದಿಕೊಂಡಿದೆ.
ಫೋಟೋ ಶೂಟ್ನ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. 'ಶುಭ್ಮನ್ ಗಿಲ್ ದೇವತೆ' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
'ಶುಭ್ಮನ್ ಗಿಲ್ ಸೆಂಚುರಿ ಹೊಡೆದ ಖುಷಿಗೆ ಈ ಪೋಸ್ಟ್' ಎಂದು ಇನ್ನೊಬ್ಬರು ಕಾಮೆಂಟ್ನಲ್ಲಿ ತಿಳಿಸಿದ್ದಾರೆ. ಸೋ ಪ್ರೆಟ್ಟೀ, ಸೆಂಚುರಿ ಸ್ಪೆಷಲ್, 'ಶುಭ್ಮನ್ ಲಕ್ಕಿ ಹೈ', ಗ್ರೀನ್ ಫಾರೆಸ್ಟ್ ಎಂದು ಮತ್ತೆ ಹಲವರು ಕಾಮೆಂಟ್ ಮಾಡಿದ್ದಾರೆ.
ಫ್ಯಾಶನ್ ವಿಷಯಕ್ಕೆ ಬಂದಾಗ ಸಾರಾ ಸಖತ್ ಅಪ್ಡೇಟೆಡ್. ಆಕೆಯ ಇನ್ಸ್ಟಾಗ್ರಾಮ್ ಖಾತೆಯು ಅಲ್ಟ್ರಾ-ಸ್ಟೈಲಿಶ್ ಬಟ್ಟೆಗಳನ್ನು ಹೊಂದಿರುವ ಫೋಟೋಗಳಿಂದ ತುಂಬಿದೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಅಂಜಲಿ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್. ಅ.12, 1997ರಲ್ಲಿ ಮುಂಬೈನಲ್ಲಿ ಹುಟ್ಟಿದ ಸಾರಾ ತೆಂಡುಲ್ಕರ್, ಧೀರುಬಾಯಿ ಅಂತಾರಾಷ್ಟ್ರೀಯ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ.
ಯುನಿವರ್ಸಿಟಿ ಕಾಲೇಜ್ ಲಂಡನ್ನಲ್ಲಿ ಮೆಡಿಸಿನ್ ಪದವಿ ಪಡೆದಿರುವ ಸಾರಾ, ಕ್ರಿಕೆಟಿಗ ಶುಬ್ಮನ್ ಗಿಲ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಕಳೆದ ಹಲವು ವರ್ಷಗಳಿಂದಾನೂ ಇದೆ.